Madhya Pradesh Polls: ಮಧ್ಯಪ್ರದೇಶ ವಿಧಾನಸಭಾ ಚುನಾವಣೆ; ಬಿಜೆಪಿಯಿಂದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ, 39 ಕ್ಷೇತ್ರಗಳಿಗೆ ಹೆಸರು ಘೋಷಣೆ
Madhya Pradesh Assembly Election: ಈ ವರ್ಷ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿದ್ದು, 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.
ಮುಂಬರುವ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ ಗುರುವಾರ (ಆಗಸ್ಟ್ 17) ತನ್ನ 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯು ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದಲ್ಲಿ ಪಕ್ಷದ ಚುನಾವಣಾ ಸಿದ್ಧತೆಗಳನ್ನು ಪರಿಶೀಲಿಸಿದ ಒಂದು ದಿನದ ನಂತರ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಮೊದಲ ಪಟ್ಟಿಯಲ್ಲಿರುವ ಬಿಜೆಪಿ ಅಭ್ಯರ್ಥಿಗಳು
1. ಸರಳಾ ವಿಜೇಂದ್ರ ರಾವತ್ - ಸಬಲ್ಗಢ ಕ್ಷೇತ್ರ
2. ಅಡಾಲ್ ಸಿಂಗ್ ಕಂಸನಾ - ಸುಮಾವಲಿ ಕ್ಷೇತ್ರ
3. ಲಾಲ್ ಸಿಂಗ್ ಆರ್ಯ - ಗೋಹಾಡ್ (SC) ಕ್ಷೇತ್ರ
4. ಪ್ರೀತಂ ಲೋಧಿ - ಪಿಚೋರ್ ಕ್ಷೇತ್ರ
5. ಪ್ರಿಯಾಂಕಾ ಮೀನಾ - ಚಚೌರಾ ಕ್ಷೇತ್ರ
6. ಜಗನ್ನಾಥ್ ಸಿಂಗ್ ರಘುವಂಶಿ - ಚಂದೇರಿ ಕ್ಷೇತ್ರ
7. ವೀರೇಂದ್ರ ಸಿಂಗ್ ಲಂಬಾರ್ದಾರ್ - ಬಂದಾ ಕ್ಷೇತ್ರ
8. ಕಾಮಾಖ್ಯ ಪ್ರತಾಪ್ ಸಿಂಗ್ - ಮಹಾರಾಜಪುರ ಕ್ಷೇತ್ರ
9. ಲಲಿತಾ ಯಾದವ್ - ಛತ್ತರ್‌ಪುರ ಕ್ಷೇತ್ರ
10. ಲಖನ್ ಪಟೇಲ್ - ಪಠಾರಿಯಾ ಕ್ಷೇತ್ರ
11. ರಾಜೇಶ್ ಕುಮಾರ್ ವರ್ಮಾ - ಗುನ್ನಾರ್ (SC) ಕ್ಷೇತ್ರ
12. ಸುರೇಂದ್ರ ಸಿಂಗ್ ಗಹರ್ವಾರ್ - ಚಿತ್ರಕೂಟ ಕ್ಷೇತ್ರ
13. ಹೆರಾಸಿಂಗ್ ಶ್ಯಾಮ್ - ಪುಷ್ಪ್ರಜಗಢ (ST) ಕ್ಷೇತ್ರ
14. ಧೀರೇಂದ್ರ ಸಿಂಗ್ - ಬರ್ವಾರಾ (ST) ಕ್ಷೇತ್ರ
15. ನೀರಜ್ ಠಾಕೂರ್ - ಬರ್ಗಿ ಕ್ಷೇತ್ರ
16. ಅಂಚಲ್ ಸೋಂಕರ್ - ಜಬಲ್ಪುರ್ ಪುರ್ಬಾ (SC) ಕ್ಷೇತ್ರ
17. ಓಂಪ್ರಕಾಶ್ ಧುರ್ವೆ - ಶಹಪುರ (ST) ಕ್ಷೇತ್ರ
18. ವಿಜಯ್ ಆನಂದ್ ಮರಾವಿ - ಬಿಚ್ಚಿಯಾ (ಎಸ್‌ಟಿ) ಕ್ಷೇತ್ರ
19. ಭಗತ್ ಸಿಂಗ್ ನೇತಮ್ - ಬೈಹಾರ್ (ST) ಕ್ಷೇತ್ರ
20. ರಾಜ್‌ಕುಮಾರ್ ಕರ್ರಾಹೆ - ಲಾಂಜಿ ಕ್ಷೇತ್ರ
21. ಕಮಲ್ ಮಾಸ್ಕೋಲೆ - ಬರ್ಘಾಟ್ (ST) ಕ್ಷೇತ್ರ
22. ಮಹೇಂದ್ರ ನಾಗೇಶ್ - ಗೋಟೆಗಾಂವ್ (ಎಸ್‌ಸಿ) ಕ್ಷೇತ್ರ
23. ನಾನಾಭೌ ಮೊಹೋದ್ - ಸೌನ್ಸಾರ್ ಕ್ಷೇತ್ರ
24. ಪ್ರಕಾಶ್ ಉಯ್ಕೆ - ಪಾಂಡುರ್ಣ (ST) ಕ್ಷೇತ್ರ
25. ಚಂದ್ರಶೇಖರ್ ದೇಶಮುಖ್ - ಮುಲ್ತಾಯಿ ಕ್ಷೇತ್ರ
26. ಮಹೇಂದ್ರ ಸಿಂಗ್ ಚೌಹಾಣ್ - ಭೈನಸ್ದೇಹಿ (ST) ಕ್ಷೇತ್ರ
27. ಅಲೋಕ್ ಶರ್ಮಾ - ಭೋಪಾಲ್ ಉತ್ತರ ಕ್ಷೇತ್ರ
28. ಧ್ರುವ ನಾರಾಯಣ ಸಿಂಗ್ - ಭೋಪಾಲ್ ಮಧ್ಯ ಕ್ಷೇತ್ರ
29. ರಾಜೇಶ್ ಸೋಂಕರ್ - ಸೋನ್‌ಕಾಚ್ (SC) ಕ್ಷೇತ್ರ
30. ರಾಜ್‌ಕುಮಾರ್ ಮೇವ್ - ಮಹೇಶ್ವರ್ (SC) ಕ್ಷೇತ್ರ
31. ಆತ್ಮಾರಾಮ್ ಪಟೇಲ್ - ಕಾಸರವಾಡ ಕ್ಷೇತ್ರ
32. ನಾಗರ್ ಸಿಂಗ್ ಚೌಹಾಣ್ - ಅಲಿರಾಜಪುರ (ST) ಕ್ಷೇತ್ರ
33. ಭಾನು ಭೂರಿಯಾ - ಝಬುವಾ (ST) ಕ್ಷೇತ್ರ
34. ನಿರ್ಮಲಾ ಭೂರಿಯಾ - ಪೇಟಿವಾಡ್ (ಎಸ್‌ಟಿ) ಕ್ಷೇತ್ರ
35. ಜಯದೀಪ್ ಪಟೇಲ್ - ಕುಕ್ಷಿ (ST) ಕ್ಷೇತ್ರ
36. ಕಲು ಸಿಂಗ್ ಠಾಕೂರ್ - ಧರಂಪುರಿ (ST) ಕ್ಷೇತ್ರ
37. ಮಧು ವರ್ಮಾ - ರಾವು ಕ್ಷೇತ್ರ
38. ತಾರಾಚಂದ್ ಗೋಯಲ್ - ತರಾನಾ (SC) ಕ್ಷೇತ್ರ
39. ಸತೀಶ್ ಮಾಳವೀಯ - ಘಾಟಿಯಾ (SC) ಕ್ಷೇತ್ರ
2018 ರಲ್ಲಿ, ಮಧ್ಯಪ್ರದೇಶದ 230 ಸ್ಥಾನಗಳ ಪೈಕಿ ಕಾಂಗ್ರೆಸ್ 114 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು, ಬಿಜೆಪಿ 109 ಸ್ಥಾನಗಳನ್ನು ಗೆದ್ದಿತ್ತು. ಕಮಲ್ ನಾಥ್ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರವನ್ನು ರಚಿಸಿತ್ತು. ಆದರೆ ಜ್ಯೋತಿರಾದಿತ್ಯ ಸಿಂಧಿಯಾ ನೇತೃದ್ವದಲ್ಲಿ ಹಲವು ಕಾಂಗ್ರೆಸ್ ಶಾಸಕರು ಬಂಡಾಯದ ನಂತರ ಕಾಂಗ್ರೆಸ್ ಸರ್ಕಾರ ಪತನಗೊಂಡು ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರ ರಚನೆಯಾಯಿತು.
ಈ ವರ್ಷ ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂ - ಈ ಐದು ರಾಜ್ಯಗಳಲ್ಲಿ ನವೆಂಬರ್-ಡಿಸೆಂಬರ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಐದು ರಾಜ್ಯಗಳ ಪೈಕಿ ಮಧ್ಯಪ್ರದೇಶದಲ್ಲಿ ಮಾತ್ರ ಬಿಜೆಪಿ ಅಧಿಕಾರದಲ್ಲಿದ್ದು, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಮತ್ತು ತೆಲಂಗಾಣದಲ್ಲಿ ಬಿಆರ್‌ಎಸ್ ಅನ್ನು ಕಿತ್ತೊಗೆಯಲು ಬಿಜೆಪಿ ತೀವ್ರ ಪ್ರಚಾರ ನಡೆಸುತ್ತಿದೆ. ಇತ್ತ ಛತ್ತೀಸ್‌ಗಢ ವಿಧಾನಸಭಾ ಚುನಾವಣೆಗೆ ಕೂಡ ಬಿಜೆಪಿ 21 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.