ಕನ್ನಡ ಸುದ್ದಿ  /  Nation And-world  /  Lotus Is Religious Symbol Bjp S Election Symbol Is Also Religious Says Muslim League In Supreme Court

Lotus is religious symbol: ಟಾರ್ಗೆಟ್‌ ʻಕಮಲʼ - ಬಿಜೆಪಿಯ ಚುನಾವಣಾ ಚಿಹ್ನೆ ಬ್ಯಾನ್‌ ಮಾಡಿ; ಸುಪ್ರೀಂ ಕೋರ್ಟಲ್ಲಿ ಮುಸ್ಲಿಂ ಲೀಗ್‌ ದಾವೆ

Lotus is religious symbol: ಧಾರ್ಮಿಕ ಹೆಸರು ಮತ್ತು ಧಾರ್ಮಿಕ ಚಿಹ್ನೆಯನ್ನು ಚುನಾವಣಾ ಚಿಹ್ನೆಗಳಾಗಿ ಹೊಂದಿರುವ ರಾಜಕೀಯ ಪಕ್ಷಗಳನ್ನು ನಿಷೇಧಿಸಬೇಕು. ಬಿಜೆಪಿಯ ಚುನಾವಣಾ ಚಿಹ್ನೆ ʻಕಮಲʼ ಆಗಿದ್ದು, ಇದನ್ನು ನಿಷೇಧಿಸಬೇಕು. ಈ ಪ್ರಕರಣದಲ್ಲಿ ಬಿಜೆಪಿಯನ್ನು ಪ್ರತಿವಾದಿಯನ್ನಾಗಿಸಬೇಕು ಎಂದು ಆಗ್ರಹಿಸಿ ಐಯುಎಂಎಲ್‌ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.

ಬಿಜೆಪಿ ಚುನಾವಣಾ ಚಿಹ್ನೆ ಕಮಲ
ಬಿಜೆಪಿ ಚುನಾವಣಾ ಚಿಹ್ನೆ ಕಮಲ (Live Hindustan)

ʻಕಮಲʼ ಧಾರ್ಮಿಕ ಪಾವಿತ್ರ್ಯ ಹೊಂದಿರುವಂತಹ ಚಿಹ್ನೆ. ಭಾರತೀಯ ಜನತಾ ಪಾರ್ಟಿ(ಬಿಜೆಪಿ)ಯ ಚುನಾವಣಾ ಚಿಹ್ನೆ ಕೂಡ ʻಕಮಲʼ. ಆದ್ದರಿಂದ ಬಿಜೆಪಿಯ ಚುನಾವಣಾ ಚಿಹ್ನೆ ಬ್ಯಾನ್‌ ಮಾಡಬೇಕು!

ಧಾರ್ಮಿಕ ಹೆಸರು ಮತ್ತು ಧಾರ್ಮಿಕ ಚಿಹ್ನೆಯನ್ನು ಚುನಾವಣಾ ಚಿಹ್ನೆಗಳಾಗಿ ಹೊಂದಿರುವ ರಾಜಕೀಯ ಪಕ್ಷಗಳನ್ನು ನಿಷೇಧಿಸಬೇಕು. ಬಿಜೆಪಿಯ ಚುನಾವಣಾ ಚಿಹ್ನೆ ʻಕಮಲʼ ಆಗಿದ್ದು, ಇದನ್ನು ನಿಷೇಧಿಸಬೇಕು. ಈ ಪ್ರಕರಣದಲ್ಲಿ ಬಿಜೆಪಿಯನ್ನು ಪ್ರತಿವಾದಿಯನ್ನಾಗಿಸಬೇಕು ಎಂದು ಆಗ್ರಹಿಸಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್‌) ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.

ನ್ಯಾಯಮೂರ್ತಿಗಳಾದ ಎಂ.ಆರ್.ಷಾ ಮತ್ತು ಸಿ.ಟಿ.ರವಿ ಸೋಮವಾರ ಕುಮಾರ್ ಅವರ ಪೀಠ ಈ ಅರ್ಜಿ ವಿಚಾರಣೆಗೆ ಎತ್ತಿಕೊಂಡಿದೆ. ವಿಚಾರಣೆಗೆ ಮುಸ್ಲಿಂ ಲೀಗ್ ಪರವಾಗಿ ಹಿರಿಯ ವಕೀಲ ದುಷ್ಯಂತ್ ದವೆ ಹಾಜರಾಗಿದ್ದರು. ಈ ಕುರಿತು ನ್ಯಾಯಾಲಯದ ಮುಂದೆ ಹಲವು ವಾದ ಮಂಡಿಸಿದರು.

ಈ ವಿಷಯದಲ್ಲಿ ನಾವು ಬಹು ಕಕ್ಷಿದಾರರನ್ನು ಒಳಗೊಂಡ ಅರ್ಜಿಯನ್ನು ಸಲ್ಲಿಸಿದ್ದೇವೆ. ಇವುಗಳಲ್ಲಿ ಭಾರತೀಯ ಜನತಾ ಪಾರ್ಟಿ ಕೂಡ ಸೇರಿದೆ. ಬಿಜೆಪಿಯ ಚುನಾವಣಾ ಚಿಹ್ನೆಯು ಕಮಲವಾಗಿದ್ದು ಅದು ಧಾರ್ಮಿಕ ಸಂಕೇತವಾಗಿದೆ ಎಂದು ದವೆ ವಾದ ಮಂಡಿಸಿದರು.

ಮುಸ್ಲಿಂ ಲೀಗ್ ಸಲ್ಲಿಸಿದ ಅರ್ಜಿಯಲ್ಲಿ, ಕಮಲವು ಹಿಂದು ಧರ್ಮ ಮತ್ತು ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಧಾರ್ಮಿಕ ಸಂಕೇತವಾಗಿದೆ ಎಂದು ಉಲ್ಲೇಖಿಸಲಾಗಿದೆ. ಅದೇ ರೀತಿ, ಬಿಜೆಪಿ ಅಲ್ಲದೆ, ಶಿವಸೇನೆ, ಶಿರೋಮಣಿ ಅಕಾಲಿದಳ, ಹಿಂದು ಸೇನೆ, ಹಿಂದು ಮಹಾಸಭಾ, ಕ್ರಿಶ್ಚಿಯನ್ ಡೆಮಾಕ್ರಟಿಕ್ ಫ್ರಂಟ್ ಮತ್ತು ಇಸ್ಲಾಂ ಪಾರ್ಟಿ ಹಿಂದ್‌ ಮೊದಲಾದ 26 ಪಕ್ಷಗಳನ್ನು ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿದೆ

ʻಕಮಲʼವೇ ಐಯುಎಂಎಲ್‌ ಟಾರ್ಗೆಟ್‌

'ಹಿಂದು ಧರ್ಮದ ಪ್ರಕಾರ, ಪ್ರತಿಯೊಬ್ಬ ಮನುಷ್ಯನೊಳಗೆ ಪವಿತ್ರ ಕಮಲದ ಚೈತನ್ಯವಿದೆ. ಇದು ಶಾಶ್ವತತೆ, ಶುದ್ಧತೆ, ದೈವತ್ವವನ್ನು ಸೂಚಿಸುತ್ತದೆ. ಹಾಗೆಯೇ ಇದು ಜೀವನ, ಫಲವತ್ತತೆ, ಹೊಸತಲೆಮಾರಿನ ಯುವಜನರ ಸಂಕೇತವಾಗಿ ಬಳಸಲಾಗುತ್ತದೆ. ಕಮಲದ ಹೂವುಗಳನ್ನು ವಿಶೇಷವಾಗಿ ಮಹಿಳೆಯ ಸೌಂದರ್ಯವನ್ನು ವಿವರಿಸಲು ಬಳಸಲಾಗುತ್ತದೆ. ಮಹಿಳೆಯರ ಕಣ್ಣುಗಳಿಗೂ ಹೋಲಿಕೆಯಾಗಿ ಕಮಲವನ್ನು ಬಳಸಲಾಗುತ್ತದೆ. ಬೌದ್ಧರಿಗೆ, ಕಮಲದ ಹೂವು ಮನುಷ್ಯನ ಅತ್ಯಂತ ಮುಂದುವರಿದ ಸ್ಥಿತಿಯ ಸಂಕೇತವಾಗಿದೆ. ಇಷ್ಟೇ ಅಲ್ಲ... ಭಗವಾನ್ ವಿಷ್ಣು, ಬ್ರಹ್ಮ, ಶಿವ ಮತ್ತು ಲಕ್ಷ್ಮಿ ದೇವತೆ ಹಿಂದೂ ಧರ್ಮದಲ್ಲಿನ ಕಮಲದ ಹೂವಿನೊಂದಿಗೆ ಸಹ ಸಂಬಂಧಿಸಿವೆ' ಎಂದು ಐಯುಎಂಎಲ್‌ ನ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಅರ್ಜಿಯ ಸಿಂಧುತ್ವ ಪ್ರಶ್ನಿಸಿದ ಎಐಎಂಐಎಂ

ಎಐಎಂಐಎಂ ಪರವಾಗಿ ಭಾರತದ ಮಾಜಿ ಅಟಾರ್ನಿ ಜನರಲ್ ಮತ್ತು ಹಿರಿಯ ವಕೀಲ ಕೆಕೆ ವೇಣುಗೋಪಾಲ್ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಅವರು ಐಯುಎಂಎಲ್‌ ಸಲ್ಲಿಸಿದ್ದ ಅರ್ಜಿಯ ಸಿಂಧುತ್ವವನ್ನೇ ಪ್ರಶ್ನಿಸಿದರು.

ಅರ್ಜಿದಾರರ ಯಾವುದೇ ಮೂಲಭೂತ ಹಕ್ಕು ಈ ಪ್ರಕರಣದಲ್ಲಿ ಉಲ್ಲಂಘನೆ ಆಗಿಲ್ಲ.‌ ಆದ್ದರಿಂದ 32 ನೇ ವಿಧಿಯ ಅಡಿಯಲ್ಲಿ ಅರ್ಜಿಯು ತನ್ನ ಅರ್ಹತೆಯನ್ನು ಕಳೆದುಕೊಳ್ಳುತ್ತದೆ. ಜತೆಗೆ ಎಲ್ಲ ರಾಜಕೀಯ ಪಕ್ಷಗಳನ್ನು ಧಾರ್ಮಿಕ ಹೆಸರುಗಳೊಂದಿಗೆ ಸಂಯೋಜಿಸುವ ಹಿಂದಿನ ನಿರ್ದೇಶನವನ್ನು ಅರ್ಜಿದಾರರು ಪಾಲಿಸಿಲ್ಲ. ಮುಸ್ಲಿಂ ಹೆಸರಿನ 2 ಪಕ್ಷಗಳನ್ನಷ್ಟೇ ಪಕ್ಷಗಳನ್ನಾಗಿ ಮಾಡಿದ್ದಾರೆ. ಅಲ್ಲದೆ ಇದೇ ರೀತಿಯ ಅರ್ಜಿ ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಹಾಗಾಗಿ ಅರ್ಜಿಯನ್ನು ವಜಾಗೊಳಿಸಬಹುದು ಎಂದು ವೇಣುಗೋಪಾಲ್‌ ಹೇಳಿದರು.

ಗಮನಿಸಬಹುದಾದ ಸುದ್ದಿ

ಆಧಾರ್‌ ಬಳಕೆದಾರ ಮೃತನಾದರೆ, ಅವರ ಜತೆಗೆ ಆಧಾರ್‌ ಸಂಖ್ಯೆ ಕೂಡ ಸಾಯಲಿದೆ!

ಯುಐಡಿಎಐ, ಜನನ ಪ್ರಮಾಣಪತ್ರಗಳೊಂದಿಗೆ ಆಧಾರ್ ಸಂಖ್ಯೆಗಳನ್ನು ನಿಯೋಜಿಸುವ ಯೋಜನೆಯನ್ನು ಜಾರಿಗೆ ತಂದ ನಂತರ ಈ ಕ್ರಮವು ಬಂದಿದೆ. ಇಲ್ಲಿಯವರೆಗೆ, 20 ಕ್ಕೂ ಹೆಚ್ಚು ರಾಜ್ಯಗಳು ಯೋಜನೆಯನ್ನು ಜಾರಿಗೆ ತಂದಿವೆ. ವ್ಯಕ್ತಿಯ ಸಾವಿನ ಸಂದರ್ಭದಲ್ಲಿಯೂ ಆಧಾರ್ ಅನ್ನು ನಿಷ್ಕ್ರಿಯಗೊಳಿಸುವುದಕ್ಕೆ ಪ್ರಸ್ತುತ ಯಾವುದೇ ಕಾರ್ಯವಿಧಾನವಿಲ್ಲ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point