ಮುಂಬೈ: ಮೊದಲ ಮಹಾಮಳೆಗೆ ನೆಲದಡಿಯ ಮೆಟ್ರೋ ನಿಲ್ದಾಣಗಳಲ್ಲಿ ಪ್ರವಾಹ ಪರಿಸ್ಥಿತಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮುಂಬೈ: ಮೊದಲ ಮಹಾಮಳೆಗೆ ನೆಲದಡಿಯ ಮೆಟ್ರೋ ನಿಲ್ದಾಣಗಳಲ್ಲಿ ಪ್ರವಾಹ ಪರಿಸ್ಥಿತಿ

ಮುಂಬೈ: ಮೊದಲ ಮಹಾಮಳೆಗೆ ನೆಲದಡಿಯ ಮೆಟ್ರೋ ನಿಲ್ದಾಣಗಳಲ್ಲಿ ಪ್ರವಾಹ ಪರಿಸ್ಥಿತಿ

ಸೋಮವಾರ ಸುರಿದ ಭಾರಿ ಮಳೆಯ ನಂತರ ಮುಂಬೈ ಮೆಟ್ರೋದ ಅಂಡರ್‌ಗ್ರೌಂಡ್ ನಿಲ್ದಾಣವಾದ ಆಚಾರ್ಯ ಅತ್ರೆ ಚೌಕ್‌ನ ಮೆಟ್ಟಿಲುಗಳಿಂದ ನೀರು ಸುರಿದು, ಪೂರ್ತಿ ಸ್ಟೇಶನ್ ಜಲಾವೃತಗೊಂಡಿದೆ.

ಮುಂಬೈ ಮೆಟ್ರೋದ ಅಂಡರ್‌ಗ್ರೌಂಡ್ ನಿಲ್ದಾಣವಾದ ಆಚಾರ್ಯ ಅತ್ರೆ ಚೌಕ್‌
ಮುಂಬೈ ಮೆಟ್ರೋದ ಅಂಡರ್‌ಗ್ರೌಂಡ್ ನಿಲ್ದಾಣವಾದ ಆಚಾರ್ಯ ಅತ್ರೆ ಚೌಕ್‌

ಮುಂಬೈ: ಆಕ್ವಾ ಲೈನ್ ಅಥವಾ ಲೈನ್ 3 ರಲ್ಲಿರುವ ಮತ್ತು ಹದಿನೈದು ದಿನಗಳ ಹಿಂದೆಯಷ್ಟೇ ಉದ್ಘಾಟಿಸಲಾದ ಆಚಾರ್ಯ ಅಟ್ರೆ ಚೌಕ್ ಮೆಟ್ರೋ ಭೂಗತ ನಿಲ್ದಾಣವು ಸೋಮವಾರ ಈ ಬಾರಿಯ ಮುಂಗಾರುವಿನ ಮೊದಲ ಭಾರಿ ಮಳೆಯಿಂದಾಗಿ ಪ್ರವಾಹಕ್ಕೆ ಸಿಲುಕಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ವರ್ಲಿ ಮತ್ತು ಆಚಾರ್ಯ ಅತ್ರೆ ಚೌಕ್ ನಡುವಿನ ನಿಲ್ದಾಣಗಳಲ್ಲಿ ಮೆಟ್ರೋ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಸೋಮವಾರ ಭಾರಿ ಮಳೆ ಸುರಿದ ಪರಿಣಾಮ ಆಚಾರ್ಯ ಅತ್ರೆ ಚೌಕ್ ನಿಲ್ದಾಣದ ಮೆಟ್ಟಿಲುಗಳಿಂದ ಸ್ಟೇಶನ್ ಆವರಣಕ್ಕೆ ನೀರು ಸುರಿಯಲು ಪ್ರಾರಂಭಿಸಿತು. ನೀರು ಮೆಟ್ರೋ ಸ್ಟೇಶನ್‌ನ ಪೀಠೋಪಕರಣಗಳನ್ನು ಹಾನಿಗೊಳಿಸಿ, ನಂತರ ಪ್ಲಾಟ್‌ಫಾರ್ಮ್ ಪ್ರದೇಶಕ್ಕೆ ಪ್ರವೇಶಿಸಿದೆ. ನಿಲ್ದಾಣದ ನಿರ್ಮಾಣ ಹಂತದಲ್ಲಿದ್ದ ವಿಭಾಗದಲ್ಲಿ ನೀರನ್ನು ತಡೆಹಿಡಿಯುತ್ತಿದ್ದ ಗೋಡೆಗೆ ಉಂಟಾದ ಹಾನಿಯೇ ಇದಕ್ಕೆ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಧ್ಯಾಹ್ನದ ಪ್ರವಾಹದ ನಂತರ ನಿಲ್ದಾಣವನ್ನು ಮುಚ್ಚುವವರೆಗೂ ಪ್ರಯಾಣಿಕರು ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದ ನೀರನ್ನು ದಾಟಿಕೊಂಡೇ ಚಲಿಸುವಂತಾಯಿತು. ತೀವ್ರ ಮಳೆ ಮತ್ತು ನೀರು ಸೋರುವಿಕೆ ಉಂಟಾಗಿ ಸಮಸ್ಯೆಯಾಗಿದೆ ಎಂದು ಮುಂಬೈ ಮೆಟ್ರೋ ರೈಲು ನಿಗಮ ಲಿಮಿಟೆಡ್ ವಕ್ತಾರರು ದೃಢಪಡಿಸಿದ್ದಾರೆ. ನಿರ್ಮಾಣ ಹಂತದಲ್ಲಿದ್ದ ಪ್ರವೇಶ ಮತ್ತು ನಿರ್ಗಮನದಲ್ಲಿ ನಿರ್ಮಿಸಲಾದ ಕಾಂಕ್ರೀಟ್ ತಡೆಗೋಡೆ ಹಠಾತ್ ನೀರಿನ ಒಳನುಗ್ಗುವಿಕೆಯಿಂದಾಗಿ ಕುಸಿದಾಗ ಈ ಘಟನೆ ಸಂಭವಿಸಿದೆ.

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.