ಮಹಾ ಕುಂಭ ಮೇಳದಲ್ಲಿ 'ಮೊನಾಲಿಸಾ', ರುದ್ರಾಕ್ಷಿ ಮಾರುವ ಯುವತಿ ರಾತ್ರೋರಾತ್ರಿ ಫೇಮಸ್; ಸಹಜ ಸುಂದರಿಯ ಕಣ್ಣುಗಳೇ ಆಕರ್ಷಣೆ, VIDEO
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮಹಾ ಕುಂಭ ಮೇಳದಲ್ಲಿ 'ಮೊನಾಲಿಸಾ', ರುದ್ರಾಕ್ಷಿ ಮಾರುವ ಯುವತಿ ರಾತ್ರೋರಾತ್ರಿ ಫೇಮಸ್; ಸಹಜ ಸುಂದರಿಯ ಕಣ್ಣುಗಳೇ ಆಕರ್ಷಣೆ, Video

ಮಹಾ ಕುಂಭ ಮೇಳದಲ್ಲಿ 'ಮೊನಾಲಿಸಾ', ರುದ್ರಾಕ್ಷಿ ಮಾರುವ ಯುವತಿ ರಾತ್ರೋರಾತ್ರಿ ಫೇಮಸ್; ಸಹಜ ಸುಂದರಿಯ ಕಣ್ಣುಗಳೇ ಆಕರ್ಷಣೆ, VIDEO

Maha Kumbh Mela 2025: ಮಹಾ ಕುಂಭಮೇಳದಲ್ಲಿ ಮಧ್ಯಪ್ರದೇಶದ ಹರ್ಷಾ ರಿಚಾರಿಯಾ ತನ್ನ ಸೌಂದರ್ಯದಿಂದ ಎಲ್ಲರ ಗಮನ ಸೆಳೆದಿದ್ದಳು. ಇದೀಗ ಮಧ್ಯಪ್ರದೇಶದ ಮತ್ತೊಬ್ಬ ಯುವತಿ ತನ್ನ ಸಹಜ ಸೌಂದರ್ಯದಿಂದ ಸಂಚಲನ ಮೂಡಿಸಿದ್ದಾಳೆ. ಆಕೆಯ ಹೆಸರು ಮೊನಾಲಿಸಾ.

ಮಹಾ ಕುಂಭ ಮೇಳದಲ್ಲಿ 'ಮೊನಾಲಿಸಾ', ರುದ್ರಾಕ್ಷಿ ಮಾರುವ ಯುವತಿ ರಾತ್ರೋರಾತ್ರಿ ಫೇಮಸ್; ಸಹಜ ಸುಂದರಿಯ VIDEO ಇಲ್ಲಿದೆ
ಮಹಾ ಕುಂಭ ಮೇಳದಲ್ಲಿ 'ಮೊನಾಲಿಸಾ', ರುದ್ರಾಕ್ಷಿ ಮಾರುವ ಯುವತಿ ರಾತ್ರೋರಾತ್ರಿ ಫೇಮಸ್; ಸಹಜ ಸುಂದರಿಯ VIDEO ಇಲ್ಲಿದೆ

Maha kumbh Mela 2025: ಸಾಟಿ ಇಲ್ಲದ ಸ್ಮೈಲು ನಿನ್ನದು… ಮೊನಾಲಿಸಾ… ಮೊನಾಲಿಸಾ… - ಈ ಹಾಡು ಧ್ಯಾನ್ ಮತ್ತು ಸದಾ ಅಭಿನಯದ ಮೊನಾಲಿಸಾ ಚಿತ್ರದ್ದು. ಹಾಡು ಬಿಡುಗಡೆಯಾಗಿ 21 ವರ್ಷಗಳೇ ಕಳೆದಿದೆ. ಆದರೆ ಈಗ ಸಖತ್ ಟ್ರೆಂಡ್ ಆಗುತ್ತಿದೆ. ಅದಕ್ಕೆ ಕಾರಣ ಈ ಮೊನಾಲಿಸಾ. ನಾವು ಹೇಳಲು ಹೊರಟಿದ್ದು ಲಿಯೋನಾರ್ಡೋ ಡಾವಿಂಚಿಯ ಅತ್ಯುನ್ನತ ಕಲಾಕೃತಿ ಮೊನಾಲಿಸಾಳ ಬಗ್ಗೆ ಅಲ್ಲ. ಮಹಾ ಕುಂಭ ಮೇಳ 2025ರಲ್ಲಿ ಕಂಡ ಸಹಜ ಸುಂದರಿ ಕುರಿತು! ಹೌದು, ಆಕೆಯ ಹೆಸರು ಕೂಡ ಮೊನಾಲಿಸಾ. ರಾತ್ರೋರಾತ್ರಿ ಫೇಮಸ್ ಆಗಿದ್ದಾಳೆ ಈ ರುದ್ರಾಕ್ಷಿ ಮಾರುವ ಯುವತಿ!

ಕಣ್ಣು ಹಾಯಿಸಿದಷ್ಟೂ ಭಕ್ತ ಸಾಗರ, ಸಾಧು-ಸಂತರು, ನಾಗಾ ಸಾಧುಗಳ ಸೇರಿದಂತೆ ಲಕ್ಷಾಂತರ ಭಕ್ತರು ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಸಾಕ್ಷಿಯಾಗಿದ್ದಾರೆ. ಜನವರಿ 13ರಂದು ಮಹಾ ಕುಂಭ ಮೇಳಕ್ಕೆ ಚಾಲನೆ ಸಿಕ್ಕಿದೆ. 12 ವರ್ಷಗಳ ಬಳಿಕ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೆ ದೇಶ-ವಿದೇಶಗಳಿಂದಲೂ ಭಕ್ತರ ದಂಡು ಹರಿದು ಬರುತ್ತಿದೆ. ಮಹಾ ಕುಂಭಮೇಳದ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೆಂಡ್ ಆಗುತ್ತಿವೆ. ಇತ್ತೀಚೆಗಷ್ಟೆ ಬ್ಯೂಟಿಫುಲ್ ಸಾಧ್ವಿ ಹರ್ಷಾ ರಿಚಾರಿಯಾ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. 

ಸಿಕ್ಕಾಪಟ್ಟೆ ಟ್ರೆಂಡ್ ಆಗ್ತಿದ್ದಾಳೆ ಮೊನಾಲಿಸಾ

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಹರ್ಷಾ ರಿಚಾರಿಯಾ ಕುರಿತು ತಿಳಿದುಕೊಳ್ಳಲು ಗೂಗಲ್ ಮಾಡಿದವರ ಸಂಖ್ಯೆಯೂ ಕೆಲವೇ ಗಂಟೆಗಳಲ್ಲಿ ದುಪ್ಪಟ್ಟು ಆಗಿತ್ತು. ಇದರ ನಡುವೆಯೂ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸ್ತಿದೆ ಮತ್ತೊಂದು ವಿಡಿಯೋ. ಫೇಸ್​ಬುಕ್, ಟ್ವಿಟರ್ (ಪ್ರಸ್ತುತ ಎಕ್ಸ್,), ಇನ್​ಸ್ಟಾಗ್ರಾಂ.. ಹೀಗೆ ಯಾವುದೇ ಸಾಮಾಜಿಕ ಪುಟಗಳನ್ನು ತೆರೆದರೂ ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ ಸರ ಮಾರುವ ಯುವತಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಅಷ್ಟು ಅಟ್ರಾಕ್ಷನ್ ಆಗಲು ಪ್ರಮುಖ ಕಾರಣ ಆಕರ್ಷಕ ಕಣ್ಣುಗಳು. ಎಂಥಹವರನ್ನೂ ಸೆಳೆಯುತ್ತಿವೆ ಆ ನಯನಗಳು.

ಮೊನಾಲಿಸಾ ಕಣ್ಣೋಟಕ್ಕೆ ಕಳೆದುಹೋದ ಜನರು

ರುದ್ರಾಕ್ಷಿ ಮಾರುತ್ತಿರುವ ಯುವತಿಯ ಹೆಸರು ಮೊನಾಲಿಸಾ ಅಂತೆ. ಸ್ವತಃ ಆಕೆಯೇ ಹೇಳಿದ್ದಾರೆ. ಇವರದ್ದು ಮಧ್ಯಪ್ರದೇಶದ ಇಂದೋರ್ ಅಂತೆ. ಯುವತಿಯ ಕಣ್ಣೋಟಕ್ಕೆ ಮಾರು ಹೋದ ಮಾರುಹೋದ ಅನೇಕರು ಆಕೆಯ ವಿಡಿಯೋವನ್ನು ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಕುಂಭ ಮೇಳಕ್ಕೆ ಬಂದಿರುವ ಈಕೆಯನ್ನು ಹಾಲಿವುಡ್​ನ ನಟಿ ಏಂಜೆಲಿನಾ ಜೋಲಿಗೆ ಹೋಲಿಸಿದ್ದಾರೆ. ಅಲ್ಲದೆ, ಕ್ರಷ್ ಆಫ್ ಇಂಡಿಯಾ ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. ಮುದ್ದು ಮತ್ತು ಮುಗ್ದ ಯುವತಿ ವಿಡಿಯೋಗಳು ಮಿಲಿಯನ್​ಗಟ್ಟಲೇ ವೀವ್ಸ್ ಪಡೆದುಕೊಳ್ಳುತ್ತಿವೆ.

ಹಲವರಂತೂ ಗಂಗೆಯಲ್ಲಿ ಮುಳುಗಿ ಹೋದವರಿಗಿಂತ ಈಕೆಯ ಕಂಗಳಲ್ಲಿ ಮುಳುಗಿ ಹೋದವರೇ ಹೆಚ್ಚು ಎಂದು ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ. ಆಕೆಯ ಕಣ್ಣುಗಳಿಗೆ ಮಾರುಹೋದ ಬಹುತೇಕರು, ಸಹಜ ಸುಂದರಿ ಎಂದು ಹೇಳುತ್ತಿದ್ದಾರೆ. ಈಕೆಯ ಅಂದಕ್ಕೆ ಯಾವ ಹೀರೋಹಿನ್ ಕೂಡ ಸಾಟಿಯಾಗುವುದಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಎಲ್ಲರನ್ನೂ ಖುಷಿ ಖುಷಿಯಿಂದ ನಗುನಗುತ್ತಲೇ ಮಾತನಾಡಿಸುತ್ತಿರುವ ಈಕೆಯ ಅಂದಕ್ಕೆ ನಾವು ಕಳೆದುಹೋಗಿದ್ದೇನೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

 

 

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.