Mann Ki Baat : ನಾಳೆ ಪ್ರಧಾನಿ ಮೋದಿಯವರ ಮನ್‌ ಕೀ ಬಾತ್‌ 100ನೇ ಸಂಚಿಕೆ, ಜಗತ್ತಿನ ವಿವಿಧೆಡೆ ಪ್ರಸಾರ, ಶಹಬ್ಬಾಸ್‌ ಎಂದ ಬಿಲ್‌ ಗೇಟ್ಸ್‌
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Mann Ki Baat : ನಾಳೆ ಪ್ರಧಾನಿ ಮೋದಿಯವರ ಮನ್‌ ಕೀ ಬಾತ್‌ 100ನೇ ಸಂಚಿಕೆ, ಜಗತ್ತಿನ ವಿವಿಧೆಡೆ ಪ್ರಸಾರ, ಶಹಬ್ಬಾಸ್‌ ಎಂದ ಬಿಲ್‌ ಗೇಟ್ಸ್‌

Mann Ki Baat : ನಾಳೆ ಪ್ರಧಾನಿ ಮೋದಿಯವರ ಮನ್‌ ಕೀ ಬಾತ್‌ 100ನೇ ಸಂಚಿಕೆ, ಜಗತ್ತಿನ ವಿವಿಧೆಡೆ ಪ್ರಸಾರ, ಶಹಬ್ಬಾಸ್‌ ಎಂದ ಬಿಲ್‌ ಗೇಟ್ಸ್‌

Mann Ki Baat: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಪ್ರತಿತಿಂಗಳ ಕೊನೆಯ ಭಾನುವಾರ ನಡೆಸಿಕೊಡುವ ಮಾಸಿಕ ಬಾನುಲಿ ಕಾರ್ಯಕ್ರಮ "ಮನ್‌ ಕೀ ಬಾತ್‌" ನಾಳೆ (ಏಪ್ರಿಲ್‌ 30)ರಂದು ಭರ್ತಿ 100 ಸರಣಿಯನ್ನು ಪೂರ್ಣಗೊಳಿಸಲಿದೆ. "ಇದು ಸಮುದಾಯ ನೇತೃತ್ವ ವಹಿಸುವ ಉತ್ತಮ ಕಾರ್ಯಕ್ರಮ" ಎಂದು ಬಿಲ್‌ ಗೇಟ್ಸ್‌ (Bill Gates) ಅಭಿನಂದಿಸಿದ್ದಾರೆ.

Mann Ki Baat 100th episode: ನಾಳೆ ಮನ್‌ ಕೀ ಬಾತ್‌ 100ನೇ ಸರಣಿ, ಜಗತ್ತಿನಾದ್ಯಂತ ಪ್ರಸಾರ, ಶಹಬ್ಬಾಸ್‌ ಎಂದ ಬಿಲ್‌ ಗೇಟ್ಸ್‌(Image: Narendra Modi/ Twitter)
Mann Ki Baat 100th episode: ನಾಳೆ ಮನ್‌ ಕೀ ಬಾತ್‌ 100ನೇ ಸರಣಿ, ಜಗತ್ತಿನಾದ್ಯಂತ ಪ್ರಸಾರ, ಶಹಬ್ಬಾಸ್‌ ಎಂದ ಬಿಲ್‌ ಗೇಟ್ಸ್‌(Image: Narendra Modi/ Twitter)

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ನಡೆಸಿಕೊಡುವ ಮಾಸಿಕ ಬಾನುಲಿ ಕಾರ್ಯಕ್ರಮದ 100ನೇ ಸಂಚಿಕೆ ನಾಳೆ ಪ್ರಸಾರಗೊಳ್ಳಲಿದೆ. ಕಳೆದ ನೂರು ತಿಂಗಳಲ್ಲಿ ಸತತವಾಗಿ ಈ ರೇಡಿಯೋ ಕಾರ್ಯಕ್ರಮ ನಡೆಸಿಕೊಡುವ ಮೋದಿ ಉಪಕ್ರಮಕ್ಕೆ ಇದೀಗ ಮೈಕ್ರೊಸಾಫ್ಟ್‌ ಸಹ-ಸ್ಥಾಪಕ ಬಿಲ್‌ ಗೇಟ್ಸ್‌ "ಅಭಿನಂದನೆಗಳು" ಎಂದಿದ್ದಾರೆ.

ಮನ್ ಕಿ ಬಾತ್ ಬಾನುಲಿ ಕಾರ್ಯಕ್ರಮವು ನೈರ್ಮಲ್ಯ, ಆರೋಗ್ಯ, ಮಹಿಳಾ ಆರ್ಥಿಕ ಸಬಲೀಕರಣ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಸಂಬಂಧಿಸಿದ ಇತರ ಸಮಸ್ಯೆಗಳ ಮೇಲೆ ಸಮುದಾಯ ನೇತೃತ್ವದ ಕ್ರಮವನ್ನು ವೇಗಗೊಳಿಸಿದೆ ಎಂದು ಬಿಲ್‌ಗೇಟ್ಸ್‌ ಟ್ವೀಟ್‌ ಮಾಡಿದ್ದಾರೆ. ವಿಶೇಷವೆಂದರೆ, ಬಿಲ್‌ ಗೇಟ್ಸ್‌ ಅವರು ಹಿಂದೂಸ್ತಾನ್‌ ಟೈಮ್ಸ್‌ನ ಸಹೋದರಿ ಪತ್ರಿಕೆಯಾದ ಲೈವ್‌ಮಿಂಟ್‌ನ ವರದಿಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡು ಅದರಲ್ಲಿಯೇ ಕಂಗ್ರಾಜ್ಯುಲೇಷನ್‌ ಎಂದಿದ್ದಾರೆ.

‘ಮನ್ ಕಿ ಬಾತ್’ ಬಾನುಲಿ ಕಾರ್ಯಕ್ರಮದಲ್ಲಿ ದೇಶದ ಜನರನ್ನು ಉದ್ದೇಶಿಸಿ ಪ್ರಧಾನಿ ಮೋದಿಯವರು ವಿವಿಧ ವಿಷಯಗಳನ್ನು ಮಾತನಾಡುತ್ತಾರೆ. ಈ ಕಾರ್ಯಕ್ರಮವು ಪ್ರತಿ ತಿಂಗಳ ಕೊನೆಯ ಭಾನುವಾರದಂದು ಬೆಳಿಗ್ಗೆ 11 ಗಂಟೆಗೆ ಸಂಪೂರ್ಣ ಆಲ್ ಇಂಡಿಯಾ ರೇಡಿಯೋ (ಎಐಆರ್‌) ಮತ್ತು ದೂರದರ್ಶನ (ಡಿಡಿ) ನೆಟ್‌ವರ್ಕ್‌ನಲ್ಲಿ ಪ್ರಸಾರವಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿಯವರು ನಾಳೆ ಬೆಳಗ್ಗೆ 11 ಗಂಟೆಗೆ ಮನ್‌ ಕೀ ಬಾತ್‌ನಲ್ಲಿ ಮಾತನಾಡಲಿದ್ದಾರೆ. ಇದು ನೂರನೇ ಸರಣಿಯಾಗಿದ್ದು, ಐತಿಹಾಸಿಕ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಿಂದಲೂ ನೇರ ಪ್ರಸಾರಗೊಳ್ಳಲಿದೆ. ನ್ಯೂಯಾರ್ಕ್‌ನಲ್ಲಿ ಭಾನುವಾರ 1.30 ಗಂಟೆಗೆ ಇದು ಪ್ರಸಾರಗೊಳ್ಳಲಿದೆ. ಇದು ವಿಶ್ವಸಂಸ್ಥೆಯ ಟ್ರಸ್ಟಿಶಿಪ್‌ ಕೌನ್ಸಿಲ್‌ ಚೇಂಬರ್‌ನಲ್ಲಿಯೂ ಪ್ರಸಾರಗೊಳ್ಳಲಿದೆ.

"ಪ್ರಧಾನಿ ಮೋದಿಯವರ "ಮನ್ ಕಿ ಬಾತ್" ನ 100 ನೇ ಸಂಚಿಕೆಯು ಏಪ್ರಿಲ್ 30 ರಂದು @UN HQ ನಲ್ಲಿರುವ ಟ್ರಸ್ಟಿಶಿಪ್ ಕೌನ್ಸಿಲ್ ಚೇಂಬರ್‌ನಲ್ಲಿ ನೇರಪ್ರಸಾರ ಮಾಡಲು ಸಿದ್ಧವಾಗಿರುವುದರಿಂದ ಐತಿಹಾಸಿಕ ಕ್ಷಣಕ್ಕೆ ಸಿದ್ಧರಾಗಿ!" ಎಂದು ವಿಶ್ವಸಂಸ್ಥೆಯ ಭಾರತದ ಪರ್ಮನೆಂಟ್‌ ಮಿಷನ್‌ ಟ್ವೀಟ್‌ ಮಾಡಿದೆ.

ಇಷ್ಟು ಮಾತ್ರವಲ್ಲದೆ ನ್ಯೂಯಾರ್ಕ್‌ನಲ್ಲಿರುವ ಕಾನ್ಸೊಲೆಟ್‌ ಜನರಲ್‌ ಆಫ್‌ ಇಂಡಿಯಾವು ಅಲ್ಲಿನ ಕಮ್ಯುನಿಟಿ ಸಮುದಾಯದ ಜತೆಗೆ ಮನ್‌ ಕೀ ಬಾತ್‌ನ ನೂರನೇ ಸರಣಿಯ ನೇರ ಪ್ರಸಾರ ಮಾಡಲಿದೆ.

" ಪ್ರಧಾನಿ ನರೇಂದ್ರ ಮೋದಿ ಜಾಗತಿಕ ನಾಯಕ. ಹೀಗಾಗಿ, ಮುಂದಿನ ತಿಂಗಳ ಮನದ ಮಾತನ್ನು ವಿಶ್ವದಾದ್ಯಂತ ಪ್ರಸಾರ ಮಾಡಲು ಉದ್ದೇಶಿಸಲಾಗಿದೆ. ಎಲ್ಲ ದೇಶಗಳೂ ಪ್ರಧಾನಿಯವರ ಕಾರ್ಯವನ್ನು ಮೆಚ್ಚಿವೆ. ಜನರು ಅವನನ್ನು ಕೇಳಲು ಬಯಸುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಅನ್ನು ಎಷ್ಟು ದೇಶಗಳಲ್ಲಿ ಸಾಧ್ಯವೋ ಅಷ್ಟು ದೇಶಗಳಲ್ಲಿ ಪ್ರಸಾರ ಮಾಡುವ ಗುರಿ ಹೊಂದಿದ್ದೇವೆ" ಎಂದು ಬಿಜೆಪಿ ಮೂಲಗಳು ತಿಳಿಸಿವೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.