ಕನ್ನಡ ಸುದ್ದಿ  /  Nation And-world  /  National Milk Day Father Of Milk Revolution Milkman Dr Verghese Kurien Profile Rmy

National Milk Day: ರಾಷ್ಟ್ರೀಯ ಹಾಲು ದಿನ; ಕ್ಷೀರ ಕ್ರಾಂತಿಯ ಹರಿಕಾರ, ಮಿಲ್ಕ್ ಮ್ಯಾನ್ ಖ್ಯಾತಿಯ ಡಾ ವರ್ಗೀಸ್ ಕುರಿಯನ್ ಯಾರು

ನ. 26 ರಂದು ಶ್ವೇತ ಕ್ರಾಂತಿಯ ಪಿತಾಮಹ ವರ್ಗೀಸ್ ಕುರಿಯನ್ ಅವರ ಜನ್ಮದಿನ. ಭಾರತವನ್ನ ಜಗತ್ತಿನಲ್ಲೇ ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶವನ್ನಾಗಿಸಿದ ಕುರಿಯನ್ ಸಾಧನೆ ಹೀಗಿದೆ.

ಪ್ರತಿ ವರ್ಷದ ನವೆಂಬರ್ 26 ರಂದು ಶ್ವೇತ ಕ್ರಾಂತಿಯ ಹರಿಕಾರ ಡಾ ವರ್ಗೀಸ್ ಅವರ ಜನ್ಮದಿನವನ್ನು ರಾಷ್ಟ್ರೀಯ ಹಾಲು ದಿನವನ್ನಾಗಿ ಆಚರಿಸಲಾಗುತ್ತದೆ.
ಪ್ರತಿ ವರ್ಷದ ನವೆಂಬರ್ 26 ರಂದು ಶ್ವೇತ ಕ್ರಾಂತಿಯ ಹರಿಕಾರ ಡಾ ವರ್ಗೀಸ್ ಅವರ ಜನ್ಮದಿನವನ್ನು ರಾಷ್ಟ್ರೀಯ ಹಾಲು ದಿನವನ್ನಾಗಿ ಆಚರಿಸಲಾಗುತ್ತದೆ.

ಬೆಂಗಳೂರು: ದೇಶದಾದ್ಯಂತ ಪ್ರತಿ ವರ್ಷ ನವೆಂಬರ್ 26 ರಂದು ರಾಷ್ಟ್ರೀಯ ಹಾಲು ದಿನವನ್ನಾಗಿ (National Milk Day) ಆಚರಿಸಲಾಗುತ್ತದೆ. ಭಾರತದಲ್ಲಿ ಶ್ವೇತ ಕ್ರಾಂತಿಯ ಪಿತಾಮಹರಾದ ಡಾ ವರ್ಗೀಸ್ ಕುರಿಯನ್ (Dr Varghese Kurien) ಅವರ ಜನ್ಮದಿನದವನ್ನು ರಾಷ್ಟ್ರೀಯ ಹಾಲು ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ.

ಹೈನುಗಾರಿಕೆ ಮೂಲಕ ರೈತರು ಇವತ್ತು ಬದುಕು ಕಟ್ಟಿಕೊಂಡಿದ್ದಾರೆ, ಇವತ್ತು ಹಾಲಿನ ಡೈರಿಗಳು ಇವೆ, ಹಾಲು ಉತ್ಪಾದಕರ ಒಕ್ಕೂಟಗಳಿವೆ, ಹೈನುಗಾರಿಕೆ ಕ್ಷೇತ್ರದಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತಿದೆ ಎಂದರೆ ಇದಕ್ಕೆಲ್ಲ ಕಾರಣಕರ್ತರು ಡಾ ವರ್ಗೀಸ್ ಕುರಿಯನ್ ಅವರು. ಜಗತ್ತಿನಲ್ಲೇ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುವ ದೇಶಗಳಲ್ಲಿ ಭಾರತ ಅಗ್ರ ಸ್ಥಾನದಲ್ಲಿ ನಿಂತಿದೆ ಎಂದರೆ ಅದಕ್ಕೆ ಕುರಿಯನ್ ಅವರೇ ಕಾರಣ. ಅಷ್ಟಕ್ಕೂ ಡಾ ವರ್ಗೀಸ್ ಕುರಿಯನ್ ಯಾರು, ಅವರ ಸಾಧನೆ ಏನು, ಹಸಿರು ಕ್ರಾಂತಿ ಮಾಡಿದ್ದೇಗೆ ಅನ್ನೋದನ್ನ ತಿಳಿಯೋಣ.

ಕೇರಳದಲ್ಲಿ ಜನಿಸಿದ ಕುರಿಯನ್ ರೈತರ ಜೀವನ ಮಟ್ಟ ಸುಧಾರಿಸಲು ಪಣ

ಭಾರತದ ಶ್ರೇತ ಕ್ರಾಂತಿಯ ಹರಿಕಾರರಾದ ಡಾ ವರ್ಗೀಸ್ ಕುರಿಯನ್ ಅವರು 1921ರ ನವೆಂಬರ್‌ನಲ್ಲಿ ಕೇಳರದ ಕೋಝಿಕೋಟ್‌ನಲ್ಲಿ ಸಿರಿಯನ್ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದರು. 1940 ರಲ್ಲಿ ಲೊಯೋಲಾ ಕಾಲೇಜಿನನಲ್ಲಿ ಪದವಿ ಪಡೆಯುತ್ತಾರೆ. ಆ ನಂತರ ಚೆನ್ನೈನ ಗಿಂಡಿ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಪದವಿಯನ್ನು ಮುಗಿಸುತ್ತಾರೆ.

ಇದಾದ ಬಳಿಕ ಕುರಿಯನ್ ಅವರು ಡೈರಿ ಇಂಜಿನಿಯರಿಂಗ್ ಅಧ್ಯಯಕ್ಕೆ ಮುಂದಾಗುತ್ತಾರೆ. ಇದಕ್ಕೆ ಭಾರತ ಸರ್ಕಾರ ವಿದ್ಯಾರ್ಥಿ ವೇತನವನ್ನು ನೀಡಿ ಪ್ರೋತ್ಸಾಹವನ್ನು ನೀಡುತ್ತದೆ. 1948 ರಲ್ಲಿ ವರ್ಗೀಸ್ ಕುರಿಯನ್ ಅವರು ಮಿಚಿಗನ್ ಸ್ಟೇಟ್ ಯೂನಿವರ್ಸಿಯಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪಡವಿ ಪಡೆದರು, ಇವರು ಚಿಕ್ಕ ವಯಸ್ಸಿನಲ್ಲೇ ಡೈರಿ ಇಂಜಿನಿಯರಿಂಗ್ ಮುಗಿಸಿ ಸೈ ಎನಿಸಿಕೊಳ್ಳುತ್ತಾರೆ.

ಗುಜರಾತ್‌ನಿಂದ ಶ್ವೇತ ಕ್ರಾಂತಿಗೆ ನಾಂದಿ ಹಾಡಿದ್ದ ಡಾ ವರ್ಗೀಸ್ ಕುರಿಯನ್

ತಮ್ಮ ಶಿಕ್ಷಣವನ್ನು ಮುಗಿಸಿದ ಬಳಿಕ ಹಾಲು ಉತ್ಪಾದನೆಯಲ್ಲಿ ದೇಶವನ್ನು ಸ್ವಾವಲಂಬಿಯಾಗಿಸಲು ಮತ್ತು ರೈತರ ಜೀವನ ಮಟ್ಟವನ್ನು ಸುಧಾರಿಸಲು ಪಣತೊಟ್ಟು ತ್ರಿಭುವನ್ ಭಾಯಿ ಪಟೇಲ್ ಅವರೊಂದಿಗೆ ಖೇಡಾ ಜಿಲ್ಲಾ ಸಹಕಾರ ಸಂಘವನ್ನು ಪ್ರಾರಂಭಿಸುತ್ತಾರೆ. 1949 ರಲ್ಲಿ ಗುಜರಾತ್‌ನ ಎರಡು ಗ್ರಾಮಗಳನ್ನು ಸದಸ್ಯರನ್ನಾಗಿ ಡೈರಿ ಸಹಕಾರಿ ಒಕ್ಕೂಟವನ್ನು ರಚಿಸುತ್ತಾರೆ. ಹೆಚ್ಚಿನ ಸಂಶೋಧನೆಗಳನ್ನು ಮಾಡಿದ ಬಳಿಕ ಕುರಿಯನ್ ಅವರು ಎಮ್ಮೆಯ ಹಾಲಿನಿಂದ ಪುಡಿಯನ್ನು ತಯಾರಿಸುತ್ತಾರೆ. ಈ ಸಾಧನೆ ಇವರಿಗೆ ದೊಡ್ಡ ಹೆಸರನ್ನು ತಂದುಕೊಡುತ್ತದೆ. ಜೊತೆಗೆ ಎಮ್ಮೆಯ ಹಾಲಿನಿಂದ ಹುಡಿಯನ್ನು ಮಾಡಿದ ವಿಶ್ವದ ಮೊದಲ ವ್ಯಕ್ತಿ ಎಂಬ ದಾಖಲೆಯನ್ನು ಬರೆಯುತ್ತಾರೆ. ಇದಕ್ಕೂ ಮೊದಲು ಹಾಲಿನ ಕಂಪನಿ ಹಸುವಿನ ಹಾಲಿನಿಂದ ಪುಡಿಯನ್ನು ತಯಾರು ಮಾಡಲಾಗುತ್ತಿತ್ತು.

ಹಾಲವು ಉದ್ಯಮವನ್ನ ಶಾಶ್ವತವಾಗಿ ಬದಲಾಯಿಸಿದ ಕ್ಷೀರ ಕ್ರಾಂತಿಕಾರ

ಶ್ವೇತ ಕ್ರಾಂತಿಯ ಪಿತಾಮಹ ಕುರಿಯನ್ ಅವರು ಆಪರೇಷನ್ ಫ್ಲಡ್ ಕಲ್ಪನೆಯು ಭಾರತದ ಹಾಲವು ಉದ್ಯಮವನ್ನು ಶಾಶ್ವತವಾಗಿ ಬದಲಾಯಿಸಿತು. ಹಾಲಿನ ಕೊರತೆಯಿಂದ ಬಳಲುತ್ತಿದ್ದ ಬಾರತವನ್ನು 3 ದಶಕಗಳಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶವನ್ನಾಗಿ ಮಾಡಿದರು. ಕುರಿಯನ್ ಅವರ ಈ ಅಪಾರವಾದ ಕೊಡುಗೆಗಾಗಿ ರಾಮನ್ ಮ್ಯಾಗ್ಸೆಸೆ, ಪದ್ಮವಿಭೂಷಣ ಮತ್ತು ವಿಶ್ವ ಆಹಾರ ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

ಗುಜರಾತ್, ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ರೈತರು ಹೈನುಗಾರಿಕೆಯಿಂದಲೇ ಬದುಕು ಕಟ್ಟಿಕೊಂಡಿದ್ದಾರೆ. ಫಾರ್ಮ್‌ಗಳ ಮೂಲಕ ಕೆಲವರು ಉದ್ಯಮವನ್ನಾಗಿಸಿಕೊಂಡಿದ್ದಾರೆ. ಅಪೌಷ್ಠಿಕತೆಯನ್ನು ತೊಡೆದು ಇವತ್ತು ಶಾಲೆಗಳಲ್ಲಿ ಮಕ್ಕಳಿಗೆ ಹಾಲು ನೀಡಲಾಗುತ್ತಿದೆ. ಡಾ ವರ್ಗೀಸ್ ಕುರಿಯನ್ ಅವರ ಈ ಸಾಧನೆ, ಕೊಡುಗೆಯನ್ನು ಭಾರತ ಸದಾ ಸ್ಮರಿಸುತ್ತದೆ.

ವಿಭಾಗ