Kannada News  /  Nation And-world  /  Mamata Banerjee As Pm Candidate In Lok Sabha Election 2024: On Whether Banerjee Could Be The Country's Next Pm, Amartya Sen Said She Has The Ability But
ಮಮತಾ ಬ್ಯಾನರ್ಜಿ (ಎಡಚಿತ್ರ) ಮತ್ತು ಬಲಚಿತ್ರದಲ್ಲಿ ಅಮರ್ತ್ಯಸೇನ್‌
ಮಮತಾ ಬ್ಯಾನರ್ಜಿ (ಎಡಚಿತ್ರ) ಮತ್ತು ಬಲಚಿತ್ರದಲ್ಲಿ ಅಮರ್ತ್ಯಸೇನ್‌

Mamata Banerjee as PM Candidate: ದೇಶದ ಚುಕ್ಕಾಣಿ ದೀದಿ ಕೈಗೆ ಕೊಡಬಹುದು! ಆದರೆ….

14 January 2023, 16:38 ISTHT Kannada Desk
14 January 2023, 16:38 IST

Lok Sabha election 2024: ದೇಶದ ಮುಂದಿನ ಪ್ರಧಾನಮಂತ್ರಿ ಮಮತಾ ಬ್ಯಾನರ್ಜಿ (Mamata Banerjee as PM Candidate) ಆಗಬಹುದಾ ಅಥವಾ ಪ್ರಧಾನಮಂತ್ರಿಯಾಗುವ ಸಾಮರ್ಥ್ಯ ಮಮತಾ ಬ್ಯಾನರ್ಜಿಗೆ ಇದೆಯೇ? ಎಂಬ ಪ್ರಶ್ನೆಗೆ ದೇಶದ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್‌ ಕೊಟ್ಟ ಉತ್ತರವೇನು?

ದೇಶದ ಮುಂದಿನ ಪ್ರಧಾನಮಂತ್ರಿ ಮಮತಾ ಬ್ಯಾನರ್ಜಿ (Mamata Banerjee as PM Candidate) ಆಗಬಹುದಾ ಅಥವಾ ಪ್ರಧಾನಮಂತ್ರಿಯಾಗುವ ಸಾಮರ್ಥ್ಯ ಮಮತಾ ಬ್ಯಾನರ್ಜಿಗೆ ಇದೆಯೇ? ಎಂಬ ಪ್ರಶ್ನೆಗೆ ದೇಶದ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್‌ ಕೊಟ್ಟ ಉತ್ತರವೇನು?

ಟ್ರೆಂಡಿಂಗ್​ ಸುದ್ದಿ

ಮಮತಾ ಬ್ಯಾನರ್ಜಿಗೆ ದೇಶದ ಪ್ರಧಾನಮಂತ್ರಿಯಾಗುವ ಸಾಮರ್ಥ್ಯ ಇದೆ. ಇಲ್ಲ ಎಂದಲ್ಲ. ಅವರಿಗೆ ಆ ಸಾಮರ್ಥ್ಯ ಖಚಿತವಾಗಿಯೂ ಇದೆ. ಆದರೆ, ಆಕೆ ಬಿಜೆಪಿ ವಿರುದ್ಧದ ಸಾರ್ವಜನಿಕ ನಿರಾಶೆಯನ್ನು ನಗದೀಕರಿಸುವ ಕೆಲಸವನ್ನು ಮಾಡಿಲ್ಲ. ಬಿಜೆಪಿ ವಿರೋಧಿ ಶಕ್ತಿಗಳನ್ನು ಒಗ್ಗೂಡಿಸುವ ಕೆಲಸವನ್ನು ಮಾಡಿಲ್ಲ. ಅದನ್ನು ಮಾಡಿದರೆ ಆಕೆ ಆ ಮಟ್ಟಕ್ಕೆ ಬೆಳೆಯಲು ಸಮರ್ಥರಾಗಿದ್ದಾರೆ ಎಂಬ ಸಂದೇಶ ರವಾನೆಯಾಗುತ್ತದೆ ಎಂದು ಅಮರ್ತ್ಯ ಸೇನ್‌ ವಿವರಿಸಿದ್ದಾರೆ.

ಅದರ ಅರ್ಥ ಆಕೆಗೆ ಸಾಮರ್ಥ್ಯ ಇಲ್ಲ ಎಂದಲ್ಲ. ಅದನ್ನು ಅವರು ಮಾಡಬೇಕು. ಭಾರತದಲ್ಲಿ ಆಗಿರುವ ಫ್ರಾಕ್ಷನಲೈಸೇಷನ್‌ ಅನ್ನು ಕೊನೆಗೊಳಿಸಬೇಕು. ಎಲ್ಲ ಪ್ರಾದೇಶಿಕ ಪಕ್ಷಗಳು ಒಟ್ಟಾಗಿ ಈ ಕೆಲಸ ಮಾಡುವುದು ಸಾಧ್ಯವಿದೆ. ಆದರೆ ಒಗ್ಗೂಡಿಸಬೇಕಾದ ಹೊಣೆಗಾರಿಕೆ ಹೊರುವವರು ಯಾರು ಎಂಬುದು ಸ್ಪಷ್ಟವಾಗಿಲ್ಲ ಎಂದು ಅವರು ಹೇಳಿದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಬಿಜಪಿ ವಿರೋಧಿ ಶಕ್ತಿಗಳು ಒಂದಾಗಬೇಕು ಎಂದು ಟಿಎಂಸಿ, ತೆಲಂಗಾಣ ರಾಷ್ಟ್ರ ಸಮಿತಿ, ಆಮ್‌ ಆದ್ಮಿ ಪಾರ್ಟಿ ನಾಯಕರೆಲ್ಲ ಓಡಾಡಿದರು. ಫೆಡರಲ್‌ ಫ್ರಂಟ್‌ ರೂಪಿಸಿದರು. ಆದರೆ ಚುನಾವಣೆಗೆ ದಿನಗಳಿರುವಾಗ ಕೈ ಚೆಲ್ಲಿ ಕುಳಿತರು.

ಆ ವರ್ಷ ಜನವರಿಯಲ್ಲಿ ಕೋಲ್ಕತ್ತದಲ್ಲಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಬಹುದೊಡ್ಡ ಸಭೆ ನಡೆಯಿತು. ಸಭೆಯಲ್ಲಿ ಕರ್ನಾಟಕದ ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಆಮ್‌ ಆದ್ಮಿ ಪಾರ್ಟಿಯ ಅರವಿಂದ ಕೇಜ್ರವಾಲ್‌, ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌, ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್‌, ಎನ್‌ಸಿಪಿ ನಾಯಕ ಶರದ್‌ ಪವಾರ್, ಜಮ್ಮು- ಕಾಶ್ಮೀರದಿಂದ ಫಾರೂಕ್‌ ಅಬ್ದುಲ್ಲಾ, ಒಮರ್‌ ಅಬ್ದುಲ್ಲಾ, ಅರುಣಾಚಲ ಪ್ರದೇಶದಿಂದ ಗೆಗಾಂಗ್‌ ಅಪಾಂಗ್‌ ಮುಂತಾದ ನಾಯಕರೆಲ್ಲ ಸೇರಿದ್ದರು. ಆದರೂ ಅವರನ್ನೆಲ್ಲ ಒಂದು ಸೂತ್ರದಲ್ಲಿ ಉಳಿಸಿಕೊಳ್ಳುಸುವುದು ಅಂದು ಮಮತಾ ಬ್ಯಾನರ್ಜಿಗೆ ಸಾಧ್ಯವಾಗಿಲ್ಲ.

ಇತರೆ ಗಮನಸೆಳೆಯುವ ಸುದ್ದಿ

Lok Sabha election 2024: ಮುಂದಿನ ಲೋಕಸಭೆ ಚುನಾವಣೆ ಒಂಟಿ ಕುದುರೆ ರೇಸ್‌;ಕಾಂಗ್ರೆಸ್‌ ವೀಕ್‌ ಆಗಿದೆ, ಪ್ರಾದೇಶಿಕ ಪಕ್ಷಗಳ ಪಾತ್ರವೇ ಮುಖ್ಯ!

Lok Sabha election 2024: ಮುಂದಿನ ಲೋಕಸಭೆ ಚುನಾವಣೆ ಎಂಬುದು ಒಂಟಿ ಕುದುರೆ ರೇಸ್‌. ಅಲ್ಲಿ ಬಿಜೆಪಿ ಮಾತ್ರವೇ ಫೇವರಿಟ್‌. ಅದುವೇ ಗೆಲ್ಲುವ ಕುದುರೆ. ಕಾಂಗ್ರೆಸ್‌ ಪಕ್ಷ ಬಹಳ ವೀಕ್‌ ಆಗಿದೆ. ಆದ್ದರಿಂದ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳ ಪಾತ್ರವೇ ಬಹಳ ಮುಖ್ಯ. ಬಿಜೆಪಿಯ ಸ್ಥಾನವನ್ನು ತುಂಬಬಲ್ಲ ಪಕ್ಷ ಇನ್ನೊಂದಿಲ್ಲ ಎಂಬ ನಿರ್ಧಾರಕ್ಕೆ ಬರುವುದು ತಪ್ಪಾಗಬಹುದು ಎಂದು ನಾನು ಭಾವಿಸುತ್ತೇನೆ. ಉಳಿದ ಪಕ್ಷಗಳನ್ನು ಮೀರಿ ಬಿಜೆಪಿ ತನಗೊಂದು ದೃಷ್ಟಿಕೋನವಿದೆ ಎಂಬುದನ್ನು ಸ್ಪಷ್ಟವಾಗಿ ಸಾರಿ ಹೇಳಿದೆ ಎಂದು ಪ್ರಸಿದ್ಧ ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್‌ ಹೇಳಿದ್ದಾರೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ