ಲೋಕಸಭೆ ಕಲಾಪ ನಡೆಯುತ್ತಿದ್ದ ವೇಳೆ ಅನಾಮಿಕ ವ್ಯಕ್ತಿ ಪ್ರವೇಶ; ಭದ್ರತಾ ಲೋಪ ಆರೋಪ, ಕಲಾಪ ಸ್ಥಗಿತ
Lok Sabha: ಬುಧವಾರ ಲೋಕಸಭೆ ಕಲಾಪ ನಡೆಯುತ್ತಿದ್ದ ಸಮಯದಲ್ಲಿ ಪ್ರೇಕ್ಷಕರ ಗ್ಯಾಲರಿಯಿಂದ ಏಕಾಏಕಿ ಸದನದೊಳಗೆ ನುಗ್ಗಿದ ವ್ಯಕ್ತಿಯೊಬ್ಬ ಒಂದು ರೀತಿಯ ಗ್ಯಾಸ್ ಸಿಂಪಡಿಸಲು ಆರಂಭಿಸಿದ್ದಾನೆ. ಇದರಿಂದ ಸಂಸದರು ಗಾಬರಿ ಆಗಿದ್ದು ಎಲ್ಲರೂ ಹೊರಕ್ಕೆ ಓಡಿದ್ದಾರೆ, ಕಲಾಪ ಅರ್ಧಕ್ಕೆ ನಿಂತಿದೆ.
ನವದೆಹಲಿ: ಲೋಕಸಭೆ ಕಲಾಪ ನಡೆಯತ್ತಿದ್ದ ವೇಳೆ ವ್ಯಕ್ತಿಯೊಬ್ಬ ಪ್ರೇಕ್ಷಕರ ಗ್ಯಾಲರಿಯಿಂದ ಎದ್ದು ಸದನದಲ್ಲಿ ಓಡಾಡಲು ಆರಂಭಿಸಿದ ಹಿನ್ನೆಲೆ ಲೋಕಸಭೆ ಕಲಾಪವನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ. ಈ ಮೂಲಕ ಲೋಕಸಭೆಯಲ್ಲಿ ಭದ್ರತಾ ಲೋಪ ಕೇಳಿಬಂದಿದೆ.
ಲೋಕಸಭೆ ಒಳಗೆ ಅನಿಲ ಸಿಂಪಡಿಸಿದ ಅನಾಮಿಕ ವ್ಯಕ್ತಿ
ಬುಧವಾರ ಕಲಾಪ ನಡೆಯುತ್ತಿದ್ದ ಸಮಯದಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ನೀಲಿ ಬಣ್ಣದ ಜಾಕೆಟ್ ಧರಿಸಿದ್ದ ವ್ಯಕ್ತಿಯೊಬ್ಬ ಏಕಾಏಕಿ ಸದನದ ಸುತ್ತಲೂ ಓಡಾಡಲು ಆರಂಭಿಸಿದ್ದಾನೆ. ಆದ್ದರಿಂದ ಲೋಕಸಭೆ ಕಲಾಪವನ್ನು ಸ್ಥಗಿತಗೊಳಿಸಲಾಯಿತು. ಇದೇ ಭೀತಿಯಲ್ಲಿ ಸಂಸದರು ಕೂಡಾ ಲೋಕಸಭೆಯಿಂದ ಹೊರ ಹೋಗಲು ಆರಂಭಿಸಿದ್ದಾರೆ. ಕೆಲವು ಸಂಸದರು ಹಾಗೂ ಭದ್ರತಾ ಸಿಬ್ಬಂದಿ ಆ ವ್ಯಕ್ತಿಯನ್ನು ಹಿಡಿದು ವಿಚಾರಣೆ ಆರಂಭಿಸಿದ್ದಾರೆ. ಒಳ ನುಗಿದ್ದು ಆತ ಒಬ್ಬ ಮಾತ್ರಾನಾ ಅಥವಾ ಆತನೊಂದಿಗೆ ಬೇರೆ ಯಾರಾದರೂ ಇದ್ದಾರಾ ಎಂಬ ತನಿಖೆ ನಡೆಯುತ್ತಿದೆ. ಒಬ್ಬ ಒಳನುಗ್ಗುವವರು ಇದ್ದಾರೋ ಅಥವಾ ಹಲವಾರು ಮಂದಿ ಇದ್ದಾರೋ ಎಂಬುದು ಇನ್ನೂ ತಿಳಿದಿಲ್ಲ. ಲೋಕಸಭೆಗೆ ಪ್ರವೇಶಿಸಿದ ಆ ವ್ಯಕ್ತಿ ಒಳಗೆಲ್ಲಾ ಒಂದು ರೀತಿಯ ಅನಿಲವನ್ನು ಸಿಂಪಡಿಸುತ್ತಿದ್ದ ಎಂದು ಸಂಸದರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ವಿಭಾಗ