ಮೈಕ್ರೊ ಫೈನಾನ್ಸ್ ಸಂಬಂಧಿತ ಗ್ರಾಹಕರ ಕುಂದುಕೊರತೆಗಳಿಗಿದೆ ಟೋಲ್‌ ಫ್ರೀ ಸಂಖ್ಯೆ; ಎಂಎಫ್‌ಐಎನ್‌ ಕುರಿತ ಮಾಹಿತಿ ಇಲ್ಲಿದೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮೈಕ್ರೊ ಫೈನಾನ್ಸ್ ಸಂಬಂಧಿತ ಗ್ರಾಹಕರ ಕುಂದುಕೊರತೆಗಳಿಗಿದೆ ಟೋಲ್‌ ಫ್ರೀ ಸಂಖ್ಯೆ; ಎಂಎಫ್‌ಐಎನ್‌ ಕುರಿತ ಮಾಹಿತಿ ಇಲ್ಲಿದೆ

ಮೈಕ್ರೊ ಫೈನಾನ್ಸ್ ಸಂಬಂಧಿತ ಗ್ರಾಹಕರ ಕುಂದುಕೊರತೆಗಳಿಗಿದೆ ಟೋಲ್‌ ಫ್ರೀ ಸಂಖ್ಯೆ; ಎಂಎಫ್‌ಐಎನ್‌ ಕುರಿತ ಮಾಹಿತಿ ಇಲ್ಲಿದೆ

ಎಂಎಫ್‌ಐಎನ್‌ ಬಗ್ಗೆ ಹಲವರಿಗೆ ಮಾಹಿತಿ ಇಲ್ಲ. ಮೈಕ್ರೊ ಫೈನಾನ್ಸ್‌ ಇಂಡಸ್ಟ್ರಿ ನೆಟ್ವರ್ಕ್‌ ಎಂಬುದು ಮೈಕ್ರೊ ಫೈನಾನ್ಸ್‌ಗಳಿಗೆ ಸಂಬಂಧಿಸಿದಂತೆ ಆರ್‌ಬಿಐನಿಂದ ಮಾನ್ಯತೆ ಹೊಂದಿದ ಸ್ವಾನಿಯಂತ್ರಿತ ಸಂಸ್ಥೆಯಾಗಿದೆ. ಬ್ಯಾಂಕ್‌ಗಳು, ಸಣ್ಣ ಹಣಕಾಸು ಬ್ಯಾಂಕ್‌ಗಳು, NBFC-MFIಗಳು ಮತ್ತು NBFCಗಳು ಇದರ ಸದಸ್ಯ ಸಂಸ್ಥೆಗಳು.

ಮೈಕ್ರೊಫೈನಾನ್ಸ್ ಸಂಬಂಧಿತ ಗ್ರಾಹಕರ ಕುಂದುಕೊರತೆಗಳಿಗಿದೆ ಟೋಲ್‌ ಫ್ರೀ ಸಂಖ್ಯೆ; ಇಲ್ಲಿದೆ ವಿವರ
ಮೈಕ್ರೊಫೈನಾನ್ಸ್ ಸಂಬಂಧಿತ ಗ್ರಾಹಕರ ಕುಂದುಕೊರತೆಗಳಿಗಿದೆ ಟೋಲ್‌ ಫ್ರೀ ಸಂಖ್ಯೆ; ಇಲ್ಲಿದೆ ವಿವರ

ರಾಜ್ಯದಲ್ಲಿ ಸದ್ಯ ಹೆಚ್ಚು ಸುದ್ದಿಯಲ್ಲಿರುವುದು ಮೈಕ್ರೊ ಫೈನಾನ್ಸ್ ವಿಚಾರ. ಮೈಕ್ರೊ ಫೈನಾನ್ಸ್‌ನಿಂದ ಸಾಲ ಪಡೆದ ಬಡ ಹಾಗೂ ಮಧ್ಯಮ ವರ್ಗದ ಹಲವು ಜನರು, ಸಾಲ ಮರುಪಾವತಿಗಾಗಿ ಮೈಕ್ರೊ ಫೈನಾನ್ಸ್‌ ಸಿಬ್ಬಂದಿಯಿಂದ ನಿರಂತರ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಸಿಬ್ಬಂದಿ ಕಿರುಕುಳ ತಡೆಯಲಾಗದೆ ರಾಜ್ಯದಲ್ಲಿ ಈಗಾಗಲೇ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೈಕ್ರೊ ಫೈನಾನ್ಸ್‌ ಹಾವಳಿ ನಿಯಂತ್ರಣಕ್ಕೆ ಸರ್ಕಾರ ಕೂಡಾ ಕಾನೂನು ತರಲು ಸಜ್ಜಾಗಿದೆ. ಮೈಕ್ರೊ ಫೈನಾನ್ಸ್‌ನಿಂದ ತೊಂದರೆಗೆ ಒಳಗಾಗಿರುವ ಜನರು, ತಮ್ಮ ಕುಂದುಕೊರತೆಗಳ ಕುರಿತಾಗಿ ದೂರು ನೀಡಬಹುದಾದ ಆರ್‌ಬಿಐ ಮಾನ್ಯತೆ ಹೊಂದಿದ ಸ್ವಾನಿಯಂತ್ರಿತ ಸಂಸ್ಥೆಯೊಂದಿದೆ. ಸಮಸ್ಯೆಗಳ ಕುರಿತಾಗಿ ಮೈಕ್ರೊ ಫೈನಾನ್ಸ್‌ ಇಂಡಸ್ಟ್ರಿ ನೆಟ್ವರ್ಕ್‌ (MFIN) ಟೋಲ್ ಫ್ರೀ ಸಂಖ್ಯೆ 1800 102 1080ಗೆ ಕರೆ ಮಾಡಬಹುದು.

ಎಂಎಫ್‌ಐಎನ್‌ ಬಗ್ಗೆ ಹಲವರಿಗೆ ಮಾಹಿತಿ ಇಲ್ಲ. ಮೈಕ್ರೊ ಫೈನಾನ್ಸ್‌ ಇಂಡಸ್ಟ್ರಿ ನೆಟ್ವರ್ಕ್‌ ಎಂಬುದು ಮೈಕ್ರೊ ಫೈನಾನ್ಸ್‌ಗಳಿಗೆ ಸಂಬಂಧಿಸಿದಂತೆ ಆರ್‌ಬಿಐನಿಂದ ಮಾನ್ಯತೆ ಹೊಂದಿದ ಸ್ವಾನಿಯಂತ್ರಿತ ಸಂಸ್ಥೆಯಾಗಿದೆ. ಬ್ಯಾಂಕ್‌ಗಳು, ಸಣ್ಣ ಹಣಕಾಸು ಬ್ಯಾಂಕ್‌ಗಳು, NBFC-MFIಗಳು ಮತ್ತು NBFCಗಳು ಇದರ ಸದಸ್ಯ ಸಂಸ್ಥೆಗಳು.

ಮೈಕ್ರೊ ಫೈನಾನ್ಸ್‌ ವಿಚಾರವಾಗಿ ಸಾಲಗಾರಮರು ಯಾವುದೇ ಸಮಸ್ಯೆ, ಗೊಂದಲಗಳಿದ್ದಲ್ಲಿ ಮೈಕ್ರೊ ಫೈನಾನ್ಸ್‌ ಇಂಡಸ್ಟ್ರಿ ನೆಟ್ವರ್ಕ್‌ನ (MFIN) ಟೋಲ್‌ ಫ್ರೀ ಸಂಖ್ಯೆಗೆ ಕರೆ ಮಾಡಿ ಹೇಳಬಹುದು. ಎಂಎಫ್‌ಐಎನ್‌ ಹೇಳುವ ಪ್ರಕಾರ, ಸಾಲಗಾರರು ತಮ್ಮ ಕುಂದುಕೊರತೆಗಳ ಬಗ್ಗೆ ಮೊದಲಿಗೆ ಸಾಲದಾತರನ್ನು (ಮೈಕ್ರೊ ಫೈನಾನ್ಸ್‌ ಅಥವಾ ಸಣ್ಣ ಹಣಕಾಸು ಬ್ಯಾಂಕ್‌ಗಳು) ಸಂಪರ್ಕಿಸಬೇಕು. ಒಂದು ವೇಳೆ ಅಲ್ಲಿ ಸಮಾಧಾನಕರ ಪರಿಹಾರ ದೊರಕದಿದ್ದಾಗ ಎಂಎಫ್‌ಐಎನ್‌ ಟೋಲ್‌ ಫ್ರೀ ಸಂಖ್ಯೆಗೆ ಕರೆ ಮಾಡಬಹುದು.

ಮೈಕ್ರೊ ಫೈನಾನ್ಸ್‌ಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ, ಮೈಕ್ರೊ ಫೈನಾನ್ಸ್‌ಹೆಸರನ್ನು ಬಳಸಿ ತಳುಕು ಹಾಕುವ ದಾರಿ ತಪ್ಪಿಸುವ ಸುದ್ದಿಗಳಿಂದ ದೂರ ಇರುವಂತೆ ಸಂಸ್ಥೆ ಮನವಿ ಮಾಡಿದೆ.

MFIN ಸದಸ್ಯರು ಅನುಸರಿಸುವ, ಮೈಕ್ರೊ ಫೈನಾನ್ಸ್‌ ಕುರಿತ ಆರ್‌ಬಿಐ ನಿಯಮಗಳ ಪ್ರಮುಖ ಅಂಶಗಳು

ಮೈಕ್ರೋಫೈನಾನ್ಸ್ ಸಾಲಗಳನ್ನು ಯಾವುದೇ ಮೇಲಾಧಾರ ಅಥವಾ ಅಡಮಾನವಿಲ್ಲದೆ ನೀಡಲಾಗುತ್ತದೆ. ಸಾಲಗಳನ್ನು ವಾರ್ಷಿಕ ಆದಾಯ ರೂ. 3 ಲಕ್ಷಕ್ಕಿಂತ ಕಡಿಮೆ ಇರುವ ಕುಟುಂಬಗಳಿಗೆ ನೀಡಲಾಗುತ್ತದೆ. ಸಾಲಗಳನ್ನು ನೀಡುವಾಗ, MFINನ ಎಲ್ಲಾ ಸದಸ್ಯ ಸಂಸ್ಥೆಗಳು ಗ್ರಾಹಕರ ಕ್ರೆಡಿಟ್ ಬ್ಯೂರೋ ವರದಿಯನ್ನು ಪಡೆದುಕೊಂಡು, ಎರಡು ಪ್ರಮುಖ ಅಂಶಗಳನ್ನು ಖಚಿತಪಡಿಸಿಕೊಳ್ಳುತ್ತವೆ. ಅವುಗಳೇ, ಸಾಲ ಮರುಪಾವತಿಯು ಆದಾಯದ 50 ಪ್ರತಿಶತಕ್ಕಿಂತಕ್ಕಿಂತ ಹೆಚ್ಚಿರಬಾರದು, ಎಲ್ಲಾ ಮೈಕ್ರೋಫೈನಾನ್ಸ್‌ಗಳು ಸಾಲದಾತರಿಂದ ಪಡೆದ ಸಾಲದ ಒಟ್ಟು ಮೊತ್ತವು ರೂ.2 ಲಕ್ಷಕ್ಕಿಂತ ಹೆಚ್ಚಿರಬಾರದು. ಎಲ್ಲಾ ಸಾಲಗಾರರಿಗೆ ಸ್ಥಳೀಯ ಕನ್ನಡ ಭಾಷೆಯಲ್ಲಿ ನಿಯಮಗಳು, ಷರತ್ತುಗಳು ಮತ್ತು ಬಡ್ಡಿ ದರವನ್ನು ವಿವರಿಸುವ ಪತ್ರವನ್ನು ಒದಗಿಸಬೇಕು.

ಸಾಲ ವಸೂಲಾತಿ ಹೇಗೆ?

ಸಾಲಗಾರರು ಮತ್ತು ನಿಯಂತ್ರಿತ ಸಂಸ್ಥೆ (Regulated Entities) ಪರಸ್ಪರ ನಿರ್ಧರಿಸಿ ಗೊತ್ತುಪಡಿಸಿದ ಸ್ಥಳದಲ್ಲಿ ವಸೂಲಾತಿಯನ್ನು ಮಾಡಬೇಕು. ನಿಯಂತ್ರಿತ ಸಂಸ್ಥೆಗಳು ಅಥವಾ ಅದರ ಪ್ರತಿನಿಧಿ, ವಸೂಲಾತಿಗೆ ಯಾವುದೇ ಕಠಿಣ ವಿಧಾನಗಳನ್ನು ಬಳಸಬಾರದು (ಬೆದರಿಕೆ ಅಥವಾ ನಿಂದನೀಯ ಭಾಷೆಯನ್ನು ಬಳಸುವುದು, ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ನಿರಂತರ ಕರೆ ಮಾಡುವುದು ಅಥವಾ ಬೆಳಗ್ಗೆ 9 ಗಂಟೆಯ ಮೊದಲು ಮತ್ತು ಸಂಜೆ 6 ಗಂಟೆಯ ನಂತರ ಕರೆ ಮಾಡುವುದು, ಸಾಲಗಾರರ ಸಂಬಂಧಿಕರು, ಸ್ನೇಹಿತರು ಮತ್ತು ಸಹದ್ಯೋಗಿಗಳನ್ನು ಪೀಡಿಸುವುದು, ಸಾಲಗಾರರು ಅಥವಾ ಅವರ ಕುಟುಂಬದ ಆಸ್ತಿ/ಪ್ರತಿಷ್ಟೆಗಳಿಗೆ ಹಾನಿ ಮಾಡುವುದು, ಹಿಂಸೆ ಅಥವಾ ಅನ್ಯ ರೀತಿಯ ವಿಧಾನಗಳನ್ನು ಬಳಸುವುದು, ಸಾಲದ ಪ್ರಮಾಣದ ಬಗ್ಗೆ ಸಾಲಗಾರನಿಗೆ ತಪ್ಪು ತಿಳುವಳಿಕೆ ನೀಡುವುದು).

ಗ್ರಾಹಕರು, ಎರಡು ಅಥವಾ ಹೆಚ್ಚಿನ ಸಂದರ್ಭಗಳಲ್ಲಿ ಗೊತ್ತುಪಡಿಸಿದ ಸ್ಥಳಕ್ಕೆ ಬರಲು ವಿಫಲರಾದರೆ ಮಾತ್ರ ಗ್ರಾಹಕರ ನಿವಾಸಕ್ಕೆ ಭೇಟಿ ನೀಡಬಹುದು. ಪ್ರತಿಯೊಂದು ನಿಯಂತ್ರಿತ ಸಂಸ್ಥೆಗಳು ವಸೂಲಾತಿ ಸಂಬಂಧಿತ ಕುಂದುಕೊರತೆಗಳ ಪರಿಹಾರಕ್ಕಾಗಿ ಒಂದು ನಿರ್ದಿಷ್ಟ ಕಾರ್ಯವಿಧಾನವನ್ನು ಹೊಂದಿರಬೇಕು. ಸಾಲ ವಿತರಣೆಯ ಸಮಯದಲ್ಲಿ ಈ ಕಾರ್ಯವಿಧಾನದ ವಿವರಗಳನ್ನು ಸಾಲಗಾರರಿಗೆ ಒದಗಿಸಬೇಕು.

ಗ್ರಾಹಕರ ಕುಂದು ಕೊರತೆಗಳಿಗಾಗಿ, MFIN ವಾರದ ಎಲ್ಲಾ ದಿನ ಹಾಗೂ ದಿನದ 24 ಗಂಟೆಯೂ ಟೋಲ್ ಫ್ರೀ ಸಂಖ್ಯೆಯನ್ನು ಸಹ ನಿರ್ವಹಿಸುತ್ತದೆ. ಆ ಟೋಲ್ ಫ್ರೀ ಸಂಖ್ಯೆ -1800 102 1080. ಎಂಫ್‌ಐಎನ್‌ ಪ್ರತಿಯೊಂದು ದೂರನ್ನು ತನಿಖೆ ಮಾಡಿ ಪರಿಹಾರ ಕ್ರಮವನ್ನು ಕೈಗೊಳ್ಳುತ್ತದೆ.

ಎಲ್ಲಾ ಕುಂದುಕೊರತೆಗಳನ್ನು ನಿಯಂತ್ರಿತ ಸಂಸ್ಥೆಗಳು ಅಥವಾ ಸಾಲದಾತ, MFIN ಮತ್ತು RBI ಒಂಬುಡೇನ್ ಒಳಗೊಂಡ ಮೂರು ಹಂತದ ವ್ಯವಸ್ಥೆಯ ಮೂಲಕ ನಿರ್ವಹಿಸಲಾಗುತ್ತದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.