ಕನ್ನಡ ಸುದ್ದಿ  /  Nation And-world  /  Mahashivratri 2023: Kedarnath Dham Door (Kapat) To Open On This Day

Mahashivratri 2023: ಕೇದರನಾಥ, ಬದ್ರಿನಾಥ ದೇಗುಲದ ಬಾಗಿಲು ತೆರೆಯುವ ದಿನಾಂಕ ಪ್ರಕಟ

ಸಂಪ್ರದಾಯದಂತೆ ಪ್ರತಿ ವರ್ಷ ಮಹಾ ಶಿವರಾತ್ರಿಯ ದಿನದಂದು ಕೇದರನಾಥ ದೇಗುಲದ ಬಾಗಿಲು ತೆರೆಯುವ ದಿನಾಂಕವನ್ನು ಪ್ರಕಟಿಸಲಾಗುತ್ತದೆ.

Mahashivratri 2023: ಕೇದರನಾಥ, ಬದ್ರಿನಾಥ ದೇಗುಲದ ಬಾಗಿಲು ತೆರೆಯುವ ದಿನಾಂಕ ಪ್ರಕಟ
Mahashivratri 2023: ಕೇದರನಾಥ, ಬದ್ರಿನಾಥ ದೇಗುಲದ ಬಾಗಿಲು ತೆರೆಯುವ ದಿನಾಂಕ ಪ್ರಕಟ

ಉತ್ತರಾಖಂಡ: ಚಳಿಗಾಲದಲ್ಲಿ ಹಿಮ ತುಂಬಿರುವ ಕಾರಣ ವರ್ಷದಲ್ಲಿ ಸುಮಾರು ಐದಾರು ತಿಂಗಳು ಕೇದರನಾಥ ದೇಗುಲ ಸೇರಿದಂತೆ ವಿವಿಧ ದೇಗುಲಗಳು ಮುಚ್ಚಿರುತ್ತವೆ. ದೇಶದಲ್ಲಿರುವ ಹನ್ನೆರಡು ಪ್ರಮುಖ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಶ್ರೀ ಕೇದರನಾಥ ದೇಗುಲದ ಕಪಾತ್‌ (ಬಾಗಿಲುಗಳನ್ನು) ತೆರೆಯುವ ದಿನಾಂಕವನ್ನು ಘೋಷಿಸಲಾಗಿದೆ. ಉಖ್ಖಿಮಠದಲ್ಲಿ ಓಂಕಾರೇಶ್ವರ ದೇಗುಲದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದಿನಾಂಕ ಪ್ರಕಟಿಸಲಾಗಿದೆ.

ಈ ವರ್ಷ ಏಪ್ರಿಲ್‌ 25ರಂದು ಶ್ರೀ ಕೇದರನಾಥ ದೇಗುಲದ ಬಾಗಿಲು ತೆರೆಯಲಾಗುತ್ತದೆ.

ಸಂಪ್ರದಾಯದಂತೆ ಪ್ರತಿ ವರ್ಷ ಮಹಾ ಶಿವರಾತ್ರಿಯ ದಿನದಂದು ಕೇದರನಾಥ ದೇಗುಲದ ಬಾಗಿಲು ತೆರೆಯುವ ದಿನಾಂಕವನ್ನು ಪ್ರಕಟಿಸಲಾಗುತ್ತದೆ. ಚಳಿಗಾಲದಲ್ಲಿ ಕೇದರನಾಥ ದೇಗುಲಕ್ಕೆ ಬಾಗಿಲು ಹಾಕಲಾಗಿರುತ್ತದೆ. ಈ ಸಮಯದಲ್ಲಿ ಓಂಕಾರೇಶ್ವರ ದೇಗುಲದಲ್ಲಿ ಕೇದರನಾಥನಿಗೆ ಪೂಜೆ ಸಲ್ಲಿಸಲಾಗುತ್ತದೆ.

ಇಂದು ಶಿವರಾತ್ರಿ ಪ್ರಯುಕ್ತ ಶ್ರೀ ಬದ್ರಿನಾಥ-ಕೇದರನಾಥ ದೇಗುಲ ಸಮಿತಿ (ಬಿಕೆಟಿಸಿ)ಯು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತ್ತು. ದೇಗುಲವನ್ನು ಹೂಗಳಿಂದ ಅಲಂಕರಿಸಿ ಕೇದರನಾಥ ದೇಗುಲದ ಬಾಗಿಲು ತೆರೆಯುವ ದಿನಾಂಕವನ್ನು ಘೋಷಿಸಲಾಯಿತು.

ಶಿವರಾತ್ರಿ ಪ್ರಯುಕ್ತ ಓಂಕಾರೇಶ್ವರ ದೇವಸ್ಥಾನದಲ್ಲಿ ಇಂದು ಮುಂಜಾನೆಯಿಂದಲೇ ಧಾರ್ಮಿಕ ವಿಧಿವಿಧಾನಗಳು ಆರಂಭವಾದವು. ಆರ್ಚಕರು ಬೆಳಗ್ಗೆ ಜಳಕ ಮಾಡಿ, ದೇವರನ್ನು ಅಲಂಕರಿಸಿ ಗರ್ಭಗುಡಿಯಲ್ಲಿ ಮಹಾಭಿಷೇಕ ಪೂಜೆ ನಡೆಸಿ ಭೋಗ್ ಅರ್ಪಿಸಲಾಯಿತು. ಇದರ ನಂತರ ವೇದಪತಿ ಪಂಚಾಗ್ ಅವರು ಕೇದಾರನಾಥ ಧಾಮದ ಬಾಗಿಲು ತೆರೆಯುವ ದಿನಾಂಕವನ್ನು ಘೋಷಿಸಿದರು.

ಓಂಕಾರೇಶ್ವರ ದೇವಸ್ಥಾನದ ಆವರಣದಲ್ಲಿ ವಿದ್ಯಾಪೀಠದ ವಿದ್ಯಾರ್ಥಿಗಳು, ಕಾರ್ಯಕರ್ತರು ಹಾಗೂ ದೇವಸ್ಥಾನ ಸಮಿತಿಯ ‘ಮಹಿಳಾ ಮಂಗಳ ದಳ’ದವರಿಂದ ಭಜನೆ-ಕೀರ್ತನೆ ಇಂದು ದಿನವಿಡಿ ನಡೆಯಲಿದೆ.

ಈ ಹಿಂದೆ ಬಸಂತ್ ಪಂಚಮಿಯ ಸಂದರ್ಭದಲ್ಲಿ ನರೇಂದ್ರ ನಗರದ ರಾಜಮಹಲ್‌ನಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಸಂಪ್ರದಾಯದಂತೆ ಪ್ರಸಿದ್ಧ ದೇವಾಲಯ ತೆರೆಯುವ ಸಮಯ ಮತ್ತು ದಿನಾಂಕವನ್ನು ನಿರ್ಧರಿಸಲಾಯಿತು. ಶ್ರೀ ಬದರಿನಾಥ (ಬದ್ರಿನಾಥ್)‌ ಧಾಮದ ಬಾಗಿಲು ಮರುದಿನ ಏಪ್ರಿಲ್ 27 ರಂದು ಬೆಳಿಗ್ಗೆ ತೆರೆಯಲಾಗುತ್ತದೆ.

ಕೇದರನಾಥದ ಬಗ್ಗೆ

ಕೇದಾರನಾಥ ಮಂದಿರ (ಕೇದಾರನಾಥ ಮಂದಿರ) ಶಿವನಿಗೆ ಅರ್ಪಿತವಾದ ಹಿಂದೂ ದೇವಾಲಯವಾಗಿದೆ. ಇದು ಭಾರತದ ಉತ್ತರಾಖಂಡ ಕೇದಾರನಾಥದಲ್ಲಿ ಮಂದಕಿನಿ ನದಿಯ ಸಮೀಪವಿರುವ ಗಡ್ವಾಲ್ ಹಿಮಾಲಯನ ವ್ಯಾಪ್ತಿಯಲ್ಲಿದೆ. ತೀವ್ರವಾದ ಹವಾಮಾನದ ಕಾರಣದಿಂದಾಗಿ, ಈ ದೇವಸ್ಥಾನವು ಏಪ್ರಿಲ್ ಮತ್ತು ನವೆಂಬರ್ ತಿಂಗಳಿನೊಳಗೆ ತೆರೆದಿರುತ್ತದೆ (ಕಾರ್ತೀಕ ಪೂರ್ಣಿಮಾ - ಶರತ್ಕಾಲ ಹುಣ್ಣಿಮೆ). ಚಳಿಗಾಲದಲ್ಲಿ, ಕೇದಾರನಾಥ ದೇವಾಲಯದ ವಿಗ್ರಹಗಳು (ದೇವತೆಗಳು) ಉಖಿ ಮಠಕ್ಕೆ ತರಲಾಗುತ್ತದೆ ಮತ್ತು ಆರು ತಿಂಗಳು ಅಲ್ಲಿ ಪೂಜಿಸಲಾಗುತ್ತದೆ. ಶಿವನನ್ನು ಭಗವಾನ್‌ ಕೇದಾರನಾಥ ಎಂದು ಪೂಜಿಸಲಾಗುತ್ತದೆ. ಈ ದೇವಸ್ಥಾನವನ್ನು ನೇರವಾಗಿ ರಸ್ತೆಯ ಮೂಲಕ ತಲುಪಲು ಸಾಧ್ಯವಿಲ್ಲ ಮತ್ತು ಗೌರಿಕುಂಡ ದಿಂದ ಸುಮಾರು ೧೮ ಕಿಲೋಮೀಟರ್ (೧೧ ಮೈಲಿ) ಎತ್ತರದ ಚಾರಣದಿಂದ ತಲುಪಬೇಕು. (ಪೂರಕ ಮಾಹಿತಿ: ವಿಕಿಪೀಡಿಯಾ).

IPL_Entry_Point