ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Lok Sabha Exit Poles2024: ಮತದಾನಕ್ಕೆ 2 ಹಂತ ಬಾಕಿ, ಲೋಕಸಭೆ ಚುನಾವಣೆ 2024 ಎಕ್ಸಿಟ್‌ ಪೋಲ್‌ ಯಾವಾಗ ನಿಮಗೆ ಸಿಗಬಹುದು?

Lok Sabha exit poles2024: ಮತದಾನಕ್ಕೆ 2 ಹಂತ ಬಾಕಿ, ಲೋಕಸಭೆ ಚುನಾವಣೆ 2024 ಎಕ್ಸಿಟ್‌ ಪೋಲ್‌ ಯಾವಾಗ ನಿಮಗೆ ಸಿಗಬಹುದು?

ಲೋಕಸಭೆ ಚುನಾವಣೆ2024( Lok Sabha Elections 2024) ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. ಇನ್ನೇನಿದ್ದರೂ ಮತ ಎಣಿಕೆ. ಅದಕ್ಕೂ ಮೊದಲು ಎಕ್ಸಿಟ್‌ ಪೋಲ್‌( Exit pole. ಅದು ಯಾವಾಗ, ಇಲ್ಲಿದೆ ವಿವರ.

ಮತದಾನ ಬಹುತೇಕ ಮುಗಿಯಿತು. ಮತ ಎಣಿಕೆಗೂ ಮುನ್ನ ಎಕ್ಸಿಟ್‌ ಪೋಲ್‌ ಕೂಡ ಇದೆ.
ಮತದಾನ ಬಹುತೇಕ ಮುಗಿಯಿತು. ಮತ ಎಣಿಕೆಗೂ ಮುನ್ನ ಎಕ್ಸಿಟ್‌ ಪೋಲ್‌ ಕೂಡ ಇದೆ.

ದೆಹಲಿ: ಲೋಕಸಭೆ ಚುನಾವಣೆ2024ಯ ಐದು ಹಂತದ ಮತದಾನ ಈಗಾಗಲೇ ಮುಗಿದಿದೆ. ಇನ್ನು ಎರಡು ಹಂತದ ಮತದಾನ ಮಾತ್ರ ಬಾಕಿಯಿದೆ. ಉತ್ತರ ಭಾರತದ ನಾಲ್ಕೈದು ರಾಜ್ಯಗಳಲ್ಲಿ ಮೇ 25 ಹಾಗೂ ಜೂನ್‌ 1ರಂದು ಕೊನೆಯ ಹಂತದ ಮತದಾನ ಆಗಬೇಕಿದೆ. ಈಗಾಗಲೇ ಶೇ. 70 ರಷ್ಟು ಭಾಗ ಮತದಾನ ಮುಗಿದಿದೆ. ಹೀಗಿದ್ದರೂ ಎಲ್ಲಾ ಹಂತದ ಮತದಾನ ಮುಗಿಯುವವರೆಗೂ ಎಕ್ಸಿಟ್‌ ಪೋಲ್‌( exit pole) ಪ್ರಕಟಣೆಗೆ ಕೇಂದ್ರ ಚುನಾವಣೆ ಆಯೋಗ ನಿಷೇಧ ಹೇರಿದೆ. ಇದರಿಂದ ಜೂನ್‌ 1ರಂದು ಸಂಜೆ 6:30 ನಂತರ ನಂತರ ಪ್ರಕಟಿಸಲು ಅವಕಾಶವಿದೆ.

ಟ್ರೆಂಡಿಂಗ್​ ಸುದ್ದಿ

ಭಾರತದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಜನಸಾಮಾನ್ಯರು ತಮ್ಮ ಹಕ್ಕನ್ನು ಚಲಾಯಿಸಿ ಪಕ್ಷಗಳನ್ನು ಆಯ್ಕೆ ಮಾಡುತ್ತಾರೆ. ಆ ಪಕ್ಷಗಳ ಪ್ರತಿನಿಧಿಗಳು ತಮ್ಮ ನಾಯಕನನ್ನು ಆಯ್ಕೆ ಮಾಡುವ ಪದ್ದತಿಯಿದೆ. 130 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಮತದಾರರ ಸಂಖ್ಯೆಯೂ 100 ಕೋಟಿಯಷ್ಟಿದೆ. ಹೀಗಿರುವಾಗ ಚುನಾವಣೆ ಎನ್ನುವುದು ಒಂದು ಕಡೆ ಹಬ್ಬವಾದರೂ ಮತ್ತೊಂದು ಕಡೆ ಜವಾಬ್ದಾರಿಯೂ ಹೌದು. ಚುನಾವಣೆಯ ಕುರಿತಾಗಿ ಸಮೀಕ್ಷೆಗಳ ಜತೆಗೆ ಎಕ್ಸಿಟ್‌ ಪೋಲ್‌ ಕೂಡ ಭಾರತದಲ್ಲಿ ಜನಪ್ರಿಯ. ಜನ ಹಾಗೂ ರಾಜಕೀಯ ಪಕ್ಷಗಳು ಮತ್ತು ನೇತಾರರು, ನಾನಾ ಕ್ಷೇತ್ರದವರಿಗೆ ಇದೊಂದು ರೀತಿ ಮುಂದೆ ಬರುವ ಸರ್ಕಾರದ ದಿಕ್ಸೂಚಿಯೂ ಕೂಡ.

ಚುನಾವಣೆ ಮತ ಎಣಿಕೆ ಮುಂಚೆಯೇ ಯಾವ ಪಕ್ಷ ಮುನ್ನಡೆ ಸಾಧಿಸಬಹುದು, ಯಾರಿಗೆ ಹೆಚ್ಚು ಸ್ಥಾನ ಲಭಿಸಬಹುದು ಎನ್ನುವ ಮಾಹಿತಿಯನ್ನು ಎಕ್ಸಿಟ್‌ ಪೋಲ್‌ ಮೂಲಕ ನೀಡಲಾಗುತ್ತದೆ. ಇದು ಸ್ಟಾಕ್‌ ಮಾರ್ಕೆಟ್‌, ರಾಜಕೀಯ ಕಾರಣಗಳು ಇದರ ಹಿಂದೆ ಇದ್ದೇ ಇದೆ.

ಭಾರತದಲ್ಲಿ ಆರು ದಶಕದ ಹಿಂದೆಯೇ ಎಕ್ಸಿಟ್‌ ಪೋಲ್‌ನ ಪ್ರಯೋಗಗಳು ನಡೆದವು. ಆದರೆ 80ರ ದಶಕದಲ್ಲಿ ಇದಕ್ಕೊಂದು ರೂಪ ಸಿಕ್ಕಿತು. ಆನಂತರ ಇದು ವೃತ್ತಿಪರ ಸ್ವರೂಪವನ್ನು ಪಡೆದು ಈಗ ದೇಶದ ಪ್ರಮುಖ ಹತ್ತಕ್ಕೂ ಹೆಚ್ಚು ಚುನಾವಣೆ ನೀತಿ ನಿರೂಪಣಾ ಸಂಸ್ಥೆಗಳು, ಮಾಧ್ಯಮ ಸಂಸ್ಥೆಗಳು, ಚುನಾವಣೆ ತಜ್ಞರು ಕೂಡ ಚುನಾವಣೋತ್ತರ ಸಮೀಕ್ಷೆಗಳನ್ನು ಕೈಗೊಳ್ಳುತ್ತಾರೆ. ಎರಡು ದಶಕದಲ್ಲಿ ಇದಕ್ಕೆ ಮಹತ್ವವೂ ಬಂದಿದೆ. ಏಕೆಂದರೆ ಬಹುತೇಕ ಸಂಸ್ಥೆಗಳು ನೀಡುವ ಟ್ರೆಂಡ್ಸ್‌ ಗಳು ಹತ್ತಿರವೇ ಇರುತ್ತದೆ. ಅದರಲ್ಲೂ ಒಂದೆರಡು ಸಂಸ್ಥೆಗಳ ಎಕ್ಸಿಟ್‌ ಪೋಲ್‌ ನಿಖರವಾಗಿ ಕೂಡ ಇರುತ್ತದೆ.

ಲೋಕಸಭೆ ಚುನಾವಣೆಯಲ್ಲಿ ರಾಜ್ಯವಾರು ಇರುವ ಕ್ಷೇತ್ರಗಳಲ್ಲಿ, ಅದರಲ್ಲಿ ಪ್ರಮುಖ ಹಾಗೂ ಗಮನ ಸೆಳೆಯುವ ಕ್ಷೇತ್ರಗಳು, ಅಲ್ಲಿನ ಹಿಂದಿನ ಫಲಿತಾಂಶಗಳು, ಜಾತಿ ಲೆಕ್ಕಾಚಾರ, ಮೂಡ್‌ , ಮತದಾರರ ಸಂದರ್ಶನ, ಮತದಾರರ ಅಭಿಪ್ರಾಯಗಳನ್ನು ಆಧರಿಸಿ ಎಕ್ಸಿಟ್‌ ಪೋಲ್‌ ರೂಪಿಸಲಾಗುತ್ತದೆ. ಪ್ರಶ್ನೋತ್ತರ ಮಾದರಿಗಳನ್ನು ನೀಡಿ ಆ ಮೂಲಕವೂ ಉತ್ತರ ಪಡೆದು ವಿಶ್ಲೇಷಣೆ ಮಾಡಲಾಗುತ್ತದೆ. ಸಂಗ್ರಹಿಸಿದ ದತ್ತಾಂಶಗಳನ್ನು ತಜ್ಞರು ವಿಶ್ಲೇಷಿಸಿ ಫಲಿತಾಂಶ ಪ್ರಕಟಿಸುತ್ತಾರೆ.

ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಚುನಾವಣೆ ಆಯೋಗವೂ ಎಕ್ಸಿಟ್‌ ಪೋಲ್‌ ಅನ್ನು ಯಾವಾಗಲಾದರೂ ಪ್ರಕಟಿಸುವುದಕ್ಕೆ ಮಿತಿ ಹೇರಿದೆ. ಇದು ಮತದಾನಕ್ಕೂ ಮುನ್ನ ಇಲ್ಲವೇ ಮತದಾನ ನಡೆಯುವ ವೇಳೆ ಪ್ರಕಟಿಸಿದರೆ ಮತದಾರರ ಮೇಲೆ ಪ್ರಭಾವ ಬೀರಲಿದೆ ಎನ್ನುವ ಕಾರಣವೂ ಇದರ ಹಿಂದೆ ಇದೆ. ಎಲ್ಲಾ ಹಂತದ ಮತದಾನ ಮುಗಿದ ಮೇಲೆಯೇ ಪ್ರಕಟಿಸುವ ಪರಿಪಾಠವೂ ಬೆಳೆದಿದೆ.

ಈ ಆಕ್ಸಿಸ್‌ ಮೈ ಇಂಡಿಯಾ(Axis My India), ಸೀ ಓಟರ್‌(CVoter), ಇಂಡಿಯಾ ಟುಡೆ ಆಕ್ಸಿಸ್‌(India Today-Axis), ಎಬಿಪಿ ನ್ಯೂಸ್‌- ಸಿ ವೋಟರ್‌(ABP News-CVoter), ಟೈಂಸ್‌ ನೌ(Times Now), ನ್ಯೂಸ್‌- 18 ಐಪಿಎಸ್‌ಒಎಸ್‌(News18-IPSOS), ರಿಪಬ್ಲಿಕ್‌ ಟಿವಿ- ಜನ್‌ ಕೀ ಬಾತ್‌( Republic TV-Jan Ki Baat), ಟುಡೇಸ್‌ ಚಾಣಕ್ಯ(Today's Chanakya) ಪ್ರಮುಖ ಎಕ್ಸಿಟ್‌ ಪೋಲ್‌ ನೀಡುವ ಸಂಸ್ಥೆಗಳು.

ಆಕ್ಸಿಸ್‌ ಮೈ ಇಂಡಿಯಾದ ಪ್ರದೀಪ್‌ ಗುಪ್ತ, ಸಿ ವೋಟರ್ ನ ಯಶ್ವಂತ್‌ ದೇಶಮುಖ್‌, ಟುಡೇಸ್‌ ಚಾಣಕ್ಯದ ಮಾಧವ್‌ ಗೋಡಬೋಲೆ, ಐಪಿ ಎಸ್‌ಒಎಸ್‌ನ ಪಾರಿಜಾತ್‌ ಚಕ್ರಬೋರ್ತಿ, ಚುನಾವಣಾ ತಜ್ಞ ಪ್ರಶಾಂತ್‌ ಕಿಶೋರ್‌ ಈ ಪ್ರಕ್ರಿಯೆ ಹಿಂದೆ ಇರುವ ಪ್ರಮುಖರು.


(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024