Yogi Adityanath: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೊಸ ದಾಖಲೆ; ಒಂದೇ ದಿನ 124 ಯೋಜನೆಗಳಿಗೆ ಚಾಲನೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Yogi Adityanath: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೊಸ ದಾಖಲೆ; ಒಂದೇ ದಿನ 124 ಯೋಜನೆಗಳಿಗೆ ಚಾಲನೆ

Yogi Adityanath: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೊಸ ದಾಖಲೆ; ಒಂದೇ ದಿನ 124 ಯೋಜನೆಗಳಿಗೆ ಚಾಲನೆ

ನೋಯ್ಡಾ ಕ್ರೀಡಾಂಣಗದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನೋಯ್ಡಾ ಹಾಗೂ ಗ್ರೇಟರ್ ನೋಯ್ಡಾ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ 1,719 ಕೋಟಿ ರೂಪಾಯಿ ಮೌಲ್ಯದ 124 ಅಭಿವೃದ್ಧಿ ಯೋಜನೆಗಳನ್ನು ಸಿಎಂ ಯೋಗಿ ಆದಿತ್ಯನಾಥ್ ಅವರು ಉದ್ಘಾಟಿಸಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಒಂದೇ ದಿನ 124 ಯೋಜನೆಗಳಿಗೆ ಚಾಲನೆ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಒಂದೇ ದಿನ 124 ಯೋಜನೆಗಳಿಗೆ ಚಾಲನೆ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ಲಖನೌ (ಉತ್ತರ ಪ್ರದೇಶ): ಸತತ ಎರಡನೇ ಬಾರಿಗೆ ಉತ್ತರ ಪ್ರದೇಶದಲ್ಲಿ (Uttar Pradesh) ಅಧಿಕಾರಕ್ಕೆ ಬಂದ ನಂತರ ವಿವಿಧ ಅಭಿವೃದ್ದಿ ಯೋಜನೆಗಳಿಗೆ ಚಾಲನೆ ನೀಡುತ್ತಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (CM Yogi Adityanath) ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ.

ನೋಯ್ಡಾ ಮತ್ತು ಗ್ರೇಟರ್ ನೋಯ್ಡಾ ಪ್ರದೇಶಗಳಲ್ಲ ಇದೇ ಭಾನುವಾರ (ಜೂನ್ 25) ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬರೋಬ್ಬರಿ 124 ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಇದರಲ್ಲಿ ಕಾಮಗಾರಿಗಳಿಗೆ ಶಂಕುಸ್ಥಾಪನೆಯೂ ಸೇರಿದೆ.

ನೋಯ್ಡಾ ಕ್ರೀಡಾಂಣಗದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನೋಯ್ಡಾ ಹಾಗೂ ಗ್ರೇಟರ್ ನೋಯ್ಡಾ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ 1,719 ಕೋಟಿ ರೂಪಾಯಿ ಮೌಲ್ಯದ 124 ಅಭಿವೃದ್ಧಿ ಯೋಜನೆಗಳನ್ನು ಯೋಗಿ ಆದಿತ್ಯನಾಥ್ ಅವರು ಉದ್ಘಾಟಿಸಿದ್ದಾರೆ.

ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನಗಳು, ಕೇಬಲ್ ಸೇತುವೆ ಮಾದರಿಯಲ್ಲಿ ನಿರ್ಮಿಸಲಾದ ಪಾರ್ಥಲ ಮೇಲ್ಸೇತುವೆಯಿಂದ ಹಿಡಿದು ವೇದ್ ವ್ಯಾನ್ ಪಾರ್ಕ್‌ ಸೇರಿದಂತೆ ಹಲವು ಯೋಜನೆಗಳನ್ನು ಲೋಕಾರ್ಪಣೆ ಮಾಡಿದ್ದಾರೆ.

ಬಹು ನಿರೀಕ್ಷಿತ ಪಾರ್ಥಲ ಮೇಲ್ಸೇತುವೆಯನ್ನು 84 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ನೋಯ್ಡಾದಿಂದ ಗೇಟರ್ (ಪಶ್ಚಿಮ)ಕ್ಕೆ ಎಂಪಿ-3 ರಸ್ತೆಯನ್ನು ಇಂದು ಸಂಪರ್ಕಿಸುತ್ತದೆ. ದೆಹಲಿಯ ಸಿಗ್ನೇಚರ್ ಸೇತುವೆಯ ಮಾದರಿಯಲ್ಲಿ ಈ ಮೇಲ್ಸೇತುವೆಯನ್ನು ನಿರ್ಮಿಸಲಾಗಿದೆ. ಇದು 650 ಮೀಟರ್ ಉದ್ದವಿದ್ದು, ಕ್ಯಾರೇಜ್‌ವೇಯ ಎರಡೂ ಬದಿಗಳಲ್ಲಿ ಒಟ್ಟು 28 ಕೇಬಲ್‌ಗಳನ್ನು ಬಳಸಿ ನಿರ್ಮಿಸಲಾಗಿದೆ. ಸೆಕ್ಟರ್ 78ರಲ್ಲಿ ವೇದ್ ವ್ಯಾನ್ ಪಾರ್ಕ್ ಅನ್ನು 12 ಎಕರೆಯಲ್ಲಿ 22.68 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಗ್ರೇಟರ್ ನೋಯ್ಡಾದ ಗೌತಮ್ ಬುದ್ಧ ವಿಶ್ವವಿದ್ಯಾಲಯದಲ್ಲಿ ಸೇವ್ ಕಲ್ಚರ್ ಸೇವ್ ಇಂಡಿಯಾ ಫೌಂಡೇಶನ್ ಆಯೋಜಿಸಿದ್ದ ಮತ್ತೊಂದು ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೆಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿರುವುದಾಗಿ ವರದಿಯಾಗಿದೆ.

ಈ ವೇಳೆ ಮಾತನಾಡಿದ ಅವರು, ಡಿಜಿಟಲ್ ಮಾಧ್ಯಮ ಅಥವಾ ಇತರ ಯಾವುದೇ ಮಾಧ್ಯಮದ ಮೂಲಕ ನಮ್ಮ ಸಂಸ್ಕೃತಿಯ ಮೇಲೆ ದಾಳಿ ನಡೆದಾಗ ಅಥವಾ ಅದರ ವಿಧಾನ ಬದಲಾವಣೆ ಬಗ್ಗೆ ತಿಳಿಯಬೇಕು. ನಾನು ಆ ವಿಧಾನಗಳನ್ನು ಅರ್ಥಮಾಡಿಕೊಳ್ಳಲು ಬಯಸುತ್ತೇವೆ. ಗ್ಯಾಂಗ್‌ವೊಂದು ಸ್ಮಾರ್ಟ್ ಫೋನ್‌ಗಳ ಗೇಮಿಂಗ್ ಮೂಲಕ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದ ಪ್ರಕರಣವನ್ನು ಪೊಲೀಸರು ಇತ್ತೀಚೆಗೆ ಪತ್ತೆ ಹಚ್ಚಿದ್ದರು.

ಈ ಹಿಂದೆ ಪೊಲೀಸರು ಅಂಗವಿಕಲ ಮಕ್ಕಳನ್ನು ಗುರಿಯಾಗಿಸಿಕೊಂಡಿದ್ದ ಮತ್ತೊಂದು ಗ್ಯಾಂಗ್‌ಅನ್ನು ಸಹ ಉತ್ತರ ಪ್ರದೇಶ ಪೊಲೀಸರು ಬೇಧಿಸಿದ್ದರು ಎಂದು ಸಿಎಂ ಯೋಗಿ ಕಾರ್ಯಕ್ರಮದಲ್ಲಿ ನೆನಪಿಸಿದ್ದಾರೆ. ಆರೋಪಿಗಳು ಮಕ್ಕಳಿಗೆ ಸ್ಮಾರ್ಟ್‌ ಫೋನ್‌ಗಳನ್ನು ನೀಡಿ ಅವರ ದಿಕ್ಕು ತಪ್ಪಿಸುತ್ತಿದ್ದರು. ಇದು ಉತ್ತರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. 25 ರಿಂದ 30 ರಾಜ್ಯಗಳಲ್ಲಿ ಇವರ ಕೃತ್ಯಗಳು ಹರಡಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಧಾರ್ಮಿಕ ಮತಾಂತರದ ಘಟನೆಗಳು ಉತ್ತರ ಪ್ರದೇಶದಲ್ಲಿ ಮಾತ್ರ ನಡೆಯುತ್ತಿಲ್ಲ. ಬೇರೆ ಕಡೆಯೂ ನಡೆಯುತ್ತಿದ್ದು, ಇದಕ್ಕೆ ಉದಾಹರಣೆ ಇತ್ತೀಚೆಗೆ ದೆಹಲಿ ಮತ್ತು ಮುಂಬೈನಲ್ಲಿ ನಡೆದ ಘಟನೆಗಳೇ ಸಾಕ್ಷಿ. 2020ರಲ್ಲಿ ಯುಪಿಯಲ್ಲಿ ಎರಡು ಅಥವಾ ಮೂರು ಘಟನೆಗಳು ನಡೆದಾಗ ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನು ಜಾರಿಗೆ ತರಲಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿವರಿಸಿದ್ದಾರೆ. ಇದೀಗ ಒಂದೇ ದಿನ ಶಂಕುಸ್ಥಾಪನೆ ಸೇರಿ 124 ಯೋಜನೆಗಳಿಗೆ ಚಾಲನೆ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.