ಕನ್ನಡ ಸುದ್ದಿ  /  Nation And-world  /  Mazagon Dock Recruitment: Apply For 1041 Non-executive Posts, Know How To Apply

Mazagon Dock recruitment: ಮಾಝಗಾಂವ್‌ ಹಡಗುಕಟ್ಟೆಯಲ್ಲಿ 1041 ನಾನ್‌ ಎಕ್ಸಿಕ್ಯುಟಿವ್‌ ಹುದ್ದೆಗಳಿಗೆ ನೇಮಕ, ತಡಮಾಡದೆ ಅರ್ಜಿ ಸಲ್ಲಿಸಿ

ದೇಶದ ಪ್ರಮುಖ ಹಡಗು ನಿರ್ಮಾಣ ಸಂಸ್ಥೆಯಾದ ಮಾಝಗಾಂವ್‌ ಡಾಕ್‌ ಶಿಪ್‌ಬಿಲ್ಡರ್ಸ್‌ ಲಿಮಿಟೆಡ್‌ (Mazagon Dock Shipbuilders Limited)ನಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ. ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವ ಪ್ರಕ್ರಿಯೆ, ವಯೋಮಿತಿ, ವಿದ್ಯಾರ್ಹತೆ, ಅರ್ಜಿ ಸಲ್ಲಿಸಲು ಕೊನೆಯ ದಿನ ಸೇರಿದಂತೆ ಪ್ರಮುಖ ಮಾಹಿತಿಗಳನ್ನು ಈ ಮುಂದೆ ನೀಡಲಾಗಿದೆ.

ಮಾಝಗಾಂವ್‌ ಹಡಗುಕಟ್ಟೆಯಲ್ಲಿ 1041 ನಾನ್‌ ಎಕ್ಸಿಕ್ಯುಟಿವ್‌ ಹುದ್ದೆಗಳಿಗೆ ನೇಮಕ (PTI Photo)(PTI09_11_2022_000244A)
ಮಾಝಗಾಂವ್‌ ಹಡಗುಕಟ್ಟೆಯಲ್ಲಿ 1041 ನಾನ್‌ ಎಕ್ಸಿಕ್ಯುಟಿವ್‌ ಹುದ್ದೆಗಳಿಗೆ ನೇಮಕ (PTI Photo)(PTI09_11_2022_000244A) (PTI)

ದೇಶದ ಪ್ರಮುಖ ಹಡಗು ನಿರ್ಮಾಣ ಸಂಸ್ಥೆಯಾದ ಮಾಝಗಾಂವ್‌ ಡಾಕ್‌ ಶಿಪ್‌ಬಿಲ್ಡರ್ಸ್‌ ಲಿಮಿಟೆಡ್‌ (Mazagon Dock Shipbuilders Limited)ನಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ. ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವ ಪ್ರಕ್ರಿಯೆ, ವಯೋಮಿತಿ, ವಿದ್ಯಾರ್ಹತೆ, ಅರ್ಜಿ ಸಲ್ಲಿಸಲು ಕೊನೆಯ ದಿನ ಸೇರಿದಂತೆ ಪ್ರಮುಖ ಮಾಹಿತಿಗಳನ್ನು ಈ ಮುಂದೆ ನೀಡಲಾಗಿದೆ.

ಒಟ್ಟು 1041 ನಾನ್‌ ಎಕ್ಸಿಕ್ಯುಟಿವ್‌ ಹುದ್ದೆಗಳಿವೆ. ಇವು ಗುತ್ತಿಗೆ ಆಧರಿತ ಹುದ್ದೆಗಳಾಗಿದ್ದು, ಕಾಂಟ್ರಾಕ್ಟ್‌ ಅವಧಿ 3 ವರ್ಷಗಳಾಗಿರುತ್ತವೆ. ಈ ಅವಧಿಯನ್ನು ಗರಿಷ್ಠ 2 ವರ್ಷ ವಿಸ್ತರಿಸಲು ಅವಕಾಶವಿರುತ್ತದೆ. ಆಸಕ್ತ ಅಭ್ಯರ್ಥಿಗಳು ಮಾಝಗಾಂವ್‌ ಡಾಕ್‌ ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಸೆಪ್ಟೆಂಬರ್‌ 30 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಕಾರ್ಪೆಂಟರ್‌, ಡ್ರೈವರ್‌, ಮೆಷಿನಿಸ್ಟ್‌, ಸ್ಟೋರ್‌ ಕೀಪರ್ಸ್‌, ವೆಲ್ಡರ್ಸ್‌, ಫಿಟ್ಟರ್ಸ್‌, ಸ್ಟ್ರಕ್ಚರಲ್‌ ಫ್ಯಾಬ್ರಿಕೇಟರ್‌, ಎಲೆಕ್ಟ್ರಿಷಿಯನ್‌, ಪೇಂಟರ್ಸ್‌, ಗ್ಯಾಸ್‌ ಕಟ್ಟರ್ಸ್‌ ಇತ್ಯಾದಿ 1041 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಮತ್ತು ಗರಿಷ್ಠ 38 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ವಯೋಮಿತಿಯಲ್ಲಿ ಸರಕಾರದ ನಿಯಮಗಳಂತೆ ವಿವಿಧ ಕೆಟಗರಿಯ ಅಭ್ಯರ್ಥಿಗಳಿಗೆ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಟ್ರೇಡ್‌ ಟೆಸ್ಟ್‌/ ಸ್ಕಿಲ್‌ ಟೆಸ್ಟ್‌ ಬಳಿಕ ದಾಖಲೆ ಪರಿಶೀಲನೆ ನಡೆಯುತ್ತದೆ. ಲಿಖಿತ ಪರೀಕ್ಷೆಯು ನವೆಂಬರ್‌ 5,2022ರಂದು ನಡೆಯಲಿದೆ. ಎಂಡಿಎಲ್‌ ವೆಬ್‌ಸೈಟ್‌ನಲ್ಲಿ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದವರ ಮಾಹಿತಿಯನ್ನು ಅಕ್ಟೋಬರ್‌ 15ರಂದು ಪ್ರಕಟಿಸಲಾಗುತ್ತದೆ.

ಅರ್ಜಿ ಶುಲ್ಕ 100 ರೂ. ನಿಗದಿಪಡಿಸಲಾಗಿದೆ. ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಡಿ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್‌ ಲಿಂಕ್‌: https://mazagondock.in/

IPL_Entry_Point

ವಿಭಾಗ