ಕನ್ನಡ ಸುದ್ದಿ  /  Nation And-world  /  Mercedes Set To Invest Billions In E-vehicles Plants

Mercedes e-vehicles: ಮರ್ಸಿಡಿಸ್‌ ಎಲೆಕ್ಟ್ರಿಕ್‌ ವಾಹನಗಳಿಗೆ ಸ್ವಾಗತ, ಇ-ವಾಹನ ಘಟಕಗಳಿಗಾಗಿ ಹಲವು ಶತಕೋಟಿ ಡಾಲರ್‌ ಹೂಡಿಕೆ

ಐಷಾರಾಮಿ ಕಾರು ತಯಾರಿಕಾ ಕಂಪನಿಯಾದ ಮರ್ಸಿಡಿಸ್‌ ಬೆಂಝ್‌ ಎಲೆಕ್ಟ್ರಿಕ್‌ ವಾಹನ ಕ್ಷೇತ್ರದಲ್ಲಿ ಬೃಹತ್‌ ಹೂಡಿಕೆ ಮಾಡಲು ಮುಂದಾಗಿದೆ. ಈ ಮೂಲಕ ಪರಿಸರಕ್ಕೆ ಹೊರಸೂಸುವ ಕಾರ್ಬನ್‌ ಡೈಆಕ್ಸೈಡ್‌ ತಗ್ಗಿಸಲು ಮುಂದಾಗಿದೆ.

Mercedes e-vehicles: ಮರ್ಸಿಡಿಸ್‌ ಎಲೆಕ್ಟ್ರಿಕ್‌ ವಾಹನಗಳಿಗೆ ಸ್ವಾಗತ,  ಇ-ವಾಹನ ಘಟಕಗಳಿಗಾಗಿ ಹಲವು ಶತಕೋಟಿ ಡಾಲರ್‌ ಹೂಡಿಕೆ
Mercedes e-vehicles: ಮರ್ಸಿಡಿಸ್‌ ಎಲೆಕ್ಟ್ರಿಕ್‌ ವಾಹನಗಳಿಗೆ ಸ್ವಾಗತ, ಇ-ವಾಹನ ಘಟಕಗಳಿಗಾಗಿ ಹಲವು ಶತಕೋಟಿ ಡಾಲರ್‌ ಹೂಡಿಕೆ

ಮುಂದಿನ ದಿನಗಳಲ್ಲಿ ಜಗತ್ತಿನಾದ್ಯಂತ ಇ-ವಾಹನಗಳು ಗಮನಾರ್ಹವಾಗಿ ಹೆಚ್ಚಾಗಲಿದ್ದು, ಪೆಟ್ರೋಲ್‌, ಡೀಸೆಲ್‌ ವಾಹನಗಳು ರಸ್ತೆಯಿಂದ ಸಂಪೂರ್ಣವಾಗಿ ಮರೆಯಾಗಲಿವೆ. ಇದಕ್ಕೆ ತಕ್ಕಂತೆ ಹಲವು ಕಂಪನಿಗಳು ಎಲೆಕ್ಟ್ರಿಕ್‌ ವಾಹನ ನಿರ್ಮಾಣಕ್ಕಾಗಿ ಬೃಹತ್‌ ಹೂಡಿಕೆ ಮಾಡಲು ಆರಂಭಿಸಿವೆ. ಇದೀಗ ಐಷಾರಾಮಿ ಕಾರು ತಯಾರಿಕಾ ಕಂಪನಿಯಾದ ಮರ್ಸಿಡಿಸ್‌ ಬೆಂಝ್‌ ಎಲೆಕ್ಟ್ರಿಕ್‌ ವಾಹನ ಕ್ಷೇತ್ರದಲ್ಲಿ ಬೃಹತ್‌ ಹೂಡಿಕೆ ಮಾಡಲು ಮುಂದಾಗಿದೆ. ಈ ಮೂಲಕ ಪರಿಸರಕ್ಕೆ ಹೊರಸೂಸುವ ಕಾರ್ಬನ್‌ ಡೈಆಕ್ಸೈಡ್‌ ತಗ್ಗಿಸಲು ಮುಂದಾಗಿದೆ.

ಈ ದಶಕದ ಅಂತ್ಯದ ವೇಳೆಗೆ ಈಗಿನ ಸಿಒ2 ಹೊರಸೂಸುವಿಕೆ ಪ್ರಮಾಣವನ್ನು ಅರ್ಧದಷ್ಟು ತಗ್ಗಿಸಲು ಯೋಜಿಸಿದೆ. ಇದೇ ಸಮಯದಲ್ಲಿ ಪೆಟ್ರೋಲ್‌ ಡೀಸೆಲ್‌ ಇತ್ಯಾದಿ ಪಳೆಯುಳಿಕೆ ಇಂಧನಗಳಿಂದ ಸಾಗುವ ವಾಹನಗಳ ಮಾರಾಟವನ್ನು ಕೊನೆಗೊಳಿಸಲು ಉದ್ದೇಶಿಸಿದೆ. 2035ರ ನಂತರ ಇಂತಹ ಇಂಧನಗಳ ವಾಹನಗಳು ಇರಬಾರದು ಎಂದು ಕಾನೂನು ರೂಪಿಸುತ್ತಿದೆ.

ಈ ದಶಕದ ಅಂತ್ಯದ ವೇಳೆಗೆ ಎಲೆಕ್ಟ್ರಿಕ್‌ ಕಾರು ಸಿದ್ಧಪಡಿಸಲು ಕಂಪನಿ ಸಿದ್ಧವಾಗಲಿದೆ ಎಂದು ಮರ್ಸಿಡಿಸ್‌ ತಿಳಿಸಿದೆ. ಇದಕ್ಕಾಗಿ ಹಲವು ಬಿಲಿಯನ್‌ ಡಾಲರ್‌ಗಳನ್ನು ಹೂಡಿಕೆ ಮಾಡಲಿದೆ.

"ವಿವಿಧ ದೇಶಗಳಲ್ಲಿ ಎಲೆಕ್ಟ್ರಿಕ್‌ ಘಟಕ ಸ್ಥಾಪನೆಗೆ ಹಲವು ಬಿಲಿಯನ್‌ ಡಾಲರ್‌ ಮೊತ್ತವನ್ನು ಹೂಡಿಕೆ ಮಾಡುತ್ತಿದ್ದೇವೆ" ಎಂದು ಮರ್ಸಿಡಿಸ್‌ನ ಪ್ರೊಡಕ್ಷನ್‌ ಮ್ಯಾನೇಜರ್‌ ಜೋರ್ಗ್‌ ಬರ್ಜರ್‌ ಹೇಳಿದ್ದಾರೆ. ಬೀಜಿಂಗ್, ಜರ್ಮನಿಯ ರಾಸ್ಟಾಟ್ ಮತ್ತು ಹಂಗೇರಿಯ ಕೆಕ್ಸ್‌ಕೆಮೆಟ್‌ನಲ್ಲಿರುವ ಸ್ಥಾವರಗಳಿಗೆ ಕಂಪನಿಯು ಹೂಡಿಕೆ ಮಾಡಲಿದೆ.

ಕಾರು ತಯಾರಕರು ಮುಂಬರುವ ತಿಂಗಳುಗಳಲ್ಲಿ ರಾಸ್ಟಾಟ್ ಸ್ಥಾವರದಲ್ಲಿ ಕೆಲಸವನ್ನು ಪ್ರಾರಂಭಿಸುತ್ತಾರೆ. 2024 ರಿಂದ ಸಣ್ಣ ಎಲೆಕ್ಟ್ರಿಕ್‌ ಕಾರುಗಳ ಮೊದಲ ಮಾದರಿಯನ್ನು ಉತ್ಪಾದಿಸಲು ಆರಂಭಿಸುತ್ತಾರೆ ಎಂದು ಬರ್ಜರ್‌ ಹೇಳಿದ್ದಾರೆ.

2035ರ ಬಳಿಕ ಮಾರಾಟವಾಗುವ ಎಲ್ಲಾ ಹೊಸ ಕಾರುಗಳು ಶೂನ್ಯ ಇಂಗಾಲದ ಡೈಆಕ್ಸೈಡ್‌ ಹೊರಸೂಸುವಿಕೆ ಹೊಂದಿರಬೇಕು. ಇದರಿಂದಾಗಿ ಪೆಟ್ರೋಲ್‌, ಡೀಸೆಲ್‌ನಂತಹ ಪಳೆಯುಳಿಕೆ ಇಂಧನ ಚಾಲಿತ ಕಾರುಗಳನ್ನು ಮಾರಾಟ ಮಾಡುವುದು ಸಾಧ್ಯವಾಗದು.

ಜರ್ಮನಿ ಸೇರಿದಂತೆ ಐರೋಪ್ಯ ಒಕ್ಕೂಟದ ಪ್ರಮುಖ ದೇಶಗಳು ಈ ಹಿಂದೆ ಈ ನಿಯಮಕ್ಕೆ ಬೆಂಬಲ ಸೂಚಿಸಿದ್ದವು. ಈ ನಿಯಮವು ಇಂಟರ್ನಲ್‌ ಕಂಬಸ್ಟನ್‌ ಎಂಜಿನ್‌ಗಳಿಗೆ ನಿಷೇಧ ಹೇರಿರಲಿಲ್ಲ. ಹೀಗಾಗಿ ಬೆಂಬಲಿಸಿದ್ದವು. ಆದರೆ, ಇದೀಗ ಎಲ್ಲಾ ಕಾರುಗಳು ಇಫ್ಯೂಯೆಲ್‌ ಚಾಲಿತವಾಗಿರಬೇಕು ಎನ್ನುವ ನಿಯಮವನ್ನು ನೋಡಿ ಜರ್ಮನಿ ಕೊನೆಯ ಕ್ಷಣದಲ್ಲಿ ವಿರೋಧ ವ್ಯಕ್ತಪಡಿಸಿದೆ.

2035ರ ನಂತರ ಕಾರುಗಳು ಇ-ಇಂಧನದ ಮೂಲಕ ಚಾಲನೆಗೊಳ್ಳುವುದಿದ್ದರೆ ಅಂತಹ ಇಂಟರ್ನಲ್‌ ಕಂಬಸ್ಟನ್‌ ಎಂಜಿನ್‌ಗಳ ವಾಹನಗಳಿಗೆ ಅವಕಾಶ ನೀಡಬೇಕು ಎನ್ನುವುದು ಜರ್ಮನ್‌ ಮತ್ತು ಇಟಲಿಯ ಬೇಡಿಕೆಯಾಗಿದೆ. ಆದರೆ, ಐರೋಪ್ಯ ಕಾನೂನು ಇಂಟರ್ನಲ್‌ ಕಂಬಸ್ಟನ್‌ ಎಂಜಿನ್‌ ಚಾಲಿತ ವಾಹನಗಳಿಗೆ ನಿಷೇಧ ಹೇರಿದರೆ ಇಂತಹ ಇ-ಇಂಧನ ವಾಹನಗಳಿಗೆ ಅವಕಾಶ ದೊರಕದು. ಇ-ಇಂಧನ ಚಾಲಿತ ಇಂಟರ್ನಲ್‌ ಕಂಬಸ್ಟನ್‌ ಎಂಜಿನ್‌ ಚಾಲಿತ ವಾಹನಗಳನ್ನು 2035ರ ಬಳಿಕವೂ ಬಳಸಬಹುದು ಎಂದು ಸ್ಪಷ್ಟವಾಗಿ ತಿಳಿಸಿದರೆ ಮಾತ್ರ ಈ ಕಾನೂನಿಗೆ ಸಮ್ಮತಿ ನೀಡುವುದಾಗಿ ಜರ್ಮನಿ ಮತ್ತು ಇಟಲಿ ತಿಳಿಸಿವೆ. ಈ ಕುರಿತ ವಿಶೇಷ ವರದಿ ಇಲ್ಲಿದೆ.

IPL_Entry_Point