ಕನ್ನಡ ಸುದ್ದಿ  /  Nation And-world  /  Maharashtra Ats Chargesheet: Pfi Conspired To Make India Islamic Nation Said Maharashtra Ats

Maharashtra ATS Chargesheet: ಪಿಎಫ್‌ಐ ವಿರುದ್ಧ ಮಹಾರಾಷ್ಟ್ರ ATS ಚಾರ್ಜ್‌ಶೀಟ್‌; ಕರ್ನಾಟಕದ ರುದ್ರೇಶ್‌, ಪ್ರವೀಣ್‌ ಹತ್ಯೆ ಪ್ರಸ್ತಾಪ

Maharashtra ATS Chargesheet: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಕೆಲವು ಸದಸ್ಯರ ವಿರುದ್ಧ ಇತ್ತೀಚಿನ ಚಾರ್ಜ್‌ಶೀಟ್‌ನಲ್ಲಿ ನಿಷೇಧಿತ ಗುಂಪು ಭಾರತವನ್ನು "2047 ರ ವೇಳೆಗೆ ಇಸ್ಲಾಮಿಕ್ ರಾಷ್ಟ್ರ" ಮಾಡಲು ಪಿತೂರಿ ನಡೆಸಿದೆ ಎಂದು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಆರೋಪಿಸಿದೆ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ (ANI)

ಮುಂಬೈ: ಮಹಾರಾಷ್ಟ್ರದ ಉಗ್ರ ನಿಗ್ರಹ ದಳ (Maharashtra ATS)ವು ಪಾಪ್ಯುಲರ್‌ ‍ಫ್ರಂಟ್‌ ಆಫ್‌ ಇಂಡಿಯಾದ ಕೆಲವು ಸದಸ್ಯರ ವಿರುದ್ಧ ಇತ್ತೀಚೆಗೆ ಚಾರ್ಜ್‌ಶೀಟ್‌ ಸಲ್ಲಿಸಿದೆ. ಅದರಲ್ಲಿ ಕರ್ನಾಟಕದ ಆರ್.‌ ರುದ್ರೇಶ್‌ (2016), ಪ್ರವೀಣ್‌ ಪೂಜಾರಿ (2016), ಶರತ್‌ (2017) ಹತ್ಯೆ ಪ್ರಕರಣಗಳನ್ನೂ ಉಲ್ಲೇಖಿಸಿದೆ ಎಂದು ವರದಿ ಹೇಳಿದೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಕೆಲವು ಸದಸ್ಯರ ವಿರುದ್ಧ ಇತ್ತೀಚಿನ ಚಾರ್ಜ್‌ಶೀಟ್‌ನಲ್ಲಿ ನಿಷೇಧಿತ ಗುಂಪು ಭಾರತವನ್ನು "2047 ರ ವೇಳೆಗೆ ಇಸ್ಲಾಮಿಕ್ ರಾಷ್ಟ್ರ" ಮಾಡಲು ಪಿತೂರಿ ನಡೆಸಿದೆ ಎಂದು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಆರೋಪಿಸಿದೆ.

ತನ್ನ ಚಾರ್ಜ್‌ಶೀಟ್ ಪ್ರಕಾರ, ಪ್ರಮುಖ ಆರೋಪಿ ಮಜರ್ ಮನ್ಸೂರ್ ಖಾನ್‌ನ ಮೊಬೈಲ್ ಫೋನ್‌ನಿಂದ ಪಿಡಿಎಫ್ ಫೈಲ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಅದು '2047 ರ ವೇಳೆಗೆ ಇಸ್ಲಾಂನ ವೈಭವವನ್ನು ಮರಳಿ ಪಡೆಯುವುದು' ಎಂಬ ಮಾರ್ಗಸೂಚಿಯನ್ನು ವಿವರಿಸುವ ಕರಡು ಕರಡು ಪುಸ್ತಕ ಎಂದು ಎಟಿಎಸ್ ಆರೋಪಿಸಿದೆ.

ಆ ಡಾಕ್ಯುಮೆಂಟ್‌ನ ಒಂದು ಪುಟದಲ್ಲಿ, "ಭಾರತ-2047: ಭಾರತದಲ್ಲಿ ಇಸ್ಲಾಂ ಆಡಳಿತದ ಕಡೆಗೆ" ಎಂಬ ಉಲ್ಲೇಖವೂ ಇದೆ.

ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿರುವ PFI ಕಾರ್ಯಕರ್ತರು ಹಲವಾರು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ಸಂಜಿತ್ (ಕೇರಳ, ನವೆಂಬರ್ 2021), ವಿ-ರಾಮಲಿಂಗಂ (ತಮಿಳುನಾಡು, 2019), ನಂದು (ಕೇರಳ, 2021), ಅಭಿಮನ್ಯು (ಕೇರಳ, 2018) ಬಿಬಿನ್ (ಕೇರಳ, 2017), ಶರತ್ (ಕರ್ನಾಟಕ, 2017), ಆರ್.ರುದ್ರೇಶ್ (ಕರ್ನಾಟಕ, 2016), ಪ್ರವೀಣ್ ಪೂಜಾರಿ (ಕರ್ನಾಟಕ, 2016), ಮತ್ತು ಸಸಿ ಕುಮಾರ್ (ತಮಿಳುನಾಡು, 2016) ಸೇರಿ ಹಲವಾರು ವ್ಯಕ್ತಿಗಳ ಕೊಲೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಕೇಂದ್ರ ಗೃಹ ಸಚಿವಾಲಯವು, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ PFI, ಅದರ ಸಹವರ್ತಿಗಳು ಮತ್ತು ಅಂಗಸಂಸ್ಥೆಗಳನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ 1967 ರ ಪ್ರಕಾರ ಐದು ವರ್ಷಗಳ ಅವಧಿಗೆ ನಿಷೇಧಿಸಿದೆ. ಅಲ್ಲದೆ ಈ ಸಂಘಟನೆಗಳು ಕಾನೂನುಬಾಹಿರ ಸಂಘಟನೆಗಳು ಎಂದು ಘೋಷಿಸಿದೆ.

ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಯನ್ನು ಕದಡುವ ಮತ್ತು ಸಾರ್ವಜನಿಕ ಮನಸ್ಸಿನಲ್ಲಿ ಭಯೋತ್ಪಾದನೆಯ ಆಳ್ವಿಕೆಯನ್ನು ಸೃಷ್ಟಿಸುವ" ಏಕೈಕ ಉದ್ದೇಶಕ್ಕಾಗಿ ಪಿಎಫ್‌ಐ ಕಾರ್ಯಕರ್ತರು ಅಪರಾಧ ಚಟುವಟಿಕೆಗಳು ಮತ್ತು ಕ್ರೂರ ಕೊಲೆಗಳನ್ನು ನಡೆಸುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯವು ಹೇಳಿತ್ತು.

ಪಿಎಫ್‌ಐ ಸಂಘಟನೆಯ ಕೆಲವು ಕಾರ್ಯಕರ್ತರು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ISIS) ಗೆ ಸೇರಿಕೊಂಡಿದ್ದಾರೆ ಮತ್ತು ಸಿರಿಯಾ, ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ. ಈ ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಐಸಿಸ್‌ಗೆ ಸಂಬಂಧಿಸಿದ ಈ ಕೆಲವು ಪಿಎಫ್‌ಐ ಕಾರ್ಯಕರ್ತರು ಕೊಲ್ಲಲ್ಪಟ್ಟಿದ್ದಾರೆ.

ಕೆಲವರನ್ನು ರಾಜ್ಯ ಪೊಲೀಸ್ ಮತ್ತು ಕೇಂದ್ರ ಏಜೆನ್ಸಿಗಳು ಬಂಧಿಸಿದ್ದಾರೆ. ಪಿಎಫ್‌ಐ ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಜಮಾತ್-ಉಲ್-ಮುಯಾಹಿದೀನ್ ಬಾಂಗ್ಲಾದೇಶದೊಂದಿಗೆ (ಜೆಎಂಬಿ) ಸಂಪರ್ಕವನ್ನು ಹೊಂದಿದೆ. ಹೀಗೆ ಜಾಗತಿಕ ಭಯೋತ್ಪಾದಕ ಗುಂಪುಗಳೊಂದಿಗೆ ಪಿಎಫ್‌ಐಯ ಅಂತಾರಾಷ್ಟ್ರೀಯ ಸಂಪರ್ಕಗಳನ್ನು ಸಹ ಕೇಂದ್ರ ಸರ್ಕಾರ ಉಲ್ಲೇಖಿಸಿದೆ.

IPL_Entry_Point