ಕನ್ನಡ ಸುದ್ದಿ  /  Nation And-world  /  Lunch With Indian Heroes Of South Korean Youtuber

Videos: ಕಿರುಕುಳದಿಂದ ರಕ್ಷಿಸಿದ ಯುವಕರೊಂದಿಗೆ ಕೊರಿಯಾ ಯೂಟ್ಯೂಬರ್‌ ಊಟ; 'ಭಾರತದ ಹೀರೋ'ಗಳು ಎಂದ ಮಹಿಳೆ

ಇಂದು, ಪಾರ್ಕ್ ಅವರು ಹೊಸ ವಿಡಿಯೋವನ್ನು ಹರಿಬಿಟ್ಟಿದ್ದಾರೆ. ನಿನ್ನೆಯ ದುರ್ಘಟನೆ ವೇಳೆ ತನ್ನ ನೆರವಿಗೆ ಬಂದ ಇಬ್ಬರು ಭಾರತೀಯ ಯುವಕರಿಗೆ ಧನ್ಯವಾದ ಹೇಳುವ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಕಿರುಕುಳದಿಂದ ತನ್ನನ್ನು ರಕ್ಷಿಸಲು ಸಹಾಯ ಮಾಡಿದ್ದಕ್ಕಾಗಿ ಆದಿತ್ಯ ಮತ್ತು ಅಥರ್ವ ಅವರಿಗೆ ಪಾರ್ಕ್ ಧನ್ಯವಾದ ಸಲ್ಲಿಸಿದ್ದಾರೆ.

ಆದಿತ್ಯ ಮತ್ತು ಅಥರ್ವ ಅವರೊಂದಿಗೆ ಧನ್ಯವಾದ ವಿಡಿಯೋವನ್ನು ಟ್ವೀಟ್ ಮಾಡಿದ ಪಾರ್ಕ್ ಹ್ಯೋ ಜಿಯಾಂಗ್
ಆದಿತ್ಯ ಮತ್ತು ಅಥರ್ವ ಅವರೊಂದಿಗೆ ಧನ್ಯವಾದ ವಿಡಿಯೋವನ್ನು ಟ್ವೀಟ್ ಮಾಡಿದ ಪಾರ್ಕ್ ಹ್ಯೋ ಜಿಯಾಂಗ್ (Source: @mhyochi)

ವಾಣಿಜ್ಯ ನಗರಿ ಮುಂಬೈನ ಬೀದಿಯಲ್ಲಿ ದಕ್ಷಿಣ ಕೊರಿಯಾದ ಮಹಿಳಾ ಯೂಟ್ಯೂಬರ್‌ಗೆ ಕಿರುಕುಳ ನೀಡಿ ಹಿಂಬಾಲಿಸಿದ ಆರೋಪದ ಮೇಲೆ ಗುರುವಾರ ಇಬ್ಬರನ್ನು ಬಂಧಿಸಲಾಗಿತ್ತು. ಇದಾದ ಒಂದು ದಿನದಲ್ಲಿ, ಅಂದರೆ ಶುಕ್ರವಾರ ಇದೇ ಯೂಟ್ಯೂಬರ್‌ನ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ದಕ್ಷಿಣ ಕೊರಿಯಾದ ಖ್ಯಾತ ಯೂಟ್ಯೂಬರ್‌ ಪಾರ್ಕ್‌ ಹಿಯೋ ಜಿಯಾಂಗ್ ಅವರ ಹೊಸ ವಿಡಿಯೋ, ಸೋಷಿಯಲ್‌ ಮೀಡಿಯಾದಲ್ಲಿ ಇಂದು ಭಾರಿ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ಸ್ಥಳೀಯ ವ್ಯಕ್ತಿಯಾದ ಅಥರ್ವ ಟಿಕ್ಕಾ(Atharva Tikkha) ಎಂಬವರು ಹಿಯೋ ಜಿಯಾಂಗ್‌ಗೆ ನೆರವಿಹೆ ಬಂದಿದ್ದನ್ನು ಕಾಣಬಹುದು. ಆರೋಪಿಗಳು ಕಿರುಕುಳ ನೀಡುತ್ತಿದ್ದರೂ, ಲೈವ್‌ ವಿಡಿಯೋ ನೋಡಿದ ಅವರು ಆಕೆಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ.

ಟ್ವಿಟ್ಟರ್ ಬಳಕೆದಾರರಾದ ಗಿರೀಶ್ ಆಳ್ವಾ ಎಂಬವರು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಟಿಕ್ಕಾ ಅವರು ಮಹಿಳೆಯ ಲೈವ್ ಸ್ಟ್ರೀಮ್ ನೋಡಿ ಸ್ಥಳಕ್ಕೆ ಬಂದಿರುವುದಾಗಿ ಹೇಳಿದ್ದಾರೆ. ನಂತರ ಅವರು ಇಬ್ಬರು ಆರೋಪಿಗಳೊಂದಿಗೆ ಮಾತನಾಡುತ್ತಾ ಮಹಿಳೆಗೆ ಕಿರುಕುಳ ನೀಡದಂತೆ ಕೇಳಿಕೊಳ್ಳುತ್ತಿದ್ದಾರೆ. ಕೊನೆಗೆ ಇಬ್ಬರು ಆರೋಪಿಗಳು ಅಲ್ಲಿಂದ ತೆರಳಿದ್ದಾರೆ.

ಇಂದು, ಪಾರ್ಕ್ ಅವರು ಹೊಸ ವಿಡಿಯೋವನ್ನು ಹರಿಬಿಟ್ಟಿದ್ದಾರೆ. ನಿನ್ನೆಯ ದುರ್ಘಟನೆ ವೇಳೆ ತನ್ನ ನೆರವಿಗೆ ಬಂದ ಇಬ್ಬರು ಭಾರತೀಯ ರಿಗೆ ಧನ್ಯವಾದ ಹೇಳುವ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಕಿರುಕುಳದಿಂದ ತನ್ನನ್ನು ರಕ್ಷಿಸಲು ಸಹಾಯ ಮಾಡಿದ್ದಕ್ಕಾಗಿ ಆದಿತ್ಯ ಮತ್ತು ಅಥರ್ವ ಅವರಿಗೆ ಪಾರ್ಕ್ ಧನ್ಯವಾದ ಸಲ್ಲಿಸಿದ್ದಾರೆ.

“ವಿಡಿಯೋವನ್ನು ಪೋಸ್ಟ್ ಮಾಡಲು ಮತ್ತು ಬೀದಿಯಲ್ಲಿ ನನ್ನನ್ನು ಉಳಿಸಲು ನನಗೆ ಸಹಾಯ ಮಾಡಿದ ಭಾರತದ ಇಬ್ಬರು ಮಹನೀಯರೊಂದಿಗೆ ಇಂದಿನ ಊಟ. ಇವರೇ ಆದಿತ್ಯ ಮತ್ತು ಅಥರ್ವ” ಎಂದು ಪಾರ್ಕ್ ಮುಂಬೈನ ರೆಸ್ಟೋರೆಂಟ್‌ ಒಂದರಲ್ಲಿ ಊಟ ಮಾಡುವ ದೃಶ್ಯವನ್ನು ಅವರ ಫೋಟೋದೊಂದಿಗೆ ಟ್ವೀಟ್ ಮಾಡಿದ್ದಾರೆ.

ಶೇಖ್ ಮತ್ತು ಅನ್ಸಾರಿ ಬಂಧಿತರು

ಘಟನೆ ಸಂಬಂಧ ಮುಂಬೈ ಪೊಲೀಸರು ಆರೋಪಿಗಳಾದ ಮೊಬೀನ್ ಚಂದ್ ಮೊಹಮ್ಮದ್ ಶೇಖ್ ಮತ್ತು ಮೊಹಮ್ಮದ್ ನಕೀಬ್ ಸದ್ರೇಲಂ ಅನ್ಸಾರಿ ಅವರನ್ನು ಬಂಧಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳನ್ನು ಒಂದು ದಿನದ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.

ಕಿರುಕುಳದ ವಿಡಿಯೋ

ಒಂದು ನಿಮಿಷದ ಅವಧಿಯ ವಿಡಿಯೋದಲ್ಲಿ, ಇಬ್ಬರು ಆರೋಪಿಗಳಲ್ಲಿ ಒಬ್ಬ ಆಕೆಯ ಕೈಯನ್ನು ಹಿಡಿದುಕೊಂಡು ಪಾರ್ಕ್‌ಗೆ ಲಿಫ್ಟ್ ಕೊಡುವುದಾಗಿ ಹೇಳುತ್ತಾನೆ. ಪಾರ್ಕ್‌ ಅವರನ್ನು ವಿರೋಧಿಸಿದರು, ಆತ ಚೇಷ್ಟೆ ಮುಂದುವರೆಸಿದ್ದಾನೆ. ಆತ ಆಕೆಯ ಹತ್ತಿರ ಬರಲು ಪ್ರಯತ್ನಿಸಿದಾಗಲೂ, ಪಾರ್ಕ್ ಮಾತ್ರ ಇಬ್ಬರನ್ನೂ ಶಾಂತವಾಗಿ ನಿಭಾಯಿಸಿದ್ದಾರೆ.

IPL_Entry_Point