ಮುಂಬಯಿ ಕೋರ್ಟ್‌ ಹಿಯರಿಂಗ್‌ ವೇಳೆ ಫೈಲ್‌ಗಳೆಡೆಯಿಂದ ಹೊರಬಂತು ಹಾವು, ಮುಳುಂದ್ ಕೋರ್ಟ್‌ನಲ್ಲಿ ವಿಲಕ್ಷಣ ಘಟನೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮುಂಬಯಿ ಕೋರ್ಟ್‌ ಹಿಯರಿಂಗ್‌ ವೇಳೆ ಫೈಲ್‌ಗಳೆಡೆಯಿಂದ ಹೊರಬಂತು ಹಾವು, ಮುಳುಂದ್ ಕೋರ್ಟ್‌ನಲ್ಲಿ ವಿಲಕ್ಷಣ ಘಟನೆ

ಮುಂಬಯಿ ಕೋರ್ಟ್‌ ಹಿಯರಿಂಗ್‌ ವೇಳೆ ಫೈಲ್‌ಗಳೆಡೆಯಿಂದ ಹೊರಬಂತು ಹಾವು, ಮುಳುಂದ್ ಕೋರ್ಟ್‌ನಲ್ಲಿ ವಿಲಕ್ಷಣ ಘಟನೆ

Court Hearing: ಮುಂಬಯಿಯ ಕೋರ್ಟ್‌ನಲ್ಲಿ ಕಲಾಪ ನಡೆಯುತ್ತಿತ್ತು. ಫೈಲ್‌ಗಳ ನಡುವೆ ತಲೆ ಎತ್ತಿ ಹೊರ ಬಂತು ಒಂದು ಹಾವು. ಎರಡು ಅಡಿ ಉದ್ದದ ಹಾವು ಕೋರ್ಟ್ ಕಲಾಪವನ್ನು ಒಂದು ಗಂಟೆ ಮುಂದೂಡುವಂತೆ ಮಾಡಿತು. ಮುಳುಂದ್ ಕೋರ್ಟ್‌ನಲ್ಲಿ ನಡೆದ ವಿಲಕ್ಷಣ ಘಟನೆಯ ವಿವರ ಇಲ್ಲಿದೆ.

ಮುಂಬಯಿ ಕೋರ್ಟ್‌ ಹಿಯರಿಂಗ್‌ ವೇಳೆ ಫೈಲ್‌ಗಳೆಡೆಯಿಂದ ಹೊರಬಂತು ಹಾವು, ಮುಳುಂದ್ ಕೋರ್ಟ್‌ನಲ್ಲಿ ವಿಲಕ್ಷಣ ಘಟನೆ ನಡೆದಿದೆ. (ಎಡ ಚಿತ್ರ ಮೆಟಾ ಎಐ ರಚಿತ ಚಿತ್ರವಾಗಿದ್ದು ಸಾಂದರ್ಭಿಕವಾಗಿ ಬಳಸಲಾಗಿದೆ)
ಮುಂಬಯಿ ಕೋರ್ಟ್‌ ಹಿಯರಿಂಗ್‌ ವೇಳೆ ಫೈಲ್‌ಗಳೆಡೆಯಿಂದ ಹೊರಬಂತು ಹಾವು, ಮುಳುಂದ್ ಕೋರ್ಟ್‌ನಲ್ಲಿ ವಿಲಕ್ಷಣ ಘಟನೆ ನಡೆದಿದೆ. (ಎಡ ಚಿತ್ರ ಮೆಟಾ ಎಐ ರಚಿತ ಚಿತ್ರವಾಗಿದ್ದು ಸಾಂದರ್ಭಿಕವಾಗಿ ಬಳಸಲಾಗಿದೆ)

Court Hearing: ಮುಂಬಯಿಯಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ವೇಳೆ ಕಡತಗಳ ನಡುವೆ ಹಾವೊಂದು ತಲೆ ಎತ್ತಿ ಹೊರಬಂದಿದೆ. ಈ ವಿಲಕ್ಷಣ ಘಟನೆಯಿಂದಾಗಿ ನ್ಯಾಯಾಲಯದಲ್ಲಿ ಗೊಂದಲ ಏರ್ಪಟ್ಟಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ಕಲಾಪ ಸ್ಥಗಿತವಾಗಿತ್ತು. ಮುಳುಂದ್‌ನ ಮ್ಯಾಜಿಸ್ಟ್ರೇಟ್ ಕೋರ್ಟ್‌ನ ಕೊಠಡಿಸಂಖ್ಯೆ 27ರಲ್ಲಿ ಮಂಗಳವಾರ (ಡಿಸೆಂಬರ್ 24) ಈ ಘಟನೆ ನಡೆದಿದೆ ಎಂದು ಲೈವ್ ಹಿಂದೂಸ್ತಾನ್ ವರದಿ ಮಾಡಿದೆ.

ಕೋರ್ಟ್‌ ಹಿಯರಿಂಗ್‌ ವೇಳೆ ಫೈಲ್‌ಗಳೆಡೆಯಿಂದ ಹೊರಬಂತು ಹಾವು, ಮುಳುಂದ್ ಕೋರ್ಟ್‌ನಲ್ಲಿ ವಿಲಕ್ಷಣ ಘಟನೆ

ಮುಂಬೈನ ನ್ಯಾಯಾಲಯದ ಕೊಠಡಿಯಲ್ಲಿ ಫೈಲ್‌ಗಳ ರಾಶಿಯ ಮೇಲೆ ಹಾವು ಇದ್ದಕ್ಕಿದ್ದಂತೆ ಕಾಣಿಸಿಕೊಂಡಿತು. ಇದರಿಂದಾಗಿ ಸುಮಾರು ಒಂದು ಗಂಟೆ ಕಾಲ ಕೋರ್ಟ್‌ ಕಲಾಪಕ್ಕೆ ಅಡ್ಡಿ ಉಂಟಾಯಿತು. ಮುಲುಂದ್‌ ಮ್ಯಾಜಿಸ್ಟ್ರೇಟ್ ಕೋರ್ಟ್‌ನ ಕೊಠಡಿ ಸಂಖ್ಯೆ 27 ರಲ್ಲಿ ಮಧ್ಯಾಹ್ನದವರೆಗೆ ಕೆಲಸ ಸಾಮಾನ್ಯವಾಗಿತ್ತು. ಆದರೆ, ಫೈಲ್‌ಗಳ ರಾಶಿ ನಡುವೆ ಹಾವು ತಲೆ ಎತ್ತಿ ಹೊರ ಬಂದಾಗ ಅಲ್ಲಿದ್ದವರೆಲ್ಲರೂ ಗಾಬರಿಯಾದರು. 2 ಅಡಿ ಉದ್ದದ ಹಾವು ಫೈಲ್‌ಗಳ ಮೇಲೆ ಹರಿದಾಡತೊಡಗಿದಾಗ, ನ್ಯಾಯಾಧೀಶರು ವಿಚಾರಣೆಯನ್ನು ಕೆಲ ಹೊತ್ತು ಮುಂದೂಡಿದರು ಎಂದು ಆ ಸಂದರ್ಭದಲ್ಲಿ ಸ್ಥಳದಲ್ಲಿದ್ದ ವಕೀಲರು ತಿಳಿಸಿದ್ದಾಗಿ ವರದಿ ವಿವರಿಸಿದೆ.

ಕೂಡಲೇ ಹಾವು ಹಿಡಿಯುವವರನ್ನು ಕರೆಯಿಸಲಾಗಿತ್ತು. ಅವರು ಬಂದು ಕೋರ್ಟ್ ಹಾಲ್‌ನಲ್ಲಿ ಜಾಲಾಡಿದರು. ಫೈಲ್‌ಗಳ ನಡುವೆ, ಕೋಣೆಯ ಮೂಲೆ ಮೂಲೆಗಳಲ್ಲಿ ಹಾವಿಗಾಗಿ ಶೋಧ ನಡೆಸಿದರು. ಆದರೆ ಹಾವು ಪತ್ತೆಯಾಗಿಲ್ಲ. ಅದು ಎಲ್ಲಿ ಹೋಯಿತೆಂದು ತಿಳಿದಿಲ್ಲ. ಒಂದು ಗಂಟೆ ಬಳಿಕ ಕೋರ್ಟ್‌ ಕಲಾಪ ಶುರುವಾಗಿತ್ತು, ನಂತರ ಅಡಚಣೆ ಇಲ್ಲದೆ ನಡೆಯಿತು ಎಂದು ವಕೀಲರು ತಿಳಿಸಿದ್ದಾಗಿ ವರದಿ ಹೇಳಿದೆ.

ಮುಳುಂದ್ ಕೋರ್ಟ್‌ ಆವರಣದಲ್ಲಿ ಹಾವು ಹೊಸದಲ್ಲ

ಮುಳುಂದ್ ಕೋರ್ಟ್‌ನ ಸುತ್ತಮುತ್ತ ಗಿಡ ಮರಗಳು ತುಂಬಿಕೊಂಡಿವೆ. ಹೀಗಾಗಿ, ಇಲ್ಲಿ ಹಾವು ಕಾಣಿಸಿಕೊಳ್ಳುವುದು ಹೊಸದಲ್ಲ ಮತ್ತು ಇದೇ ಮೊದಲ ಸಲವೂ ಅಲ್ಲ ಎಂದು ನ್ಯಾಯವಾದಿ ಬಿಸ್ವರೂಪ್ ದುಬೆ ಹೇಳಿದರು. ಸೋಮವಾರೂ ನ್ಯಾಯಾಲಯದ ಕೊಠಡಿಯ ಕಿಟಕಿ ಮೇಲೆ ಹಾವು ಕಾಣಿಸಿಕೊಂಡಿತ್ತು. ಎರಡು ತಿಂಗಳ ಹಿಂದೆ ನ್ಯಾಯಾಧೀಶರ ಕೊಠಡಿಯಲ್ಲೇ ಹಾವು ಕಾಣಿಸಿಕೊಂಡು ಭಯ ಹುಟ್ಟಿಸಿತ್ತು ಎಂದು ಅವರು ವಿವರಿಸಿದರು.

ಹಾವು ಕಡಿತದ ಚಿಕಿತ್ಸೆಗೆ ಸಂಬಂಧಿಸಿದ ಅರ್ಜಿಯ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿರುವುದೇನು

ಹಾವು ಕಡಿತದ ಚಿಕಿತ್ಸೆಗಾಗಿ ಆಂಟಿವೇನಮ್‌ ಅನ್ನು ಬಳಸಲಾಗುತ್ತದೆ. ಆರೋಗ್ಯ ಕೇಂದ್ರಗಳು, ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಜೀವ ಉಳಿಸಲು ಪ್ರತಿ ವಿಷ ಮತ್ತು ಹಾವು ಕಡಿತದ ಚಿಕಿತ್ಸೆ ನೀಡಲು ಸೂಚನೆಗಳನ್ನು ನೀಡುವಂತೆ ಮನವಿ ಮಾಡಲಾದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಈ ತಿಂಗಳು, ಕೇಂದ್ರ ಸರ್ಕಾರ ಮತ್ತು ಇತರ ರಾಜ್ಯಗಳಿಂದ ಈ ಬಗ್ಗೆ ಪ್ರತಿಕ್ರಿಯೆ ಕೇಳಿತ್ತು ಎಂಬುದು ಗಮನಿಸಬೇಕಾದ ವಿಷಯ.

ಭಾರತದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿ ಕೆ.ವಿ.ವಿಶ್ವನಾಥನ್ ಅವರ ಪೀಠವು ಅರ್ಜಿಯ ವಿಚಾರಣೆಗೆ ಒಪ್ಪಿಗೆ ಸೂಚಿಸಿತು. ಕೇಂದ್ರ ಸರ್ಕಾರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ಜಾರಿಗೊಳಿಸಿ ಪ್ರತಿಕ್ರಿಯೆ ಕೇಳಿತು. ನೋಟಿಸ್ ಜಾರಿ ಮಾಡಲಾಗಿದ್ದು, 4 ವಾರಗಳಲ್ಲಿ ಉತ್ತರ ನೀಡಬೇಕು’ ಎಂದು ನ್ಯಾಯಪೀಠ ಸರ್ಕಾರಗಳಿಗೆ ಸೂಚಿಸಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.