ಮಹಾರಾಷ್ಟ್ರ ಚುನಾವಣೆ 2024: ಮತದಾರರಲ್ಲಿ ರೋಚಕ ಭಾವ, ಎದುರಾಳಿಗಳಲ್ಲಿ ಆತಂಕ ಸೃಷ್ಟಿರುವ 5 ಹೈವೋಲ್ಟೇಜ್ ಕ್ಷೇತ್ರಗಳಿವು
Maharashtra Election 2024: ಮಹಾರಾಷ್ಟ್ರ ಚುನಾವಣೆ ನಿರ್ಣಾಯಕ ಘಟ್ಟ ತಲುಪಿದೆ. ಇನ್ನೇನು ಮತದಾನ ಮುಗಿಯುವ ಹೊತ್ತು. ಬಳಿಕ ಎಕ್ಸಿಟ್ ಪೋಲ್ ವಿವರ ಪ್ರಕಟವಾಗಲಿದೆ. ನವೆಂಬರ್ 23ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಚುನಾವಣಾ ಪ್ರಚಾರ ಮತ್ತು ಇಡೀ ಪ್ರಕ್ರಿಯೆಲ್ಲಿ ಹೈ ವೋಲ್ಟೇಜ್ ಕದನ ಕಣಗಳಾಗಿ ಗುರುತಿಸಿಕೊಂಡಿರುವ 5 ಕ್ಷೇತ್ರಗಳ ವಿವರ ಇಲ್ಲಿದೆ.
Maharashtra Election 2024: ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿರುವ ಮಹಾರಾಷ್ಟ್ರದಲ್ಲಿ ಸದ್ಯ ವಿಧಾನ ಸಭಾ ಚುನಾವಣೆ ನಡೆಯುತ್ತಿದೆ. ಇಂದು (ನವೆಂಬರ್ 20) ಮತದಾನ ನಡೆಯುತ್ತಿದ್ದು ಸಂಜೆ 6 ಗಂಟೆ ಮುಕ್ತಾಯವಾಗಲಿದೆ. ಪ್ರಚಾರ ಮುಗಿಯುವ ಹಂತಕ್ಕೆ ಮಹಾರಾಷ್ಟ್ರ ಚುನಾವಣೆಯಲ್ಲಿ ತೀವ್ರ ಪೈಪೋಟಿ ಇರುವಂತಹ ಅಥವಾ ತುಂಬಾ ಮಹತ್ವ ಪಡೆದುಕೊಂಡ ಕ್ಷೇತ್ರಗಳನ್ನು ಗುರುತಿಸುವುದಾದರೆ 5 ಪ್ರಮುಖ ಕ್ಷೇತ್ರಗಳನ್ನು ಗಮನಿಸಬಹುದು. ಈ ಐದೂ ಕ್ಷೇತ್ರಗಳು ತಮ್ಮದೇ ಆದ ಕಾರಣಗಳಿಂದ ಪ್ರಾಮುಖ್ಯತೆ ಪಡೆದುಕೊಂಡಿದ್ದು ಹೈವೋಲ್ಟೇಜ್ ಕ್ಷೇತ್ರಗಳಾಗಿ ಗುರುತಿಸಿಕೊಂಡಿವೆ. ವರ್ಲಿ, ಬಾರಾಮತಿ, ವಾಂದ್ರೆ ಈಸ್ಟ್, ನಾಗಪುರ ನೈಋತ್ಯ, ಕೊಪ್ರಿ-ಪಚ್ಪಖಾಡಿ ಕ್ಷೇತ್ರಗಳು ಹೈವೋಲ್ಟೇಜ್ ಕ್ಷೇತ್ರಗಳಾಗಿದ್ದು, ಅವುಗಳ ವಿವರ ಹೀಗಿದೆ.
ಮಹಾರಾಷ್ಟ್ರ ಚುನಾವಣೆ: 5 ಹೈವೋಲ್ಟೇಜ್ ಕ್ಷೇತ್ರಗಳು
1) ವರ್ಲಿಯಲ್ಲಿ ತ್ರಿಕೋನ ಸ್ಪರ್ಧೆ: ಮುಂಬೈನ ವರ್ಲಿ ಕ್ಷೇತ್ರವು ಶಿವ ಸೇನಾ ಶಿಂಧೆ ಬಣದ ಮಿಲಿಂದ್ ದಿಯೋರಾ, ಶಿವ ಸೇನಾ ಠಾಕ್ರೆ ಬಣದ ಆದಿತ್ಯ ಠಾಕ್ರೆ, ಎಂಎನ್‌ಎಸ್‌ನ ಸಂದೀಪ್ ದೇಶಪಾಂಡೆ ನಡುವಿನ ತ್ರಿಕೋನ ಸ್ಪರ್ಧೆಯ
ವರ್ಲಿ - ತ್ರಿಕೋನ ಹೈ-ಸ್ಟೇಕ್ ಕದನ: ಮುಂಬೈನ ವರ್ಲಿ ಕ್ಷೇತ್ರವು ಮಿಲಿಂದ್ ದಿಯೋರಾ (ಶಿವಸೇನೆ - ಶಿಂಧೆ ಬಣ), ಆದಿತ್ಯ ಠಾಕ್ರೆ (ಶಿವಸೇನೆ - ಯುಬಿಟಿ) ಮತ್ತು ಸಂದೀಪ್ ದೇಶಪಾಂಡೆ (ಎಂಎನ್‌ಎಸ್) ನಡುವೆ ತೀವ್ರ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿದೆ.
ಕೇಂದ್ರದ ಮಾಜಿ ಸಚಿವ ಮಿಲಿಂದ್ ದಿಯೋರಾ ಅವರು ತಮ್ಮ ಕ್ಷೇತ್ರದ ಮಧ್ಯಮ ವರ್ಗದ ಪ್ರೀತಿಯನ್ನು ಗಳಿಸಿದ್ದು, ವ್ಯಾಪಕ ರಾಜಕೀಯ ಅನುಭವದೊಂದಿಗೆ ಚುನಾವಣಾ ಕಣದಲ್ಲಿದ್ದಾರೆ. ಅವರು ಯುಪಿಎ 2ರಲ್ಲಿ ಸಚಿವರಾಗಿ ಕೆಲಸ ಮಾಡಿದ್ದರು.
ಮಾಜಿ ಕೇಂದ್ರ ಸಚಿವ ಮಿಲಿಂದ್ ದಿಯೋರಾ ಅವರು ತಮ್ಮ ನಗರ ಪ್ರದೇಶದ ಮಧ್ಯಮ ವರ್ಗದ ಮನವಿ ಮತ್ತು ವ್ಯಾಪಕ ರಾಜಕೀಯ ಅನುಭವವನ್ನು ಅವಲಂಬಿಸಿದ್ದಾರೆ, ಯುಪಿಎ-2 ಯುಗದಲ್ಲಿ ಪ್ರಮುಖ ಪಾತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ ಸಭಾ ಸದಸ್ಯರೂ ಆಗಿರುವ ಅವರು 2024 ಜನವರಿಯಲ್ಲಿ ಕಾಂಗ್ರೆಸ್ ಪಕ್ಷ ಬಿಟ್ಟ ಬಳಿಕ ಶಿವ ಸೇನಾ ಸೇರ್ಪಡೆಯಾಗಿದ್ದಾರೆ.
ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಅವರು 2019ರ ಭರ್ಜರಿ ಗೆಲುವಿನ ಬಳಿಕ ಅತ್ಯಂತ ಪ್ರಭಾವಿ ರಾಜಕಾರಣಿಯಾಗಿ ಹೊರಹೊಮ್ಮಿದ್ದಾರೆ. ಕೋವಿಡ್ 19 ಸಂಕಷ್ಟದ ವೇಳೆ ಸಕ್ರಿಯರಾಗಿ ಕೆಲಸಮಾಡಿ ಜನಮನಗೆದ್ದಿದ್ದಾರೆ.
ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್‌ಎಸ್) ಸಂದೀಪ್ ದೇಶಪಾಂಡೆ, ಸಣ್ಣ ಮತದಾರರ, ವಿಶೇಷವಾಗಿ ಮರಾಠಿ ಭಾಷಿಕರ ಒಲವು ಗಳಿಸಿದ್ದಾರೆ. ಮೂಲಸೌಕರ್ಯ, ವಸತಿ ಸಮಸ್ಯೆ ಮುಂತಾದವುಗಳ ಬಗ್ಗೆ ಹೆಚ್ಚು ಗಮನಹರಿಸಿ ಮತದಾರರ ಒಲವು ಗಳಿಸಲು ಪ್ರಯತ್ನಿಸಿದ್ದರು.
2) ಬಾರಾಮತಿಯಲ್ಲಿ ಪವಾರ್ ಶಕ್ತಿಪ್ರದರ್ಶನ: ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಶರದ್ ಪವಾರ್ ಅವರ ಮೊಮ್ಮಗ ಯುಗೇಂದ್ರ ಪವಾರ್ ನಡುವಿನ ನಾಟಕೀಯ ಘರ್ಷಣೆಗೆ ಬಾರಾಮತಿ ಸಿದ್ಧವಾಗಿದೆ.
ಅಜಿತ್ ಪವಾರ್ ಅವರು 7 ಸಲ ಶಾಸಕರಾಗಿದ್ದು, ಹೆಚ್ಚಿನ ಪ್ರಭಾವ ಹೊಂದಿರುವಂಥವರು. ಬಾರಾಮತಿಯಲ್ಲಿ 1991ರಿಂದ ತಮ್ಮದೇ ಮತ ಬ್ಯಾಂಕ್ ರೂಪಿಸಿಕೊಂಡು ಶಾಸಕರಾಗುತ್ತ ಬಂದವರು. 2019ರಲ್ಲಿ ಅವರು ಶೇಕಡ 83 ಮತಗಳಿಸಿ ದಾಖಲೆ ಬರೆದಿದ್ದರು.
ಯುಗೇಂದ್ರ ಪವಾರ್ ರಾಜಕೀಯಕ್ಕೆ ಹೊಸಬ. ಶರದ್ ಪವಾರ್ ಬಣದಿಂದ ಕಣಕ್ಕೆ ಇಳಿದಿದ್ದು, ಶರದ್ ಪವಾರ್ ಅವರ ಮಾರ್ಗದರ್ಶನ ಮತ್ತು ರಾಜಕೀಯ ತಂತ್ರಗಾರಿಕೆ ಬಲದೊಂದಿಗೆ ಅಜಿತ್ ಪವಾರ್ ಅವರನ್ನು ಎದುರಿಸಲು ಮುಂದಾಗಿದ್ದಾರೆ.
3) ವಾಂದ್ರೆ ಈಸ್ಟ್ ಪೀಳಿಗೆಗಳ ಮತ್ತು ರಾಜಕೀಯ ನಿಷ್ಠೆಯ ಸಮರ: ವಾಂದ್ರೆ ಈಸ್ಟ್‌ನಲ್ಲಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯ ಜೀಶನ್ ಸಿದ್ದಿಕ್ ಮತ್ತು ಶಿವಸೇನೆಯ (ಯುಬಿಟಿ) ವರುಣ್ ಸರ್‌ದೇಸಾಯಿ ನಡುವೆ ತೀವ್ರ ಪೈಪೋಟಿ ಇದೆ.
ಜೀಶನ್ ಸಿದ್ಧಿಕ್ ಯುವ ನಾಯಕ. ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಪ್ರಭಾವಿ. ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡಿರುವಂಥವರು. ಮುಸಲ್ಮಾನರು ಮತ್ತು ಯುವ ಸಮುದಾಯದಲ್ಲಿ ತನ್ನದೇ ಛಾಪು ಹೊಂದಿದ್ದಾರೆ.
ವರುಣ್ ಸರ್‌ದೇಸಾಯಿ ಅವರು ಶಿವ ಸೇನಾ (ಯುಬಿಟಿ) ನಿಷ್ಠ ಬೆಂಬಲಿಗ, ಕಾರ್ಯಕರ್ತ. ಠಾಕ್ರೆ ಕುಟುಂಬ ಒಲವು ಮತ್ತು ಪಕ್ಷದ ಸಾಂಪ್ರದಾಯಿಕ ಮತಗಳನ್ನು ನೆಚ್ಚಿಕೊಂಡು ಮುಂದುವರಿಯುತ್ತಿದ್ದಾರೆ.
4) ನಾಗಪುರ ನೈಋತ್ಯ ಪಡ್ನಾವೀಸ್ ಕೋಟೆ: ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ನಾಗಪುರ ನೈಋತ್ಯದಲ್ಲಿ ಸತತ ನಾಲ್ಕನೇ ಅವಧಿಗೆ ಸ್ಪರ್ಧಿಸುತ್ತಿದ್ದಾರೆ. ಅಲ್ಲಿ ಅವರ ಅಭಿವೃದ್ಧಿ ಉಪಕ್ರಮಗಳು ಮತ್ತು ರಾಜಕೀಯ ಸ್ಥಾನಮಾನ ಮುಖ್ಯವಾಗಿದೆ. 2019ರಲ್ಲಿ ಅವರು 49,000ಕ್ಕೂ ಹೆಚ್ಚು ಮತಗಳ ಅಂತರದ ಗೆಲುವು ದಾಖಲಿಸಿದ್ದರು.
ಈ ಕ್ಷೇತ್ರದಲ್ಲಿ ಅವರ ಎದುರಾಳಿ, ಕಾಂಗ್ರೆಸ್‌ನ ಪ್ರಫುಲ್ ಗುಡಾಧೆ. ಅವರು ನಗರ ಮೂಲಸೌಕರ್ಯಗಳ ಬಗ್ಗೆ ಮತದಾರರ ಕಾಳಜಿ ಮತ್ತು ಬಿಜೆಪಿ ನೀತಿಗಳ ಬಗ್ಗೆ ಅಸಮಾಧಾನವನ್ನು ಪರಿಹರಿಸುವ ಭರವಸೆಯನ್ನು ನೀಡುವ ಮೂಲಕ ಈ ಪ್ರಾಬಲ್ಯವನ್ನು ಮುರಿಯಲು ಪ್ರಯತ್ನಿಸಿದ್ಧಾರೆ.
5) ಕೊಪ್ರಿ-ಪಚ್ಪಖಾಡಿಯಲ್ಲಿ ಗಮನ ಸೆಳೆಯುವ ಮಾರ್ಗದರ್ಶಕರ ಪರಂಪರೆ: ಮಹಾರಾಷ್ಟ್ರ ಚುನಾವಣೆಯಲ್ಲಿ ಥಾಣೆಯ ಕೊಪ್ರಿ ಪಚ್ಪಖಾಡಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಅವರ ರಾಜಕೀಯ ಮಾರ್ಗದರ್ಶಕ ದಿವಂಗತ ಆನಂದ ದಿಘೆ ಅವರ ಸೋದರಳಿಯ ಕೇದಾರ್ ದಿಘೆ ಅವರನ್ನು ಎದುರಿಸುತ್ತಿದ್ದಾರೆ. ಆನಂದ ದಿಘೆ ಅವರ ರಾಜಕೀಯ ಭವಿಷ್ಯ ರೂಪಿಸುವಲ್ಲಿ ಏಕನಾಥ ಶಿಂಧೆ ಅವರು ಮಾರ್ಗದರ್ಶಕರ ಪಾತ್ರನಿರ್ವಹಿಸಿದ್ದರು. ಆನಂದ್ ದಿಘೆ ಅವರ ಬದುಕಿನ ಚಿತ್ರಣ ನೀಡುವ ಧರ್ಮವೀರ್ 2 ಸಿನಿಮಾಕ್ಕೆ ಹಣಕಾಸು ನೆರವನ್ನು ಏಕನಾಥ ಶಿಂಧೆ ಮಾಡಿದ್ದರು. ಇದು ದಿಘೆ ಕುಟುಂಬದ ಜೊತೆಗೆ ಶಿಂಧೆ ಅವರ ಬಾಂಧವ್ಯವನ್ನು ತೋರಿಸಿಕೊಡುತ್ತದೆ. ಶಿಂಧೆ ಹಿಡಿತದ ಕ್ಷೇತ್ರದಲ್ಲಿ ಕೇದಾರ್ ದಿಘೆ ಅವರು ತಮ್ಮ ಕೌಟುಂಬಿಕ ಪ್ರಭಾವ ಮತ್ತು ಸ್ಥಳೀಯ ಬೆಂಬಲ ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿರುವ ಕಾರಣ ಇದು ಕೂಡ ಹೈವೋಲ್ಟೇಜ್ ಕ್ಷೇತ್ರವಾಗಿ ಗುರುತಿಸಲ್ಪಟ್ಟಿದೆ.