Moderna sues Pfizer: ಕೋವಿಡ್ ಲಸಿಕೆ ಫೈಜರ್, ಬಯೊಎನ್‌ಟೆಕ್ ವಿರುದ್ಧ ಮಾಡರ್ನಾ ಕಾನೂನು ಸಮರ ಆರಂಭ
ಕೋವಿಡ್-19 ಲಸಿಕೆ ಅಭಿವೃದ್ಧಿಯಲ್ಲಿ ಪೇಟೆಂಟ್ ಉಲ್ಲಂಘಣೆ ಮಾಡಲಾಗಿದೆ ಎಂದು ತನ್ನ ಪ್ರತಿಸ್ಪರ್ಧಿ ಕಂಪನಿಗಳಾದ ಫೈಜರ್ ಮತ್ತು ಬಯೋಎನ್‌ಟೆಕ್ ವಿರುದ್ಧ ಮಾಡರ್ನಾ ಕಂಪನಿಯು ಮೊಕದ್ದಮೆ ದಾಖಲಿಸಿದೆ. ಫೈಜರ್ ಮತ್ತು ಬಯೋಎನ್‌ಟೆಕ್ ಕೊರೊನಾ ಲಸಿಕೆಗಳು ತನ್ನ ತಂತ್ರಜ್ಞಾನವನ್ನು ಬಳಸಿವೆ ಎಂದು ಮಾಡರ್ನಾ ದೂರು ಸಲ್ಲಿಸಿದೆ.
ನವದೆಹಲಿ: ಕೋವಿಡ್-19 ಲಸಿಕೆ ಅಭಿವೃದ್ಧಿಯಲ್ಲಿ ಪೇಟೆಂಟ್ ಉಲ್ಲಂಘಣೆ ಮಾಡಲಾಗಿದೆ ಎಂದು ತನ್ನ ಪ್ರತಿಸ್ಪರ್ಧಿ ಕಂಪನಿಗಳಾದ ಫೈಜರ್ ಮತ್ತು ಬಯೋಎನ್‌ಟೆಕ್ ವಿರುದ್ಧ ಮಾಡರ್ನಾ ಕಂಪನಿಯು ಮೊಕದ್ದಮೆ ದಾಖಲಿಸಿದೆ. ಫೈಜರ್ ಮತ್ತು ಬಯೋಎನ್‌ಟೆಕ್ ಕೊರೊನಾ ಲಸಿಕೆಗಳು ತನ್ನ ತಂತ್ರಜ್ಞಾನವನ್ನು ಬಳಸಿವೆ ಎಂದು ಮಾಡರ್ನಾ ದೂರು ಸಲ್ಲಿಸಿದೆ.
"ಮಾಡರ್ನಾದ ಎಂಆರ್‌ಎನ್‌ಎ ತಂತ್ರಜ್ಞಾನಕ್ಕೆ ದೊರಕಿರುವ ಪೇಟೆಂಟ್ ಅನ್ನು ಫೈಜರ್ ಮತ್ತು ಬಯೋಎನ್‌ಟೆಕ್ ಕೋವಿಡ್-೧೯ ಲಸಿಕೆಗಳು ಉಲ್ಲಂಘಿಸಿವೆ. ನಮ್ಮ ಈ ಅನನ್ಯ ತಂತ್ರಜ್ಞಾನವು ಮಾಡರ್ನಾದ ಸ್ಪೈಕ್‌ವ್ಯಾಕ್ಸ್ ಲಸಿಕೆ ಅಭಿವೃದ್ಧಿಗೆ ನಿರ್ಣಾಯಕವಾಗಿತ್ತು. ಆದರೆ, ಫೈಜರ್ ಮತ್ತು ಬಯೋಎನ್‌ಟೆಕ್‌ಗಳು ಈ ತಂತ್ರಜ್ಞಾನವನ್ನು ಮಾಡರ್ನಾ ಅನುಮತಿಯಿಲ್ಲದೆ ನಕಲಿಸಿದೆʼʼ ಎಂದು ಈ ಎರಡು ಕಂಪನಿಗಳ ವಿರುದ್ಧ ಮಾಡರ್ನಾ ಕೇಸ್ ದಾಖಲಿಸಿದೆ.
2020ರಲ್ಲಿ ಕೋವಿಡ್-೧೯ ಸಾಂಕ್ರಾಮಿಕ ಉತ್ತುಂಗದಲ್ಲಿದ್ದ ಸಮಯದಲ್ಲಿ ಮಾಡರ್ನಾವು ಕೋವಿಡ್-೧೯ ಸಂಬಂಧಿತ ಪೇಟೆಂಟ್‌ಗಳನ್ನು ಯಾರ ಮೇಲೂ ವಿಧಿಸುವುದಿಲ್ಲ ಎಂದು ತಿಳಿಸಿತ್ತು. ಆದರೆ, ಮಾರ್ಚ್ 2022ರಲ್ಲಿ ಕೊರೊನಾ ವಿರುದ್ಧ ಜಗತ್ತು ಹೋರಾಡುವಲ್ಲಿ ಯಶಸ್ವಿಯಾದಗ ಪೇಟೆಂಟ್‌ಗೆ ಸಂಬಂಧಪಟ್ಟಂತೆ ತನ್ನ ನಿರ್ಣಯಗಳನ್ನು ಬದಲಾಯಿಸಿತ್ತು.
"ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳು ತನ್ನ ಪೇಟೆಂಟ್ ಬಳಸುವುದನ್ನು ನಿರ್ಬಂಧಿಸುವುದಿಲ್ಲ. ಆದರೆ, ಫೈಜರ್ ಮತ್ತು ಬಯೊಎನ್‌ಟೆಕ್‌ನಂತಹ ಕಂಪೊನಿಗಳು ಬೌದ್ಧಿಕ ಆಸ್ತಿ ಹಕ್ಕುಗಳ ಕುರಿತು ಗೌರವ ಹೊಂದಿರುವುದನ್ನು ಕಂಪನಿ ಬಯಸುತ್ತದೆ. ಫೈಜರ್ ಮತ್ತು ಬಯೊಎನ್‌ಟೆಕ್ ಕಂಪನಿಗಳು ಈ ಲಸಿಕೆಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವಾಗ ಪೇಟೆಂಟ್ ಉಲ್ಲಂಘಣೆಯನ್ನು ಗಮನದಲ್ಲಿಟ್ಟುಕೊಳ್ಳಬೇಕಿತ್ತು. ಆದರೆ, ಈ ವಿಷಯದಲ್ಲಿ ಈ ಎರಡು ಕಂಪನಿಗಳು ತಮ್ಮ ಬದ್ಧತೆ ಉಳಿಸಿಕೊಂಡಿಲ್ಲʼʼ ಎಂದು ಮಾಡರ್ನಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಹೀಗಿದ್ದರೂ, ಕಂಪನಿಯು ಫೈಜರ್/ಬಯೊಎನ್‌ಟೆಕ್ ಲಸಿಕೆಗಳನ್ನು ಮಾರುಕಟ್ಟೆಯಿಂದ ತೆಗೆಯಬೇಕೆಂದು ಬಯಸುವುದಿಲ್ಲವೆಂದು ಹೇಳಿದೆ. ಪೇಟೆಂಟ್ ಉಲ್ಲಂಘನೆಗಾಗಿ ನಮಗೆ ನೀಡಬೇಕಾದ ಪಾವತಿಯನ್ನು ಈ ಕಂಪನಿಗಳು ಮಾಡಬೇಕು ಮತ್ತು ಈ ಲಸಿಕೆಗಳ ಬಳಕೆಯನ್ನು ಮುಂದುವರೆಸಬಹುದು ಎಂದು ತಿಳಿಸಿದೆ.
ಎಎಂಸಿ 92 ದೇಶಗಳನ್ನು ಹೊರತುಪಡಿಸಿ ಬೇರೆ ದೇಶಗಳಿಗೆ ಲಸಿಕೆ ಪೂರೈಸಲು ನಮ್ಮಿಂದ ಯಾವುದೇ ಅಡ್ಡಿ ಇಲ್ಲ. ಆದರೆ, ಮಾಡರ್ನಾ ಪೇಟೆಂಟ್ ಹೊಂದಿರುವ ತಂತ್ರಜ್ಞಾನವನ್ನು ಬಳಸುವಾಗ ಫೈಜರ್ ಮತ್ತು ಬಯೊಎನ್‌ಟೆಕ್ ಕಂಪನಿಗಳು ನಿಯಮಗಳನ್ನು ಬಳಸಿಲ್ಲ ಮತ್ತು ಬೌದ್ಧಿಕ ಹಕ್ಕುಗಳನ್ನು ಮರೆತಿವೆ ಎಂದು ಮಾಡರ್ನಾದ ಮುಖ್ಯ ಕಾನೂನು ಅಧಿಕಾರಿ ಶನ್ಮಾನ್ ಥ್ಯಾನ್ ಹೇಳಿದ್ದಾರೆ.