Income Tax: ಮುಂದಿನ ವಾರ ಹೊಸ ತೆರಿಗೆ ಮಸೂದೆ ಪ್ರಕಟ, 1961 ಐಟಿ ಮಸೂದೆ ಇನ್ನಷ್ಟು ಸರಳ, ಬಜೆಟ್‌ನಲ್ಲಿ ಹಣಕಾಸು ಸಚಿವೆ ಹೇಳಿದ್ದಿಷ್ಟು
ಕೇಂದ್ರ ಸರಕಾರವು ಹೊಸ ಆದಾಯ ತೆರಿಗೆ ಮಸೂದೆಯನ್ನು ಮುಂದಿನ ವಾರ ಪ್ರಕಟಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 1961 ರ ಐಟಿ ಕಾಯ್ದೆಯ ಪುಟಗಳ ಸಂಖ್ಯೆಯನ್ನು ಶೇಕಡಾ 60 ರಷ್ಟು ಕಡಿಮೆ ಮಾಡುವುದು ಗುರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರತಿ ವರ್ಷ ಬಜೆಟ್ ಭಾಷಣದಲ್ಲಿ ಆದಾಯ ತೆರಿಗೆ ಕುರಿತು ಹಣಕಾಸು ಸಚಿವರು ಏನು ಹೇಳುತ್ತಾರೆ ಎನ್ನುವ ಬಗ್ಗೆ ತಿಳಿಯಲು ಇಡೀ ದೇಶ ಕಾತರದಿಂದ ಕಾಯುತ್ತಿರುತ್ತದೆ. ಈ ವರ್ಷ ಈ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿತ್ತು. ಬಜೆಟ್ ಭಾಷಣದಲ್ಲಿ ಆದಾಯ ತೆರಿಗೆ ಕುರಿತು ವಿತ್ತ ಸಚಿವರು ಹೆಚ್ಚೇನೂ ಮಾಹಿತಿ ನೀಡಿಲ್ಲ. ಆದರೆ ಮುಂದಿನ ವಾರದಲ್ಲಿ ಆದಾಯ ತೆರಿಗೆ ಕುರಿತು ಹೊಸ ವಿಧೇಯಕ ಮಂಡಿಸಲಾಗುವುದು. ಆದಾಯ ತೆರಿಗೆಯ ಹೊಸ ನಿಯಮ ಘೋಷಿಸಲಾಗುವುದು. ಮುಂದಿನ ದಿನಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಜನರನ್ನು ಮೊದಲು ನಂಬುತ್ತಾರೆ. ನಂತರ ಅಪ್‌ಡೇಟ್ ಆಗಿರುವ ಮಾಹಿತಿಗಳನ್ನು ಪರಿಶೀಲಿಸಲಿದ್ದಾರೆ ಎಂದು ಭರವಸೆ ನೀಡಿದರು. ಬಜೆಟ್ ಭಾಷಣದ ಈ ಘೋಷಣೆಯು ಆದಾಯ ತೆರಿಗೆ ನಿಯಮಗಳ ಸುಧಾರಣೆ ಮತ್ತು ಸರ್ಕಾರಕ್ಕೆ ಪ್ರಮುಖ ಆದಾಯ ಮೂಲವಾಗಿರುವ ಆದಾಯ ತೆರಿಗೆ ಸಂಗ್ರಹ ದೃಷ್ಟಿಯಿಂದ ಮಹತ್ವದ ಕ್ರಮ ಎನಿಸಿದೆ. ಕೇಂದ್ರ ಸರಕಾರವು ಹೊಸ ಆದಾಯ ತೆರಿಗೆ ಮಸೂದೆಯನ್ನು ಮುಂದಿನ ವಾರ ಪ್ರಕಟಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 1961 ರ ಐಟಿ ಕಾಯ್ದೆಯ ಪುಟಗಳ ಸಂಖ್ಯೆಯನ್ನು ಶೇಕಡಾ 60 ರಷ್ಟು ಕಡಿಮೆ ಮಾಡುವುದು ಗುರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರಕಾರವು ಹೊಸ ಆದಾಯ ತೆರಿಗೆ ಮಸೂದೆಯನ್ನು ಮುಂದಿನ ವಾರ ಪ್ರಕಟಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. "ವೈಯಕ್ತಿಕ ತೆರಿಗೆದಾರರಿಗೆ ಅನುಸರಣೆಯನ್ನು ಸರಳಗೊಳಿಸುವ ನೇರ ತೆರಿಗೆ ಸಂಹಿತೆಯಾದ ಹೊಸ ಆದಾಯ ತೆರಿಗೆ ಮಸೂದೆಯನ್ನು ಮುಂದಿನ ವಾರ ಪರಿಚಯಿಸಲಾಗುವುದು" ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತನ್ನ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ಹೊಸ ಕಾನೂನು "ಅರ್ಥಮಾಡಿಕೊಳ್ಳಲು ಸರಳ"ವಾಗಿರುತ್ತದೆ. ಇದು ತೆರಿಗೆ ಕುರಿತಾದ ದೂರುಗಳನ್ನು ಕಡಿಮೆ ಮಾಡಲಿದೆ ಎಂದು ಅವರು ಹೇಳಿದ್ದಾರೆ.
ಜುಲೈನಲ್ಲಿ ಸೀತಾರಾಮನ್ ಅವರು 2024/25 ಪೂರ್ಣ ಬಜೆಟ್ ಮಂಡಿಸಿದ ಸಮಯದಲ್ಲಿ ಹೊಸ ನೇರ ತೆರಿಗೆ ಸಂಹಿತೆಯ ಕುರಿತು ಹೇಳಿದ್ದರು. ಈಗಿನ ಆದಾಯ ತೆರಿಗೆ ಕಾನೂನುಗಳನ್ನು ಓದಲು ಮತ್ತು ಅರ್ಥಮಾಡಿಕೊಳ್ಳಲು ಸುಲಭವಾಗುವಂತೆ ಸರಳಗೊಳಿಸಲಾಗುವುದು, 1961 ರ ಐ-ಟಿ ಕಾಯ್ದೆಯ ಪುಟಗಳ ಸಂಖ್ಯೆಯನ್ನು ಶೇಕಡಾ 60 ರಷ್ಟು ಕಡಿಮೆ ಮಾಡುವುದು ಗುರಿಯಾಗಿದೆ ಎಂದು ಅವರು ಹೇಳಿದ್ದಾರೆ.
196 ರ ಕಾಯಿದೆಯು ನೇರ ತೆರಿಗೆಗಳನ್ನು, ಅಂದರೆ ವೈಯಕ್ತಿಕ ಮತ್ತು ಕಾರ್ಪೊರೇಟ್ ತೆರಿಗೆಯನ್ನು, ಹಾಗೆಯೇ ಸೆಕ್ಯುರಿಟೀಸ್ ವಹಿವಾಟುಗಳು, ಉಡುಗೊರೆಗಳು ಮತ್ತು ಸಂಪತ್ತಿನ ಮೇಲಿನ ತೆರಿಗೆಗಳನ್ನು ವಿಧಿಸುವುದರ ಬಗ್ಗೆ ತಿಳಿಸುತ್ತದೆ. ಇದು 23 ಅಧ್ಯಾಯಗಳು ಮತ್ತು 298 ವಿಭಾಗಗಳನ್ನು ಹೊಂದಿದೆ ಎಂದು ಎನ್‌ಡಿಟಿವಿ ವರದಿ ತಿಳಿಸಿದೆ.
ಸಿಬಿಡಿಟಿ ಅಥವಾ ಕೇಂದ್ರೀಯ ನೇರ ತೆರಿಗೆ ಮಂಡಳಿಯು ಪರಿಶೀಲನೆಯ ಮೇಲ್ವಿಚಾರಣೆಗೆ ಆಂತರಿಕ ಸಮಿತಿಯನ್ನು ಸ್ಥಾಪಿಸಿತು. ಇದರಲ್ಲಿ ಹಳೆಯ ಕಾನೂನಿನ ವಿವಿಧ ಅಂಶಗಳನ್ನು ಮೌಲ್ಯಮಾಪನ ಮಾಡಲು 22 ವಿಶೇಷ ಉಪ-ಸಮಿತಿಗಳನ್ನು ಸ್ಥಾಪಿಸುವುದು ಸೇರಿತ್ತು. ಅಕ್ಟೋಬರ್‌ನಲ್ಲಿ ಕೇಂದ್ರವು ಸಾರ್ವಜನಿಕರನ್ನು, ಪಾಲುದಾರರು ಮತ್ತು ವಿಷಯ ತಜ್ಞರನ್ನು ಒಳಗೊಂಡಂತೆ, ತಮ್ಮ ಅಭಿಪ್ರಾಯಗಳು ಮತ್ತು ಶಿಫಾರಸುಗಳನ್ನು ನೀಡಲು ಆಹ್ವಾನಿಸಿತು. ಜನವರಿಯ ವೇಳೆಗೆ, ಸುಮಾರು 7,000 ಅಭಿಪ್ರಾಯಗಳನ್ನು ಸ್ವೀಕರಿಸಲಾಗಿತ್ತು.
