ED names Priyanka: ಅಕ್ರಮ ಹಣ ವಹಿವಾಟು ಪ್ರಕರಣದಲ್ಲಿ ಪ್ರಿಯಾಂಕಗಾಂಧಿ ಹೆಸರಿಸಿದ ಜಾರಿ ನಿರ್ದೇಶನಾಲಯ
Priyanka Gandhi ಅಕ್ರಮಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನಡೆಸುತ್ತಿರುವ ಪ್ರಕರಣದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಹೆಸರು ಉಲ್ಲೇಖಿಸಿದೆ.
ದೆಹಲಿ: ಅಕ್ರಮ ಹಣ ವಹಿವಾಟು ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧೀ ಅವರನ್ನು ಜಾರಿ ನಿರ್ದೇಶನಾಲಯ( ED) ಮೊದಲ ಬಾರಿಗೆ ಹೆಸರಿಸಿದೆ.
ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾಧ್ರಾ ಹಾಗೂ ಅನಿವಾಸಿ ಭಾರತೀಯ ಉದ್ಯಮಿ ಸಿಸಿ ಥಂಪಿ ಅವರ ನಡುವಿನ ವಹಿವಾಟಿನ ವಿಚಾರದಲ್ಲೀ ಈಗಾಗಲೇ ನಡೆಯುತ್ತಿರುವ ಪ್ರಕರಣದಲ್ಲಿ ಪ್ರಿಯಾಂಕ ಅವರ ಹೆಸರನ್ನು ಇಡಿ ಉಲ್ಲೇಖಿಸಿದೆ.
ಈಗಾಗಲೇ ಈ ಪ್ರಕರಣದ ಆರೋಪಿ ಸಿಸಿ ಥಂಪಿ ಬಂಧನಕ್ಕೆ ಒಳಗಾಗಿದ್ದರೆ, ರಾಬರ್ಟ್ ವಾಧ್ರಾ ವಿರುದ್ದವೂ ಜಾರ್ಜ್ ಶೀಟ್ ಸಲ್ಲಿಕೆಯಾಗಿದೆ.
ಲೋಕಸಭೆ ಚುನಾವಣೆ ಇನ್ನೇನು ಬರುತ್ತಿರುವ ಈ ವೇಳೆಯಲ್ಲಿ ಪ್ರಿಯಾಂಕಗಾಂಧಿ ಅವರ ಹೆಸರು ಬಹುಕೋಟಿ ಹಣದ ಅಕ್ರಮ ವಹಿವಾಟು ಪ್ರಕರಣದಲ್ಲಿ ಸಿಲುಕಿರುವುದು ಕಾಂಗ್ರೆಸ್ ಅನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ.
ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷರಾದ ಸೋನಿಯಾಗಾಂಧಿ ಅವರ ಅಳಿಯ ರಾಬರ್ಟ್ ವಾಧ್ರಾ ಹಾಗೂ ಅವರ ಪುತ್ರಿ ಪ್ರಿಯಾಂಕಗಾಂಧಿ ವಾಧ್ರಾ ಅವರು ಹರಿಯಾಣದಲ್ಲಿ ದೆಹಲಿ ಮೂಲದ ರಿಯಲ್ ಎಸ್ಟೇಟ್ ಏಜೆಂಟ್ ಒಬ್ಬರ ಮೂಲಕ ಅನಿವಾಸಿ ಭಾರತೀಯ ಉದ್ಯಮಿ ಸಿಸಿ ಥಂಪಿ ಅವರಿಂದ ಖರೀದಿಸಿದ್ದರು. ವಾದ್ರಾ ಹಾಗೂ ಥಂಪಿ ನಡುವೆ ದೀರ್ಘ ಹಾಗೂ ಆತ್ಮೀಯ ಸಂಬಂಧ ಬೆಳೆದು ಬಂದಿತ್ತು. ಇದು ವಹಿವಾಟು ಆಸಕ್ತಿಗಳಿಗೂ ವಿಸ್ತರಣೆಯಾಯಿತು ಎಂದು ಜಾರಿ ನಿರ್ದೇಶನಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ನವೆಂಬರ್‌ನಲ್ಲಿ ಇದೇ ಪ್ರಕರಣದಲ್ಲಿ ಸಲ್ಲಿಸಲಾದ ಜಾರ್ಜ್‌ಶೀಟ್‌ನಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಎಚ್‌ಎಲ್ ಪಹ್ವಾ ಅವರು ವಾದ್ರಾ ಹಾಗೂ ಥಂಪಿ ಅವರಿಗೆ ಆಸ್ತಿಗಳನ್ನು ಮಾರಾಟ ಮಾಡಿಸಿದ್ದರು. ಆದರೆ ಈ ವಹಿವಾಟಿನ ಹಣಕಾಸು ಮೂಲದ ನಿಖರ ಮಾಹಿತಿ ಇರಲಿಲ್ಲ. ಕಪ್ಪು ಹಣ ಬಳಸಿಯೇ ಈ ವಹಿವಾಟು ನಡೆಸಲಾಗಿತ್ತು. ವಾದ್ರಾ ಪೂರ್ತಿ ಹಣವನ್ನು ನೀಡಿರಲಿಲ್ಲ.
ಇದಲ್ಲದೇ ಪಹ್ವಾ ಹರಿಯಾಣದಲ್ಲಿನ ಕೃಷಿ ಭೂಮಿಯನ್ನು 2006ರಲ್ಲಿ ಪ್ರಿಯಾಂಕಾ ಗಾಂಧಿ ಅವರಿಗೆ ಮಾರಾಟ ಮಾಡಿ ನಂತರ 2010ರಲ್ಲಿ ಆ ಜಮೀನನ್ನು ವಾಪಾಸ್ ಪಡೆದಿದ್ದರು ಎಂದು ತಿಳಿಸಲಾಗಿತ್ತು.
ಅಕ್ರಮ ಹಣ ವಹಿವಾಟು ಪ್ರಕರಣದಲ್ಲಿ ಥಂಪಿಯನ್ನು ಇಡಿ 2020ರಲ್ಲಿ ಬಂಧಿಸಲಾಗಿತ್ತು. ಈ ವೇಳೆ ವಾದ್ರಾ ಅವರ ಪರಿಚಯ ಹತ್ತು ವರ್ಷಗಳಿಂದ ಇದೆ. ಹಲವು ಬಾರಿ ವಾದ್ರಾ ಜತೆಗೆ ಯುಎಇ ಸಹಿತ ದೆಹಲಿಯನೂ ಹಲವು ಬಾರಿ ಭೇಟಿ ಮಾಡಿದ್ಧಾಗಿ ತನಿಖೆ ವೇಳೆ ಥಂಪಿ ಹೇಳಿಕೊಂಡಿದ್ದಾಗಿ ಇಡಿ ತಿಳಿಸಿತ್ತು.
ಇದೇ ಥಂಪಿ ಹರಿಯಾಣದ ಫರಿದಾಬಾದ್‌ಜಿಲ್ಲೆಯ ಅಮಿಪುರದಲ್ಲಿ ಒಟ್ಟು 486 ಎಕರೆ ಭೂಮಿಯನ್ನು 2005 ರಿಂದ 2008 ರವರೆಗೆ ಖರೀದಿಸಲು ಪಹ್ವಾ ಸಹಕಾರ ಪಡೆದಿರುವುದು ತನಿಖೆಯಿಂದ ತಿಳಿದಿತ್ತು. ಈ ಭೂಮಿಯಲ್ಲಿಯೇ ಸುಮಾರು 40.08 ಎಕರೆಯ ಮೂರು ತುಂಡುಗಳನ್ನು ರಾಬರ್ಟ್ ವಾದ್ರಾ 2006ರಲ್ಲಿ ಖರೀದಿಸಿ 2010ರ ಡಿಸೆಂಬರ್ ನಲ್ಲಿ ಮಾರಾಟ ಮಾಡಿರುವುದು ಬಯಲಾಗಿತ್ತು. ಇದೇ ಜಾಗದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ 5 ಎಕರೆ ಭೂಮಿಯನ್ನು 2006ರ ಏಪ್ರಿಲ್‌ನಲ್ಲಿ ಪಹ್ವಾರಿಂದ ಖರೀದಿ ನಂತರ ಫೆಬ್ರವರಿ 2010ರಲ್ಲಿ ಮಾರಾಟ ಮಾಡಿದ್ದುನ್ನು ಜಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೇ ಲಂಡನ್‌ನಲ್ಲಿ ಆಸ್ತಿ ಖರೀದಿ ಮಾಡಿದ ಪ್ರಕರಣದಲ್ಲೂ ವಾದ್ರಾ ಅವರ ಪಾತ್ರ ಇರುವುದನ್ನು ತನಿಖೆ ವೇಳೆ ಪತ್ತೆ ಮಾಡಲಾಗಿತ್ತು. ಲಂಡನ್ ಆಸ್ತಿ ಖರೀದಿ ಪ್ರಕರಣದ ತನಿಖೆ ವೇಳೆಯೂ ರಾಬರ್ಟ್ ವಾದ್ರಾ ಹಾಗೂ ಥಂಪಿ ನಡುವಿನ ಗಟ್ಟಿ ಬಾಂಧವ್ಯ ಇರುವುದು ಖಚಿತವಾಗಿತ್ತು.ಲಂಡನ್‌ನಲ್ಲಿ ಸಂಜಯ್ ಭಂಡಾರಿ 2009ರ ಡಿಸೆಂಬರ್ ನಲ್ಲಿ ಖರೀದಿಸಿದ್ದ ಆಸ್ತಿಯನ್ನುವಾದ್ರಾ ಹಣದ ನೆರವಿನಿಂದಲೇ ನವೀಕರಣಗೊಳಿಸಿದ್ದು, ಇಲ್ಲಿಯೇ ವಾದ್ರಾ ಮೂರ್ನಾಲ್ಕು ಬಾರಿ ತಂಗಿರುವುದುತನಿಖೆ ವೇಳೆ ಬಯಲಾಗಿತ್ತು.