ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Indigo: ದೆಹಲಿಯಲ್ಲಿ ಇಂಡಿಗೋ ವಿಮಾನ ಸಂಸ್ಥೆ ಕಿರಿಕಿರಿ, ಲೇಖಕ ವಿಕ್ರಂ ಹತ್ವಾರ್‌ ಕಿಡಿ, ಆಗಿದ್ದೇನು?

Indigo: ದೆಹಲಿಯಲ್ಲಿ ಇಂಡಿಗೋ ವಿಮಾನ ಸಂಸ್ಥೆ ಕಿರಿಕಿರಿ, ಲೇಖಕ ವಿಕ್ರಂ ಹತ್ವಾರ್‌ ಕಿಡಿ, ಆಗಿದ್ದೇನು?

ಇಂಡಿಗೋ ( Indigo) ವಿಮಾನ ಯಾನ ಸಂಸ್ಥೆಯ ಅಚಾತುರ್ಯಕ್ಕೆ ಕನ್ನಡದ ಲೇಖಕ ವಿಕ್ರಂ ಹತ್ವಾರ್‌( Vikram Hathwar) ಅವರು ತಮ್ಮ ತಾಯಿ ದೆಹಲಿ ವಿಮಾನ ನಿಲ್ದಾಣ( Delhi Airport) ನಲ್ಲಿ ಅನುಭವಿಸಿದ ಕಹಿ ಘಟನೆಯನ್ನು ಬರೆದುಕೊಂಡಿದ್ದಾರೆ.

ವಿಕ್ರಂ ಹತ್ವಾರ್‌ ಅವರ ತಾಯಿಗೆ ಇಂಡಿಗೋ ವಿಮಾನ ಸಂಸ್ಥೆಯಿಂದ ಕಿರಿಕಿರಿ  ಆಗಿದೆ.
ವಿಕ್ರಂ ಹತ್ವಾರ್‌ ಅವರ ತಾಯಿಗೆ ಇಂಡಿಗೋ ವಿಮಾನ ಸಂಸ್ಥೆಯಿಂದ ಕಿರಿಕಿರಿ ಆಗಿದೆ.

ದೆಹಲಿ: ನಮ್ಮೂರಿನ ರೈಲು ನಿಲ್ದಾಣದಲ್ಲಿ ರೈಲುಗಳು ಫ್ಲಾಟ್‌ಫಾರಂ ಬದಲಿಸುವುದು ಗೊತ್ತು. ಕ್ಷಣಮಾತ್ರದಲ್ಲಿ ಅದನ್ನು ಬದಲಿಸಿಕೊಂಡು ಹೋಗಿ ರೈಲು ಹಿಡಿಯಬಹುದು. ಆದರೆ ವಿಮಾನ ಟರ್ಮಿನಲ್‌ ಬದಲಾದರೆ ಏನು ಮಾಡುವುದು. ಇಂತಹದೇ ಅನುಭವ ದೆಹಲಿಯಲ್ಲಿ ಕನ್ನಡದ ಲೇಖಕ ವಿಕ್ರಂ ಹತ್ವಾರ್‌ ಅವರ ತಾಯಿ ಅವರಿಗೆ ಆಗಿದೆ. ಟರ್ಮಿನಲ್‌ ಬದಲಿಸಿದರೂ ಅಲ್ಲಿಗೆ ತೆರಳಲು ಅವಕಾಶ ನೀಡದೇ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟ ಇಂಡಿಗೋ ( Indigo) ವಿಮಾನ ಸಂಸ್ಥೆ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ತಮ್ಮ ತಾಯಿಯವರಿಗೆ ಆದ ಅನುಭವವನ್ನು ವಿಕ್ರಂ ಹತ್ವಾರ್‌ ಅವರನ್ನು ಫೇಸ್‌ಬುಕ್‌ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನು ಬೆಂಬಲಿಸಿರುವ ಹಲವರು ಇದೇ ಇಂಡಿಗೋ ವಿಮಾನ ಸೇವೆಯಿಂದ ತಮಗೆ ಆದ ಕಿರಿಕಿರಿಯ ಅನುಭವವನ್ನೂ ದಾಖಲಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ವಿಕ್ರಂ ಹತ್ವಾರ್‌ ಅವರ ತಾಯಿ ಹಾಗೂ ಇತರರು ಶುಕ್ರವಾರ ಮಧ್ಯಾಹ್ನ 2.15ಕ್ಕೆ ದೆಹಲಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಹೊರಡುವ ವಿಮಾನದಲ್ಲಿ ಬರಬೇಕಿತ್ತು. ಟಿಕೆಟ್‌ ಬುಕ್ಕಿಂಗ್‌ ಆದಾಗ ಅದು ಟರ್ಮಿನಲ್‌ 2 ಎನ್ನುವ ಮಾಹಿತಿ ನೀಡಲಾಗಿತ್ತು. ವಿಮಾನ ಹೊರಡುವುದು ಟರ್ಮಿನಲ್‌ 1ರಿಂದ ಎಂದು ಬದಲಾಯಿಸಲಾಗಿತ್ತು. ಆದರೆ ನಿಲ್ದಾಣದ ಟರ್ಮಿನಲ್‌ 2 ನ ಲ್ಲಿಯೇ ಸಿಬ್ಬಂದಿಗಳು ಚೆಕ್‌ ಇನ್‌ ಮಾಡಿದ್ಧಾರೆ. ಎಲ್ಲ ಮುಗಿಸಿಕೊಂಡು ಒಳ ಹೋದಾಗ ಟರ್ಮಿನಲ್‌ ಬದಲಾಗಿರುವ ಮಾಹಿತಿ ದೊರೆತಿದೆ.

ಆಗಲೇ ಸಮಯ ಆಗಿದ್ದರಿಂದ ಟರ್ಮಿನಲ್‌ ಬದಲಿಸುವುದು ಕಷ್ಟ. ಆದರೆ ಟರ್ಮಿನಲ್‌ಗೆ ಹೋಗಲು ಪ್ರತಿಯೊಬ್ಬರೂ 2,500 ರೂ.ಗಳನ್ನು ನೀಡಿದರೆ ಕಳುಹಿಸುವುದಾಗಿ ಅಲ್ಲಿದ್ದ ಸಿಬ್ಬಂದಿ ತಿಳಿಸಿದ್ದಾರೆ. ಟರ್ಮಿನಲ್‌ ವಿಚಾರಾಗಿ ಟಿಕೆಟ್‌ನಲ್ಲಿ ಇರುವ ಅಂಶ, ಬದಲಾಗಿದ್ದರೂ ಅದನ್ನು ಗಮನಕ್ಕೆ ತಾರದೇ ಚೆಕ್‌ ಮಾಡಿದ್ದಾದರೂ ಏಕೆ ಎನ್ನುವ ಪ್ರಶ್ನೆ ಕೇಳಿದರೂ ಅಲ್ಲಿಂದ ಉತ್ತರ ಬಂದಿಲ್ಲ. ಇದರಿಂದ ಹೆಚ್ಚುವರಿ ಹಣ ಪಾವತಿಸಿ ಬೆಂಗಳೂರಿಗೆ ಬರುವಂತಾಗಿದೆ.

ನಿಮ್ಮ ಸಿಬ್ಬಂದಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ನನ್ನ ತಾಯಿ ಹಾಗೂ ಇತರರು ದೆಹಲಿ ವಿಮಾನ ನಿಲ್ದಾಣದಲ್ಲಿ ಕಿರಿಕಿರಿ ಅನುಭವಿಸುವಂತಾಯಿತು. ಸರಿಯಾಗಿ ಮಾಹಿತಿ ನೀಡದೇ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟಿರುವುದನ್ನು ನೋಡಿದರೆ ಹೊಸ ರೀತಿಯ ವ್ಯಾಪಾರಕ್ಕೆ ಇಂಡಿಗೋ ವಿಮಾನ ಯಾನ ಸಂಸ್ಥೆ ಇಳಿದಂತಿದೆ. ಅಷ್ಟೇ ಅಲ್ಲದೇ ಹಿರಿಯ ನಾಗರೀಕರನ್ನು ಹಾಗೂ ಇಂಗ್ಲೀಷ್‌ , ಹಿಂದಿ ಬಾರದವನ್ನು ಸುಲಿಗೆ ಮಾಡಲು ಇಂತಹ ಮಾರ್ಗೋಪಾಯಗಳನ್ನು ಕಂಡುಕೊಂಡಿರುವುದು ನಿಜಕ್ಕೂ ಸೋಜಿಗದ ಸಂಗತಿ. ಈ ವಿಚಾರದಲ್ಲಿ ಸಂಪರ್ಕ ಸಾಧಿಸಲು ಪ್ರಯತ್ನಿಸಿದರೂ ಅಧಿಕಾರಿಗಳು ಮಾತನಾಡಲು ನಿರಾಕರಿಸಿರುವುದು ಸೇವಾಪರತೆಯನ್ನು ತೋರಿಸಲಿದೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಈ ಬಗ್ಗೆ ವಿಮಾನ ಯಾನ ಮಾಡುವ ಪ್ರಯಾಣಿಕರು ಗಮನಿಸಬೇಕು ಎಂದು ವಿಕ್ರಂ ಹತ್ವಾರ್‌ ಬರೆದುಕೊಂಡಿದ್ದಾರೆ.

ಇದಕ್ಕೆ ಹಲವರು ದನಿಗೂಡಿಸಿದ್ದಾರೆ. ಲೇಖಕಿ ರೇಣುಕಾ ಮಂಜುನಾಥ್‌, ಹಿಂದೊಮ್ಮೆ ಇಂಡಿಗೋದಲ್ಲಿ ಪ್ರಯಾಣಿಸಲು ಮುಂದಾದಾಗ ದಿನಾಂಕ ವ್ಯತ್ಯಾಸವಾಗಿತ್ತು. ಇದನ್ನು ಕೇಳಿಕೊಂಡರೂ ಒಪ್ಪಲಿಲ್ಲ. ಕೊನೆಗೆ ಆರು ಸಾವಿರ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಬೇಸರ ಹೊರ ಹಾಕಿದ್ದಾರೆ.

ಶೋಭಾ ದಿನೇಶ್‌ ಎಂಬುವವರು ತಮ್ಮ ಸ್ನೇಹಿತರೊಬ್ಬರಿಗೆ ಇದೇ ರೀತಿ ಇಂಡಿಗೋ ಪ್ರಯಾಣಕ್ಕೂ ಮುನ್ನ ಗೊಂದಲವಾಗಿ ಹೆಚ್ಚುವರಿ ಹಣ ಪಾವತಿಸಿದ ಉದಾಹರಣೆಯಿದೆ ಎಂದು ಉಲ್ಲೇಖಿಸಿದ್ದಾರೆ.

ಸ್ಮಿತಾ ಮಿಥುನ್‌ ಎನ್ನುವವರು, ಹೈದ್ರಾಬಾದ್‌ ವಿಮಾನ ನಿಲ್ದಾಣದಲ್ಲಿ ಇಂತದೇ ಭಯಾನಕ ಅನುಭವ ನನಗೂ ಆಗಿತ್ತು. ಇಂಡಿಗೋ ಎಂದಿಗೂ ಪ್ರಯಾಣ ಸ್ನೇಹಿ ವಿಮಾನ ಅಲ್ಲವೇ ಅಲ್ಲ ಎಂದು ಕಿಡಿ ಕಾರಿದ್ದಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024

ವಿಭಾಗ