ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Eci Election Result: ಮತ ಎಣಿಕೆ ಆರಂಭವಾಗುವ ಮುನ್ನವೇ ಒಂದು ಸೀಟು ಗೆದ್ದ ಬಿಜೆಪಿ, ಇದು ಹೇಗೆ ಸಾಧ್ಯ? ನರೇಂದ್ರ ಮೋದಿಗೆ ಮೊದಲ ಬೋಣಿ

ECI Election Result: ಮತ ಎಣಿಕೆ ಆರಂಭವಾಗುವ ಮುನ್ನವೇ ಒಂದು ಸೀಟು ಗೆದ್ದ ಬಿಜೆಪಿ, ಇದು ಹೇಗೆ ಸಾಧ್ಯ? ನರೇಂದ್ರ ಮೋದಿಗೆ ಮೊದಲ ಬೋಣಿ

India general election Result Surat: ಸೂರತ್ ಲೋಕಸಭಾ ಕ್ಷೇತ್ರದಲ್ಲಿ ಮುಕೇಶ್ ದಲಾಲ್ ಅವಿರೋಧವಾಗಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಭಾರತೀಯ ಜನತಾ ಪಕ್ಷಕ್ಕೆ ಮತಎಣಿಕೆ ಆರಂಭಕ್ಕೆ ಮುನ್ನವೇ ಮೊದಲ ಬೋಣಿಯಾಗಿದೆ. ಓಟ್‌ ಕೌಂಟಿಂಗ್‌ಗೆ ಮುನ್ನ ಈ ರೀತಿ ಗೆಲುವು ಪಡೆಯಲು ಹೇಗೆ ಸಾಧ್ಯ ಅಂತೀರಾ? ಇಲ್ಲಿದೆ ಉತ್ತರ.

ECI Election Result: ಮತಎಣಿಕೆ ಆರಂಭವಾಗುವ ಮುನ್ನವೇ ಒಂದು ಸೀಟು ಗೆದ್ದ ಬಿಜೆಪಿ
ECI Election Result: ಮತಎಣಿಕೆ ಆರಂಭವಾಗುವ ಮುನ್ನವೇ ಒಂದು ಸೀಟು ಗೆದ್ದ ಬಿಜೆಪಿ

ಬೆಂಗಳೂರು: ಲೋಕಸಭಾ ಚುನಾವಣಾ ಫಲಿತಾಂಶ ಬರಲು ಕನಿಷ್ಠ ಮಧ್ಯಾಹ್ನದವರೆಗೆ ಕಾಯಬೇಕು. ಆದರೆ, ಭಾರತದ ಒಂದು ಕ್ಷೇತ್ರದಲ್ಲಿ ಈ ನಂಬಿಕೆ ಸುಳ್ಳಾಗಿದೆ. ಮತಎಣಿಕೆ ಆರಂಭವಾಗುವ ಮೊದಲೇ ಅಭ್ಯರ್ಥಿಯೊಬ್ಬರು ಗೆಲುವು ಪಡೆದಿದ್ದಾರೆ. 2014ರ ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮಂಗಳವಾರ ಬೆಳಗ್ಗೆ 8 ಗಂಟೆಗೆ ಆರಂಭವಾಗಿತ್ತು. ಸಿಕ್ಕಿಂ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯ ಪ್ರಕ್ರಿಯೆಗಳು ಕೂಡ ಇದೇ ಸಮಯದಲ್ಲಿ ನಡೆದವು. ಆಂಧ್ರಪ್ರದೇಶದ 175 ವಿಧಾನಸಭಾ ಕ್ಷೇತ್ರಗಳು ಮತ್ತು ಒಡಿಶಾದ 147 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಮತ್ತು 25 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶಗಳು ಇಂದು ಪ್ರಕಟವಾಗಲಿವೆ.

ಟ್ರೆಂಡಿಂಗ್​ ಸುದ್ದಿ

ನರೇಂದ್ರ ಮೋದಿಗೆ ಮೊದಲ ಬೋಣಿ

ಸೂರತ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಿಲೇಶ್ ಕುಂಭಾನಿ ಅವರ ನಾಮಪತ್ರ ತಿರಸ್ಕೃತಗೊಂಡಿದ್ದು, ಚುನಾವಣೆಗೆ ಮುನ್ನ ಇತರ ಅಭ್ಯರ್ಥಿಗಳು ಹಿಂದೆ ಸರಿದಿದ್ದಾರೆ. ಹೀಗಾಗಿ ಸೂರತ್ ಲೋಕಸಭಾ ಕ್ಷೇತ್ರದಲ್ಲಿ ಮುಕೇಶ್ ದಲಾಲ್ ಅವಿರೋಧವಾಗಿ ಗೆಲುವು ಸಾಧಿಸಿದ್ದಾರೆ. ಕಣದಲ್ಲಿರುವ ಇತರೆ ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂತೆಗೆದುಕೊಂಡ ಸಂದರ್ಭದಲ್ಲಿ ಚುನಾವಣಾ ಆಯೋಗವು ಅವಿರೋಧವಾಗಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಹೇಳಿದ್ದಾರೆ. ಅವಿರೋಧವಾಗಿ ಚುನಾವಣೆಯಲ್ಲಿ ಆಯ್ಕೆಯಾಗುವ ಸಂದರ್ಭದಲ್ಲಿ ಒಬ್ಬ ಅಭ್ಯರ್ಥಿಯನ್ನು ವಿಜೇತನಾಗಿ ಘೋಷಿಸುವುದನ್ನು ತಡೆಯುವ ಕಾನೂನು ಇಲ್ಲ ಎಂದು ಅವರು ಹೇಳಿದ್ದಾರೆ.

ಏಪ್ರಿಲ್ 22 ರಂದು ಬಿಎಸ್ಪಿಯ ಒಬ್ಬರು ಸೇರಿದಂತೆ ಇತರ ಎಲ್ಲಾ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಂಡರು. ಇದಾದ ಬಳಿಕ ಬಿಜೆಪಿಯ ಮುಖೇಶ್ ದಲಾಲ್ ಅವರನ್ನು ಸೂರತ್‌ ಲೋಕಸಭಾ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾದರು ಎಂದು ಘೋಷಿಸಲಾಯಿತು. ಕಾಂಗ್ರೆಸ್ ಜೊತೆಗಿನ ಚುನಾವಣಾ ಪೂರ್ವ ಮೈತ್ರಿಯಿಂದಾಗಿ ಆಮ್ ಆದ್ಮಿ ಪಕ್ಷವು ಸೂರತ್‌ನಿಂದ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಏಪ್ರಿಲ್ 22 ರಿಂದ ಕುಂಭಾನಿ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ನಂತರ ಅವರನ್ನು ಕಾಂಗ್ರೆಸ್ ಅಮಾನತುಗೊಳಿಸಿತು. ಕುಂಭಾನಿ ಬಿಜೆಪಿ ಜತೆ ಶಾಮೀಲಾಗಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿತ್ತು. ಗುಜರಾತ್‌ನಲ್ಲಿ ಮೇ 7ರಂದು ಒಂದೇ ಹಂತದಲ್ಲಿ ಲೋಕಸಭಾ ಚುನಾವಣೆ ನಡೆದಿತ್ತು. ರಾಜ್ಯದ 26 ಸ್ಥಾನಗಳ ಪೈಕಿ 25 ಸ್ಥಾನಗಳ ಫಲಿತಾಂಶ ಜೂನ್ 4 ರಂದು ಪ್ರಕಟವಾಗಲಿದೆ.

ಟಿ20 ವರ್ಲ್ಡ್‌ಕಪ್ 2024