ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Maharashtra Crime: ಅಪ್ಪನನ್ನೇ ಕೊಲ್ಲಲು ಸುಪಾರಿ ಕೊಟ್ಟ ಮಗಳು; 15 ಬಾರಿ ಇರಿದು ಕೊಂದ ಹಂತಕರು

Maharashtra Crime: ಅಪ್ಪನನ್ನೇ ಕೊಲ್ಲಲು ಸುಪಾರಿ ಕೊಟ್ಟ ಮಗಳು; 15 ಬಾರಿ ಇರಿದು ಕೊಂದ ಹಂತಕರು

Supari for murder: ಮೇ 17 ರಂದು ನಾಗ್‌ಪುರ-ನಾಗ್‌ಭಿಡ್ ಹೆದ್ದಾರಿಯ ಭಿವಾಪುರದ ಪೆಟ್ರೋಲ್ ಪಂಪ್‌ನಲ್ಲಿ ಮೂವರು ಮುಸುಕುಧಾರಿಗಳು ದಿಲೀಪ್ ರಾಜೇಶ್ವರ್ ಅವರನ್ನು ಚಾಕುವಿನಿಂದ ಇರಿದು ಕೊಂದಿದ್ದರು. ಇದೀಗ ಈ ಕೊಲೆ ಹಿಂದೆ ಮಗಳ ಕೈವಾಡ ಇದೆ ಎಂಬುದು ಬೆಳಕಿಗೆ ಬಂದಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನಾಗ್ಪುರ (ಮಹಾರಾಷ್ಟ್ರ): ತನ್ನ ತಂದೆಯನ್ನೇ ಕೊಲ್ಲಲು ಮಗಳು ಸುಪಾರಿ ಕೊಟ್ಟಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದ್ದು, ಆಕೆಯ ಅಪ್ಪನನ್ನು ಹಂತಕರು 15 ಬಾರಿ ಇರಿದು ಕೊಂದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮೃತ ವ್ಯಕ್ತಿಯನ್ನು ದಿಲೀಪ್ ರಾಜೇಶ್ವರ್ ಸೊಂತಕ್ಕೆ (60) ಎಂದು ಗುರುತಿಸಲಾಗಿದೆ. ಸುಪಾರಿ ಕೊಟ್ಟ ಈತನ ಮಗಳಾದ 35 ವರ್ಷದ ಪ್ರಿಯಾಳನ್ನು ನಾಗ್ಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಅಪ್ಪನನ್ನು ಕೊಲ್ಲಲು ನಿಯೋಜಿಸಿದ ಬಾಡಿಗೆ ಹಂತಕರಿಗೆ ಪ್ರಿಯಾ 5 ಲಕ್ಷ ರೂಪಾಯಿ ಹಣ ನೀಡಿದ್ದಳು.

ಮೇ 17 ರಂದು ನಾಗ್‌ಪುರ-ನಾಗ್‌ಭಿಡ್ ಹೆದ್ದಾರಿಯ ಭಿವಾಪುರದ ಪೆಟ್ರೋಲ್ ಪಂಪ್‌ನಲ್ಲಿ ಮೂವರು ಮುಸುಕುಧಾರಿಗಳು ದಿಲೀಪ್ ರಾಜೇಶ್ವರ್ ಅವರನ್ನು ಚಾಕುವಿನಿಂದ ಇರಿದು ಕೊಂದಿದ್ದರು. ಇದೀಗ ಈ ಕೊಲೆ ಹಿಂದೆ ಮಗಳ ಕೈವಾಡ ಇದೆ ಎಂಬುದು ಬೆಳಕಿಗೆ ಬಂದಿದೆ.

ದಿಲೀಪ್ ರಾಜೇಶ್ವರ್ ಸೊಂತಕ್ಕೆ ಅವರು ತನ್ನ ಪತ್ನಿಗೆ ಸೇರಿದ ಪೆಟ್ರೋಲ್ ಬಂಕ್​ ಅನ್ನು ನಡೆಸುತ್ತಿದ್ದರು. ಇವರು ಪೆಟ್ರೋಲ್ ಬಂಕ್, ಜಮೀನು ಮತ್ತು ಮನೆಯನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ಪತ್ನಿಯ ಮೇಲೆ ಒತ್ತಡ ಹೇರುತ್ತಿದ್ದರು. ಆದರೆ ಈ ಕಾರಣಕ್ಕೆ ಅವರನ್ನು ಮಗಳು ಕೊಲೆ ಮಾಡಿಸಿದ್ದಲ್ಲ ಅಸಲಿ ಕಾರಣವೇ ಬೇರೆ.

ದಿಲೀಪ್​​ ಇಳಿ ವಯಸ್ಸಿನಲ್ಲಿಯೇ ಮತ್ತೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು. ಇದನ್ನು ವಿರೋಧಿಸಿದಕ್ಕಾಗಿ ಪತ್ನಿಗೆ ವಿಪರೀತ ಹಿಂಸೆ ನೀಡುತ್ತಿದ್ದರಂತೆ ದಿಲೀಪ್​. ಇದನ್ನು ನೋಡಿ ಬೇಸತ್ತು ತಂದೆಯನ್ನು ಕೊಲ್ಲಲು ಸುಪಾರಿ ನೀಡಿದ್ದಾಗಿ ಪ್ರಿಯಾ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾಳೆ.

ಕೊಲೆಯಲ್ಲಿ ತನ್ನ ಪಾತ್ರವನ್ನು ಒಪ್ಪಿಕೊಂಡಿರುವ ಪ್ರಿಯಾಳನ್ನು ಬುಧವಾರ ( ಮೇ 24) ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಮತ್ತು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ನಾಗ್ಪುರ (ಗ್ರಾಮೀಣ) ಪೊಲೀಸ್ ವರಿಷ್ಠಾಧಿಕಾರಿ ವಿಶಾಲ್ ಹೇಳಿದ್ದಾರೆ.

ಮೂವರು ಹಂತಕರನ್ನು ಶೇಖ್ ಅಫ್ರೋಜ್ ಅಲಿಯಾಸ್ ಇಮ್ರಾನ್ ಹನೀಫ್, ಮೊಹಮ್ಮದ್ ವಾಸಿಂ ಲಾಲ್ ಮೊಹಮ್ಮದ್ ಮತ್ತು ಜುಬೇರ್ ಖಾನ್ ಎಂದು ಗುರುತಿಸಲಾಗಿದ್ದು, ಕೊಲೆಯಾದ ಕೆಲವೇ ಗಂಟೆಗಳಲ್ಲಿ ಸಿಕ್ಕಿಬಿದ್ದಿದ್ದಾರೆ.

Bride Chases Groom: ಎರಡು ವರ್ಷಗಳ ಕಾಲ ಪ್ರೀತಿಸಿದ್ದ ವ್ಯಕ್ತಿ ಮದುವೆಯ ದಿನದಂದು ಮದುವೆ ನಿರಾಕರಿಸಿ ಓಡಿ ಹೋಗಲು ಯತ್ನಿಸಿದ್ದ. ಈ ವಿಷಯ ತಿಳಿದ ವಧು ಅವನನ್ನು 20 ಕಿಲೋಮೀಟರ್‌ ಓಡಿಸಿಕೊಂಡು ಹೋಗಿ ಮದುವೆಯಾದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಏನಿದು ಘಟನೆ, ಈ ಸ್ಟೋರಿ ಓದಿ.

ಟಿ20 ವರ್ಲ್ಡ್‌ಕಪ್ 2024

ವಿಭಾಗ