ಕನ್ನಡ ಸುದ್ದಿ  /  Nation And-world  /  Mercedes Benz India To Hike Car Prices Up To 5 Per Cent In Next Year

Mercedes Benz: ಮರ್ಸಿಡಿಸ್‌ ಬೆಂಝ್‌ ಕಾರು ಕೊಳ್ಳುವ ಇರಾದೆ ಇದೆಯಾ?: ಬೆಲೆ ಹೆಚ್ಚಳದ ಮಾಹಿತಿ ಗೊತ್ತಿದೆಯಾ?

ವಿಶ್ವದ ಪ್ರತಿಷ್ಠಿತ ಐಷಾರಾಮಿ ಕಾರು ತಯಾರಕ ಸಂಸ್ಥೆ ಮರ್ಸಿಡಿಸ್ ಬೆಂಝ್‌, ತನ್ನ ಎಲ್ಲಾ ಮಾದರಿಯ ಕಾರುಗಳ ಬೆಲೆಯನ್ನು ಹೆಚ್ಚಿಸುವ ನಿರ್ಣಯ ಪ್ರಕಟಿಸಿದೆ. ಮರ್ಸಿಡಿಸ್‌ ಬೆಂಝ್‌ನ ಎಲ್ಲಾ ಕಾರುಗಳ ಮೇಲೆ ಶೇ.5 ರವರೆಗೆ ಬೆಲೆ ಹೆಚ್ಚಳವಾಗಲಿದ್ದು, ಹೊಸ ಪರಿಷ್ಕರಣೆಯು ಜನವರಿ 1, 2023 ರಿಂದ ಜಾರಿಗೆ ಬರಲಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

ಮರ್ಸಿಡಿಸ್‌ ಬೆಂಝ್
ಮರ್ಸಿಡಿಸ್‌ ಬೆಂಝ್ (AFP)

ನವದೆಹಲಿ: ವಿಶ್ವದ ಪ್ರತಿಷ್ಠಿತ ಐಷಾರಾಮಿ ಕಾರು ತಯಾರಕ ಸಂಸ್ಥೆ ಮರ್ಸಿಡಿಸ್ ಬೆಂಝ್‌, ತನ್ನ ಎಲ್ಲಾ ಮಾದರಿಯ ಕಾರುಗಳ ಬೆಲೆಯನ್ನು ಹೆಚ್ಚಿಸುವ ನಿರ್ಣಯ ಪ್ರಕಟಿಸಿದೆ. ಮರ್ಸಿಡಿಸ್‌ ಬೆಂಝ್‌ನ ಎಲ್ಲಾ ಕಾರುಗಳ ಮೇಲೆ ಶೇ.5 ರವರೆಗೆ ಬೆಲೆ ಹೆಚ್ಚಳವಾಗಲಿದ್ದು, ಹೊಸ ಪರಿಷ್ಕರಣೆಯು ಜನವರಿ 1, 2023 ರಿಂದ ಜಾರಿಗೆ ಬರಲಿದೆ.

ಇನ್‌ಪುಟ್ ವೆಚ್ಚಗಳಲ್ಲಿ ನಿರಂತರ ಹೆಚ್ಚಳ ಮತ್ತು ಹೆಚ್ಚಿದ ಲಾಜಿಸ್ಟಿಕ್ಸ್ ವೆಚ್ಚಗಳಿಂದಾಗಿ, ಎಲ್ಲಾ ಮಾದರಿಯ ಕಾರುಗಳ ಬೆಲೆಯನ್ನು ಹೆಚ್ಚಿಸುವ ನಿರ್ಧಾರ ಕೈಗೊಂಡಿದ್ದಾಗಿ ಮರ್ಸಿಡಿಸ್‌ ಬೆಂಝ್‌ ಸ್ಪಷ್ಟಪಡಿಸಿದೆ.

ಕಂಪನಿಯ ಒಟ್ಟಾರೆ ಕಾರ್ಯಾಚರಣೆಯ ವೆಚ್ಚಗಳ ಮೇಲೆ ಗಮನಾರ್ಹ ಒತ್ತಡ ಬೀಳುತ್ತಿದ್ದು, ಇದನ್ನು ಸರಿದೂಗಿಸಲು ಬೆಲೆ ಏರಿಕೆ ಅನಿವಾರ್ಯ ಎಂದು ಮರ್ಸಿಡಿಸ್‌ ಬೆಂಝ್‌ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಲೆ ಏರಿಕೆಯು ಮರ್ಸಿಡಿಸ್‌ ಬೆಂಜ್‌ನ ಹಲವು ಶ್ರೇಣಿಗಳ ಕಾರುಗಳಾದ GLA ಗೆ 1,50,000 ರೂ., S350d ಗೆ 4.5 ಲಕ್ಷ ರೂ. ಮತ್ತು ಟಾಪ್-ಎಂಡ್ Mercedes–Maybach S580 ಗೆ 7 ಲಕ್ಷ ರೂ.ವರೆಗೆ ಬೆಲೆ ಏರಿಸಲಾಗುವುದು ಎಂದು ಕಂಪನಿಯು ತಿಳಿಸಿದೆ.

ಕೇವಲ ಮರ್ಸಿಡಿಸ್‌ ಬೆಂಝ್‌ ಮಾತ್ರವಲ್ಲದೇ, ಬಹುತೇಕ ಐಷಾರಾಮಿ ಕಾರು ಉತ್ಪಾದಕ ಕಂಪನಿಗಳು, ತ್ರೈಮಾಸಿಕದಲ್ಲಿ ತಮ್ಮ ಎಲ್ಲಾ ಮಾದರಿಯ ಕಾರುಗಳ ಬೆಲೆಯನ್ನು ಹೆಚ್ಚಿಸುವ ಕುರಿತು ಚಿಂತಿಸುತ್ತಿವೆ. ಇನ್‌ಪುಟ್ ವೆಚ್ಚಗಳಲ್ಲಿ ನಿರಂತರ ಹೆಚ್ಚಳ ಮತ್ತು ಹೆಚ್ಚಿದ ಲಾಜಿಸ್ಟಿಕ್ಸ್ ವೆಚ್ಚ, ಬೆಲೆ ಏರಿಕೆಯ ಅನಿವಾರ್ಯತೆಯನ್ನು ಸೃಷ್ಟಿಸಿದೆ ಎಂದು ಕಾರು ತಯಾರಕ ಕಂಪನಿಗಳು ಹೇಳುತ್ತಿವೆ.

ಮರ್ಸಿಡಿಸ್‌ ಬೆಂಝ್ ಭಾರತದಲ್ಲಿ ಐಷಾರಾಮಿ ಆಟೋಮೋಟಿವ್ ಉದ್ಯಮದಲ್ಲಿ‌, ಕೆಲವು ಹೊಸ ಮಾನದಂಡಗಳನ್ನು ರಚಿಸುತ್ತಿದೆ. ವಿವೇಚನಾಶೀಲ ಗ್ರಾಹಕರಿಗೆ ವಿಶ್ವ ದರ್ಜೆಯ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ಪರಿಚಯಿಸುತ್ತಿದೆ. ಆದಾಗ್ಯೂ, ನಮಗೆ ಮತ್ತು ನಮ್ಮ ಫ್ರ್ಯಾಂಚೈಸ್ ಪಾಲುದಾರರಿಗೆ, ಸುಸ್ಥಿರ ಮತ್ತು ಲಾಭದಾಯಕ ವ್ಯವಹಾರವನ್ನು ನಡೆಸಲು ನಾವು ಬದ್ಧರಾಗಿರಬೇಕಾಗುತ್ತದೆ. ಇದೇ ಕಾರಣಕ್ಕೆ ಬೆಲೆ ಏರಿಕೆಯ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮರ್ಸಿಡಿಸ್‌ ಬೆಂಝ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಾರ್ಟಿನ್ ಶ್ವೆಂಕ್ ‌ ಹೇಳಿದ್ದಾರೆ.

ಏರುತ್ತಿರುವ ಹಣದುಬ್ಬರದ ವೆಚ್ಚದ ಒತ್ತಡವನ್ನು ಸರಿದೂಗಿಸಲು, ಬೆಲೆ ಏರಿಕೆ ಅಗತ್ಯವಿದ್ದು, ಗ್ರಾಹಕರ ಮನಸ್ಥಿತಿ ಗಮನದಲ್ಲಿಟ್ಟುಕೊಂಡೇ ಬೆಲೆ ಏರಿಕೆ ಪ್ರಮಾಣವನ್ನು ನಿರ್ಧಾರ ಮಾಡಲಾಗಿದೆ ಎಂದು ಮಾರ್ಟಿನ್ ಶ್ವೆಂಕ್ ಸ್ಪಷ್ಟಪಡಿಸಿದ್ದಾರೆ.

ಇಂದಿನ ಪ್ರಮುಖ ಸುದ್ದಿಗಳು

Assembly elections: ಗುಜರಾತ್‌ ಮತ್ತು ಹಿಮಾಚಲ ಪ್ರದೇಶಗಳಿಗೆ ಇಂದು ನಿರ್ಣಾಯಕ ದಿನ; ಎಂಟು ಗಂಟೆಗೆ ಮತ ಎಣಿಕೆ ಶುರು

ತಿಂಗಳುಗಳ ಕಾಲದ ಬಿರುಸಿನ ಪ್ರಚಾರದ ನಂತರ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ನಿರ್ಣಾಯಕ ವಿಧಾನಸಭಾ ಚುನಾವಣೆಗಳು ಮತ್ತು ಐದು ರಾಜ್ಯಗಳಾದ್ಯಂತ ಒಂದು ಲೋಕಸಭೆ ಮತ್ತು ಆರು ವಿಧಾನಸಭಾ ಉಪಚುನಾವಣೆಗಳ ಫಲಿತಾಂಶಗಳು ಗುರುವಾರ ಪ್ರಕಟಗೊಳ್ಳಲಿವೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಶುರುವಾಗಲಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

Gujarat Assembly election 2022 results: ಗುಜರಾತ್‌ ಚುನಾವಣಾ ಫಲಿತಾಂಶವನ್ನು ಇಸಿಐ ವೆಬ್‌ನಲ್ಲಿ ನಿಖರವಾಗಿ ಗಮನಿಸುವುದು ಹೇಗೆ?

ಈ ದಿನವೇ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭ. ಸಂಜೆಯೊಳಗೆ ಅಂತಿಮ ಫಲಿತಾಂಶ ಪ್ರಕಟವಾಗಲಿದೆ. ಚುನಾವಣಾ ಆಯೋಗದ ವೆಬ್‌ನಲ್ಲಿ ಮತ ಎಣಿಕೆಯನ್ನು ನಿಖರವಾಗಿ ಟ್ರ್ಯಾಕ್‌ ಮಾಡುವುದು ಹೇಗೆ (How to track accurate Gujarat Election 2022 cote counting updates) ಎಂಬುದರ ವಿವರ ಇಲ್ಲಿದೆ ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

IPL_Entry_Point