ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗೋದು ಖಚಿತವೆಂದ ದಿನೇಶ್‌ ಶರ್ಮಾ; ಇಂದಿರಾ ಗಾಂಧಿ, ನೆಹರೂ ಎಷ್ಟು ವರ್ಷ ಪಿಎಂ ಆಗಿದ್ರು?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗೋದು ಖಚಿತವೆಂದ ದಿನೇಶ್‌ ಶರ್ಮಾ; ಇಂದಿರಾ ಗಾಂಧಿ, ನೆಹರೂ ಎಷ್ಟು ವರ್ಷ ಪಿಎಂ ಆಗಿದ್ರು?

Lok sabha election results: ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಗೆಲುವು ಪಡೆದರೆ ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿ ಪಟ್ಟಕ್ಕೇರುವುದು ಖಾತ್ರಿ. ಹಾಗಾದರೆ, ಜವಾಹಾರ್‌ ಲಾಲ್‌ ನೆಹರು, ಇಂದಿರಾ ಗಾಂಧಿ ಭಾರತದಲ್ಲಿ ಎಷ್ಟು ವರ್ಷ, ಎಷ್ಟು ದಿನಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ? ಉತ್ತರ ಇಲ್ಲಿದೆ.

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗೋದು ಖಚಿತವೆಂದ ದಿನೇಶ್‌ ಶರ್ಮಾ
ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗೋದು ಖಚಿತವೆಂದ ದಿನೇಶ್‌ ಶರ್ಮಾ

ಬೆಂಗಳೂರು: ದೇಶದಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶ ಏನಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಆರಂಭಿಕ ಟ್ರೆಂಡ್‌ಗಳು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರೋದು ಖಾತ್ರಿ ಎಂಬ ಸೂಚನೆ ನೀಡಿವೆ. ಆದರೆ, ಅಪರಾಹ್ನದ ನಂತರವಷ್ಟೇ ಈ ಕುರಿತು ಸ್ಪಷ್ಟ ಸೂಚನೆ ದೊರಕಲಿದೆ ಇದೇ ಸಮಯದಲ್ಲಿ ಉತ್ತರ ಪ್ರದೇಶದ ಮಾಜಿ ಉಪ ಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡ ದಿನೇಶ್‌ ಶರ್ಮಾ "ಪ್ರಧಾನಿ ನರೇಂದ್ರ ಮೋದಿ ಅವರು ಜವಾಹಾರ್‌ಲಾಲ್‌ ನೆಹರು ಬಳಿಕ ಭಾರತದಲ್ಲಿ ಮೂರು ಬಾರಿ ಪ್ರಧಾನಿ ಪಟ್ಟಕ್ಕೇರಿದ ಹಿರಿಮೆಗೆ ಪಾತ್ರರಾಗಲಿದ್ದಾರೆ" ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

"ಮತ ಎಣಿಕೆ ನಡೆಯುತ್ತಿದೆ. ರಾಹುಲ್‌ ಗಾಂಧಿ ಡಗ ಡಗ ಡಟ ಡಗ್‌ ಡಗ್‌ ಎನ್ನುತ್ತಿದ್ದಾರೆ. ಅವರಿಗೆ ಡಗ ಡಗ ಭಯ ಆರಂಭವಾಗಿದೆ. ಈಗಾಗಲೇ ಎಕ್ಸಿಟ್‌ ಪೋಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಪಡೆಯುವ ಸೂಚನೆ ನೀಡಲಾಗಿದೆ. ಈಗಿನ ಮತ ಎಣಿಕೆಯ ಟ್ರೆಂಡ್‌ ಕೂಡ ಇದೇ ಸೂಚನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿ ಅಧಿಕಾರ ಪಡೆಯುವುದು ಖಾತ್ರಿಯಾಗಿದೆ. ನೆಹರು ಬಳಿಕ ಭಾರತದಲ್ಲಿ ಮೂರು ಬಾರಿ ಪ್ರಧಾನಿ ಪಟ್ಟಕ್ಕೇರಿದ ವ್ಯಕ್ತಿಯಾಗಲಿದ್ದಾರೆ. ಈ ಮೂರನೇ ಅವಧಿಯಲ್ಲಿ ಪ್ರಧಾನಿ ಮೋದಿಯಿಂದ ಭಾರತಕ್ಕೆ ಸಾಕಷ್ಟು ಉತ್ತಮವಾದ ಕೆಲಸವಾಗಲಿದೆ" ಎಂದು ದಿನೇಶ್‌ ಶರ್ಮಾ ಸುದ್ದಿ ಸಂಸ್ಥೆ ಎಎನ್‌ಐಗೆ ಹೇಳಿದ್ದಾರೆ.

ದೇಶಾದ್ಯಂತ ಸುಮಾರು 8 ಸಾವಿರ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧರಿಸುವ ಈ ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಎಲ್ಲೆಡೆ ಬಿಗಿಭದ್ರತೆ ಕೈಗೊಳ್ಳಲಾಗಿದೆ. ಆಡಳಿತರೂಢ ಬಿಜೆಪಿ ನೇತೃತ್ವದ ಎನ್‌ಡಿಎಯು 2019ಕ್ಕಿಂತ ಹೆಚ್ಚು ಸೀಟುಗಳನ್ನು ಗೆಲ್ಲುವ ಭವಿಷ್ಯವನ್ನು ಎಕ್ಸಿಟ್‌ ಪೋಲ್‌ಗಳು ನೀಡಿವೆ. ಹಲವು ಎಕ್ಸಿಟ್‌ ಪೋಲ್‌ಗಳು ಪ್ರಧಾನಿ ನರೇಂದ್ರ ಮೋದಿ ಮತ್ತೆ ಅಧಿಕಾರ ಪಡೆಯುವ ಸೂಚನೆ ನೀಡಿವೆ. ಎಲ್ಲಾದರೂ ಈ ಮುನ್ನೋಟ ನಿಜವಾದರೆ, ಇಂದು ಸಂಜೆಯ ವೇಳೆಗೆ ಬಿಜೆಪಿಯ ಬಹುಮತ ಸಾಬೀತಾದರೆ ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಮಂತ್ರಿಯಾಗಲಿದ್ದಾರೆ.

ಯಾರು ಎಷ್ಟು ಬಾರಿ ಪ್ರಧಾನಿಯಾಗಿದ್ದರು?

ಜವಾಹಾರ್‌ ಲಾಲ್‌ ನೆಹರು ಅವರು ಭಾರತದಲ್ಲಿ ಅತ್ಯಧಿಕ ಅವಧಿಗೆ ಸೇವೆ ಸಲ್ಲಿಸಿದ ಪ್ರಧಾನಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. 1947ರಿಂದ 1964ರವರೆಗೆ ಇವರು ಪ್ರಧಾನಿಯಾಗಿದ್ದರು. ಅಂದರೆ 16 ವರ್ಷ, 286 ದಿನಗಳ ಕಾಲ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು.

ಇಂದಿರಾ ಗಾಂಧಿ ಎಷ್ಟು ವರ್ಷ ಪ್ರಧಾನಿಯಾಗಿದ್ದರು?

ಕಾಂಗ್ರೆಸ್‌ನ ಇಂದಿರಾ ಗಾಂಧಿ 1966-1977ರವರೆಗೆ ಮತ್ತು 1980ರಿಂದ 1984ರವರೆಗೆ ಭಾರತದ ಪ್ರಧಾನಿಯಾಗಿದ್ದರು. ಅಂದರೆ, 15 ವರ್ಷ 350 ದಿನಗಳ ಕಾಲ ಪ್ರಧಾನಿಯಾಗಿದ್ದರು.

ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ 2014ರಿಂದ ಪ್ರಧಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 10 ವರ್ಷ 19 ದಿನ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇದೀಗ ಈ ಚುನಾವಣೆಯಲ್ಲಿ ಗೆಲುವು ಪಡೆದರೆ ಇವರು ನೆಹರೂ ಬಳಿಕ ಅತ್ಯಧಿಕ ವರ್ಷ ಪ್ರಧಾನಿಯಾದ ವ್ಯಕ್ತಿಯೆಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ.

ಟಿ20 ವರ್ಲ್ಡ್‌ಕಪ್ 2024