Modi cabinet:2047ರ ಭಾರತದ ಸ್ವಾತಂತ್ರ್ಯ ಶತಮಾನೋತ್ಸವ ಹೇಗಿರಬೇಕು: ಕೇಂದ್ರ ಸಚಿವರಿಗೆ ಮೋದಿ ಪಾಠ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Modi Cabinet:2047ರ ಭಾರತದ ಸ್ವಾತಂತ್ರ್ಯ ಶತಮಾನೋತ್ಸವ ಹೇಗಿರಬೇಕು: ಕೇಂದ್ರ ಸಚಿವರಿಗೆ ಮೋದಿ ಪಾಠ

Modi cabinet:2047ರ ಭಾರತದ ಸ್ವಾತಂತ್ರ್ಯ ಶತಮಾನೋತ್ಸವ ಹೇಗಿರಬೇಕು: ಕೇಂದ್ರ ಸಚಿವರಿಗೆ ಮೋದಿ ಪಾಠ

ಮುಂದಿನ ಲೋಕಸಭೆ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಿರುವ ಬಿಜೆಪಿ ಸಂಪುಟದಲ್ಲೂ ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ. ಈ ವಾರ ಸಂಪುಟ ಪುನರಚನೆ ಯಾಗುವ ಸಾಧ್ಯತೆ ದಟ್ಟವಾಗಿದೆ. ಇದರ ಮೊದಲೇ ಎಲ್ಲಾ ಸಚಿವರ ಸಭೆಯನ್ನು ಪ್ರಧಾನಿ ಮೋದಿ ಆಯೋಜಿಸಿದ್ದುದು ವಿಶೇಷವಾಗಿದೆ.

ದೆಹಲಿಯ ಪ್ರಗತಿ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಚಿವರ ಸಭೆ ನಡೆಸಿದರು.
ದೆಹಲಿಯ ಪ್ರಗತಿ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಚಿವರ ಸಭೆ ನಡೆಸಿದರು.

ದೆಹಲಿ: 2047ರ ಭಾರತದ ಸ್ವಾತಂತ್ರ್ಯ ಶತಮಾನೋತ್ಸವ ಆಚರಿಸಲಿದ್ದು,ಇದಕ್ಕೆ ಪೂರಕವಾಗಿ ಭಾರತ ಹೇಗಿರಬೇಕು ಎನ್ನುವ ಕುರಿತು ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸಚಿವರಿಗೆ ಸುಧೀರ್ಘವಾಗಿ ಸಂವಾದಿಸಿದರು.

ಪ್ರಗತಿ ಮೈದಾನದಲ್ಲಿ ಸೋಮವಾರ ಸಂಜೆ ಆಯೋಜಿಸಲಾಗಿದ್ದ ಸಭೆಯಲ್ಲಿ ಕೇಂದ್ರದ ಸಚಿವರು, ರಾಷ್ಟ್ರೀಯ ಭದ್ರತಾ ಸಲಹೆಗಾರರು, ಇಸ್ರೋದ ಅಧ್ಯಕ್ಷರು ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.

ಈಗಾಗಲೇ ಭಾರತದ ಅಮೃತಮಹೋತ್ಸವ ಮುಗಿದಿದೆ. ಇನ್ನೇನಿದಿದ್ದರೂ ದೇಶದ ಶತಮಾನೋತ್ಸವದ ಕಡೆಗೆ ಗಮನ ನೀಡುವುದು ನಮ್ಮ ಆದ್ಯತೆಯಾಗಲಿ. ಇದಕ್ಕಾಗಿ ಈಗಿನಿಂದಲೇ ನಿಮ್ಮ ಯೋಚನೆಗಳಿಗೆ ರೂಪ ಕೊಡಲು ಪ್ರಯತ್ನಿಸಿ. ದೇಶದ ಇತಿಹಾಸ, ಹಿರಿಮೆ ಗರಿಮೆಯನ್ನು ಸಾರುವಂತಹ ಯೋಜನೆಗಳು ನಮ್ಮದಾಗಬೇಕು. ಇಡೀ ಜಗತ್ತೇ ಭಾರತದ ಕಡೆ ನೋಡುತ್ತಿರುವುದರಿಂದ ನಮ್ಮ ತಯಾರಿಯೂ ಅದೇ ನಿಟ್ಟಿನಲ್ಲಿ ಇರಬೇಕು ಎಂದು ಪ್ರಧಾನಿ ಸಲಹೆ ನೀಡಿದರು.

ಭಾರತವೂ ಪ್ರಬಲ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ. 2047ರ ಸ್ವಾತಂತ್ರ್ಯ ಶತಮಾನೋತ್ಸದ ಹೊತ್ತಿಗೆ ಸಂಪೂರ್ಣ ಆರ್ಥಿಕ ಪ್ರಗತಿ ಸಾಧಿಸಿದ ದೇಶವಾಗಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ಕೋವಿಡ್‌ ನಂತರ ಪ್ರಗತಿಯಲ್ಲಿ ಗಣನೀಯ ಬದಲಾವಣೆ ಆಗಿದೆ. ಆರ್ಥಿಕವಾಗಿಯು ಸುಧಾರಣೆಗಳಾಗಿವೆ. ಇದೇ ವೇಗವನ್ನು ಕಾಪಾಡಿಕೊಳ್ಳಬೇಕು ಎಂದು ಸಚಿವರಿಗೆ ತಿಳಿಸಿದರು.

ಮುಂಬರುವ ಮುಂಗಾರು ಅಧಿವೇಶನದ ವೇಳೆ ಮಂಡನೆಯಾಗಲಿರುವ ಮಸೂದೆಗಳ ಕುರಿತಾಗಿಯೂ ಸಚಿವರು ಸಿದ್ದತೆ ಮಾಡಿಕೊಳ್ಳಬೇಕು. ತಂಡವಾಗಿ ಕೆಲಸ ಮಾಡಬೇಕು ಎನ್ನುವ ಕುರಿತು ಸೂಚನೆ ನೀಡಲಾಗಿದೆ ಎಂದು ಸಚಿವೆ ಮೀನಾಕ್ಷಿ ಲೇಖಿ ಸಭೆ ಬಳಿಕ ತಿಳಿಸಿದರು.

ಭಾರತದ ಮುಂದಿನ ಹಾದಿ ಹೇಗಿರಬೇಕು ಎನ್ನುವ ಕುರಿತು ಹಲವು ವಿಷಯಗಳ ಮಾಹಿತಿಯನ್ನು ನೀಡಲಾಯಿತು. ಮುಖ್ಯವಾಗಿ ಮೂಲಸೌಕರ್ಯ ಅಭಿವೃದ್ದಿ, ರೈಲ್ವೆ, ಬಂದರಗಳು ಅಭಿವೃದ್ದಿ, ರಸ್ತೆಗಳ ಪ್ರಗತಿ ಕುರಿತು ಹೆಚ್ಚಿನ ಚರ್ಚೆಗಳು ನಡೆದವು. ಇದೇ ಪ್ರಗತಿ ಮೈದಾನದಲ್ಲಿ ಜಿ-20 ಸಮಾವೇಶವೂ ಸದ್ಯದಲ್ಲೇ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಸಚಿವರ ಸಭೆ ನಡೆದಿರುವುದು ಮಹತ್ವ ಪಡೆದಿದೆ.

ಮುಂದಿನ ಲೋಕಸಭೆ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಿರುವ ಬಿಜೆಪಿ ಸಂಪುಟದಲ್ಲೂ ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ. ಈ ವಾರ ಸಂಪುಟ ಪುನರಚನೆ ಯಾಗುವ ಸಾಧ್ಯತೆ ದಟ್ಟವಾಗಿದೆ. ಇದರ ಮೊದಲೇ ಎಲ್ಲಾ ಸಚಿವರ ಸಭೆಯನ್ನು ಪ್ರಧಾನಿ ಮೋದಿ ಆಯೋಜಿಸಿದ್ದುದು ವಿಶೇಷವಾಗಿದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.