ಕನ್ನಡ ಸುದ್ದಿ  /  Nation And-world  /  Ne Assembly Poll Results Bjp Ndpp Wins 34, Crosses Majority Mark In Nagaland

NE Assembly poll results: ನಾಗಾಲ್ಯಾಂಡ್‌ನಲ್ಲಿ ಎನ್‌ಡಿಪಿಪಿ-ಬಿಜೆಪಿ ಮೈತ್ರಿಗೆ ಮತ್ತೆ ಅಧಿಕಾರ

NE Assembly poll results: ನಾಗಾಲ್ಯಾಂಡ್‌ನ 60 ಸದಸ್ಯಬಲದ ವಿಧಾನಸಭೆಯಲ್ಲಿ ಬಿಜೆಪಿ ಮತ್ತು ಎನ್‌ಡಿಪಿಪಿಗಳು 34 ಸ್ಥಾನಗಳಲ್ಲಿ ಗೆಲುವು ದಾಖಲಿಸಿವೆ. ಮತ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಪೂರ್ಣ ಫಲಿತಾಂಶ ಇನ್ನಷ್ಟೆ ಪ್ರಕಟವಾಗಬೇಕಿದೆ.

ನಾಗಾಲ್ಯಾಂಡ್‌ನಲ್ಲಿ ಎನ್‌ಡಿಪಿಪಿ-ಬಿಜೆಪಿ ಮೈತ್ರಿಗೆ ಮತ್ತೆ ಅಧಿಕಾರ
ನಾಗಾಲ್ಯಾಂಡ್‌ನಲ್ಲಿ ಎನ್‌ಡಿಪಿಪಿ-ಬಿಜೆಪಿ ಮೈತ್ರಿಗೆ ಮತ್ತೆ ಅಧಿಕಾರ (ANI Photo/ Caisii Mao)

ಕೊಹಿಮಾ: ಭಾರತೀಯ ಜನತಾಪಾರ್ಟಿ ಮತ್ತು ಮಿತ್ರಪಕ್ಷ ನ್ಯಾಷನಲಿಸ್ಟ್‌ ಡೆಮಾಕ್ರಟಿಕ್‌ ಪ್ರೋಗ್ರೆಸಿವ್‌ ಪಾರ್ಟಿ ನಾಗಾಲ್ಯಾಂಡ್‌ನಲ್ಲಿ ಸರಳ ಬಹುಮತ ಗಿಟ್ಟಿಸಿಕೊಂಡು ಅಧಿಕಾರ ಚುಕ್ಕಾಣಿ ಭದ್ರಪಡಿಸಿಕೊಂಡಿವೆ.

ನಾಗಾಲ್ಯಾಂಡ್‌ನ 60 ಸದಸ್ಯಬಲದ ವಿಧಾನಸಭೆಯಲ್ಲಿ ಬಿಜೆಪಿ ಮತ್ತು ಎನ್‌ಡಿಪಿಪಿಗಳು 34 ಸ್ಥಾನಗಳಲ್ಲಿ ಗೆಲುವು ದಾಖಲಿಸಿವೆ. ಮತ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಪೂರ್ಣ ಫಲಿತಾಂಶ ಇನ್ನಷ್ಟೆ ಪ್ರಕಟವಾಗಬೇಕಿದೆ.

ಚುನಾವಣಾ ಆಯೋಗ ಸಂಜೆ 4.45ಕ್ಕೆ ಪ್ರಕಟಿಸಿದ ಟ್ರೆಂಡ್‌ ಪ್ರಕಾರ, ಬಿಜೆಪಿ 12 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಎನ್‌ಡಿಪಿಪಿ 22 ಸ್ಥಾನಗಳಲ್ಲಿ ವಿಜಯಿ ಆಗಿದ್ದು, ಇನ್ನೂ 3 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಕಾಂಗ್ರೆಸ್‌ ಪಕ್ಷ 5 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಅದೇ ರೀತಿ ಎರಡು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ದ ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ (ಅಟವಳೆ) ಎರಡು ಸ್ಥಾನಗಳನ್ನು ಗೆದ್ದುಕೊಂಡಿದೆ. ಲೋಕ ಜನ ಶಕ್ತಿ ಪಾರ್ಟಿ (ರಾಮ್‌ ವಿಲಾಸ್‌) ಇದೇ ಮೊದಲ ಸಲ ಇಲ್ಲಿ 15 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು ಒಂದರಲ್ಲಿ ಗೆದ್ದು, ಇನ್ನೊಂದರಲ್ಲಿ ಮುನ್ನಡೆ ಸಾಧಿಸಿದೆ. ನಾಗಾ ಪೀಪಲ್ಸ್‌ ಫ್ರಂಟ್‌ ಒಂದು ಸ್ಥಾನ ಗೆದ್ದು, ಇನ್ನೊಂದರಲ್ಲಿ ಮುನ್ನಡೆ ಸಾಧಿಸಿದೆ.

ನಾಗಾಲ್ಯಾಂಡ್ ಮುಖ್ಯಮಂತ್ರಿ ಮತ್ತು ಎನ್‌ಡಿಪಿಪಿ ಅಭ್ಯರ್ಥಿ ನೇಫಿಯು ರಿಯೊ ಅವರು ಉತ್ತರ ಅಂಗಮಿ-II ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು, ಕಾಂಗ್ರೆಸ್‌ನ ಸೆಯಿವಿಲಿ ಸಚು ಅವರನ್ನು 15,824 ಮತಗಳ ಅಂತರದಿಂದ ಸೋಲಿಸಿದರು. ಅವರು ಒಟ್ಟು 17,045 ಮತಗಳನ್ನು ಪಡೆದರು. ಇದು ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು ಮತಗಳ ಶೇಕಡಾ 92.87 ರಷ್ಟಿದೆ.

ನಾಗಾಲ್ಯಾಂಡ್ ಬಿಜೆಪಿ ಮುಖ್ಯಸ್ಥ ತೆಮ್ಜೆನ್ ಇಮ್ನಾ ಅಲೋಂಗ್ ಗುರುವಾರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಲೋಂಗ್ಟಾಕಿ ಕ್ಷೇತ್ರದಿಂದ ಗೆದ್ದಿದ್ದಾರೆ. ರಾಜ್ಯ ಬಿಜೆಪಿ ಮುಖ್ಯಸ್ಥರು ಜನತಾ ದಳ (ಯುನೈಟೆಡ್) ಅಭ್ಯರ್ಥಿ ಜೆ ಲಾನು ಲಾಂಗ್‌ಚಾರ್ ಅವರನ್ನು 3,748 ಮತಗಳ ಅಂತರದಿಂದ ಸೋಲಿಸಿದ್ದಾರೆ. ಅವರು ಒಟ್ಟು 9,274 ಮತಗಳನ್ನು ಅಂದರೆ ಶೇಕಡ 62.5 ಮತಗಳನ್ನು ಗಳಿಸಿದರು.

ರಾಜ್ಯದ 60 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂದು ಆಡಳಿತಾರೂಢ ಎನ್‌ಡಿಪಿಪಿಯ ಅಭ್ಯರ್ಥಿ ಹೆಕನಿ ಜಖಾಲು ಅವರು ದಿಮಾಪುರ್-III ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಕಂಡಿದ್ದಾರೆ. ಆ ಮೂಲಕ ರಾಜ್ಯವು ತನ್ನ ಮೊದಲ ಶಾಸಕಿಯನ್ನು ಪಡೆದಿದೆ. ಅವರು 1,536 ಮತಗಳ ಅಂತರದಿಂದ ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಅಜೆಟೊ ಜಿಮೊಮಿ ಅವರನ್ನು ಸೋಲಿಸಿದರು. ಜಖಲು 14,395 ಮತಗಳನ್ನು ಗಳಿಸಿ, ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು ಮತಗಳ ಶೇಕಡಾ 45.16 ರಷ್ಟು ಗಳಿಸಿದರು.

ಸ್ವತಂತ್ರ ಅಭ್ಯರ್ಥಿಗಳಾದ ನೀಸಾಟುವೊ ಮೆರೊ ಮತ್ತು ಕೆವಿಪೊಡಿ ಸೋಫಿ ಅವರು ಕ್ರಮವಾಗಿ ಪ್ಫುಟ್ಸೆರೊ ಮತ್ತು ದಕ್ಷಿಣ ಅಂಗಮಿ-I ಸ್ಥಾನಗಳನ್ನು ಗೆದ್ದಿದ್ದಾರೆ.

IPL_Entry_Point