Maha Kumbh: ಪ್ರಯಾಗ್‌ರಾಜ್ ಟ್ರಾಫಿಕ್ ಜಾಮ್ ಕರಗಲು 48 ಗಂಟೆ ಬೇಕಾಗಬಹುದು, 300 ಕಿಮೀ ಉದ್ದಕ್ಕೂ ವಾಹನ ಸಂಚಾರ ನಿಧಾನ
Worlds Biggest Traffic Jam: ಕಳೆದ ಮೂರ್ನಾಲ್ಕು ದಿನಗಳಲ್ಲಿ ಮಹಾ ಕುಂಭಮೇಳದ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಸದ್ಯ ಇರುವ ಪ್ರಯಾಗ್‌ರಾಜ್ ಟ್ರಾಫಿಕ್ ಜಾಮ್ ಕರಗಲು 48 ಗಂಟೆ ಬೇಕಾಗಬಹುದು, 300 ಕಿಮೀ ಉದ್ದಕ್ಕೂ ವಾಹನ ಸಂಚಾರ ನಿಧಾನವಾಗಿದೆ.

Worlds Biggest Traffic Jam: ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಕಡೆಗೆ ದೇಶದ ಜನತೆ ಮುಖಮಾಡಿರುವ ಕಾರಣ, ಅಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಮಹಾ ಕುಂಭಮೇಳಕ್ಕೆ ತೆರಳುವ ದಾರಿಯಲ್ಲಿ 300 ಕಿಮೀ ಉದ್ದಕ್ಕೂ ವಾಹನಗಳು ನಿಧಾನಗತಿಯಲ್ಲಿದ್ದು, ಬಹುತೇಕ ಪಾರ್ಕಿಂಗ್ ಸ್ಥಳದಂತೆ ಗೋಚರಿಸತೊಡಗಿದೆ ಎಂಬ ಪ್ರತಿಕ್ರಿಯೆಗಳು ಸೋಷಿಯಲ್ ಮೀಡಿಯಾಗಳಲ್ಲಿ ಕಂಡುಬಂದಿವೆ. ಪ್ರಯಾಗ್‌ರಾಜ್ ಸಂಚಾರ ದಟ್ಟಣೆ ಬಹುಶಃ ಜಗತ್ತಿನ ಅತಿದೊಡ್ಡ ಸಂಚಾರ ದಟ್ಟಣೆ ಇದ್ದೀತು ಎಂದೂ ಜನ ಆಡಿಕೊಳ್ಳತೊಡಗಿದ್ದಾರೆ.
ಮಹಾ ಕುಂಭಮೇಳಕ್ಕೆ ಜನರು ಸಾಗರೋಪಾದಿಯಲ್ಲಿ ಆಗಮಿಸುತ್ತಿರುವ ಕಾರಣ ವಾಹನಗಳ ಸಾಗರವೇ ಅಲ್ಲಿ ಕಂಡುಬಂದಿದೆ. ಕಳೆದ ಮೂರ್ನಾಲ್ಕು ದಿನಗಳ ಅವಧಿಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಸದ್ಯ ಇರುವ ಪ್ರಯಾಗ್‌ರಾಜ್ ಟ್ರಾಫಿಕ್ ಜಾಮ್ ಕರಗಲು 48 ಗಂಟೆ ಬೇಕಾಗಬಹುದು, 300 ಕಿಮೀ ಉದ್ದಕ್ಕೂ ವಾಹನ ಸಂಚಾರ ನಿಧಾನವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪ್ರಯಾಗ್‌ರಾಜ್ ಟ್ರಾಫಿಕ್ ಜಾಮ್ ಕರಗಲು 48 ಗಂಟೆ ಬೇಕಾಗಬಹುದು
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳದಲ್ಲಿ ಪಾಲ್ಗೊಳ್ಳುವ ಭಕ್ತ ದಟ್ಟಣೆ ಹೆಚ್ಚಳವಾಗಿದೆ. ಪರಿಣಾಮ ಪ್ರಯಾಗ್‌ರಾಜ್ ಟ್ರಾಫಿಕ್ ಜಾಮ್ ಉಂಟಾಗಿದ್ದು, ಅದು ಕರಗಲು 48 ಗಂಟೆ ಬೇಕಾಗಬಹುದು ಎಂದು ಅಂದಾಜಿಸಲಾಗುತ್ತಿದೆ. ಇದನ್ನು "ವಿಶ್ವದ ಅತಿದೊಡ್ಡ ಟ್ರಾಫಿಕ್ ಜಾಮ್" ಎಂದು ಕರೆಯಲಾಗುತ್ತಿದೆ. 200-300 ಕಿಮೀ ತನಕ ವಾಹನ ಸಂಚಾರ ನಿಧಾನವಾಗಿದ್ದು, ರಸ್ತೆ ಬಹುತೇಕ ಪಾರ್ಕಿಂಗ್ ಲಾಟ್‌ನಂತಾಗಿದೆ. ಭಾನುವಾರ (ಫೆ 9) ಸಂಚಾರ ದಟ್ಟಣೆ ಹೆಚ್ಚಿದ ಕಾರಣ ವಿವಿಧ ಜಿಲ್ಲೆಗಳಲ್ಲೇ ವಾಹನಗಳನ್ನು ನಿಲ್ಲಿಸಬೇಕಾದ ಪರಿಸ್ಥಿತಿ ಉಂಟಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ದಿನ ಮುಂಚಿತವಾಗಿಯೇ ಅಂದರೆ ಶನಿವಾರ (ಫೆ 8) ಭಾರಿ ಸಂಚಾರ ದಟ್ಟಣೆ ಕಾರಣ ಮತ್ತು ಭಕ್ತ ದಟ್ಟಣೆ ಕಡಿಮೆ ಮಾಡುವುದಕ್ಕಾಗಿ ಮಧ್ಯಪ್ರದೇಶದಲ್ಲೇ ಪೊಲೀಸರು ವಿವಿಧೆಡೆ ಸಂಚಾರ ನಿರ್ಬಂಧ ಹೇರಿ, ಹಂತ ಹಂತವಾಗಿ ಉತ್ತರ ಪ್ರದೇಶ ಕಡೆಗೆ ವಾಹನಗಳನ್ನು ಬಿಡತೊಡಗಿದ್ದರು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
300 ಕಿಮೀ ಉದ್ದಕ್ಕೂ ವಾಹನ ಸಂಚಾರ ನಿಧಾನ; ಜಗತ್ತಿನ ಅತಿದೊಡ್ಡ ಟ್ರಾಫಿಕ್ ಜಾಮ್ ಎಂದ ಜನ
ದಕ್ಷಿಣ ರಾಜ್ಯಗಳು ಸೇರಿ ವಿವಿಧೆಡೆಯಿಂದ ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಕಡೆಗೆ ಹೊರಟ ಜನರಿಗೆ ಸಂಚಾರ ದಟ್ಟಣೆ ಅನುಭವವಾಗಿದೆ. 300 ಕಿಮೀ ಉದ್ದಕ್ಕೂ ವಾಹನ ಸಂಚಾರ ನಿಧಾನವಾಗಿದೆ. ಅನೇಕರು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಈ ಪೈಕಿ, ಭಾಸ್ಕರ್ ಶರ್ಮಾ ಎಂಬುವವರು ಫೆ 8 ರಂದು ಹಂಚಿಕೊಂಡ ಪೋಸ್ಟ್ ಇದು-
ನಿತಿನ್ ಕುಮಾರ್ ಎಂಬುವವರು ಫೆ 9 ರಂದು ಟ್ವೀಟ್ ಮಾಡಿದ್ದು, ಜಬಲ್‌ಪುರದಲ್ಲಿ 15 ಕಿಮೀ ಟ್ರಾಫಿಕ್ ಜಾಮ್ ಉಂಟಾಗಿದೆ. ಪ್ರಯಾಗ್‌ರಾಜ್‌ಗೆ ಇನ್ನೂ 400 ಕಿಮೀ ಇದೆ. ಮಹಾ ಕುಂಭ ಮೇಳಕ್ಕೆ ಹೊರಡುವ ಮೊದಲು ಸಂಚಾರ ದಟ್ಟಣೆ ಗಮನಿಸಿ ಎಂದು ಸಲಹೆ ನೀಡಿದ್ದಾರೆ.
ಮಧ್ಯಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ವಾಹನ ದಟ್ಟಣೆಯನ್ನು ನಿರ್ವಹಿಸುತ್ತಿರುವ ಪೊಲೀಸರು, ಸುರಕ್ಷಿತ ಪ್ರದೇಶಗಳಲ್ಲಿ ಪಾರ್ಕ್ ಮಾಡುವಂತೆ ಜನರಿಗೆ ಸಲಹೆ ನೀಡುತ್ತಿದ್ದು, ಹಂತ ಹಂತವಾಗಿ ಸಂಚರಿಸಲು ಅವಕಾಶ ಮಾಡಿಕೊಡುವುದಾಗಿ ತಿಳಿಸುತ್ತಿದ್ದಾರೆ. ಕಟ್ನಿ ಜಿಲ್ಲೆಯ ಸ್ಥಳ ವಾಹನಗಳು ಸೋಮವಾರದವರೆಗೆ ಸಂಚಾರವನ್ನು ನಿಲ್ಲಿಸಲಾಗಿದೆ ಎಂದು ಪ್ರಕಟಣೆಗಳನ್ನು ನೀಡಿದರೆ, ಮೈಹಾರ್ ಪೊಲೀಸರು ವಾಹನಗಳನ್ನು ಕಟ್ನಿ ಮತ್ತು ಜಬಲ್‌ಪುರ ಕಡೆಗೆ ಮರಳಲು ಮತ್ತು ಅಲ್ಲಿಯೇ ಇರುವಂತೆ ಕೇಳಿಕೊಂಡಿರುವುದಾಗಿ ಪಿಟಿಐ ವರದಿ ಮಾಡಿದೆ. ಇದನ್ನೆಲ್ಲ ಗಮನಿಸುತ್ತಿರುವ ಜನ, ಪ್ರಯಾಗ್‌ರಾಜ್ ಟ್ರಾಫಿಕ್ ಜಾಮ್ ಬಹುಶಃ ಜಗತ್ತಿನ ಅತಿದೊಡ್ಡ ಟ್ರಾಫಿಕ್ ಜಾಮ್ ಇರಬೇಕು ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಹೇಳತೊಡಗಿದ್ದಾರೆ.
