ಭಾರತ ವಿಭಜನೆಗೆ ಚೀನಾಕ್ಕೆ ಕುಮ್ಮಕ್ಕು ನೀಡ್ತಿದ್ದಾರಾ ಬಾಂಗ್ಲಾದೇಶದ ಮುಖ್ಯಸಲಹೆಗಾರ ಮುಹಮ್ಮದ್ ಯೂನಸ್, ಅವರು ಹೇಳಿದ್ದೇನು- ವಿಡಿಯೋ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಭಾರತ ವಿಭಜನೆಗೆ ಚೀನಾಕ್ಕೆ ಕುಮ್ಮಕ್ಕು ನೀಡ್ತಿದ್ದಾರಾ ಬಾಂಗ್ಲಾದೇಶದ ಮುಖ್ಯಸಲಹೆಗಾರ ಮುಹಮ್ಮದ್ ಯೂನಸ್, ಅವರು ಹೇಳಿದ್ದೇನು- ವಿಡಿಯೋ

ಭಾರತ ವಿಭಜನೆಗೆ ಚೀನಾಕ್ಕೆ ಕುಮ್ಮಕ್ಕು ನೀಡ್ತಿದ್ದಾರಾ ಬಾಂಗ್ಲಾದೇಶದ ಮುಖ್ಯಸಲಹೆಗಾರ ಮುಹಮ್ಮದ್ ಯೂನಸ್, ಅವರು ಹೇಳಿದ್ದೇನು- ವಿಡಿಯೋ

Muhammad Yunus: ಬಾಂಗ್ಲಾದೇಶದ ಸೇನಾಡಳಿತದ ಕೈಗೊಂಬೆಯಾಗಿರುವ ಮುಖ್ಯಸಲಹೆಗಾರ ಮುಹಮ್ಮದ್ ಯೂನಸ್, ಭಾರತ ವಿಭಜನೆಗೆ ಕುಮ್ಮಕ್ಕು ನೀಡುವಂತಹ ಹೇಳಿಕೆ ನೀಡಿರುವುದು ಗಮನಸೆಳೆದಿದೆ. ಅಂಥದ್ದೇನು ಹೇಳಿದ್ರು ಯೂನಸ್.

ಬಾಂಗ್ಲಾದೇಶದ ಸೇನಾ ಸರ್ಕಾರದ ಮುಖ್ಯ ಸಲಹೆಗಾರ 4 ದಿನಗಳ ಚೀನಾ ಪ್ರವಾಸ ಮಾಡಿದ್ದು, ಅಲ್ಲಿ ಅಧ್ಯಕ್ಷ ಕ್ಸಿ ಚಿನ್‌ಪಿಂಗ್ ಅವರನ್ನೂ ಭೇಟಿ ಮಾಡಿದರು. ಇದೇ ವೇಳೆ ಅವರು ನೀಡಿದ ಹೇಳಿಕೆ ಭಾರತ ವಿಭಜನೆಗೆ ಕುಮ್ಮಕ್ಕು ನೀಡುವಂತೆ ಇದೆ.
ಬಾಂಗ್ಲಾದೇಶದ ಸೇನಾ ಸರ್ಕಾರದ ಮುಖ್ಯ ಸಲಹೆಗಾರ 4 ದಿನಗಳ ಚೀನಾ ಪ್ರವಾಸ ಮಾಡಿದ್ದು, ಅಲ್ಲಿ ಅಧ್ಯಕ್ಷ ಕ್ಸಿ ಚಿನ್‌ಪಿಂಗ್ ಅವರನ್ನೂ ಭೇಟಿ ಮಾಡಿದರು. ಇದೇ ವೇಳೆ ಅವರು ನೀಡಿದ ಹೇಳಿಕೆ ಭಾರತ ವಿಭಜನೆಗೆ ಕುಮ್ಮಕ್ಕು ನೀಡುವಂತೆ ಇದೆ.

Muhammad Yunus: ನೆರೆಹೊರೆ ದೇಶಗಳ ಪೈಕಿ ಅತಿದೊಡ್ಡ ದೇಶವಾಗಿರುವ ಚೀನಾ ಈ ಭೌಗೋಳಿಕ ಪ್ರದೇಶದಲ್ಲಿ ತನ್ನದೇ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಿದೆ. ಭಾರತಕ್ಕೆ ಇದರ ಸ್ಪಷ್ಟ ಅರಿವು ಇದ್ದು, ಚೀನಾ ಪ್ರಭಾವದಿಂದ ತನ್ನನ್ನು ರಕ್ಷಿಸಿಕೊಳ್ಳಲು ಸತತ ಪ್ರಯತ್ನ ನಡೆಸುತ್ತಲೇ ಬಂದಿದೆ. ಚೀನಾಕ್ಕೂ ಭಾರತದ ಬಗ್ಗೆ ಭೀತಿ ಇದೆ. ಹೀಗಾಗಿ ಭಾರತದ ಸುತ್ತ ಆಯಕಟ್ಟಿನ ದೇಶಗಳಲ್ಲಿ ತನ್ನ ಸೇನಾ ನೆಲೆ ಸ್ಥಾಪಿಸಲು ಅದು ಪ್ರಯತ್ನಿಸುತ್ತಲೇ ಇದೆ. ಇದೀಗ ಇನ್ನೊಂದು ಮಹತ್ವದ ಬೆಳವಣಿಗೆ ಎಂದರೆ ಬಾಂಗ್ಲಾದೇಶದಲ್ಲಿ ಪ್ರಜಾಪ್ರಭುತ್ವ ಸರ್ಕಾರ ಪತನವಾದ ಬಳಿಕ ಸೇನಾಡಳಿತ ಜಾರಿಯಲ್ಲಿದೆ. ಸೇನಾಡಳಿತದ ಕೈಗೊಂಬೆಯಾಗಿರುವ ಮುಖ್ಯಸಲಹೆಗಾರ ಮುಹಮ್ಮದ್ ಯೂನಸ್, ನೀಡಿರುವ ಹೇಳಿಕೆ ಭಾರತ ವಿಭಜನೆಗೆ ಚೀನಾಕ್ಕೆ ಕುಮ್ಮಕ್ಕು ನೀಡಿದಂತೆ ಭಾಸವಾಗಿದೆ.

ಭಾರತ ವಿಭಜನೆಗೆ ಚೀನಾಕ್ಕೆ ಕುಮ್ಮಕ್ಕು ನೀಡ್ತಿದ್ದಾರಾ ಬಾಂಗ್ಲಾದ ಮುಹಮ್ಮದ್ ಯೂನಸ್

ಭಾರತದ ಸೆವೆನ್ ಸಿಸ್ಟರ್ಸ್ ಎಂದು ಪರಿಗಣಿಸಲ್ಪಟ್ಟಿರುವ ಈಶಾನ್ಯ ರಾಜ್ಯಗಳು ಚಿಕನ್‌ನೆಕ್ ಪ್ರದೇಶದ ಮೂಲಕ ಭಾರತದ ಜತೆಗೆ ಸೇರಿಕೊಂಡಿವೆ. ಅದು ಬಿಟ್ಟರೆ ಅದು ಬಾಂಗ್ಲಾದೇಶದ ಕಾರಣ ಲಾಕ್ ಆಗಿರುವಂತಹ ಪ್ರದೇಶ. ಚೀನಾ ದೇಶವು ಬಾಂಗ್ಲಾದಲ್ಲಿ ಹೂಡಿಕೆ ಮಾಡಿದರೆ ಹಿಂದೂ ಮಹಾಸಾಗರಕ್ಕೆ ನೇರ ಪ್ರವೇಶ ಪಡೆಯಬಹುದು. ಇದು ಚೀನಾಕ್ಕೆ ಸಿಗುವ ಬಹುದೊಡ್ಡ ಅವಕಾಶ ಎಂದು ಮುಹಮ್ಮದ್ ಯೂನಸ್ ಹೇಳಿದ್ದಾರೆ.

ನಾಲ್ಕು ದಿನಗಳ ಚೀನಾ ಪ್ರವಾಸ ಕೈಗೊಂಡಿರುವ ಮುಹಮ್ಮದ್ ಯೂನಸ್ ಅವರು ಬೀಜಿಂಗ್‌ನಲ್ಲಿ ನೀಡಿದ ಹೇಳಿಕೆ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಬಾಂಗ್ಲಾ ದೇಶದ ಕೆಳಗೆ ಸಾಗರದ ಸಂಪೂರ್ಣ ಅಧಿಕಾರ ಢಾಕಾಕ್ಕೆ ಸೇರಿದ್ದು. ಬಾಂಗ್ಲಾದೇಶದಲ್ಲಿ ಚೀನಾ ಹೂಡಿಕೆ ಮಾಡಿದರೆ ಚೀನಾ ತನ್ನ ಒಟ್ಟು ಅವಕಾಶಗಳನ್ನು ಹೆಚ್ಚಿಸಬಹುದು ಎಂದು ಹೇಳಿರುವುದು ಕಂಡುಬಂದಿದೆ.

ಬಂಧಿಯಾಗಿರುವ ಸ್ಥಿತಿಯಲ್ಲಿವೆ ಭಾರತದ ಈಶಾನ್ಯರಾಜ್ಯಗಳು, ಸಾಗರದ ಮೇಲೆ ಅಧಿಕಾರವಿಲ್ಲ

ಭಾರತದ ಸಪ್ತ ಸಹೋದರಿಯರೆನಿಸಿಕೊಂಡಿರುವ ಈಶಾನ್ಯ ರಾಜ್ಯಗಳು ಬಂಧಿಯಾಗಿರುವ ಸ್ಥಿತಿಯಲ್ಲಿವೆ. ಅವುಗಳಿಗೆ ಹಿಂದೂ ಮಹಾಸಾಗರದ ಮೇಲೆ ಅಧಿಕಾರವೇ ಇಲ್ಲ. ಢಾಕಾಗೆ ಪರಮಾಧಿಕಾರ ಇರುವಂಥದ್ದು. ಚೀನಾಕ್ಕೆ ಇದೊಂದು ದೊಡ್ಡ ಅವಕಾಶ. ಬಳಸಿಕೊಂಡರೆ ಎರಡೂ ದೇಶಗಳಿಗೆ ಲಾಭ ಎಂದು ಹೇಳಿರುವ ಯೂನಸ್‌, ತನ್ನ ನಾಲ್ಕು ದಿನಗಳ ಭೇಟಿಯ ಸಮಯದಲ್ಲಿ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾದರು. ತನ್ನ ತೀಸ್ತಾ ನದಿ ನೀರಿನ ನಿರ್ವಹಣೆಗಾಗಿ ಬೀಜಿಂಗ್‌ನಿಂದ 50 ವರ್ಷಗಳ ಮಾಸ್ಟರ್ ಪ್ಲ್ಯಾನ್ ಅನ್ನು ಕೋರಿದರು, ಈ ನದಿಯು ಭಾರತದ ಮೂಲಕ ಹರಿದು ಬಾಂಗ್ಲಾ ಸೇರುತ್ತಿರುವ ಕಾರಣ, ಯೂನಸ್ ಅವರು ಚೀನಾವನ್ನು "ಮಾಸ್ಟರ್ ಆಫ್ ವಾಟರ್ ಮ್ಯಾನೇಜ್‌ಮೆಂಟ್" ಎಂದು ಉಲ್ಲೇಖಿಸಿದ್ದಾಗಿ ವರದಿಗಳು ಹೇಳಿವೆ. ಪದಚ್ಯುತ ಶೇಖ್ ಹಸೀನಾ ಸರ್ಕಾರವು ತೀಸ್ತಾ ನದಿ ನಿರ್ವಹಣೆ ಯೋಜನೆಯ ಜಾರಿಗೆ ಭಾರತದ ನೆರವನ್ನು ಕೋರಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ಸಲಹಾ ಸಮಿತಿಯ ಸದಸ್ಯರಾಗಿರುವ ಸಂಜೀವ್ ಸನ್ಯಾಲ್ ಅವರು ಅಭಿಷೇಕ್ ಅವರ ಟ್ವೀಟ್ ಶೇರ್ ಮಾಡಿ, "ಭಾರತದ 7 ರಾಜ್ಯಗಳು ಬಂಧಿಯಂತೆ ಇವೆ ಎಂದು ಹೇಳುತ್ತ ಬಾಂಗ್ಲಾದಲ್ಲಿ ಹೂಡಿಕೆ ಮಾಡುವುದಕ್ಕೆ ಚೀನಾವನ್ನು ಆಹ್ವಾನಿಸುತ್ತಿರುವುದು ಆಸಕ್ತಿ ಕೆರಳಿಸುವ ವಿಚಾರ. ಭಾರತದ 7 ರಾಜ್ಯಗಳು ಲ್ಯಾಂಡ್ ಲಾಕ್ ಆಗಿರುವುದಕ್ಕೂ ಬಾಂಗ್ಲಾದೇಶದ ಬೇಡಿಕೆ, ಮನವಿಗೂ ಏನು ಸಂಬಂಧ, ಮಹತ್ವ ಏನು ಎಂಬುದೇ ಗಮನಿಸಬೇಕಾದ ವಿಚಾರ ಎಂದಿದ್ದಾರೆ. ಈ ನಡುವೆ, ಮುಹಮ್ಮದ್ ಯೂನಸ್ ಅವರ ಹೇಳಿಕೆ ವ್ಯಾಪಕ ಟೀಕೆಗೆ ಒಳಗಾಗಿದ್ದು, ಈಶಾನ್ಯ ರಾಜ್ಯಗಳ ಸರ್ಕಾರಗಳು ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಯೂನಸ್ ಅವರ ಹೇಳಿಕೆಯನ್ನು ಖಂಡಿಸಿವೆ.

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.