ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Modi Assets: ಪ್ರಧಾನಿ ಮೋದಿ ಆಸ್ತಿ ಎಷ್ಟು,5 ವರ್ಷದಲ್ಲಿ ಏರಿದ ಪ್ರಮಾಣವೇನು, ಅವರ ಬಳಿ ಸ್ವಂತ ಮನೆ, ಕಾರು ಇದೆಯೇ?

Modi Assets: ಪ್ರಧಾನಿ ಮೋದಿ ಆಸ್ತಿ ಎಷ್ಟು,5 ವರ್ಷದಲ್ಲಿ ಏರಿದ ಪ್ರಮಾಣವೇನು, ಅವರ ಬಳಿ ಸ್ವಂತ ಮನೆ, ಕಾರು ಇದೆಯೇ?

ನರೇಂದ್ರ ಮೋದಿ ಅವರ ಆಸ್ತಿ ಪ್ರಮಾಣ( PM Modi Assets) ಎಷ್ಟು ಹೆಚ್ಚಳವಾಗಿದೆ ಎನ್ನುವ ಕುತೂಹಲಕ್ಕೆ ತೆರೆಬಿದ್ದಿದೆ. ಅವರು ಸಲ್ಲಿಸಿರುವ ಅಫಿಡವಿಟ್‌ನಂತೆ ವಿವರ ಇಲ್ಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿ ಪ್ರಮಾಣ ಹೆಚ್ಚಳವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿ ಪ್ರಮಾಣ ಹೆಚ್ಚಳವಾಗಿದೆ.

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿ ಪ್ರಮಾಣ ಎಷ್ಟಿರಬಹುದು. ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರ ಘೋಷಿಸುವುದು ಕಡ್ಡಾಯವಾಗಿರುವುದರಿಂದ ಸಹಜವಾಗಿಯೇ ಎಲ್ಲ ಅಭ್ಯರ್ಥಿಗಳ ಆಸ್ತಿ ಎಷ್ಟಿರಬಹುದು ಎನ್ನುವ ಕುತೂಹಲ ಇದ್ದೇ ಇರುತ್ತದೆ. ಇನ್ನು ದೇಶದ ಪ್ರಧಾನಿಯ ಆಸ್ತಿ ಎಷ್ಟು ಇರಬಹುದು ಎನ್ನುವ ಆಸಕ್ತಿ ಕೊಂಚ ಹೆಚ್ಚೇ ಇರುತ್ತದೆ. ಮೋದಿ ವಿಚಾರದಲ್ಲಿ ಇನ್ನೂ ಹೆಚ್ಚು ಇರಬಹುದು. ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಚುನಾವಣೆ ಕಣಕ್ಕೆ ಇಳಿದಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ.ಎರಡು ವರ್ಷದ ಅವಧಿಯಲ್ಲಿ ಮೋದಿ ಆಸ್ತಿ ಒಂದು ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ.

ಟ್ರೆಂಡಿಂಗ್​ ಸುದ್ದಿ

ನರೇಂದ್ರ ಮೋದಿ ಅವರು ಘೋಷಿಸಿಕೊಂಡಂತೆ ಅವರ ಆಸ್ತಿ ಒಟ್ಟು ಪ್ರಮಾಣ 3.02 ಕೋಟಿ ರೂ. ಅವರ ಖಾತೆಯಲ್ಲಿ 52,920 ರೂ.ಗಳಿವೆ. ಉಳಿದಂತೆ ಅವರ ಚರಾಸ್ತಿ ಪ್ರಮಾಣ 3.02 ಕೋಟಿ ರೂ.ಗಳಷ್ಟು ಆಗಲಿದೆ ಎಂದು ಘೋಷಿಸಿಕೊಂಡಿದ್ದಾರೆ.

ಮೋದಿ ಅವರ ಹೆಸರಿನಲ್ಲಿ ಯಾವುದೇ ಭೂಮಿ, ಮನೆ ಹಾಗೂ ಕಾರು ಕೂಡ ಇಲ್ಲ. ಹಿಂದೆ ಗುಜರಾತ್‌ ನ ಗಾಂಧಿನಗರದಲ್ಲಿ ಇದ್ದ ಸ್ವಲ್ಪ ಭೂಮಿಯನ್ನು ಬೇರೆಯವರ ಹೆಸರಿಗೆ ದಾನ ಮಾಡಿದ್ದಾರೆ. ಮೂವರು ಸಹೋದರರ ಜಂಟಿ ಖಾತೆಯಲ್ಲಿ ಇದ್ದ ಆಸ್ತಿಯಲ್ಲಿ ಮೋದಿ ಅವರ ಹೆಸರು ಇತ್ತು. ಅದನ್ನು ಆನಂತರ ಅವರು ದಾನ ಮಾಡಿರುವುದರಿಂದ ಆ ಆಸ್ತಿ ಮೇಲೆ ಮೋದಿಗೆ ಈಗ ಹಕ್ಕಿಲ್ಲ.

ಅವರ ಆದಾಯದ ಪ್ರಮಾಣ 2018-19ರಲ್ಲಿ 11.14 ಲಕ್ಷ ರೂ. ಇತ್ತು. 2022-23ರ ಆರ್ಥಿಕ ವರ್ಷಕ್ಕೆ ಇದು 23.56 ಲಕ್ಷ ರೂ.ಗಳಿಗೆ ಏರಿಕೆಯಾಗಿದೆ. ಅಂದರೆ ಅವರ ಆದಾಯದ ಪ್ರಮಾಣ ದ್ವಿಗುಣಗೊಂಡಿರುವುದನ್ನು ಉಲ್ಲೇಖಿಸಲಾಗಿದೆ.

ಎರಡು ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್‌ಗೆ ಸಲ್ಲಿಸಿದ್ದ ಆಸ್ತಿ ವಿವರದ ಪ್ರಕಾರ 2.23ಕೋಟಿ ರೂ.ಗಳಷ್ಟಿತ್ತು. ಆಗ ಅವರ ಕೈಯಲ್ಲಿ 35,250 ರೂ. ನಗದು ಇತ್ತು. ಉಳಿದಂತೆ ರಾಷ್ಟ್ರೀಯ ಉಳಿತಾಯ ಯೋಜನೆಯಲ್ಲಿ 9,05,105 ರೂ. ಗೂ ಎಲ್‌ಐಸಿಯಲ್ಲಿ 1,89,305.ರೂ. ಹೂಡಿಕೆ ಮಾಡಿದ್ದಾಗಿ ಹೇಳಿಕೊಂಡಿದ್ದರು.

ಹತ್ತು ವರ್ಷದಲ್ಲಿ ಅವರ ಆಸ್ತಿ ಮೌಲ್ಯವೂ ಮೂರು ಪಟ್ಟು ಏರಿದೆ. ಮೊದಲ ಬಾರಿಗೆ ಅವರು ಸಂಸತ್‌ ಚುನಾವಣೆಗೆ ಸ್ಪರ್ಧೆ ಮಾಢಿದಾಗ 1.51 ಕೋಟಿ ರೂ. ಘೋಷಿಸಿಕೊಂಡಿದ್ದರು. ಐದು ವರ್ಷದ ನಂತರ ಎರಡನೇ ಬಾರಿ ಪ್ರಧಾನಿಯಾದಾಗ 2 ಕೋಟಿ ರೂ. ಘೋಷಿತ ಆಸ್ತಿ ಇತ್ತು. ಈಗ 3.02 ಕೋಟಿ ರೂ. ಆಗಿದೆ.

ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point