Nagpur Blast: ನಾಗ್ಪುರ ಸೋಲಾರ್ ಘಟಕದಲ್ಲಿ ಸ್ಪೋಟ: 9 ಮಂದಿ ಸಾವು
Nagpur Blast ಮಹಾರಾಷ್ಟ್ರದ( Maharashtra) ನಾಗ್ಪುರ( Nagpur) ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೋಲಾರ್ ಘಟಕವೊಂದರಲ್ಲಿ ಸ್ಪೋಟ ಸಂಭವಿಸಿ 9 ಮಂದಿ ಜೀವ ಕಳೆದುಕೊಂಡಿದ್ದಾರೆ.
ನಾಗ್ಪುರ: ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಸೋಲಾರ್ ಉತ್ಪನ್ನಗಳ ಉತ್ಪಾದನಾ ಘಟಕದಲ್ಲಿ ಸ್ಪೋಟ ಸಂಭವಿಸಿ ನಾಗ್ಪುರ 9 ಮಂದಿ ಮೃತಪಟ್ಟಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.
ನಾಗ್ಪುರದ ಜಿಲ್ಲೆಯ ಬಝರ್‌ಗಾಂವ್ ಎಂಬಲ್ಲಿ ಭಾನುವಾರ ಬೆಳಿಗ್ಗೆ ದುರ್ಘಟನೆ ಸಂಭವಿಸಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
ಬಝರ್‌ಗಾಂವ್ ಗ್ರಾಮದಲ್ಲಿ ಸೋಲಾರ್ ಉತ್ಪನ್ನಗಳ ಕಾರ್ಯನಿರ್ವಹಿಸುತ್ತಿತ್ತು. ದೇಶದ ರಕ್ಷಣಾ ವಲಯ ಸೇರಿದಂತೆ ಬೇರೆ ಬೇರೆ ಕಡೆಗೆ ಸಂಸ್ಥೆ ಸೋಲಾರ್ ಬೂಸ್ಟರ್ ಸಹಿತ ಹಲವು ಉತ್ಪನ್ನಗಳನ್ನು ಸರಬರಾಜು ಮಾಡುತ್ತದೆ. ಭಾನುವಾರ ಬೆಳಿಗ್ಗೆ 12 ಮಂದಿ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಘಟಕದಲ್ಲಿ ಸ್ಪೋಟಕ ಸಂಭವಿಸಿ ಬೆಂಕಿ ಹೊತ್ತಿಕೊಂಡಿತು. ಸ್ಪೋಟಕಗಳ ಸಿಡಿತದಿಂದ 9 ಮಂದಿ ಸ್ಥಳದಲ್ಲೇ ಮೃತಪಟ್ಟರು. ಇನ್ನೂ ಮೂವರು ತೀವ್ರವಾಗಿ ಗಾಯಗೊಂಡರು.
ಕೂಡಲೇ ಸ್ಥಳೀಯರು ಅಗ್ನಿ ಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದರು. ಅಗ್ನಿಶಾಮಕದಳದ ಘಟಕಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದ್ದವು. ರಕ್ಷಣಾ ತಂಡಗಳು ಬರುವ ಹೊತ್ತಿಗೆ ಕೆಲವರ ಜೀವ ಹೋಗಿತ್ತು. ಗಾಯಗೊಂಡವರಿಗೆ ನಾಗ್ಪುರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸೋಲಾರ್ ಸ್ಪೋಟಕ ಕಂಪೆನಿಯ ಬೂಸ್ಟರ್ ಘಟಕದಲ್ಲಿ ದುರ್ಘಟನೆ ನಡೆದಿದೆ. ಸ್ಪೋಟಕ್ಕೆ ಸೂಕ್ತ ಕಾರಣ ಇನ್ನೂ ತಿಳಿದಿಲ್ಲ. ರಕ್ಷಣಾ ಕಾರ್ಯ ನಡೆದಿದೆ. ಘಟನೆಗೆ ತನಿಖೆ ಬಳಿಕ ಕಾರಣ ತಿಳಿಯಬಹುದು ಎಂದು ನಾಗ್ಪುರ ಗ್ರಾಮೀಣ ಎಸ್ಪಿ ಹರ್ಷ ಪೊದ್ದಾರ್ ಮಾಹಿತಿ ನೀಡಿದರು.