ಕನ್ನಡ ಸುದ್ದಿ  /  Nation And-world  /  Long Weekends In 2023: The Complete List Of Long Weekends In 2023 To Plan More Than 15 Vacations Check 2023 Long Weekends List Here

Long weekends in 2023: ಹೊಸ ವರ್ಷದ ಲಾಂಗ್‌ ವೀಕೆಂಡ್‌ಗಳ ಲಿಸ್ಟ್‌ ಇಲ್ಲಿದೆ; 15 ಕ್ಕೂ ಹೆಚ್ಚು ಪ್ರವಾಸ ಪ್ಲ್ಯಾನ್‌ ಮಾಡಬಹುದು ನೋಡಿ!

2023 Long Weekends List: ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜಾಗಿದ್ದೀರಾ?, ಹೊಸ ವರ್ಷ ಬಹಳಷ್ಟು ಲಾಂಗ್‌ ವೀಕೆಂಡ್‌ ಸಿಗುತ್ತೆ. 15ಕ್ಕೂ ಹೆಚ್ಚು ಪ್ರವಾಸ ಆಯೋಜಿಸಬಹುದು. ಈಗಲೇ ಪ್ಲಾನ್‌ ಮಾಡಿಕೊಳ್ಳಿ. 2023ರ ಲಾಂಗ್‌ ವೀಕೆಂಡ್‌ ಪಟ್ಟಿ ಇಲ್ಲಿದೆ ಗಮನಿಸಿ.

2023ರ ಲಾಂಗ್‌ ವೀಕೆಂಡ್‌ಗಳ ಪೂರ್ಣ ವಿವರ
2023ರ ಲಾಂಗ್‌ ವೀಕೆಂಡ್‌ಗಳ ಪೂರ್ಣ ವಿವರ (Pexels)

ಹೊಸ ಕ್ಯಾಲೆಂಡರ್‌ ವರ್ಷ 2023 ಅನ್ನು ಬರಮಾಡಿಕೊಳ್ಳಲು ಮುಂದಾಗಿದ್ದೇವೆ. 2022ಕ್ಕೆ ವಿದಾಯ ಹೇಳುವ ಸಮಯ. ಹೊಸ ವರ್ಷದ ಬಗ್ಗೆ ಕುತೂಹಲ, ನಿರೀಕ್ಷೆ ಹೆಚ್ಚು. ಹೊಸ ವರ್ಷದಲ್ಲಿ ಈ ಸಲ ಲಾಂಗ್‌ ವೀಕೆಂಡ್‌ ಹೆಚ್ಚಿವೆ. 15ಕ್ಕೂ ಹೆಚ್ಚು ಪ್ರವಾಸಗಳನ್ನು ಆಯೋಜಿಸಬಹುದು.

ಪ್ರಯಾಣ, ಪ್ರವಾಸ ಇಷ್ಟಪಡುವವರಿಗೆ ಹೊಸ ವರ್ಷ ನಿಜಕ್ಕೂ ಅದ್ಭುತ ವೀಕೆಂಡ್‌ಗಳನ್ನು ಒದಗಿಸುತ್ತಿದೆ. ಪ್ರವಾಸದ ಅನುಭವಗಳನ್ನು ನೆನಪಿನ ಪುಟಗಳಲ್ಲಿ ದಾಖಲಿಸುವುದಕ್ಕೆ ಕೊಂಚ ಯೋಜನೆ ರೂಪಿಸಿಕೊಳ್ಳಬೇಕು ಅಷ್ಟೆ. ಅದಕ್ಕಾಗಿ ಲಾಂಗ್‌ ವೀಕೆಂಡ್‌ ಯಾವಾಗೆಲ್ಲ ಇದೆ ಎಂಬುದನ್ನು ಈಗಲೇ ಗುರುತಿಸಿ ಇಟ್ಟುಕೊಳ್ಳುವುದು ಒಳಿತು.

ಮಾರ್ಚ್‌, ಏಪ್ರಿಲ್‌, ಆಗಸ್ಟ್‌ಗಲಲ್ಲಿ 5-6 ರಜೆ ಒಟ್ಟಿಗೆ ಸಿಗುವ ವಾರಾಂತ್ಯಗಳಿವೆ. 2023ರ ಪ್ರವಾಸ ಯೋಜನೆಗಳನ್ನು ಮುಂಚಿತವಾಗಿಯೇ ಮಾಡಿದರೆ 18 ಪ್ರವಾಸಗಳನ್ನು ಕೈಗೊಳ್ಳುವುದು ಸಾಧ್ಯವಿದೆ. ನಿಮ್ಮ ಈ ಯೋಜನೆಗೆ ಅನುಕೂಲ ಆಗಲಿ ಎಂದು ಲಾಂಗ್‌ ವೀಕೆಂಡ್‌ಗಳ ಪಟ್ಟಿಯನ್ನು ಇಲ್ಲಿ ನೀಡುತ್ತಿದ್ದೇವೆ.

2023ರ ಲಾಂಗ್‌ ವೀಕೆಂಡ್‌ಗಳ ಪಟ್ಟಿ

ಜನವರಿ ತಿಂಗಳ ಲಾಂಗ್‌ ವೀಕೆಂಡ್‌ (Long Weekend in January 2023)

1) ಡಿಸೆಂಬರ್‌ 31 ಶನಿವಾರ, ಜನವರಿ 1 ಭಾನುವಾರ. - ಒಂದೊಮ್ಮೆ ನೀವು ಶುಕ್ರವಾರವೂ ರಜೆ ಹಾಕಿದರೆ ಮೂರು ರಜೆ ಸಿಗಲಿದೆ. ಅದೇ ರೀತಿ, ಜನವರಿ 2ಕ್ಕೆ ರಜೆ ತಗೊಂಡರೆ ನಾಲ್ಕು. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಪ್ರವಾಸ ಯೋಜನೆ ಮಾಡಿಕೊಳ್ಳಬಹುದು.

2) ಜನವರಿ14, ಶನಿವಾರ, ಮಕರ ಸಂಕ್ರಾಂತಿ ಹಬ್ಬ, ಜನವರಿ 15 ಭಾನುವಾರ, ಪೊಂಗಲ್‌. ಇಲ್ಲೂ ಅಷ್ಟೆ, ಜನವರಿ 13 ಶುಕ್ರವಾರ, ಜನವರಿ 16 ಸೋಮವಾರ ರಜೆ ಹಾಕಿದರೆ 4 ರಜೆ ಸಿಗಲಿದೆ. ಪ್ರವಾಸ ಯೋಜನೆಗೆ ಸೂಕ್ತ ಅವಧಿ.

3) ಜನವರಿ 26, ಗುರುವಾರ - ಪ್ರಜಾಪ್ರಭುತ್ವ ದಿನ. ಜನವರಿ 28 ಶನಿವಾರ, ಜನವರಿ 29 ಭಾನುವಾರ. ನಡುವೆ ಜನವರಿ 27 ಶುಕ್ರವಾರ ಒಂದು ರಜೆ ಹಾಕಿದರೆ ವಾರಕ್ಕೆ ಐದು ದಿನ ಕೆಲಸ ಮಾಡುವವರು ಒಂದೊಳ್ಳೆಯ ಪ್ರವಾಸವನ್ನು ಈಗಲೇ ಪ್ಲ್ಯಾನ್‌ ಮಾಡಿಕೊಳ್ಳಬಹುದು.

ಫೆಬ್ರವರಿ ತಿಂಗಳ ಲಾಂಗ್‌ ವೀಕೆಂಡ್‌ (Long Weekend in February 2023)

1) ಫೆಬ್ರವರಿ 18, ಶನಿವಾರ: ಮಹಾಶಿವರಾತ್ರಿ. ಫೆಬ್ರವರಿ 19 ಭಾನುವಾರ. ಫೆಬ್ರವರಿ 17ರಂದು ರಜೆ ಹಾಕಿದರೆ ಮೂರು ರಜೆ, ಫೆ.20 ಸೋಮವಾರ ರಜೆ ಹಾಕಿದರೆ ನಾಲ್ಕು ರಜೆ. ಕಚೇರಿ ಕೆಲಸದ ಆದ್ಯತೆಗಳನ್ನು ಗಮನಿಸಿಕೊಂಡು ಹೊಣೆಗಾರಿಕೆಯಿಂದ ರಜೆ ಹಾಕಿ ಪ್ರವಾಸ ಯೋಜಿಸುವುದಕ್ಕೆ ಅಡ್ಡಿ ಇಲ್ಲ.

ಮಾರ್ಚ್‌ನಲ್ಲಿ ಲಾಂಗ್‌ ವೀಕೆಂಡ್‌ (Long Weekend in March 2023)

1) ಮಾರ್ಚ್‌ 8, ಬುಧವಾರ ಹೋಲಿ ಹಬ್ಬ, ಮಾರ್ಚ್‌ 11 ಶನಿವಾರ, ಮಾರ್ಚ್‌ 12 ಭಾನುವಾರ. ನಡುವೆ ಎರಡು ರಜೆ ಹಾಕಿದರೆ ಐದು ರಜೆ ಖಾತರಿ.

ಏಪ್ರಿಲ್‌ನಲ್ಲಿ ಲಾಂಗ್‌ ವೀಕೆಂಡ್‌ (Long Weekend in April 2023)

1) ಏಪ್ರಿಲ್‌ 4, ಮಂಗಳವಾರ: ಮಹಾವೀರ ಜಯಂತಿ. ಏಪ್ರಿಲ್‌ 7, ಶುಕ್ರವಾರ- ಗುಡ್‌ ಫ್ರೈಡೇ, ಏಪ್ರಿಲ್‌ 8 ಶನಿವಾರ, ಏಪ್ರಿಲ್‌ 9 ಭಾನುವಾರ. ಒಂದೊಮ್ಮೆ ಏಪ್ರಿಲ್‌ 5 ಬುಧವಾರ, ಏಪ್ರಿಲ್‌ 6 ಗುರುವಾರ ರಜೆ ಹಾಕಿದರೆ 6 ರಜೆ ಸಿಗುತ್ತದೆ.

ಮೇ ತಿಂಗಳ ಲಾಂಗ್‌ ವೀಕೆಂಡ್‌ (Long Weekend in May 2023)

1) ಮೇ 5, ಶುಕ್ರವಾರ: ಬುದ್ಧಪೂರ್ಣಿಮಾ, ಮೇ 6 ಶನಿವಾರ, ಮೇ 7 ಭಾನುವಾರ

ಜೂನ್‌ ಮತ್ತು ಜುಲೈನಲ್ಲಿ ಲಾಂಗ್‌ ವೀಕೆಂಡ್‌ (Long Weekend in June and July 2023)

1) ಜೂನ್‌17, ಶನಿವಾರ, ಜೂನ್‌ 18, ಭಾನುವಾರ, ಜೂನ್‌ 20 ರಥ ಯಾತ್ರೆ (ನಿರ್ಬಂಧಿತ ರಜೆ) ಜೂನ್‌ 19 ಸೋಮವಾರ ರಜೆ ಹಾಕಿದರೆ ನಾಲ್ಕು ದಿನ ರಜೆ ಸಿಗಲಿದೆ.

2) ಜೂನ್‌ 29, ಗುರುವಾರ ಬಕ್ರೀದ್‌ ಜುಲೈ 1, ಶನಿವಾರ, ಜುಲೈ 2 ಭಾನುವಾರ. ಜೂನ್‌ 30ಕ್ಕೆ ಒಂದು ರಜೆ ಹಾಕಿದರೆ ನಾಲ್ಕು ರಜೆ ಖಾತರಿ.

ಆಗಸ್ಟ್‌ ತಿಂಗಳ ಲಾಂಗ್‌ ವೀಕೆಂಡ್‌ (Long Weekend in August 2023)

1) ಆಗಸ್ಟ್ 12, ಶನಿವಾರ, ಆಗಸ್ಟ್‌ 13 ಭಾನುವಾರ, ಆಗಸ್ಟ್‌ 15 ಸ್ವಾತಂತ್ರ್ಯ ದಿನ, ಆಗಸ್ಟ್‌ 16 ಪಾರ್ಸಿ ಹೊಸ ವರ್ಷ (ಆರ್‌ಎಚ್‌). ಆಗಸ್ಟ್‌ 14 ರಜೆ ಹಾಕಿದರೆ ನಾಲ್ಕು ಮತ್ತು ಕೆಲವರಿಗೆ 5 ರಜೆ ಸಿಗಲಿದೆ.

2) ಆಗಸ್ಟ್‌ 26 ಶನಿವಾರ, ಆಗಸ್ಟ್‌ 27 ಭಾನುವಾರ, ಆಗಸ್ಟ್‌ 29 ಮಂಗಳವಾರ ಓಣಂ (ಆರ್‌ಎಚ್‌), ಆಗಸ್ಟ್‌ 30 ರಕ್ಷಾ ಬಂಧನ. ಆಗಸ್ಟ್‌ 28ಕ್ಕೆ ರಜೆ ತಗೊಂಡ್ರೆ ನಾಲ್ಕು ಅಥವಾ 5 ರಜಾದಿನ ಸಿಗಲಿದ್ದು, ಪ್ರವಾಸ ಯೋಜನೆಗೆ ಸೂಕ್ತ.

ಸೆಪ್ಟೆಂಬರ್‌ ತಿಂಗಳ ಲಾಂಗ್‌ ವೀಕೆಂಡ್‌ (Long Weekend in September 2023)

1) ಸೆಪ್ಟೆಂಬರ್‌ 7, ಗುರುವಾರ : ಜನ್ಮಾಷ್ಟಮಿ (ಆರ್‌ಎಚ್‌), ಸೆಪ್ಟೆಂಬರ್‌ 9 ಶನಿವಾರ, ಸೆಪ್ಟೆಂಬರ್‌ 10 ಭಾನುವಾರ. ಸೆಪ್ಟೆಂಬರ್‌ 8ರಂದು ಸೋಮವಾರ ರಜೆ ಹಾಕಿದರೆ 4 ದಿನ ರಜೆ ಆಗುತ್ತದೆ.

2) ಸೆಪ್ಟೆಂಬರ್‌ 16 ಶನಿವಾರ, ಶನಿವಾರ 17 ಭಾನುವಾರ, ಶನಿವಾರ 19 ಮಂಗಳವಾರ ಗಣೇಶ ಚತುರ್ಥಿ (ಆರ್‌ಎಚ್‌), ಸೆಪ್ಟೆಂಬರ್‌ 18 ಸೋಮವಾರ ರಜೆ ಹಾಕಿದರೆ ನಾಲ್ಕು ದಿನ ರಜೆ ಆಗುತ್ತದೆ.

ಅಕ್ಟೋಬರ್‌ ತಿಂಗಳ ಲಾಂಗ್‌ ವೀಕೆಂಡ್‌ (Long Weekend in October 2023

1) ಸೆಪ್ಟೆಂಬರ್‌ 30 ಶನಿವಾರ, ಅಕ್ಟೋಬರ್‌ 1 ಭಾನುವಾರ, ಅಕ್ಟೋಬರ್‌ 2 ಸೋಮವಾರ - ಗಾಂಧಿ ಜಯಂತಿ,

2) ಅಕ್ಟೋಬರ್‌ 21 ಶನಿವಾರ, ಅಕ್ಟೋಬರ್‌ 22 ಭಾನುವಾರ, ಅಕ್ಟೋಬರ್‌ 24 ಮಂಗಳವಾರ ದಸರಾ, ಅಕ್ಟೋಬರ್‌ 23ರಂದು ಸೋಮವಾರ ರಜೆ ಹಾಕಿದರೆ ನಾಲ್ಕು ರಜೆ ಸಿಗಲಿದೆ.

ನವೆಂಬರ್‌ ತಿಂಗಳ ಲಾಂಗ್‌ ವೀಕೆಂಡ್‌ (Long Weekend in November 2023)

1) ನವೆಂಬರ್‌ 11 ಶನಿವಾರ, ನವೆಂಬರ್‌ 12 ಭಾನುವಾರ ದೀಪಾವಳಿ, ನವೆಂಬರ್‌ 13 ಸೋಮವಾರ, ಗೋವರ್ಧನ ಪೂಜೆ (ಆರ್‌ಎಚ್‌)

2) ನವೆಂಬರ್‌ 25 ಶನಿವಾರ, ನವೆಂಬರ್‌ 26 ಭಾನುವಾರ, ನವೆಂಬರ್‌ 27 ಸೋಮವಾರ ಗುರು ನಾನಕ ಜಯಂತಿ.

ಡಿಸೆಂಬರ್‌ ತಿಂಗಳ ಲಾಂಗ್‌ ವೀಕೆಂಡ್‌ (Long Weekend in December 2023)

1) ಡಿಸೆಂಬರ್‌ 23 ಶನಿವಾರ, ಡಿಸೆಂಬರ್‌ 24 ಭಾನುವಾರ, ಡಿಸೆಂಬರ್‌ 25 ಸೋಮವಾರ ಕ್ರಿಸ್ಮಸ್.‌ ಡಿಸೆಂಬರ್‌ 22 ಶುಕ್ರವಾರ ರಜೆ ಹಾಕಿದರೆ ಲಾಂಗ್‌ ವೀಕೆಂಡ್‌ ಸಿಗಲಿದೆ.