Photography Award: ಬೆಳಗಿನ ವಾಯು ವಿಹಾರ ಉಪಯೋಗ ನೋಡಿ, ಭಾರತದ 9 ವರ್ಷದ ಬಾಲಕಿ ತೆಗೆದ ಜೋಡಿ ನವಿಲ ಛಾಯಾಚಿತ್ರಕ್ಕೆ ಬಿಬಿಸಿ ಪ್ರಶಸ್ತಿ-nation news morning walk got award in wildlife photographer of year competition for 9 year old shreyovi mehta kub ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Photography Award: ಬೆಳಗಿನ ವಾಯು ವಿಹಾರ ಉಪಯೋಗ ನೋಡಿ, ಭಾರತದ 9 ವರ್ಷದ ಬಾಲಕಿ ತೆಗೆದ ಜೋಡಿ ನವಿಲ ಛಾಯಾಚಿತ್ರಕ್ಕೆ ಬಿಬಿಸಿ ಪ್ರಶಸ್ತಿ

Photography Award: ಬೆಳಗಿನ ವಾಯು ವಿಹಾರ ಉಪಯೋಗ ನೋಡಿ, ಭಾರತದ 9 ವರ್ಷದ ಬಾಲಕಿ ತೆಗೆದ ಜೋಡಿ ನವಿಲ ಛಾಯಾಚಿತ್ರಕ್ಕೆ ಬಿಬಿಸಿ ಪ್ರಶಸ್ತಿ

Wild life photography ಉತ್ತರ ಪ್ರದೇಶದ ಬಾಲಕಿ ಶ್ರೇಯೋವಿ ಮೆಹ್ತಾ ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ಸಾಧನೆ ಮಾಡಿದ್ದಾರೆ.

ಶ್ರೇಯೋವಿ ಮೆಹ್ತಾ ಹಾಗೂ ಆಕೆ ಕ್ಲಿಕ್ಕಿಸಿದ ಫೋಟೋ
ಶ್ರೇಯೋವಿ ಮೆಹ್ತಾ ಹಾಗೂ ಆಕೆ ಕ್ಲಿಕ್ಕಿಸಿದ ಫೋಟೋ

ದೆಹಲಿ: ಆಕೆಯ ಹೆಸರು ಶ್ರೇಯೋವಿ ಮೆಹ್ತಾ(Shreyovi Mehta).ವಯಸ್ಸು ಒಂಬತ್ತು. ಈಗ ನಾಲ್ಕನೇ ತರಗತಿ ವಿದ್ಯಾರ್ಥಿ. ಉತ್ತರಪ್ರದೇಶದ ಫರಿದಾಬಾದ್‌ ನಿವಾಸಿ. ಬೆಳಗಿನ ಸುಖ ನಿದ್ದೆಯನ್ನು ಎಲ್ಲಾ ಮಕ್ಕಳಂತೆ ಅನುಭವಿಸುವ ವೇಳೆ ಶ್ರೇಯೋವಿ ಅಪ್ಪನೊಂದಿಗೆ ವಾಯು ವಿಹಾರಕ್ಕೆ ಹೊರಡುತ್ತಿದ್ದ. ಊರಿನ ಕೆರೆಯ ಮೇಲೆ ನಡೆದು ಹೋಗುವಾಗ ಅಲ್ಲಿನ ಚಿತ್ರಣ ಆತನನ್ನು ಆಕರ್ಷಿಸಿತ್ತು. ನಂತರ ಅಪ್ಪನೊಂದಿಗೆ ಕಾಡಿಗೆ ಹೋದಾಗ ಸೂರ್ಯೋದಯ, ನವಿಲಿನ ನರ್ತನ,ಶಬ್ದ, ಸುಂದರ ಪರಿಸರ ಆಕೆಯ ಕಣ್ಣಿನಲ್ಲಿ ವಿಭಿನ್ನ ಚಿತ್ರಣವನ್ನೇ ಸೃಷ್ಟಿಸಿತ್ತು. ಇದನ್ನು ಕ್ಯಾಮರಾ ಕಣ್ಣಿನಲ್ಲಿ ಸೆರೆಹಿಡಿಯಬೇಕು ಎಂದು ಶ್ರೇಯೋವಿ ಬಯಸಿದಳು. ಅಪ್ಪನಿಂದಲೂ ಪ್ರೋತ್ಸಾಹ ಸಿಕ್ಕಿತು. ಆಕೆಯ ಕೌಶಲ್ಯ ಹಾಗೂ ಛಾಯಾಚಿತ್ರಣ ಕಲೆ ಹೇಗಿದೆ ಎಂದರೆ ಈಗಲೇ ರಾಷ್ಟ್ರೀಯ ಪ್ರಶಸ್ತಿಯೂ ಸಿಕ್ಕಿತು. ಅದೂ ಬಿಬಿಸಿಯ ಪ್ರತಿಷ್ಠಿತ ಪ್ರಶಸ್ತಿ.

ಬೆಳಗಿನ ನಡಿಗೆ ಇಷ್ಟೊಂದು ಪ್ರೇರಣೆ ನೀಡಲಿದೆ ಎನ್ನುವುದು ಆಕೆಗೂ ಗೊತ್ತಿರಲಿಲ್ಲ. ಎದ್ದು ಪ್ರಕೃತಿಯೊಂದಿಗೆ ಹೆಜ್ಜೆ ಹಾಕಿದ ಮೇಲೆ ಇದು ತಿಳಿದಿದ್ದು. ವನ್ಯಜೀವಿ ಛಾಯಾಗ್ರಾಹಣ 10 ವರ್ಷಗಳು ಮತ್ತು ಒಳಗಿನವರ ವಿಭಾಗದ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆಲ್ಲಲು ಪ್ರೇರಣೆಯಾಯಿತು. ಅಷ್ಟೇ ಅಲ್ಲದೇ 'ವರ್ಷದ ವನ್ಯಜೀವಿ ಛಾಯಾಗ್ರಾಹಕ ಪ್ರಶಸ್ತಿಯಲ್ಲಿ ರನ್ನರ್ ಅಪ್ ಕೂಡ ಆಕೆಯ ಮುಡಿಗೇರಿತು.

ಶ್ರೇಯೋವಿ ಮೆಹ್ತಾ ಫೋಟೋ ಭಾರತದ ಭರತ್‌ಪುರದಲ್ಲಿರುವ ಕಿಯೋಲಾಡಿಯೊ ರಾಷ್ಟ್ರೀಯ ಉದ್ಯಾನವನದಲ್ಲಿ ಜೋಡಿ ನವಿಲುಗಳು ಬೆಳಗಿನ ಬದುಕನ್ನು ತೆರೆದಿಡುತ್ತದೆ. ಶ್ರೇಯೋವಿ ಮೆಹ್ತಾ 60 ನೇ ಬಿಬಿಸಿ( BBC) ವನ್ಯಜೀವಿ ಛಾಯಾಗ್ರಾಹಕ ವರ್ಷದ ಸ್ಪರ್ಧೆಯ ರನ್ನರ್ ಅಪ್ ಎನ್ನುವ ಪ್ರಶಸ್ತಿ ಪಡೆಯಲು ಆ ಚಿತ್ರ ಪ್ರೇರೇಪಿಸಿದೆ.

ವರ್ಷದ ವನ್ಯಜೀವಿ ಛಾಯಾಗ್ರಾಹಕ ಪ್ರಶಸ್ತಿಯಲ್ಲಿ '10 ವರ್ಷಗಳು ಮತ್ತು ಅಂಡರ್' ವಿಭಾಗದಲ್ಲಿ ರನ್ನರ್ ಅಪ್ ಸ್ಥಾನವನ್ನು ಪಡೆದರು. ಅವಳ ಗೆಲುವಿನ ಹಿಂದಿನ ಕಥೆ ಏನು? ಸರಿ, ಭರತ್‌ಪುರದ ಕಿಯೋಲದೇವ್ ರಾಷ್ಟ್ರೀಯ ಉದ್ಯಾನವನದ ಕಾಡುಗಳ ಮೂಲಕ ಬೆಳಗಿನ ಜಾವದಲ್ಲಿ ನಡೆದಾಡುತ್ತಿದ್ದಾಗ ಎರಡು ಪೀಹೆನ್‌ಗಳೊಂದಿಗೆ ಇದು ಆಕಸ್ಮಿಕವಾಗಿ ಎದುರಾಗಿದ್ದು ಮೆಹ್ತಾ ಅವರನ್ನು ಇಂದು ಬೆಳಕಿಗೆ ತಂದಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ (NHM) ಪ್ರತಿಷ್ಠಿತ ಪ್ರಶಸ್ತಿಯ 60 ನೇ ಆವೃತ್ತಿಯಲ್ಲಿ ಶ್ರೇಯೋವಿ ಮೆಹ್ತಾಗೆ ಬಹುಮಾನ ಬಂದಿದೆ. ಅಕ್ಟೋಬರ್ 8 ರಂದು ಲಂಡನ್‌ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಲ್ಲಿ ನಡೆಯುವ ಪ್ರಶಸ್ತಿ ಸಮಾರಂಭದಲ್ಲಿ ಫರಿದಾಬಾದ್‌ನ 5 ನೇ ತರಗತಿ ವಿದ್ಯಾರ್ಥಿ ಪದಕವನ್ನು ಸ್ವೀಕರಿಸುತ್ತಾರೆ. "ಇನ್ ದಿ ಸ್ಪಾಟ್‌ಲೈಟ್" ಎಂಬ ಶೀರ್ಷಿಕೆಯಡಿಯಲ್ಲಿ, ಮೆಹ್ತಾ ಅವರ ಫೋಟೋವು ಕಿಯೋಲಾಡಿಯೊ ರಾಷ್ಟ್ರೀಯ ಉದ್ಯಾನವನದ ಮರಗಳ ಮೇಲಾವರಣದ ಅಡಿಯಲ್ಲಿ ಸಿಲೂಯೆಟ್ ಮಾಡಲಾದ ಜೋಡಿ ನವಿಲುಗಳನ್ನುಚಿತ್ರೀಕರಿಸಿರುವುದು ವಿಶೇಷ.117 ದೇಶಗಳು ಮತ್ತು ಪ್ರಾಂತ್ಯಗಳಿಂದ ಎಲ್ಲಾ ವಯಸ್ಸಿನ ಮತ್ತು ಅನುಭವದ ಹಂತಗಳ ಭಾಗವಹಿಸುವವರ ಸುಮಾರು 60,000 ಛಾಯಾಚಿತ್ರಗಳಲ್ಲಿ ಮೆಹ್ತಾ ಚಿತ್ರವೂ ಸೇರಿದೆ ಎನ್ನುವುದು ವಿಶೇಷ.

ತನ್ನ ಸಾಧನೆಯ ಬಗ್ಗೆ ಮಾತನಾಡಿದ ಶ್ರೇಯೋವಿ ಮೆಹ್ತಾ, ವನ್ಯಜೀವಿ ಛಾಯಾಗ್ರಹಣದ ಅತಿದೊಡ್ಡ ಹಂತದಲ್ಲಿ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಿಂದ ನಮ್ಮ ರಾಷ್ಟ್ರೀಯ ಪಕ್ಷಿಯ ನನ್ನ ಚಿತ್ರಕ್ಕೆ ಮಾನ್ಯತೆ ನೀಡಿರುವುದು ನನಗೆ ಖುಷಿ ತಂದಿದೆ. ಮುಂದೊಂದು ದಿನ ನಮ್ಮ ರಾಷ್ಟ್ರೀಯ ಪ್ರಾಣಿ - ಹುಲಿಗೂ ಅದೇ ಮನ್ನಣೆ ಸಿಗುವಂತೆ ನನ್ನು ಅಭ್ಯಾಸವನ್ನು ಮುಂದುವರಿಸುತ್ತೇನೆ ಎಂದು ಪಿಟಿಐನೊಂದಿಗೆ ಅಭಿಪ್ರಾಯ ಹಂಚಿಕೊಂಡರು.

ವರ್ಷದ ವನ್ಯಜೀವಿ ಛಾಯಾಗ್ರಾಹಕ ಪ್ರದರ್ಶನವು ಅಕ್ಟೋಬರ್ 11 ರಂದು NHM ನಲ್ಲಿ ಆರಂಭಗೊಂಡು 2025ರ ಜೂನ್ 29 ರವರೆಗೆ ಮುಂದುವರಿಯಲಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.