ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಲೋಕಸಭಾ ಫಲಿತಾಂಶ; ಮ್ಯಾಜಿಕ್ ನಂಬರ್ 272, ಬಿಜೆಪಿಗೆ ಸರಳ ಬಹುಮತ ಸಿಗದೇ ಇದ್ದರೆ ಕಿಂಗ್ ಮೇಕರ್ ಯಾರಾಗ್ತಾರೆ, 5 ಪ್ರಶ್ನೆ-ಉತ್ತರ

ಲೋಕಸಭಾ ಫಲಿತಾಂಶ; ಮ್ಯಾಜಿಕ್ ನಂಬರ್ 272, ಬಿಜೆಪಿಗೆ ಸರಳ ಬಹುಮತ ಸಿಗದೇ ಇದ್ದರೆ ಕಿಂಗ್ ಮೇಕರ್ ಯಾರಾಗ್ತಾರೆ, 5 ಪ್ರಶ್ನೆ-ಉತ್ತರ

ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದು, ಸದ್ಯದ ಟ್ರೆಂಡ್ ಪ್ರಕಾರ, ಈ ಬಾರಿ ಮ್ಯಾಜಿಕ್ ನಂಬರ್ 272ಕ್ಕೆ ಯಾವ ಪಕ್ಷವೂ ತಲುಪಲಾರದು. ಬಿಜೆಪಿಗೆ ಸರಳ ಬಹುಮತ ಸಿಗದೇ ಇದ್ದರೆ ಕಿಂಗ್ ಮೇಕರ್ ಯಾರಾಗ್ತಾರೆ ಎಂಬ ಪ್ರಶ್ನೆ ಸದ್ಯ ಚರ್ಚೆಯಲ್ಲಿದೆ. ಇದಕ್ಕೆ ಸಂಬಂಧಿಸಿದ 5 ಪ್ರಶ್ನೆ ಮತ್ತು ಉತ್ತರ ಇಲ್ಲಿದೆ.

ಲೋಕಸಭಾ ಫಲಿತಾಂಶ; ಮ್ಯಾಜಿಕ್ ನಂಬರ್ 272, ಬಿಜೆಪಿಗೆ ಸರಳ ಬಹುಮತ ಸಿಗದೇ ಇದ್ದರೆ ಕಿಂಗ್ ಮೇಕರ್ ಯಾರಾಗ್ತಾರೆ ಎಂಬುದು ಸದ್ಯದ ಕುತೂಹಲ. (ಸಾಂಕೇತಿಕ ಚಿತ್ರ)
ಲೋಕಸಭಾ ಫಲಿತಾಂಶ; ಮ್ಯಾಜಿಕ್ ನಂಬರ್ 272, ಬಿಜೆಪಿಗೆ ಸರಳ ಬಹುಮತ ಸಿಗದೇ ಇದ್ದರೆ ಕಿಂಗ್ ಮೇಕರ್ ಯಾರಾಗ್ತಾರೆ ಎಂಬುದು ಸದ್ಯದ ಕುತೂಹಲ. (ಸಾಂಕೇತಿಕ ಚಿತ್ರ)

ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದು, ಬಿಜೆಪಿಗೆ ಈ ಬಾರಿ ಕಳೆದ ಎರಡು ಅವಧಿಯಲ್ಲಿ ಸಿಕ್ಕಂತೆ ಸ್ಪಷ್ಟ ಬಹುಮತ ಸಿಗುವುದು ಕಷ್ಟ ಸಾಧ್ಯ ಎನ್ನುವಂತಿದೆ ಪರಿಸ್ಥಿತಿ. ಬಿಜೆಪಿ ಸದ್ಯ 240 ಸ್ಥಾನಗಳ ಆಸುಪಾಸಿನಲ್ಲಿ ಮುನ್ನಡೆಯಲ್ಲಿದೆ. ಮ್ಯಾಜಿಕ್ ನಂಬರ್ 272. ಇಂತಹ ಸನ್ನಿವೇಶದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿ ಕೂಟಕ್ಕೆ ಸರ್ಕಾರ ರಚಿಸುವ ಸಾಧ್ಯತೆ ಎಷ್ಟರ ಮಟ್ಟಿಗೆ ಇದೆ. ಕಿರು ಅವಲೋಕನ ನಡೆಸುವುದಕ್ಕೆ ಇದು ಸಕಾಲ.

ಟ್ರೆಂಡಿಂಗ್​ ಸುದ್ದಿ

ಭಾರತಕ್ಕೆ ಮೈತ್ರಿ ಸರ್ಕಾರ ಹೊಸದಲ್ಲ. 1989ರಿಂದ 2014ರ ತನಕವೂ ಕೇಂದ್ರದಲ್ಲಿ ಮೈತ್ರಿ ಸರ್ಕಾರಗಳೇ ಆಡಳಿತ ನಡೆಸಿದ್ದು. ಬಹುತೇಕ ಮೈತ್ರಿ ಸರ್ಕಾರಗಳು ಪೂರ್ಣ ಅವಧಿ ಬಾಳಿದ್ದಿಲ್ಲ. ವಿಶೇಷ ಎಂದರೆ 1999 ರಿಂದ 2014ರ ತನಕ ಮೈತ್ರಿ ಸರ್ಕಾರಗಳು ಪೂರ್ಣ ಅವಧಿ ಆಡಳಿತ ನಡೆಸಿದ್ದವು. ಈಗ ಮತ್ತೆ ಮೈತ್ರಿ ಆಡಳಿತದ ಸಂಕಷ್ಟಗಳ ಕರಿಛಾಯೆ ದೇಶವನ್ನಾವರಿಸಿದೆ.

ಮ್ಯಾಜಿಕ್ ನಂಬರ್ 272; ಬಿಜೆಪಿ, ಕಾಂಗ್ರೆಸ್ ಆಡಳಿತಕ್ಕೆ ಅವಕಾಶ ಎಷ್ಟು, ಚಿಂತಕರ ಚಾವಡಿಯಲ್ಲಿದೆ 5 ಪ್ರಶ್ನೆ

ಸದ್ಯದ ಫಲಿತಾಂಶ ಪ್ರಕಾರ, 543 ಸದಸ್ಯ ಬಲದ ಲೋಕಸಭೆಯಲ್ಲಿ 272 ಮ್ಯಾಜಿಕ್ ನಂಬರ್. ಕಳೆದ ಎರಡು ಅವಧಿಯಲ್ಲಿ ಬಿಜೆಪಿಗೆ ಈ ಮ್ಯಾಜಿಕ್ ನಂಬರ್ ದಾಟುವ ರೀತಿಯಲ್ಲಿ ಜನಾದೇಶ ಸಿಕ್ಕಿತ್ತು. ಆದರೆ ಈ ಸಲದ ಲೋಕಸಭಾ ಚುನಾವಣೆಯ ಫಲಿತಾಂಶ ಬಿಜೆಪಿಯ ಮಟ್ಟಿಗೆ ಕಳವಳಕಾರಿ. ಇನ್ನೊಂದೆಡೆ ಕಾಂಗ್ರೆಸ್ ಪಕ್ಷ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಹೊಂದಿದ್ದು 100ರ ಆಸುಪಾಸಿನಲ್ಲಿದೆ. ಇಂತಹ ಸನ್ನಿವೇಶದಲ್ಲಿ ಹಲವು ಪ್ರಶ್ನೆಗಳು ಕಾಡತೊಡಗಿವೆ.

1) ಬಿಜೆಪಿಗೆ ಸರಳ ಬಹುಮತದ 272 ಮ್ಯಾಜಿಕ್ ನಂಬರ್ ತಲುಪಲಾಗದೇ ಇದ್ದರೆ ಏನು

ಈ ಸಲದ ಲೋಕಸಭಾ ಚುನಾವಣೆಯಲ್ಲಿ 240ರ ಆಸುಪಾಸಿನಲ್ಲಿ ಮುನ್ನಡೆಯಲ್ಲಿರುವ ಬಿಜೆಪಿಗೆ ಸರಳ ಬಹುಮತ ಸಿಗದೇ ಇದ್ದರೆ, ಮಿತ್ರಪಕ್ಷಗಳ ಜೊತೆಗೆ ಮೈತ್ರಿ ನಿಭಾಯಿಸುವುದು ಕಷ್ಟವಾಗಲಿದೆ. ವಿಶೇಷವಾಗಿ ಜೆಡಿಯು (ನಿತೀಶ್ ಕುಮಾರ್‌) ಮತ್ತು ಟಿಡಿಪಿ (ಚಂದ್ರಬಾಬು ನಾಯ್ಡು)ಗಳ ಜೊತೆಗೆ ಹೊಂದಾಣಿಕೆ ಕಷ್ಟವಾಗಲಿದೆ.

2) ಎನ್‌ಡಿಎ ಮೈತ್ರಿಗೆ ಸರಳಬಹುಮತ ಸಿಕ್ಕಿದರೆ ಮುಂದೇನಾಗಲಿದೆ

ಬಿಜೆಪಿ ಅತಿಹೆಚ್ಚು ಸ್ಥಾನಗಳನ್ನು ಗೆದ್ದ ಪಕ್ಷವಾದರೂ ಸರಳ ಬಹುಮತ ಇಲ್ಲದ ಕಾರಣ, ಅದಕ್ಕೆ ಮಿತ್ರ ಪಕ್ಷಗಳ ಬೇಡಿಕೆಗಳಿಗೆ ಸ್ಪಂದಿಸುವಾಗ ಸ್ವಲ್ಪ ಏರುಪೇರಾದರೂ ಮೈತ್ರಿ ಕಡಿದುಕೊಳ್ಳುವ ಸಾಧ್ಯತೆ ಇದೆ. ಇದು ಇಂಡಿಯಾ ಮೈತ್ರಿಕೂಟಕ್ಕೆ ಅನುಕೂಲ ಮಾಡಿಕೊಡಲಿದೆ.

3) ಕಿಂಗ್ ಮೇಕರ್ ಆಗಿ ಜೆಡಿಎಸ್ ಪಾತ್ರ ಹೇಗಿರಲಿದೆ

ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುವುದಕ್ಕೆ ಎರಡು ದಿನ ಮೊದಲು ದೆಹಲಿ ಪ್ರವಾಸ ಮಾಡಿದ್ದ ಜೆಡಿಯು ನಾಯಕ ನಿತೀಶ್ ಕುಮಾರ್‌ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದು ಬಹಳ ಕುತೂಹಲ ಕೆರಳಿಸಿತ್ತು. ಈಗ ಬಿಜೆಪಿಗೆ ಸರಳಬಹುಮತ ಇಲ್ಲದೇ ಇರುವ ಕಾರಣ ಈ ಭೇಟಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿದೆ. ಬಿಜೆಪಿ ಜೊತೆಗೆ ಬಹುಕಾಲದ ಮೈತ್ರಿ ಕಡಿದುಕೊಂಡ ಜೆಡಿಯು ಬಳಿಕ ಆರ್‌ಜೆಡಿ, ಕಾಂಗ್ರೆಸ್ ಜೊತೆ ಕೈ ಜೋಡಿಸಿದ ಇತಿಹಾಸವೂ ಇದೆ. ಅದಾಗಿ ಯೂಟರ್ನ್ ಮಾಡಿಕೊಂಡು ಮತ್ತೆ ಬಿಜೆಪಿ ಜೊತೆಗೆ ಕೈ ಜೋಡಿಸಿದ್ದೂ ಆಗಿದೆ. ಹೀಗಾಗಿ, ಕಿಂಗ್ ಮೇಕರ್ ಆದರೆ ಕಿರಿಕಿರಿ ತಪ್ಪದು. ಬಿಹಾರದ 40 ಸ್ಥಾನಗಳಲ್ಲಿ ಜೆಡಿಯು 15ರಲ್ಲಿ ಮುನ್ನಡೆಯಲ್ಲಿದೆ.

4) ಕಿಂಗ್ ಮೇಕರ್ ಆಗಿ ಟಿಡಿಪಿ ಪಾತ್ರ ಹೇಗಿರಲಿದೆ

ಆಂಧಪ್ರದೇಶದ ಟಿಡಿಪಿ 16 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು, ಇದು ಕೂಡ ಕಿಂಗ್ ಮೇಕರ್ ಆಗುವ ಸಾಧ್ಯತೆಗಳಿವೆ. ಚಂದ್ರಬಾಬು ನಾಯ್ಡು ಈ ಸಲ ಎನ್‌ಡಿಎ ಮೈತ್ರಿಯಲ್ಲಿದ್ದು, ಬಿಜೆಪಿಗೆ ಸರಳಬಹುಮತ ಸಿಗದೇ ಇದ್ದರೆ ಸರ್ಕಾರ ರಚಿಸುವಲ್ಲಿ ನೆರವಾಗಲಿದೆ. 2019ರ ಲೋಕಸಭಾ ಚುನಾವಣೆ ವೇಳೆ ಟಿಡಿಪಿ ದೂರು ಉಳಿದಿತ್ತು. ಈ ಸಲದ ಚುನಾವಣೆಗೆ ಮೊದಲು ಮತ್ತೆ ಎನ್‌ಡಿಎ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಆಂಧ್ರದಲ್ಲಿ ಟಿಡಿಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದ್ದು, ಇದು ಪಕ್ಷದ ಬಲವನ್ನು ಹೆಚ್ಚಿಸಿದೆ. ಎನ್‌ಡಿಎ ಮೈತ್ರಿ ಬಿಟ್ಟ ಬಳಿಕ ಕಾಂಗ್ರೆಸ್ ಪಕ್ಷದ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿತ್ತು. ಇದು ಚಿಂತೆಗೆ ಈಡುಮಾಡುವ ವಿಚಾರ.

5) ಸರಳ ಬಹುಮತ ಇಲ್ಲದ ಕಾರಣ ಮೈತ್ರಿ ಸರ್ಕಾರ ರಚನೆಯಾದರೆ ಅದರ ಸ್ಥಿರತೆ ಹೇಗೆ?

ಸರಳ ಬಹುಮತದೊಂದಿಗೆ ಎರಡು ಅವಧಿಗೆ ಸ್ಥಿರ ಸರ್ಕಾರ ಕಂಡ ಭಾರತದಲ್ಲಿ ಅದಕ್ಕೂ ಮೊದಲು ಮೂರು ಅವಧಿಗೆ ಮೈತ್ರಿ ಸರ್ಕಾರ ಸ್ಥಿರ ಸರ್ಕಾರ ನೀಡಿತ್ತು. ಕಾಂಗ್ರೆಸ್ ನೇತೃತ್ವದ ಯುಪಿಎ 2004 ರಿಂದ 2014ರ ತನಕ ಎರಡು ಅವಧಿಗೆ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ 1999 ರಿಂದ 2004 ರ ತನಕ ಆಡಳಿತ ನಡೆಸಿತ್ತು. ಹಾಗಾಗಿ ಒಗ್ಗಟ್ಟಾಗಿದ್ದರೆ ಸ್ಥಿರ ಸರ್ಕಾರ ನೀಡುವುದು ಕಷ್ಟವಲ್ಲ.

ಗಮನಿಸಿ; ಇದು ಮತ ಎಣಿಕೆ ಕೇಂದ್ರಗಳಲ್ಲಿ ಲಭ್ಯವಿರುವ ಮಾಹಿತಿ ಆಧರಿಸಿ ಪ್ರಕಟಿಸಿದ ಬರಹ. ಚುನಾವಣಾ ಆಯೋಗವು ಅಧಿಕೃತವಾಗಿ ಅಂಕಿಅಂಶಗಳನ್ನು ಪ್ರಕಟಿಸಿದ ನಂತರ ಮತಗಳ ಸಂಖ್ಯೆ ಏರುಪೇರಾಗಬಹುದು. ಅಂತಿಮ ಫಲಿತಾಂಶದ ವಿವರವನ್ನು ಇದೇ ಬರಹದಲ್ಲಿ ಅಪ್‌ಡೇಟ್ ಮಾಡಲಾಗುವುದು.

👉🏻 ಲೋಕಸಭಾ ಚುನಾವಣೆ ಫಲಿತಾಂಶ: ಸ್ಪಷ್ಟ & ನಿಖರ ಮಾಹಿತಿಗೆ

ಟಿ20 ವರ್ಲ್ಡ್‌ಕಪ್ 2024