ಅಧೀರ್ ರಂಜನ್ ಚೌಧರಿ, ದಯಾನಿಧಿ ಮಾರನ್ ಸೇರಿ ವಿಪಕ್ಷದ 33 ಎಂಪಿಗಳು ಲೋಕಸಭಾ ಅಧಿವೇಶನದಿಂದ ಅಮಾನತು
ಕಲಾಪದಲ್ಲಿ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ವಿಪಕ್ಷದ 33 ಸದಸ್ಯರು ಅಮಾನತುಗೊಂಡಿದ್ದಾರೆ. ಕಾಂಗ್ರೆಸ್ ನಾಯಕ ಅಧೀರ್ ರಂಜನ್, ಡಿಎಂಕೆ ಪಕ್ಷದ ದಯಾನಿಧಿ ಮಾರನ್ ಸೇರಿದ್ದಾರೆ.
ದೆಹಲಿ: ಪ್ರಸ್ತುತ ನಡೆಯುತ್ತಿರುವ ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷಗಳ 33 ಸದಸ್ಯರನ್ನು ಅಮಾನತು ಮಾಡಲಾಗಿದೆ. ಸದನದ ಒಳಗಡೆ ಫಲಕಗಳನ್ನು ಪ್ರದರ್ಶಿಸಿ ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಸ್ಪೀಕರ್ ಓಂ ಬಿರ್ಲಾ ಅವರು ಅಮಾನತಿನ ನಿರ್ಧಾರವನ್ನು ಕೈಗೊಂಡಿದ್ದಾರೆ.
ಲೋಕಸಭೆ ಕಲಾಪದ ವೇಳೆ ಭದ್ರತಾ ವೈಫಲ್ಯ ಪ್ರಕರಣ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿಕೆ ನೀಡಬೇಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ ವೇಳೆ ಪ್ರತಿಭಟನಾ ನಿರತ ವಿಪಕ್ಷ ಸದಸ್ಯರು ಫಲಕಗಳನ್ನ ಪ್ರದರ್ಶಿಸಿದ್ದಾರೆ. ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಡಿಎಂಕೆ ನಾಯಕ ದಯಾನಿಧಿ ಮಾರನ್ ಅಮಾನತುಗೊಂಡವರಲ್ಲಿ ಪ್ರಮುಖರಾಗಿದ್ದಾರೆ.
ಕಲಾಪದಲ್ಲಿ ಭಿತ್ತಿಪತ್ರ ಪ್ರದರ್ಶಿಸಿದ್ದಕ್ಕೆ 30 ಎಂಪಿಗಳು ಸಸ್ಪೆಂಡ್ ಆದರೆ ಉಳಿದ ಮೂವರು ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ.
ಇತ್ತೀಚೆಗಷ್ಟೇ ವಿರೋಧ ಪಕ್ಷದ 13 ಸದಸ್ಯರನ್ನು ಲೋಕಸಭೆಯಿಂದ ಅಮಾನತು ಮಾಡಲಾಗಿತ್ತು. ಇದರಲ್ಲಿ 9 ಮಂದಿ ಕಾಂಗ್ರೆಸ್ ಎಂಪಿಗಳು ಸೇರಿದ್ದರು. ಸ್ಪೀಕರ್ ಓಂ ಬಿರ್ಲಾ ಅವರ ನಿರ್ಧಾರವನ್ನು ಖಂಡಿಸಿ ಇಂದು (ಡಿಸೆಂಬರ್ 18, ಸೋಮವಾರ) ಲೋಕಸಭೆ ಮೆಟ್ಟಿಲುಗಳ ಮೇಲೆ ಕುಳಿತು ವಿರೋಧ ಪಕ್ಷದ ಹಲವು ಸದಸ್ಯರು ಪ್ರತಿಭಟನೆ ನಡೆಸಿದರು. ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು. ಈ ವೇಳೆ ಭಿತ್ತಿಪತ್ರಗಳನ್ನು ಪ್ರದರ್ಶಿಸಿದ್ದಾರೆ. ಕಲಾಪ ನಡೆಯುತ್ತಿದ್ದಾಗಲೇ ಇಬ್ಬರು ಹೊಗೆ ಬಾಂಬ್‌ನೊಂದಿಗೆ ಒಳಗಡೆ ನುಗಿದ್ದರು.
ಅಮಾನತುಗೊಂಡ ಲೋಕಸಭಾ ಸದಸ್ಯರ ಸಂಪೂರ್ಣ ಪಟ್ಟಿ ಹೀಗೀದೆ
1. ಕಲ್ಯಾಣ್ ಬ್ಯಾನರ್ಜಿ - ಟಿಎಂಸಿ
2. ಎ ರಾಜಾ - ಡಿಎಂಕೆ
3. ದಯಾನಿಧಿ ಮಾರನ್ - ಡಿಎಂಕೆ
4. ಅಪರೂಪ ಪೊದ್ದಾರ್ - ಟಿಎಂಸಿ
5. ಪ್ರಸೂನ್ ಬ್ಯಾನರ್ಜಿ - ಟಿಎಂಸಿ
6. ಇ ಟಿ ಮೊಹಮ್ಮದ್ ಬಶೀರ್ - ಐಯುಎಂಎಲ್
7. ಗಣೇಸನ್ ಸೆಲ್ವಂ - ಡಿಎಂಕೆ
8. ಸಿಎಂ ಅಣ್ಣಾದುರೈ - ಡಿಎಂಕೆ
9. ಅಧೀರ್ ರಂಜನ್ ಚೌಧರಿ - ಕಾಂಗ್ರೆಸ್
10. ಟಿ ಸುಮತಿ - ಡಿಎಂಕೆ
11. ಕನಿ ಕೆ ನವಾಸ್ - ಐಯುಎಂಎಲ್
12. ಕಲಾನಿಧಿ ವೀರಸ್ವಾಮಿ - ಡಿಎಂಕೆ
13. ಎಂಕೆ ಪ್ರೇಮಚಂದ್ರನ್ - ಆರ್‌ಎಸ್‌ಪಿ
14. ಸೌಗತ ರೇ - ಟಿಎಂಸಿ
15. ಸತಾಬ್ದಿ ರಾಯ್ - ಟಿಎಂಸಿ
16. ಅಸೀತ್ ಕುಮಾರ್ ಮಾಲ್ - ಟಿಎಂಸಿ
17. ಕೌಶಲೇಂದ್ರ ಕುಮಾರ್ - ಜೆಡಿಯು
18. ಆಂಟೊ ಆಂಟೋನಿ - ಕಾಂಗ್ರೆಸ್
19. ಎಸ್ ಎಸ್ ಪಳನಿಮಾನಿಕ್ಯಂ - ಡಿಎಂಕೆ
20. ಪ್ರತಿಮಾ ಮೊಂಡಲ್ - ಟಿಎಂಸಿ
21. ಕಾಕೋಲಿ ಘೋಷ್ - ಟಿಎಂಸಿ
22. ಕೆ ಮುರಳೀಧರನ್ - ಕಾಂಗ್ರೆಸ್
23. ಸುನೀಲ್ ಮೊಂಡಲ್ - ಟಿಎಂಸಿ
24. ರಾಮಲಿಂಗಂ ಸೆಲ್ಲಪೆರುಮಾಳ್ - ಟಿಎಂಸಿ
25. ಕೊಡಿಕುನೆಲ್ ಸುರೇಶ್ - ಕಾಂಗ್ರೆಸ್
26. ಅಮರ್ ಸಿಂಗ್ - ಕಾಂಗ್ರೆಸ್
27. ರಾಜಮೋಹನ್ ಉನ್ನಿತನ್ - ಕಾಂಗ್ರೆಸ್
28. ಸು. ತಿರುನಾವುಕ್ಕರಸರ್ - ಕಾಂಗ್ರೆಸ್
29. ಟಿ ಆರ್ ಬಾಲು - ಡಿಎಂಕೆ
30. ಗೌರವ್ ಗೋಗೊಯ್ - ಕಾಂಗ್ರೆಸ್
31. ವಿಜಯ್ ಕುಮಾರ್ ವಸಂತ್ - ಕಾಂಗ್ರೆಸ್
32. ಡಾ ಕೆ ಜಯಕುಮಾರ್ - ಕಾಂಗ್ರೆಸ್
33. ಅಬ್ದುಲ್ ಕಲೀಖ್ - ಕಾಂಗ್ರೆಸ್