ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಭಾರಿ ಕಾಲ್ತುಳಿತ, ಕನಿಷ್ಠ 15 ಜನರಿಗೆ ಗಾಯ, ಸ್ಥಳಕ್ಕೆ ಧಾವಿಸಿವೆ ಅಗ್ನಿಶಾಮಕ ಸೇವೆಯ 4 ವಾಹನಗಳು
Delhi Railway Station stampede: ನವದೆಹಲಿಯ ರೈಲ್ವೆ ನಿಲ್ದಾಣದಲ್ಲಿ ಶನಿವಾರ ರಾತ್ರಿ 9.55 ರ ಹೊತ್ತಿಗೆ ಕಾಲ್ತುಳಿತ ಮಾದರಿ ದುರಂತ ಸಂಭವಿಸಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಕನಿಷ್ಠ 15 ಜನ ಗಾಯಗೊಂಡಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

Delhi Railway Station stampede: ನವದೆಹಲಿಯ ರೈಲ್ವೆ ನಿಲ್ದಾಣದಲ್ಲಿ ಶನಿವಾರ (ಫೆ 15) ರಾತ್ರಿ ಭಾರಿ ಕಾಲ್ತುಳಿತ ಸಂಭವಿಸಿದ್ದು, ಕನಿಷ್ಠ 15 ಜನ ಗಾಯಗೊಂಡಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. ಕಾಲ್ತುಳಿತ ಸಂಭವಿಸಿದ ಕೂಡಲೆ ತುರ್ತು ಪರಿಸ್ಥಿತಿ ನಿರ್ಮಾಣವಾಗಿದ್ದು, ಅಗ್ನಿಶಾಮಕ ಸೇವೆಯ 4 ವಾಹನಗಳು, ಆಂಬುಲೆನ್ಸ್‌ಗಳು ಕೂಡಲೆ ಸ್ಥಳಕ್ಕಾಗಮಿಸಿವೆ. ರೈಲ್ವೆ ನಿಲ್ದಾಣದ ಫ್ಲಾಟ್‌ಫಾರಂ 14 ಮತ್ತು 15ರಲ್ಲಿ ಶನಿವಾರ ರಾತ್ರಿ 9.55 ರ ಹೊತ್ತಿಗೆ ಈ ದುರಂತ ಸಂಭವಿಸಿದೆ ಎಂದು ವರದಿ ಹೇಳಿದೆ.
ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಭಾರಿ ಕಾಲ್ತುಳಿತ, ಕನಿಷ್ಠ 15 ಜನರಿಗೆ ಗಾಯ
ನವದೆಹಲಿಯ ರೈಲ್ವೆ ನಿಲ್ದಾಣದಲ್ಲಿ ಭಾರಿ ಕಾಲ್ತುಳಿತ ಮಾದರಿ ದುರಂತ ಸಂಭವಿಸಿದೆ. ಪ್ಲಾಟ್‌ಫಾರಂ ಸಂಖ್ಯೆ 14 ಮತ್ತು 15ರಲ್ಲಿ ಜನದಟ್ಟಣೆ ಹೆಚ್ಚಾಗಿ ಈ ರೀತಿ ಆಗಿದೆ ಎಂದು ಕರೆ ಬಂದಿತ್ತು. ಕೂಡಲೇ ಅಗ್ನಿಶಾಮಕ ಸೇವೆಯ 4 ವಾಹನಗಳ್ನು ಕಳುಹಿಸಲಾಗಿದೆ ಎಂದು ದೆಹಲಿಯ ಅಗ್ನಿಶಾಮಕ ಸೇವೆ ವಕ್ತಾರರು ತಿಳಿಸಿದ್ದಾರೆ.
ಪ್ರಯಾಗ್‌ರಾಜ್‌ಗೆ ಹೋಗುವ ಎರಡು ರೈಲುಗಳು ರದ್ದುಗೊಂಡ ಬಳಿಕ ಪ್ರಯಾಣಿಕ ದಟ್ಟಣೆ ಹೆಚ್ಚಾಗಿತ್ತು. ಆಗ ಪ್ರಯಾಣಿಕರ ನಡುವೆ ಕಳವಳ ಹೆಚ್ಚಾಗಿದೆ. ಈ ದುರಂತ ಸಂಭವಿಸಿದೆ. ಮೂವರು ಮಹಿಳೆಯರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ದುರಂತ ಹೇಗಾಯಿತು
ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ದುರಂತ ಹೇಗಾಯಿತು ಎಂದು ರೈಲ್ವೆ ಡಿಸಿಪಿ ಕೆಪಿಎಸ್ ಮಲ್ಹೋತ್ರಾ ವಿವರಣೆ ನೀಡಿದ್ದು, ರೈಲುಗಳು ವಿಳಂಬವಾದಾಗ ಪ್ರಯಾಣಿಕರಲ್ಲಿ ಸಹಜವಾಗಿಯೇ ಆತಂಕ ಕಳವಳ ಶುರುವಾಗಿತ್ತು. ಇದು ಹೆಚ್ಚಾದ ವೇಳೆ ಕಾಲ್ತುಳಿತದಂತಹ ಸನ್ನಿವೇಶ ಉಂಟಾಯಿತು ಎಂದು ವಿವರಿಸಿದ್ದಾಗಿ ಎಎನ್‌ಐ ವರದಿ ಮಾಡಿದೆ.
ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್ ರೈಲು ಪ್ಲಾಟ್‌ಫಾರಂ ಸಂಖ್ಯೆ 14ರಲ್ಲಿ ನಿಂತಿದ್ದಾಗ, ಬಹಳಷ್ಟು ಪ್ರಯಾಣಿಕರು ಅಲ್ಲೇ ನಿಂತಿದ್ದರು. ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್, ಭುವನೇಶ್ವರ ರಾಜಧಾನಿ ರೈಲುಗಳು ವಿಳಂಬವಾಗಿದ್ದವು. ಈ ರೈಲುಗಳು ಕೂಡ ಪ್ಲಾಟ್‌ಫಾರಂ ಸಖ್ಯೆ 12, 13 ಮತ್ತು 14ರಲ್ಲಿ ನಿಂತುಕೊಂಡಿದ್ದವು. ಪ್ರಾಥಮಿಕ ಮಾಹಿತಿ ಪ್ರಕಾರ 1500 ಜನರಲ್ ಟಿಕೆಟ್ ಮಾರಾಟವಾಗಿವೆ. ಪ್ರಯಾಣಿಕ ದಟ್ಟಣೆ ಅನಿಯಂತ್ರಿತವಾಗಿತ್ತು. ಇದರಿಂದಾಗಿ ತಳ್ಳಾಟ ಉಂಟಾಗಿ ಕಾಲ್ತುಳಿತದಂತಹ ಸನ್ನಿವೇಶ ಸೃಷ್ಟಿಯಾಯಿತು ಎಂದು ಅವರು ವಿವರಿಸಿದರು.
ರೈಲ್ವೆ ಪೊಲೀಸರು ಹಾಗೂ ದೆಹಲಿ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿದ್ದು, ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ರೈಲ್ವೆ ಸಚಿವಾಲಯ ಹೇಳಿಕೆ ನೀಡಿದೆ.
