ಕೇಂದ್ರ ಬಜೆಟ್ ಅಧಿವೇಶನಕ್ಕೂ ಮೊದಲೇ ವಿಪಕ್ಷಗಳನ್ನು ಕೆಣಕಿದ ಪ್ರಧಾನಿ, ಸಂಸತ್ ಅಧಿವೇಶನಕ್ಕೆ ಮುನ್ನ ವಿದೇಶಿ ಹಸ್ತಕ್ಷೇಪವಿಲ್ಲ ಎಂದ ಪಿಎಂ ಮೋದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕೇಂದ್ರ ಬಜೆಟ್ ಅಧಿವೇಶನಕ್ಕೂ ಮೊದಲೇ ವಿಪಕ್ಷಗಳನ್ನು ಕೆಣಕಿದ ಪ್ರಧಾನಿ, ಸಂಸತ್ ಅಧಿವೇಶನಕ್ಕೆ ಮುನ್ನ ವಿದೇಶಿ ಹಸ್ತಕ್ಷೇಪವಿಲ್ಲ ಎಂದ ಪಿಎಂ ಮೋದಿ

ಕೇಂದ್ರ ಬಜೆಟ್ ಅಧಿವೇಶನಕ್ಕೂ ಮೊದಲೇ ವಿಪಕ್ಷಗಳನ್ನು ಕೆಣಕಿದ ಪ್ರಧಾನಿ, ಸಂಸತ್ ಅಧಿವೇಶನಕ್ಕೆ ಮುನ್ನ ವಿದೇಶಿ ಹಸ್ತಕ್ಷೇಪವಿಲ್ಲ ಎಂದ ಪಿಎಂ ಮೋದಿ

Budget Session 2025: ಬಜೆಟ್ ಅಧಿವೇಶನಕ್ಕೆ ಮುಂಚಿತವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, 2014ರ ನಂತರ ಇದೇ ಮೊದಲ ಸಲ ಸಂಸತ್ ಅಧಿವೇಶನವು ಯಾವುದೇ ವಿದೇಶಿ ಹಸ್ತಕ್ಷೇಪವಿಲ್ಲದೇ ಶುರುವಾಗುತ್ತಿದೆ. ಇದನ್ನು ಗಮನಿಸಬೇಕು ಎಂದು ಪ್ರಧಾನಿ ಮೋದಿ ಹೇಳುವ ಮೂಲಕ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನೂ ಕೆಣಕಿದರು.

ಕೇಂದ್ರ ಬಜೆಟ್ ಅಧಿವೇಶನಕ್ಕೂ ಮೊದಲೇ ವಿಪಕ್ಷಗಳನ್ನು ಕೆಣಕಿದ ಪ್ರಧಾನಿ, 10 ವರ್ಷಗಳಲ್ಲಿ ಮೊದಲ ಬಾರಿಗೆ ಸಂಸತ್ ಅಧಿವೇಶನಕ್ಕೆ ಮುನ್ನ ವಿದೇಶಿ ಹಸ್ತಕ್ಷೇಪವಿಲ್ಲ ಎಂದ ಹೇಳಿದರು.
ಕೇಂದ್ರ ಬಜೆಟ್ ಅಧಿವೇಶನಕ್ಕೂ ಮೊದಲೇ ವಿಪಕ್ಷಗಳನ್ನು ಕೆಣಕಿದ ಪ್ರಧಾನಿ, 10 ವರ್ಷಗಳಲ್ಲಿ ಮೊದಲ ಬಾರಿಗೆ ಸಂಸತ್ ಅಧಿವೇಶನಕ್ಕೆ ಮುನ್ನ ವಿದೇಶಿ ಹಸ್ತಕ್ಷೇಪವಿಲ್ಲ ಎಂದ ಹೇಳಿದರು. (HT_PRINT)

Budget Session 2025: ಸಂಸತ್ತಿನ ಬಜೆಟ್ ಅಧಿವೇಶನವು ಇಂದಿನಿಂದ ಪ್ರಾರಂಭವಾಗಿದೆ. ಪಿಎಂ ಮೋದಿ ಅವರು ಬಜೆಟ್ ಅಧಿವೇಶನಕ್ಕೆ ಮುಂಚಿತವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದರು. 2014ರ ನಂತರ ಇದೇ ಮೊದಲ ಸಲ ಸಂಸತ್ ಅಧಿವೇಶನವು ಯಾವುದೇ ವಿದೇಶಿ ಹಸ್ತಕ್ಷೇಪವಿಲ್ಲದೇ ಶುರುವಾಗುತ್ತಿದೆ. ಇದನ್ನು ಗಮನಿಸಬೇಕು ಎಂದು ಪ್ರಧಾನಿ ಮೋದಿ ಹೇಳುವ ಮೂಲಕ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನೂ ಕೆಣಕಿದರು.

ಅಧಿವೇಶನ ಶುರುವಾಗುವ ಮೊದಲು ಪ್ರತಿಪಕ್ಷಗಳಿಗೆ ಪ್ರಧಾನಿ ಟಾಂಗ್‌

ಅಧಿವೇಶನಕ್ಕೆ ಮೊದಲು ಸಮಸ್ಯೆಗಳನ್ನು ಸೃಷ್ಟಿಸಲು ವಿದೇಶ ಶಕ್ತಿಯಿಂದ ಈ ಬಾರಿ ಯಾವುದೇ ಪ್ರಯತ್ನವಿಲ್ಲ ಎಂಬುದು ಮೊದಲ ಬಾರಿಗೆ ಅನುಭವಕ್ಕೆ ಬಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಬಡ ಮತ್ತು ಮಧ್ಯಮ ವರ್ಗದವರಿಗೆ ಆಶೀರ್ವಾದ ನೀಡುವಂತೆ ನಾನು ಲಕ್ಷ್ಮಿ ದೇವಿಯನ್ನು ಪ್ರಾರ್ಥಿಸುತ್ತೇನೆ. ಮುಂದಿನ ಹಣಕಾಸು ವರ್ಷದ ಬಜೆಟ್ ಹೊಸ ನಂಬಿಕೆಯನ್ನು ಸೃಷ್ಟಿಸುವುದಲ್ಲದೆ, ಸುಧಾರಣೆಗಳನ್ನು ಬಲಪಡಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

ಬಹುಶಃ 2014 ರಿಂದೀಚೆಗೆ ಇದೇ ಮೊದಲ ಸಲ ಸಂಸತ್ ಅಧಿವೇಶನಕ್ಕೆ ಯಾವುದೇ ವಿದೇಶಿ ಶಕ್ತಿಗಳ ಅಡ್ಡಿ ಉಂಟಾಗಿಲ್ಲ. ದಿನ ಮುಂಚಿತವಾಗಿ ಕೂಡ ಅಂತಹ ಪ್ರಯತ್ನ ಕಾಣಲಿಲ್ಲ. ಪ್ರತಿ ಅಧಿವೇಶನಕ್ಕೆ ಮೊದಲು ಕಲಾಪ ಹಾಳುಗೆಡಹುವುದಕ್ಕೆ ಕಿಡಿಗೇಡಿತನದ ಪ್ರಯತ್ನಗಳು ನಡೆಯುತ್ತ ಬಂದಿದ್ದವು. ಅಂತಹ ಪ್ರಯತ್ನಗಳಿಗೆ ಪ್ರಚೋದನೆ ನೀಡುವವರಿಗೆ ಕೊರತೆ ಇಲ್ಲ. 10 ವರ್ಷಗಳ ನಂತರ ಅಂತಹ ಯಾವುದೇ ಪ್ರಯತ್ನಗಳು ನಡೆಯದೇ ಇರುವುದು ಗಮನಾರ್ಹ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕೇಂದ್ರ ಬಜೆಟ್ ಬಗ್ಗೆ ಪ್ರಧಾನಿ ಮೋದಿ ಆಶಾವಾದ

ಪ್ರಧಾನಿ ಮೋದಿಯವರು ಕೇಂದ್ರ ಬಜೆಟ್‌ ಮೂಲಕ ಮುಂಬರುವ ವರ್ಷಗಳಲ್ಲಿ ಆಗಬಹುದಾದ ಪ್ರಯೋಜನಗಳ ಬಗ್ಗೆ ಮಾತನಾಡಿದರು. ನಮ್ಮ ದೇಶ ಯುವ ದೇಶ. ಇಂದು, 20 ರಿಂದ 25 ವರ್ಷ ವಯಸ್ಸಿನ ಜನರು 50 ನೇ ವಯಸ್ಸಿನಲ್ಲಿ ಅಭಿವೃದ್ಧಿ ಹೊಂದಿದ ಭಾರತದ ಅತಿದೊಡ್ಡ ಫಲಾನುಭವಿಗಳಾಗಲಿದ್ದಾರೆ. ಅವರು ನೀತಿ ನಿರೂಪಣೆಯ ಮುಖ್ಯಸ್ಥರಾಗುತ್ತಾರೆ. ಅಭಿವೃದ್ಧಿ ಹೊಂದಿದ ಭಾರತದ ಮನೋಭಾವವನ್ನು ಪೂರೈಸುವ ನಮ್ಮ ಪ್ರಯತ್ನಗಳು ನಮ್ಮ ಯುವ ಪೀಳಿಗೆಗೆ ದೊಡ್ಡ ಉಡುಗೊರೆಯಾಗಿರುತ್ತವೆ ಎಂದು ಅವರು ಅಶಾವಾದ ವ್ಯಕ್ತಪಡಿಸಿದರು.

ನಮ್ಮ ಮೂರನೇ ಅವಧಿಯಲ್ಲಿ ನಾವು ಭಾರತದ ಎಲ್ಲರ ಅಭಿವೃದ್ಧಿಯತ್ತ ಗಮನ ಹರಿಸುತ್ತೇವೆ. ನಾವು ಮಿಷನ್ ನಡೆಸುತ್ತಿದ್ದೇವೆ. ನಾವೀನ್ಯತೆ, ಸೇರ್ಪಡೆ ಮತ್ತು ಹೂಡಿಕೆಯನ್ನು ದೇಶದ ಆರ್ಥಿಕ ಚಟುವಟಿಕೆಯ ಮಾರ್ಗಸೂಚಿಯ ಆಧಾರವೆಂದು ವಿವರಿಸಿದ ಮೋದಿ, ಈ ಅಧಿವೇಶನದಲ್ಲಿ ಅನೇಕ ಐತಿಹಾಸಿಕ ಮಸೂದೆಗಳನ್ನು ಎಂದಿನಂತೆ ಚರ್ಚಿಸಲಾಗುವುದು. ವಿಸ್ತೃತ ಚಿಂತನ ಮಂಥನದೊಂದಿಗೆ ಅವುಗಳನ್ನು ರಾಷ್ಟ್ರದ ಬಲವನ್ನು ಹೆಚ್ಚಿಸುವ ಕಾನೂನುಗಳನ್ನಾಗಿ ಜಾರಿಗೊಳಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾತು ಆರಂಭಿಸುವಾಗಲೇ ಸಮೃದ್ಧಿಯ ದೇವತೆಯಾದ ಲಕ್ಷ್ಮಿ ದೇವಿಯನ್ನು ಸ್ಮರಿಸಿದರು. ಮಹಾಲಕ್ಷ್ಮೀ ಅಷ್ಟಕದ ಸಾಲುಗಳನ್ನು ಉಲ್ಲೇಖಿಸಿದ ಅವರು, ಶುಭ ಫಲಕ್ಕಾಗಿ ನಾವು ಮಹಾಲಕ್ಷ್ಮಿಯನ್ನು ಪ್ರಾರ್ಥಿಸುತ್ತೇವೆ. ಈ ಸಲ ಬಜೆಟ್‌ನಲ್ಲಿ ಬಡ ಮತ್ತು ಮಧ್ಯಮ ವರ್ಗಕ್ಕೆ ಒಳಿತಾಗಲಿ. ಸರ್ಕಾರಕ್ಕೂ ಸಾಧನೆ ಮಾಡುವುದಕ್ಕೆ ಸಾಧ್ಯವಾಗುವಂತೆ ಶಕ್ತಿ ತುಂಬಲಿ, ಮಹಾಲಕ್ಷ್ಮಿ ದೇವಿಯು ಸಮೃದ್ಧಿ ಮತ್ತು ಕಲ್ಯಾಣವನ್ನು ಮಾಡುವ ದೇವರೂ ಹೌದು. ಹೀಗಾಗಿ, ಮಹಾಲಕ್ಷ್ಮಿ ದೇಶದ ಪ್ರತಿ ಬಡ ಮತ್ತು ಮಧ್ಯಮ ವರ್ಗದ ಸಮುದಾಯದ ಬಗ್ಗೆ ವಿಶೇಷ ಆಶೀರ್ವಾದಗಳನ್ನು ಮಾಡಲಿ ಎಂದು ಪ್ರಾರ್ಥಿಸುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.