ಕನ್ನಡ ಸುದ್ದಿ  /  Nation And-world  /  Migrant Labourers Attack: Police Book Tamil Nadu Bjp Chief Annamalai For Inciting Violence

Migrant labourers attack: ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಡಿ ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ವಿರುದ್ಧ ಪೊಲೀಸ್‌ ಕೇಸ್‌

ತಮಿಳುನಾಡಿನ ಭಾರತೀಯ ಜನತಾ ಪಕ್ಷದ ಮುಖ್ಯಸ್ಥ ಕೆ. ಅಣ್ಣಾಮಲೈವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಮತ್ತು ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಆರೋಪ ಹೊರೆಸಿ ಕೇಸ್‌ ದಾಖಲಿಸಲಾಗಿದೆ.

Migrant labourers attack: ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಡಿ ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ವಿರುದ್ಧ ಪೊಲೀಸ್‌ ಕೇಸ್‌ (ANI)
Migrant labourers attack: ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಡಿ ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ವಿರುದ್ಧ ಪೊಲೀಸ್‌ ಕೇಸ್‌ (ANI) (HT_PRINT)

ಚೆನ್ನೈ: ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ದಾಳಿ ನಡೆಯುತ್ತಿರುವುದಕ್ಕೆ ಆಡಳಿತಾರೂಢ ಡಿಎಂಕೆ ಪಕ್ಷವನ್ನು ಹೊಣೆಗಾರರನ್ನಾಗಿ ಮಾಡಿದ ಭಾರತೀಯ ಜನತಾ ಪಕ್ಷದ ಮುಖ್ಯಸ್ಥ ಕೆ. ಅಣ್ಣಾಮಲೈ ವಿರುದ್ಧ ಅಲ್ಲಿನ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಇವರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಮತ್ತು ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಆರೋಪ ಹೊರೆಸಿ ಕೇಸ್‌ ದಾಖಲಿಸಿದ್ದಾರೆ.

ತಮಿಳುನಾಡಿನ ಸೈಬರ್ ಕ್ರೈಂ ವಿಭಾಗವು ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಮತ್ತು ಇತರ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದೆ.

ಈ ಘಟನೆಯ ಕುರಿತು ಬಿಹಾರದ ಬಿಜೆಪಿ ಮುಖಂಡನ ವಿರುದ್ಧವೂ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಸಮಸ್ಯೆಯ ಕುರಿತು ಅಣ್ಣಾಮಲೈ ನಿನ್ನೆ ಹೇಳಿಕೆ ಬಿಡುಗಡೆ ಮಾಡಿದ್ದರು. ಮುಖ್ಯಮಂತ್ರಿ ಸ್ಟಾಲಿನ್ ನೇತೃತ್ವದ-ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮತ್ತು ಅದರ ಮೈತ್ರಿ ಪಕ್ಷದ ನಾಯಕರು

ಅಧಿಕಾರಿಗಳ ಪ್ರಕಾರ, ಘಟನೆಯ ಬಗ್ಗೆ ಬಿಜೆಪಿ ಬಿಹಾರ ಟ್ವಿಟರ್ ಖಾತೆದಾರರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಅಣ್ಣಾಮಲೈ ನಿನ್ನೆ ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಸಮಸ್ಯೆಯ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿದರು. ತಮಿಳುನಾಡಿನಲ್ಲಿ ವಲಸಿಗರು ಸುರಕ್ಷಿತವಾಗಿದ್ದಾರೆ, ಆದರೆ, ಮುಖ್ಯಮಂತ್ರಿ ಸ್ಟಾಲಿನ್ ನೇತೃತ್ವದ-ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮತ್ತು ಅದರ ಮೈತ್ರಿ ಪಕ್ಷದ ನಾಯಕರ ದ್ವೇಷವು ಅವರ ವಿರುದ್ಧ ಇದೆ ಎಂದಿದ್ದರು.

ರಾಜ್ಯದಲ್ಲಿ ಬಿಹಾರದ ಜನರ ಮೇಲಿನ ದಾಳಿಯ ಬಗ್ಗೆ ಸುಳ್ಳು ಸುದ್ದಿ ಹರಡುವುದನ್ನು ವಿರೋಧಿಸಿದ ಅವರು, ತಮಿಳರು ಉತ್ತರ ಭಾರತೀಯರ ವಿರುದ್ಧ "ಪ್ರತ್ಯೇಕತೆ" ಮತ್ತು "ನೀಚ ದ್ವೇಷ" ವನ್ನು ಹೊಂದಿರುವುದನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದರು.

"ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲಿನ ದಾಳಿಗಳ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಸುದ್ದಿಗಳು ಹರಡುತ್ತಿರುವುದು ಬೇಸರದ ಸಂಗತಿ. ನಾವು ತಮಿಳು ಜನರು, ಜಗತ್ತನ್ನು ಒಂದೇ ಎಂಬ ಪರಿಕಲ್ಪನೆಯಲ್ಲಿ ನೋಡುತ್ತೇವೆ. ಉತ್ತರದ ವಿರುದ್ಧದ ಪ್ರತ್ಯೇಕತವಾದ ಮತ್ತು ಕೆಟ್ಟ ದ್ವೇಷವನ್ನು ಅನುಮೋದಿಸುವುದಿಲ್ಲ" ಎಂದು ಅಣ್ಣಾಮಲೈ ಅವರು ಸರಣಿ ಟ್ವೀಟ್‌ ಮಾಡಿದ್ದರು.

ಸರಣಿ ಟ್ವೀಟ್‌ನಲ್ಲಿ ತಮಿಳುನಾಡಿನ ಆಡಳಿತರೂಢ ಸರಕಾರದ ವಿರುದ್ಧವೂ ಹರಿಹಾಯ್ದಿದ್ದರು. "ಡಿಎಂಕೆ ಸಂಸದರು ಉತ್ತರ ಭಾರತೀಯರ ವಿರುದ್ಧ ಟೀಕೆ ಮಾಡುತ್ತಾರೆ. ಡಿಎಂಕೆ ಮಂತ್ರಿಯು ಅವರನ್ನು ಪಾನಿಪುರಿವಾಲಾಗಳು ಎಂದು ಕರೆಯುತ್ತಾರೆ. ಇದೆಲ್ಲದರ ಪರಿಣಾಮವಾಗಿ ಇಂತಹ ಸ್ಥಿತಿ ಇಂದು ಉಂಟಾಗಿದೆ" ಎಂದು ಅಣ್ಣಾಮಲೈ ಟ್ವೀಟ್‌ ಮಾಡಿದ್ದರು.

ಜನರು, ಸರ್ಕಾರ ಮತ್ತು ಪೊಲೀಸರು ಡಿಎಂಕೆ ಮತ್ತು ಅವರ ಮೈತ್ರಿ ಪಾಲುದಾರರ ಅಭಿಪ್ರಾಯಗಳನ್ನು ಅನುಮೋದಿಸುವುದಿಲ್ಲ ಎಂದು ಅವರು ಹೇಳಿದರು. ಅಣ್ಣಾಮಲೈ, ಬಿಜೆಪಿ ವಕ್ತಾರ ಪ್ರಶಾಂತ್ ಉಮ್ರಾವ್ ಮತ್ತು ಇಬ್ಬರು ಪತ್ರಕರ್ತರು ಸೇರಿದಂತೆ ನಾಲ್ವರ ವಿರುದ್ಧ ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ದೈನಿಕ್‌ ಭಾಸ್ಕರ್‌ನ ಸಂಪಾದಕರಾದ ಪ್ರಶಾಂತ್‌ ಉಮ್ರಾವ್‌, ಪಟನಾ ಮೂಲದ ಪತ್ರಕರ್ತ, ತನ್ವೀರ್‌ ಪೋಸ್ಟ್‌ ಟ್ವಿಟ್ಟರ್‌ ಹ್ಯಾಂಡಲ್‌ ಮಾಲಿಕ ಮಹಮ್ಮದ್‌ ತನ್ವೀರ್‌, ಶುಭಂ ಶುಕ್ಲಾ ವಿರುದ್ಧ ಬೇರೆಬೇರೆ ಪೊಲೀಸ್‌ ಸ್ಟೇಷನ್‌ಗಳಲ್ಲಿ ದೂರು ದಾಖಲಿಸಲಾಗಿದೆ. ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ದಾಳಿ ನಡೆಯುತ್ತಿದೆ ಎಂದು ಸುಳ್ಳು ಸುದ್ದಿ ಹರಡುವ ಕಾರಣಕ್ಕಾಗಿ ಇವರ ವಿರುದ್ಧ ದೂರು ದಾಖಲಿಸಲಾಗಿದೆ.