ಕನ್ನಡ ಸುದ್ದಿ  /  Nation And-world  /  Nobel Literature Prize 2022 Awarded To French Author Annie Ernaux

Nobel literature prize 2022: ಫ್ರೆಂಚ್ ಲೇಖಕಿ ಅನ್ನಿ ಎರ್ನಾಕ್ಸ್‌ಗೆ ನೊಬೆಲ್‌ ಸಾಹಿತ್ಯ ಪ್ರಶಸ್ತಿ; ಶಾಂತಿ ಪುರಸ್ಕಾರ ಘೋಷಣೆ ನಾಳೆ

Nobel Literature Prize 2022: ಫ್ರೆಂಚ್ ಲೇಖಕಿ ಅನ್ನಿ ಎರ್ನಾಕ್ಸ್‌ಗೆ 2022 ರ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಸ್ಟಾಕ್‌ಹೋಮ್‌ನ ಸ್ವೀಡಿಷ್ ಅಕಾಡೆಮಿ ಘೋಷಿಸಿದೆ.

Nobel Literature Prize 2022: ಫ್ರೆಂಚ್ ಲೇಖಕಿ ಅನ್ನಿ ಎರ್ನಾಕ್ಸ್‌ಗೆ ನೊಬೆಲ್‌ ಸಾಹಿತ್ಯ ಪ್ರಶಸ್ತಿ
Nobel Literature Prize 2022: ಫ್ರೆಂಚ್ ಲೇಖಕಿ ಅನ್ನಿ ಎರ್ನಾಕ್ಸ್‌ಗೆ ನೊಬೆಲ್‌ ಸಾಹಿತ್ಯ ಪ್ರಶಸ್ತಿ (AP)

ಫ್ರೆಂಚ್ ಲೇಖಕಿ ಅನ್ನಿ ಎರ್ನಾಕ್ಸ್‌ಗೆ 2022 ರ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಸ್ಟಾಕ್‌ಹೋಮ್‌ನ ಸ್ವೀಡಿಷ್ ಅಕಾಡೆಮಿ ಘೋಷಿಸಿದೆ. ಅನ್ನಿ ಎರ್ನಾಕ್ಸ್‌ ಅವರ ಧೈರ್ಯ ಮತ್ತು ಕ್ಲಿನಿಕಲ್ ತೀಕ್ಷ್ಣತೆಗಾಗಿ ಪ್ರಶಸ್ತಿಯನ್ನು ಘೋಷಿಸಲಾಗಿದೆ. ವೈಯಕ್ತಿಕ ಸ್ಮರಣೆಯ ಬೇರುಗಳು, ಪ್ರತ್ಯೇಕತೆಗಳು ಮತ್ತು ಸಾಮೂಹಿಕ ನಿರ್ಬಂಧಗಳ ಬಹಿರಂಗಪಡಿಸಿದ ಅವರಿಗೆ ಅರ್ಹವಾಗಿ ಪ್ರಶಸ್ತಿ ನೀಡಲಾಗಿದೆ ಎಂದು ನೊಬೆಲ್ ಪ್ರಶಸ್ತಿ ಸಮಿತಿ ಹೇಳಿದೆ.

2021 ರಲ್ಲಿ, ಟಾಂಜೇನಿಯಾ ಮೂಲದ ಬ್ರಿಟನ್‌ ಬರಹಗಾರ ಅಬ್ದುಲ್‌ ರಝಾಕ್ ಗುರ್ನಾಹ್, ಅವರ ಕೃತಿಯು ವಲಸೆಯ ಪ್ರಭಾವದ ಮೇಲೆ ಕೇಂದ್ರೀಕರಿಸಿದಕ್ಕೆ ಕೊಡಮಾಡಲ್ಪಟ್ಟಿತ್ತು. "ವಸಾಹತುಶಾಹಿಯ ಪರಿಣಾಮಗಳು ಮತ್ತು ಸಂಸ್ಕೃತಿಗಳ ನಡುವಿನ ಅಂತರದಲ್ಲಿರುವ ನಿರಾಶ್ರಿತರ ಭವಿಷ್ಯಕ್ಕಾಗಿ ರಾಜಿಯಾಗದ ಮತ್ತು ಸಹಾನುಭೂತಿಯ ಒಳಹೊಕ್ಕುಗಾಗಿ ನೊಬೆಲ್ ಪ್ರಶಸ್ತಿಯನ್ನು ಗೆದ್ದಿದ್ದರು.

2020 ರಲ್ಲಿ, ಪ್ರಶಸ್ತಿಯನ್ನು ಅಮೆರಿಕದ ಕವಿ ಲೂಯಿಸ್ ಗ್ಲಕ್ ಅವರಿಗೆ ನೀಡಲಾಯಿತು. ನೊಬೆಲ್ ಸಾಹಿತ್ಯ ಸಮಿತಿಯನ್ನು ಹೆಸರಿಸುವ ಲೈಂಗಿಕ ನಿಂದನೆಯ ಆರೋಪ ಸ್ವೀಡಿಷ್ ಅಕಾಡೆಮಿಯನ್ನು ಅಲುಗಾಡಿಸಿದ್ದರಿಂದ 2018 ರಲ್ಲಿ ನೊಬೆಲ್ ಸಾಹಿತ್ಯ ಪ್ರಶಸ್ತಿ ಘೋಷಣೆಯನ್ನು ಮುಂದೂಡಲಾಯಿತು.

ನಿಯಾಂಡರ್ತಲ್ ಡಿಎನ್‌ಎಯಲ್ಲಿನ ಕೆಲಸಕ್ಕಾಗಿ ಸ್ವೀಡಿಷ್ ವಿಜ್ಞಾನಿ ಸ್ವಾಂಟೆ ಪಾಬೊ ಅವರು ವೈದ್ಯಕೀಯದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸುವುದರೊಂದಿಗೆ ನೊಬೆಲ್ ಪ್ರಶಸ್ತಿ ಘೋಷಣೆ ಪ್ರಕ್ರಿಯೆ ಸೋಮವಾರ ಪ್ರಾರಂಭವಾಗಿದೆ. ಕ್ವಾಂಟಮ್ ಭೌತಶಾಸ್ತ್ರಕ್ಕೆ ನೀಡಿದ ಅಪಾರ ಕೊಡುಗೆಗಾಗಿ ಅಲೈನ್ ಆಸ್ಪೆಕ್ಟ್, ಜಾನ್ ಎಫ್. ಕ್ಲೌಸರ್ ಮತ್ತು ಆಂಟನ್ ಝೈಲಿಂಗರ್ ಜಂಟಿಯಾಗಿ ಮಂಗಳವಾರ ಭೌತಶಾಸ್ತ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ ರಸಾಯನಶಾಸ್ತ್ರದಲ್ಲಿ, ಕ್ಲಿಕ್ ರಸಾಯನಶಾಸ್ತ್ರವನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಬುಧವಾರ ಕ್ಯಾರೊಲಿನ್ ಆರ್. ಬರ್ಟೊಝಿ, ಕೆ. ಬ್ಯಾರಿ ಶಾರ್ಪ್ಲೆಸ್ ಮತ್ತು ಮಾರ್ಟೆನ್ ಮೆಲ್ಡಾಲ್ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು.

ನೊಬೆಲ್ ಶಾಂತಿ ಪ್ರಶಸ್ತಿಯನ್ನು ಶುಕ್ರವಾರ ಮತ್ತು ಅರ್ಥಶಾಸ್ತ್ರ ಪ್ರಶಸ್ತಿಯನ್ನು ಸೋಮವಾರ ಪ್ರಕಟವಾಗಲಿದೆ.