Monkeypox: 3,400 ಮಂಕಿಪಾಕ್ಸ್ ಪ್ರಕರಣಗಳು ಪತ್ತೆ, ನಿಮಗೆ ತಿಳಿದಿರಲೇಬೇಕಾದ 8 ವಿಷಯಗಳಿವು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Monkeypox: 3,400 ಮಂಕಿಪಾಕ್ಸ್ ಪ್ರಕರಣಗಳು ಪತ್ತೆ, ನಿಮಗೆ ತಿಳಿದಿರಲೇಬೇಕಾದ 8 ವಿಷಯಗಳಿವು

Monkeypox: 3,400 ಮಂಕಿಪಾಕ್ಸ್ ಪ್ರಕರಣಗಳು ಪತ್ತೆ, ನಿಮಗೆ ತಿಳಿದಿರಲೇಬೇಕಾದ 8 ವಿಷಯಗಳಿವು

ಜೂನ್‌ ೧೭ರಿಂದ ಇಲ್ಲಿಯವರೆಗೆ ಹೊಸದಾಗಿ 1,310 ಮಂಕಿಪಾಕ್ಸ್‌ ಪ್ರಕರಣಗಳು ಪತ್ತೆಯಾಗಿವೆ.

<p>00 ಮಂಕಿಪಾಕ್ಸ್ ಪ್ರಕರಣಗಳು ಪತ್ತೆ(Photo by Arun SANKAR / AFP)</p>
00 ಮಂಕಿಪಾಕ್ಸ್ ಪ್ರಕರಣಗಳು ಪತ್ತೆ(Photo by Arun SANKAR / AFP) (AFP)

ಜಾಗತಿಕವಾಗಿ ಇಲ್ಲಿಯವರೆಗೆ ಸುಮಾರು 3,400 ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿದ್ದು, ಈ ಕಾಯಿಲೆಯಿಂದಾಗಿ ಒಬ್ಬರು ಮೃತಪಟ್ಟಿರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಖಚಿತಪಡಿಸಿದೆ. ಬಹುತೇಕ ಪ್ರಕರಣಗಳು ಯುರೋಪ್‌ನಲ್ಲಿ ವರದಿಯಾಗಿವೆ. ಜೂನ್‌ ೧೭ರಿಂದ ಇಲ್ಲಿಯವರೆಗೆ ಹೊಸದಾಗಿ 1,310 ಮಂಕಿಪಾಕ್ಸ್‌ ಪ್ರಕರಣಗಳು ಪತ್ತೆಯಾಗಿವೆ. ಆತಂಕದ ವಿಷಯವೆಂದರೆ ಈ ಸಮಯದಲ್ಲಿ ಈ ರೋಗವು ಹೊಸದಾಗಿ ಏಳು ದೇಶಗಳಿಗೆ ಪ್ರವೇಶಿಸಿದೆ.

ಮಂಕಿಪಾಕ್ಸ್ ಅನ್ನು ಸಾರ್ವಜನಿಕ ಆರೋಗ್ಯದ ತುರ್ತು ಪರಿಸ್ಥಿತಿಯೆಂದು ಘೋಷಿಸಬಾರದೆಂದು ವಿಶ್ವ ಆರೋಗ್ಯ ಸಂಸ್ಥೆಯು ಕಳೆದ ವಾರ ನಿರ್ಧರಿಸಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಯ ಹುಟ್ಟಿಸದೆ ಇರುವ ಸಲುವಾಗಿ ಇದನ್ನು ತುರ್ತುಪರಿಸ್ಥಿತಿಯೆಂದು ಘೋಷಿಸಲಾಗಿಲ್ಲವೆಂದು ತಜ್ಞರು ಹೇಳಿದ್ದಾರೆ. ಹೀಗಿದ್ದರೂ, ವಿಶ್ವಸಂಸ್ಥೆಯ ಪ್ರಧಾನ ನಿರ್ದೇಶಕರಾದ ಟೆಡ್ರೊಸ್‌ ಆದೊನಾಮ್‌ ಅವರು ಈ ಕಾಯಿಲೆ ವ್ಯಾಪಿಸುತ್ತಿರುವುದರ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.

"ಮಂಕಿಪಾಕ್ಸ್ ಏಕಾಏಕಿ ಏರಿಕೆ ಕಾಣುತ್ತಿರುವುದರ ಕುರಿತು ತೀವ್ರ ಕಳವಳ ಹೊಂದಿದ್ದೇನೆ, ಇದು ಸ್ಪಷ್ಟವಾಗಿ ಆರೋಗ್ಯ ಬೆದರಿಕೆಯಾಗಿದೆ. ಈ ಕುರಿತು ನಾನು ಮತ್ತು ನನ್ನ ಸಹೋದ್ಯೋಗಿಗಳು ಎಚ್ಚರಿಕೆಯಿಂದ ಪರಿಶೀಲಿಸುತ್ತಿದ್ದೇವೆ" ಎಂದು ಟೆಡ್ರೊಸ್ ತಿಳಿಸಿದ್ದಾರೆ.

ಮಂಕಿಪಾಕ್ಸ್‌ನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ಹೇಗೆ? ಇದಕ್ಕಾಗಿ ನೀವು ಮಂಕಿಪಾಕ್ಸ್‌ನ ಎಂಟು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಬೇಕು.

- ಮಂಕಿಪಾಕ್ಸ್ ಆರ್ಥೋಪಾಕ್ಸ್ವೈರಸ್ ಕುಟುಂಬಕ್ಕೆ ಸೇರಿದ ದೊಡ್ಡ ಡಿಎನ್ಎ ವೈರಸ್. ಇತರೆ ಸ್ಮಾಲ್‌ಫಾಕ್ಸ್‌, ವರಿಯೊಲಾ ಇತ್ಯಾದಿ ವೈರಸ್‌ಗಳು ಮನುಷ್ಯರಲ್ಲಿ ಕಂಡುಬಂದರೆ ಇದು ಆಫ್ರಿಕಾದ ವಿವಿಧ ಭಾಗಗಳಲ್ಲಿ ಪ್ರಾಣಿಗಳ ಮೂಲಕ ಮನುಷ್ಯರಿಗೆ ಹರಡುತ್ತದೆ.

- ಆರ್ಥೋಪಾಕ್ಸ್‌ವೈರಸ್‌ಗಳು ಹೆಚ್ಚು ರೂಪಾಂತರಗೊಳ್ಳದಿದ್ದರೂ, ಈಗ ಏಕಾಏಕಿ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕ. ಬಹುಶಃ ಇದು ಕೂಡ ಬಹುರೂಪಾಂತರಗೊಳ್ಳುತ್ತಿರುವುದೇ ಎಂಬ ಪ್ರಶ್ನೆ ವಿಜ್ಞಾನಿಗಳಲ್ಲಿ ಮೂಡಿದೆ. ಅಮೆರಿಕದಲ್ಲಿ ಪ್ರಸ್ತುತ ಎರಡು ತಳಿಯ ಮಂಕಿಪಾಕ್ಸ್‌ ಪ್ರಕರಣಗಳನ್ನು ಗುರುತಿಸಲಾಗಿದೆ.

-ಮಂಕಿಪಾಕ್ಸ್‌ನ ಇನ್‌ ಕ್ಯುಬೇಷನ್‌ ಅವಧಿಯು ಕಾಲಾವಧಿಯು ಸಾಮಾನ್ಯವಾಗಿ 6 ರಿಂದ 13 ದಿನಗಳವರೆಗೆ ಇರುತ್ತದೆ. ಇದರಿಂದ ಮಂಕಿಪಾಕ್ಸ್ ರೋಗಲಕ್ಷಣಗಳು ಕಾಣಲು ಸರಾಸರಿ 8.5 ದಿನಗಳನ್ನು ತೆಗೆದುಕೊಳ್ಳುತ್ತದೆ.

-ಮಂಕಿಪಾಕ್ಸ್‌ನಿಂದ ಉಂಟಾಗುವ ದದ್ದು ಸಾಮಾನ್ಯವಾಗಿ ದ್ರವ ತುಂಬಿದ ಗುಳ್ಳೆಗಳಂತೆ ಕಾಣುತ್ತದೆ. ಜನರು ದದ್ದುಗಳನ್ನು ಹೊಂದಿರುವಾಗ ಸಾಂಕ್ರಾಮಿಕವಾಗಿರುತ್ತಾರೆ. ಅಂದರೆ, ಈ ಸಂದರ್ಭದಲ್ಲಿ ಇತರರಿಗೂ ಮಂಕಿಪಾಕ್ಸ್ ಹರಡಬಹುದು. ಸಾಮಾನ್ಯವಾಗಿ ಸುಮಾರು ಎರಡು ವಾರಗಳವರೆಗೆ ಸೋಂಕಿಗೆ ಒಳಗಾಗುತ್ತಾರೆ.

- ಜಗತ್ತು ಇಲ್ಲಿಯವರೆಗೆ ಕೊರೊನಾ ಸಂಬಂಧಪಟ್ಟ ತೊಂದರೆಗಳಿಗೆ ಸಾಕಷ್ಟು ತೊಂದರೆ ಅನುಭವಿಸಿದೆ. ಇಂತಹ ಸಂದರ್ಭದಲ್ಲಿ ಮಂಕಿಪಾಕ್ಸ್‌ ಆತಂಕವೂ ಹೆಚ್ಚಾಗಿದೆ. ಮಂಕಿಪಾಕ್ಸ್‌ ಎನ್ನುವ ಕಾಯಿಲೆಯು ಕೋತಿಗಳಿಂದ ಹರಡುವ ವೈರಸ್‌ನಿಂದ ಹರಡುತ್ತದೆ. 1958 ರಲ್ಲಿ ವಿಜ್ಞಾನಿಗಳು ಈ ರೋಗವನ್ನು ಮೊದಲ ಬಾರಿಗೆ ಗುರುತಿಸಿದರು. ಸಂಶೋಧನೆಯ ವೇಳೆ ಕೋತಿಗಳಲ್ಲಿ ಪಾಕ್ಸ್ ತರಹದ ಕಾಯಿಲೆ ಪತ್ತೆಯಾಗಿತ್ತು.

-ಕೋತಿಗಳಲ್ಲಿ ಮೊದಲ ಬಾರಿಗೆ ಇದು ಪತ್ತೆಯಾಗಿರುವುದರಿಂದ ಇದಕ್ಕೆ ಮಂಕಿಪಾಕ್ಸ್‌ ಎಂದು ಹೆಸರಿಡಲಾಗಿದೆ. ಈ ಕಾಯಿಲೆಯೂ ಮನುಷ್ಯರಿಗೂ ಹರಡುತ್ತದೆ ಎನ್ನುವ ಅಂಶವು ೧೯೭೦ರಲ್ಲಿ ತಿಳಿದುಬಂತು. ಇದು ಪ್ರಾಣಿಗಳಿಂದ ಮನುಷ್ಯರಿಗೆ, ಮನುಷ್ಯರಿಂದ ಮನುಷ್ಯರಿಗೆ ಹರಡಬಹುದು.

- ಮಂಕಿಪಾಕ್ಸ್‌ ಸಿಡುಬಿನ ಒಂದು ಪ್ರಭೇದವಾಗಿದ್ದು, ಸಿಡುಬು ಕಾಯಿಲೆಯಲ್ಲಿ ಕಾಣುವ ರೋಗಲಕ್ಷಣಗಳನ್ನೇ ಹೊಂದಿದೆ. ಜ್ವರ, ತಲೆನೋವು, ಬೆನ್ನುನೋವು, ಮೈಕೈನೋವು, ಸುಸ್ತು, ಉಂಡೆಗಳಂತಹ ದುಗ್ಧಗ್ರಂಥಿಗಳು ಕಾಣಿಸುತ್ತವೆ. ಮೊದಲು ಸಣ್ಣದಾಗಿ ಕಾಣಿಸುವ ದದ್ದುಗಳು ಕ್ರಮೇಣ ದೊಡ್ಡದಾಗುತ್ತ ಹೋಗುತ್ತವೆ. ಈ ಬೊಕ್ಕೆಗಳ ಒಳಗೆ ನೀರಿನಂತಹ ದ್ರಾವಣ ಇರುತ್ತದೆ. ಒಬ್ಬ ಸೋಂಕಿತನಲ್ಲಿ ಬೆರಳೆಣಿಕೆಯ ದದ್ದುಗಳಿಂದ ಸಾವಿರಾರು ದದ್ದುಗಳು ಕಾಣಿಸಬಹುದು..

-ಈ ಹಿಂದಿನ ಸಿಡುಬು ವಿರುದ್ಧ ನೀಡುತ್ತಿದ್ದ ಲಸಿಕೆಯೇ ಮಂಕಿಪಾಕ್ಸ್ ವಿರುದ್ಧ 85% ರಕ್ಷಣೆ ನೀಡುತ್ತದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.