ಕನ್ನಡ ಸುದ್ದಿ  /  Nation And-world  /  Nlc India Apprentice Recruitment 2022

NLC India Recruitment: ಪದವಿ ಮತ್ತು ಡಿಪ್ಲೊಮಾ ಅಪ್ರೆಂಟಿಸ್‌ಶಿಪ್‌ಗೆ ಅರ್ಜಿ ಆಹ್ವಾನ

ಭಾರತ ಸರಕಾರದ "ನವರತ್ಮʼʼ ಕಂಪನಿಗಳಲ್ಲಿ ಒಂದಾದ ಎನ್‌ಎಲ್‌ಸಿ ಇಂಡಿಯಾ ಲಿಮಿಟೆಡ್‌ನಲ್ಲಿ ಅಪ್ರೆಂಟಿಸ್‌ಶಿಪ್‌ಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಗ್ರಾಜುವೇಷನ್‌, ಡಿಪ್ಲೊಮಾ, ನಾನ್‌ ಎಂಜಿನಿಯರಿಂಗ್‌ ಅಪ್ರೆಂಟಿಸ್‌ಶಿಪ್‌ಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಈ ಕುರಿತು ಹೆಚ್ಚಿನ ವಿವರ ನೀಡಲಾಗಿದೆ.

ಪದವಿ ಮತ್ತು ಡಿಪ್ಲೊಮಾ ಅಪ್ರೆಂಟಿಸ್‌ಶಿಪ್‌ಗೆ ಅರ್ಜಿ ಆಹ್ವಾನ
ಪದವಿ ಮತ್ತು ಡಿಪ್ಲೊಮಾ ಅಪ್ರೆಂಟಿಸ್‌ಶಿಪ್‌ಗೆ ಅರ್ಜಿ ಆಹ್ವಾನ

ಚೆನ್ನೈ: ಭಾರತ ಸರಕಾರದ "ನವರತ್ಮʼʼ ಕಂಪನಿಗಳಲ್ಲಿ ಒಂದಾದ ಎನ್‌ಎಲ್‌ಸಿ ಇಂಡಿಯಾ ಲಿಮಿಟೆಡ್‌ನಲ್ಲಿ ಅಪ್ರೆಂಟಿಸ್‌ಶಿಪ್‌ಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಗ್ರಾಜುವೇಷನ್‌, ಡಿಪ್ಲೊಮಾ, ನಾನ್‌ ಎಂಜಿನಿಯರಿಂಗ್‌ ಅಪ್ರೆಂಟಿಸ್‌ಶಿಪ್‌ಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಈ ಕುರಿತು ಹೆಚ್ಚಿನ ವಿವರ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಆರಂಭ: ಇಂದಿನಿಂದ ಅರ್ಜಿ ಸಲ್ಲಿಸಿ (Aug 10)

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್‌ 24, 2022

ಹಾರ್ಡ್‌ ಪ್ರತಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್‌ 31

ಹುದ್ದೆಗಳ ವಿವರ

ಎಂಜಿನಿಯರಿಂಗ್‌ ಗ್ರಾಜುವೇಟ್‌ ಅಪ್ರೆಂಟಿಸ್‌:

ಮೆಕ್ಯಾನಿಕಲ್‌ ಎಂಜಿನಿಯರಿಂಗ್‌-೫೦, ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌-೫೦, ಸಿವಿಲ್‌ ಎಂಜಿನಿಯರಿಂಗ್‌, ಇನ್‌ಸ್ಟ್ರುಮೆಂಟೇಷನ್‌ ಎಂಜಿನಿಯರಿಂಗ್‌-೮, ಕೆಮಿಕಲ್‌ ಎಂಜಿನಿಯರಿಂಗ್‌-೫, ಮೈನಿಂಗ್‌ ಎಂಜಿನಿಯರಿಂಗ್‌-೨೫, ಕಂಪ್ಯೂಟರ್‌ ಸೈನ್ಸ್‌ ಆಂಡ್‌ ಎಂಜಿನಿಯರಿಂಗ್‌ನಲ್ಲಿ ೩೦, ಎಲೆಕ್ಟ್ರಾನಿಕ್ಸ್‌-೮ ಮತ್ತು ಫಾರ್ಮಾಸಿಸ್ಟ್‌-೭ ಸೇರಿದಂತೆ ಒಟ್ಟು 201 ಹುದ್ದೆಗಳಿವೆ.

ನಾನ್‌ ಎಂಜಿನಿಯರಿಂಗ್‌ ಗ್ರಾಜುಯೇಟ್‌ ಅಪ್ರೆಂಟಿಸ್‌

ಕಾಮರ್ಸ್‌-೨೫, ಕಂಪ್ಯೂಟರ್‌ ಸೈನ್ಸ್‌-೩೫, ಕಂಪ್ಯೂಟರ್‌ ಅಪ್ಲಿಕೇಷನ್‌-೨೦, ಬಿಸ್ನೆಸ್‌ ಅಡ್ಮಿನಿಸ್ಟ್ರೇಷನ್‌-೨೦, ಜಿಯೊಲಜಿ-೫ ಸೇರಿದಂತೆ ಒಟ್ಟು 105 ಹುದ್ದೆಗಳಿವೆ.

ಟೆಕ್ನಿಕಲ್‌ ಅಪ್ರೆಂಟಿಸ್‌ಶಿಪ್‌

ಮೆಕ್ಯಾನಿಕಲ್‌ ಎಂಜಿನಿಯರಿಂಗ್‌-೫೦, ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌-೫೦, ಸಿವಿಲ್‌ ಎಂಜಿನಿಯರಿಂಗ್‌-೨೫, ಇನ್‌ಸ್ಟ್ರುಮೆಂಟೇಷನ್‌ ಎಂಜಿನಿಯರಿಂಗ್‌-೫, ಮೈನಿಂಗ್‌ ಎಂಜಿನಿಯರಿಂಗ್‌-೨೦, ಕಂಪ್ಯೂಟರ್‌ ಸೈನ್ಸ್‌ ಆಂಡ್‌ ಎಂಜಿನಿಯರಿಂಗ್‌-೨೦, ಎಲೆಕ್ಟ್ರಾನಿಕ್ಸ್‌ ಆಂಡ್‌ ಕಮ್ಯುನಿಕೇಷನ್‌ ಎಂಜಿನಿಯರಿಂಗ್‌ನಲ್ಲಿ ೫ ಸೇರಿದಂತೆ ಒಟ್ಟು 175 ಹುದ್ದೆಗಳಿವೆ.

ವಿದ್ಯಾರ್ಹತೆ ಏನಿರಬೇಕು?

ಆಯಾ ಅಪ್ರೆಂಟಿಸ್‌ಶಿಪ್‌ ತರಬೇತಿಗೆ ತಕ್ಕಂತೆ ಸಂಬಂಧಪಟ್ಟ ವಿಷಯದಲ್ಲಿ ಪದವಿ, ಎಂಜಿನಿಯರಿಂಗ್‌ ಪದವಿ, ಡಿಪ್ಲೊಮಾ ವಿದ್ಯಾರ್ಹತೆ ಬಯಸಲಾಗಿದೆ. 2020, 2021, 2022ರಲ್ಲಿ ಪದವಿ ಪೂರ್ಣಗೊಳಿಸಿದವರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.

ಅರ್ಜಿ ಸಲ್ಲಿಕೆ ಹೇಗೆ?

ಎಲ್‌ಎಲ್‌ಸಿ ಇಂಡಿಯಾ ವೆಬ್‌ಸೈಟ್‌ಗೆ ಹೋಗಿ. ಕರಿಯರ್‌ ವಿಭಾಗದಲ್ಲಿ ಟ್ರೇನಿ ಮತ್ತು ಅಪ್ರೆಂಟಿಸ್‌ ವಿಭಾಗ ಕ್ಲಿಕ್‌ ಮಾಡಿ. ಅಲ್ಲಿ ಆನ್‌ಲೈನ್‌ ಅರ್ಜಿ ಭರ್ತಿ ಮಾಡಿ ಸಲ್ಲಿಸಿ. ಬಳಿಕ ಭರ್ತಿ ಮಾಡಿದ ಅರ್ಜಿ ನಮೂನೆ ಡೌನ್‌ಲೋಡ್‌ ಮಾಡಿಕೊಳ್ಳಿ.

Office of the General Manager,

Land Acquisition Department,

N.L.C India Limited.

Neyveli – 607 803. ವಿಳಾಸಕ್ಕೆ ಅರ್ಜಿ ಸಲ್ಲಿಸಿ.

IPL_Entry_Point

ವಿಭಾಗ