ನೀಟ್ ಯುಜಿ 2025; ಕೆಮಿಸ್ಟ್ರಿ ಪೇಪರ್‌ ಒಕೆ ಒಕೆ, 12ನೇ ತರಗತಿ ಪಠ್ಯದಿಂದಲೇ ಬಹುತೇಕ ಬಂದಿತ್ತು ಅಂತಾರೆ ವಿದ್ಯಾರ್ಥಿಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ನೀಟ್ ಯುಜಿ 2025; ಕೆಮಿಸ್ಟ್ರಿ ಪೇಪರ್‌ ಒಕೆ ಒಕೆ, 12ನೇ ತರಗತಿ ಪಠ್ಯದಿಂದಲೇ ಬಹುತೇಕ ಬಂದಿತ್ತು ಅಂತಾರೆ ವಿದ್ಯಾರ್ಥಿಗಳು

ನೀಟ್ ಯುಜಿ 2025; ಕೆಮಿಸ್ಟ್ರಿ ಪೇಪರ್‌ ಒಕೆ ಒಕೆ, 12ನೇ ತರಗತಿ ಪಠ್ಯದಿಂದಲೇ ಬಹುತೇಕ ಬಂದಿತ್ತು ಅಂತಾರೆ ವಿದ್ಯಾರ್ಥಿಗಳು

ನೀಟ್‌ 2025 ರಸಾಯನ ಶಾಸ್ತ್ರ ಪೇಪರ್‌: ದ್ವಿತೀಯ ಪಿಯುಸಿ, 12ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಪ್ರವೇಶಕ್ಕೆ ಅವಕಾಶ ಒದಗಿಸುವ ನೀಟ್‌ 2025 ಭಾನುವಾರ (ಮೇ 4) ನಡೆಯಿತು. ಇದರಲ್ಲಿ ಕೆಮಿಸ್ಟ್ರಿ ಪೇಪರ್ ಹೇಗಿತ್ತು ಎಂಬ ವಿವರವನ್ನು ಪರೀಕ್ಷಾರ್ಥಿಗಳು, ಪರಿಣತರು ಹಂಚಿಕೊಂಡಿದ್ದಾರೆ.

ನೀಟ್ ಯುಜಿ 2025; ಕೆಮಿಸ್ಟ್ರಿ ಪೇಪರ್‌ ಒಕೆ ಒಕೆ, 12ನೇ ತರಗತಿ ಪಠ್ಯದಿಂದಲೇ ಬಹುತೇಕ ಬಂದಿತ್ತು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. (ಸಾಂಕೇತಿಕ ಚಿತ್ರ)
ನೀಟ್ ಯುಜಿ 2025; ಕೆಮಿಸ್ಟ್ರಿ ಪೇಪರ್‌ ಒಕೆ ಒಕೆ, 12ನೇ ತರಗತಿ ಪಠ್ಯದಿಂದಲೇ ಬಹುತೇಕ ಬಂದಿತ್ತು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. (ಸಾಂಕೇತಿಕ ಚಿತ್ರ)

ನೀಟ್‌ 2025 ರಸಾಯನ ಶಾಸ್ತ್ರ ಪೇಪರ್‌: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಭಾನುವಾರ (ಮೇ 4) ವೈದ್ಯಕೀಯ ಪ್ರವೇಶಕ್ಕಾಗಿ ನೀಟ್ ಅನ್ನು ನಡೆಸಿತ್ತು. ನೀಟ್ ಪರೀಕ್ಷೆಯಲ್ಲಿ ರಸಾಯನ ಶಾಸ್ತ್ರ ಪೇಪರ್‌ ಹೇಗಿತ್ತು ಎಂಬ ಕುತೂಹಲ ಸಹಜ. ಪರೀಕ್ಷಾರ್ಥಿಗಳು ಮತ್ತು ಪರಿಣತರು ಈ ವಿಚಾರವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಫಿಸಿಕ್ಸ್‌ಗೆ ಹೋಲಿಸಿದರೆ ಇದು ಒಕೆ ಒಕೆ ಎಂಬ ಮಾತುಗಳನ್ನಾಡಿದ್ದಾರೆ. ಆದಾಗ್ಯೂ, ರಸಾಯನ ಶಾಸ್ತ್ರ ಪೇಪರ್ ಸ್ವಲ್ಪ ಸುದೀರ್ಘವಾಗಿತ್ತು. ನಿಖರ ಮತ್ತು ಎಚ್ಚರಿಕೆಯ ಓದುವಿಕೆಯನ್ನು ಪ್ರಶ್ನೆ ಪತ್ರಿಕೆ ಬಯಸಿತ್ತು. ಸಣ್ಣ ತಪ್ಪು ವ್ಯಾಖ್ಯಾನವೂ ಅಂಕ ಕಡಿತಕ್ಕೆ ಕಾರಣವಾಗಬಹುದಾಗಿದ್ದ ಕಾರಣ, ಪರೀಕ್ಷಾರ್ಥಿಗಳು ಕಣ್ಣಿಗೆ ಎಣ್ಣೆಬಿಟ್ಟುಕೊಂಡು ಓದಿ ಉತ್ತರ ಬರೆಯಬೇಕಾಗಿತ್ತು ಎಂದು ಅನೇಕರು ಹೇಳಿಕೊಂಡಿದ್ದಾರೆ. ಸೈದ್ಧಾಂತಿಕ ವಿಭಾಗ ತುಲನಾತ್ಮಕವಾಗಿ ನೋಡಿದರೆ ಸುಲಭವಿತ್ತು. ಆದರೆ, ಅನ್ವಯಿಕ ಪ್ರಶ್ನೆಗಳು ಬಹಳ ಕಷ್ಟ ಇದ್ದವು ಎಂಬುದರ ಕಡೆಗೆ ಪರಿಣತರು ಗಮನಸೆಳೆದಿದ್ದಾರೆ.

ನೀಟ್ ಯುಜಿ 2025; ಕೆಮಿಸ್ಟ್ರಿ ಪೇಪರ್‌ ಒಕೆ ಒಕೆ

ಆಕಾಶ್ ಎಜುಕೇಶನ್ ಸರ್ವೀಸಸ್ ಲಿಮಿಟೆಡ್‌ನ ನ್ಯಾಷನಲ್ ಅಕಾಡೆಮಿಕ್ ಡೈರೆಕ್ಟರ್ (ಮೆಡಿಕಲ್‌) ನಬಿನ್ ಕರ್ಕಿ ಇಂಡಿಯನ್ ಎಕ್ಸ್‌ಪ್ರೆಸ್ ಜತೆಗೆ ಮಾತನಾಡುತ್ತ, " ಸಾವಯವ ಮತ್ತು ಭೌತಿಕ ರಸಾಯನಶಾಸ್ತ್ರದ ಮೇಲೆ ಕೇಂದ್ರೀಕರಿಸಿದ್ದ ಕೆಮಿಸ್ಟ್ರಿ ಪೇಪರ್‌ ಒಕೆ ಒಕೆ ಆಗಿತ್ತು ಎಂಬುದಾಗಿ ವಿದ್ಯಾರ್ಥಿಗಳು ಅನೇಕರು ಹೇಳಿದ್ದಾರೆ. ಬಹುತೇಕ ಪ್ರಶ್ನೆಗಳು 12ನೇ ತರಗತಿ ಪಠ್ಯದಿಂದಲೆ ಬಂದಿತ್ತು. ಪರಿಕಲ್ಪನಾ ಸ್ಪಷ್ಟತೆ ಹಾಗೂ ವಿಶ್ಲೇಷಣಾತ್ಮಕ ತಿಳಿವಳಿಕೆ ಅಗತ್ಯ ಇದ್ದ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರಿಸಬೇಕಾಗಿತ್ತು ಎಂದು ಹೇಳಿದ್ದಾಗಿ ವರದಿ ವಿವರಿಸಿದೆ.

ಕೆಮಿಸ್ಟ್ರಿ ಪೇಪರ್‌ ಬಹುತೇಕ ಹೇಳಿಕೆ ಆಧಾರಿತ ಹಾಗೂ ಮ್ಯಾಟ್ರಿಕ್ಸ್-ಹೊಂದಾಣಿಕೆಯ ಪ್ರಶ್ನೆಗಳನ್ನೂ ಒಳಗೊಂಡಿತ್ತು. ಅದೂ ಅಲ್ಲದೆ, ಒಂದು ಪ್ರತಿಪಾದನೆ-ರಿಯಾಯಿತಿ ಆಧಾರಿತ ಪ್ರಶ್ನೆಯೂ ಬಂದಿತ್ತು.. ಕುತೂಹಲಕಾರಿಯಾಗಿ, ಹಲವಾರು ಪ್ರಶ್ನೆಗಳು ಏಕಕಾಲದಲ್ಲಿ ಅನೇಕ ಪರಿಕಲ್ಪನೆಗಳ ಅನ್ವಯವನ್ನು ಒಳಗೊಂಡಿದ್ದವು. ಹೀಗಾಗಿ ಕೆಮಿಸ್ಟ್ರಿ ಪೇಪರ್‌ ಹಿಂದಿನ ವರ್ಷಕ್ಕೆ ಹೋಲಿಸಿದರೆ ಹೆಚ್ಚು ಸಮಯ ತೆಗೆದುಕೊಂಡಿದೆ ಎಂದು ಪರೀಕ್ಷಾರ್ಥಿಗಳು ಅನೇಕರು ಹೇಳಿದ್ದಾಗಿ ವರದಿ ಹೇಳಿದೆ.

ನೀಟ್ ಯುಜಿ 2025; ಕೆಮಿಸ್ಟ್ರಿ ಪೇಪರ್‌ ಪ್ರಶ್ನೆಗಳು ಹೀಗಿದ್ದವು

ಕಳೆದ ವರ್ಷದ ನೀಟ್ ಯುಜಿಗೆ ಹೋಲಿಸಿದರೆ ಈ ಬಾರಿ ಅಂದರೆ ನೀಟ್ 2025ರಲ್ಲಿ ಫಿಸಿಕಲ್ ಕೆಮಿಸ್ಟ್ರಿಯಿಂದ 16 ಪ್ರಶ್ನೆ, ಇನ್‌ಆರ್ಗಾನಿಕ್ ಕೆಮಿಸ್ಟ್ರಿಯಿಂದ 12 ಪ್ರಶ್ನೆ, ಆರ್ಗಾನಿಕ್ ಕೆಮಿಸ್ಟ್ರಿಯಲ್ಲಿ 17 ಪ್ರಶ್ನೆ, 11ನೇ ತರಗತಿ ಪಠ್ಯದಿಂದ 22 ಪ್ರಶ್ನೆಗಳು, 12ನೇ ತರಗತಿಯ ಪಠ್ಯದಿಂದ 23 ಪ್ರಶ್ನೆಗಳು ಬಂದಿದ್ದವು. ಇದಲ್ಲದೆ, 11ನೇ ತರಗತಿ ಪಠ್ಯದಿಂದ ಫಿಸಿಕಲ್ ಕೆಮಿಸ್ಟ್ರಿಯಿಂದ 9 ಪ್ರಶ್ನೆ, ಇನ್ಆರ್ಗಾನಿಕ್ ಕೆಮಿಸ್ಟ್ರಿಯಿಂದ 5 ಪ್ರಶ್ನೆಗಳನ್ನು ಕೇಳಲಾಗಿತ್ತು. 12 ನೇ ತರಗತಿಯ ಪಠ್ಯಕ್ರಮದಿಂದ ಭೌತಿಕ ರಸಾಯನಶಾಸ್ತ್ರದ ಏಳು ಪ್ರಶ್ನೆಗಳನ್ನು, ಅಜೈವಿಕ ರಸಾಯನಶಾಸ್ತ್ರದಿಂದ ಏಳು ಮತ್ತು ಸಾವಯವ ರಸಾಯನಶಾಸ್ತ್ರದಿಂದ ಒಂಬತ್ತು ಪ್ರಶ್ನೆಗಳನ್ನು ಕೇಳಲಾಗಿತ್ತು.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.