ಕನ್ನಡ ಸುದ್ದಿ  /  Nation And-world  /  Nobel Prize In Chemistry 2022: Carolyn Bertozzi, Morten Meldal, Barry Sharpless Get Nobel Chemistry Prize

Nobel Prize in Chemistry 2022: ರಸಾಯನಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಘೋಷಣೆ, ಪ್ರಶಸ್ತಿ ಹಂಚಿಕೊಂಡ ಮೂವರು

Nobel Prize in Chemistry 2022: ಈ ವರ್ಷದ ರಸಾಯನ ಶಾಸ್ತ್ರದ ನೊಬೆಲ್‌ ಪ್ರಶಸ್ತಿ ಘೋಷಣೆಯಾಗಿದೆ. ಕ್ಯಾರೊಲಿನ್ ಬರ್ಟೊಝಿ, ಮಾರ್ಟಿನ್‌ ಮೆಲ್ಡಾಲ್, ಬೇರಿ ಶಾರ್ಪ್‌ಲೆಸ್ (Carolyn R. Bertozzi, Morten Meldal, K. Barry Sharpless) ಈ ವರ್ಷದ ಕೆಮಿಸ್ಟ್ರಿ ನೊಬೆಲ್‌ ಪ್ರಶಸ್ತಿ ಹಂಚಿಕೊಂಡಿದ್ದಾರೆ.

ರಸಾಯನಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಘೋಷಣೆ, ಪ್ರಶಸ್ತಿ ಹಂಚಿಕೊಂಡ ಮೂವರು
ರಸಾಯನಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಘೋಷಣೆ, ಪ್ರಶಸ್ತಿ ಹಂಚಿಕೊಂಡ ಮೂವರು

ಸ್ಟಾಕ್‌ಹೋಮ್‌: ರಾಯಲ್‌ ಸ್ವೀಡಿಸ್‌ ಅಕಾಡೆಮಿ ಆಫ್‌ ಸೈನ್ಸ್‌ನಲ್ಲಿ ಇಂದು ರಸಾಯನಶಾಸ್ತ್ರ ವಿಭಾಗದ ನೊಬೆಲ್‌ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಕ್ಯಾರೊಲಿನ್ ಬರ್ಟೊಝಿ, ಮಾರ್ಟಿನ್‌ ಮೆಲ್ಡಾಲ್, ಬೇರಿ ಶಾರ್ಪ್‌ಲೆಸ್ (Carolyn R. Bertozzi, Morten Meldal, K. Barry Sharpless) ಈ ವರ್ಷದ ಕೆಮಿಸ್ಟ್ರಿ ನೊಬೆಲ್‌ ಪ್ರಶಸ್ತಿ ಹಂಚಿಕೊಂಡಿದ್ದಾರೆ.

ಅಮೆರಿಕದ ರಸಾಯನಶಾಸ್ತ್ರಜ್ಞರಾದ ಕಾರ್ಲ್‌ ಬೆರಿ ಶಾರ್ಪ್‌ಲೆಸ್‌ ಅವರು ಕೆಮಿಸ್ಟ್ರಿ ವಿಭಾಗದ ನೊಬೆಲ್‌ ಪ್ರಶಸ್ತಿಯನ್ನು ಅಮೆರಿಕದ ಕ್ಯಾರೊಲಿನ್‌ ಮತ್ತು ಡೆನ್ಮಾರ್ಕ್‌ನ ಮಾರ್ಟಿನ್‌ ಮೆಲ್ಡೊರ್‌ ಜತೆ ಹಂಚಿಕೊಂಡಿದ್ದಾರೆ. ಅಂದಹಾಗೆ. ಕಾರ್ಲ್‌ ಬೆರಿ ಶಾರ್ಪ್‌ಲೆಸ್‌ ಅವರು ಈ ವರ್ಷದ್ದು ಸೇರಿದಂತೆ ಒಟ್ಟು ಎರಡು ಬಾರಿ ನೊಬೆಲ್‌ ಪ್ರಶಸ್ತಿ ಪಡೆದಂತಾಗಿದೆ.

ಶಾರ್ಪ್‌ಲೆಸ್‌ ಅವರಿಗೆ ಮೊದಲ ಬಾರಿಗೆ 2001ರಲ್ಲಿ "ಚಿರಲಿ ಕ್ಯಾಟಲೈಸ್ಡ್‌ ಆಕ್ಸಿಡೇಷನ್‌ ರಿಯಾಕ್ಷನ್‌ʼʼ ವಿಷಯಕ್ಕೆ ನೀಡಿದ ಕೊಡುಗೆಗಳನ್ನು ಪರಿಗಣಿಸಿ ನೊಬೆಲ್‌ ಪ್ರಶಸ್ತಿ ನೀಡಲಾಗಿತ್ತು. ಶಾರ್ಪ್‌ಲೆಸ್‌ ಅವರು ಸ್ಯಾನ್‌ಡಿಯಾಗೊದಲ್ಲಿರುವ ಸ್ಕ್ರಿಪ್ಸ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಮೆಸಾಚುಸೆಟ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಮತ್ತು ಸ್ಟಾನ್‌ಫೋರ್ಡ್‌ ಯೂನಿವರ್ಸಿಟಿಯಲ್ಲಿ ಬೋಧಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ನಾನ್‌ಫೋರ್ಡ್‌ ಯೂನಿವರ್ಸಿಟಿಯಲ್ಲಿ ಇವರು 1968ರಲ್ಲಿ ಪಿಎಚ್‌.ಡಿ ಪದವಿ ಪಡೆದಿದ್ದಾರೆ.

2021 ರ ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ವಿಜ್ಞಾನಿಗಳಾದ ಬೆಂಜಮಿನ್ ಲಿಸ್ಟ್ ಮತ್ತು ಡೇವಿಡ್ ಡಬ್ಲ್ಯೂಸಿ ಮ್ಯಾಕ್‌ಮಿಲನ್ ಅವರಿಗೆ ನೀಡಲಾಗಿತ್ತು. ಅಣುಗಳನ್ನು ನಿರ್ಮಿಸಲು ಪರಿಸರ ಶುದ್ಧವಾದ ಮಾರ್ಗವನ್ನು ಕಂಡುಹಿಡಿದಿದ್ದಕ್ಕಾಗಿ 2020 ರಲ್ಲಿ ಇಮ್ಯಾನುಯೆಲ್ ಚಾರ್ಪೆಂಟಿಯರ್ ಮತ್ತು ಜೆನ್ನಿಫರ್ ಡೌಡ್ನಾ ಅವರಿಗೆ ಈ ನೊಬೆಲ್‌ ಪ್ರಶಸ್ತಿ ದೊರಕಿತ್ತು.

ನಿನ್ನೆ 2022ರ ಸಾಲಿನ ಭೌತಶಾಸ್ತ್ರ ವಿಭಾಗದ ನೊಬೆಲ್‌ ಪ್ರಶಸ್ತಿ (Nobel prize in Physics) ಘೋಷಣೆಯಾಗಿತ್ತು. ಅಲೈನ್‌ ಆಸ್ಪೆಕ್ಟ್‌, ಜಾನ್‌ ಎಫ್‌, ಕ್ಲೌಸರ್‌, ಆಂಟನ್‌ ಝೈಲಿಂಗರ್‌ ಅವರು ಭೌತಶಾಸ್ತ್ರದ ನೊಬೆಲ್‌ ಪ್ರಶಸ್ತಿಯನ್ನು ಹಂಚಿಕೊಂಡಿದ್ದರು.

ಜ್ಞಾನಿ ಸ್ವಾಂಟೆ ಪಾಬೊ (Scientist Svante Paabo) ಅವರು ಈ ಬಾರಿಯ ಮೆಡಿಸಿನ್‌ ವಿಭಾಗದ ನೊಬೆಲ್‌ ಪ್ರಶಸ್ತಿ (2022 Nobel Prize)ಗೆ ಭಾಜನರಾಗಿದ್ದರು. ಮಾನವ ವಿಕಾಸದ ವಂಶವಾಹಿ ಮತ್ತು ಅಳಿವಿನಂಚಿನಲ್ಲಿರುವ ಹೋಮಿನಿನ್‌ಗಳ ಕುರಿತಾದ ಸಂಶೋಧನೆಗೆ ಶರೀರಶಾಸ್ತ್ರ/ವೈದ್ಯಕೀಯ ನೊಬೆಲ್‌ ಅನ್ನು ಇವರಿಗೆ ನೀಡಲಾಗಿದೆ ಎಂದು ನೊಬೆಲ್‌ ಪ್ರಶಸ್ತಿ ಸಂಸ್ಥೆ ತಿಳಿಸಿತ್ತು. ಇದೀಗ ಈ ವರ್ಷದ ಫಿಸಿಕ್ಸ್‌ ವಿಭಾಗದ ನೊಬೆಲ್‌ ಪ್ರಶಸ್ತಿ ಘೋಷಣೆಯಾಗಿದೆ.

ನೊಬೆಲ್‌ ಪ್ರಶಸ್ತಿಯನ್ನು ಸ್ವಿಡನ್‌ನ ಕೈಗಾರಿಕೋದ್ಯಮಿ ಆಲ್‌ಫ್ರೆಡ್‌ ನೋಬೆಲ್‌ ಅವರು ಆರಂಭಿಸಿದರು. ಅವರು ಡೈನಾಮೈಟ್‌ನ ಅನ್ವೇಷಕರು. 1901ರಲ್ಲಿ ಮೊದಲ ಬಾರಿಗೆ ನೊಬೆಲ್‌ ಪ್ರಶಸ್ತಿ ನೀಡಲಾಯಿತು. ನೋಬೆಲ್‌ ಅವರು ಮರಣ ಹೊಂದಿದ ಐದು ವರ್ಷಗಳ ತರುವಾಯ ಮೊದಲ ನೊಬೆಲ್‌ ಪ್ರಶಸ್ತಿ ಘೋಷಿಸಲಾಯಿತು.

ಮೊದಲ ದಿನ ಮೆಡಿಸಿನ್‌ ವಿಭಾಗದಲ್ಲಿ ನೋಬೆಲ್‌ ಘೋಷಣೆಯಾಗುತ್ತದೆ. ಬಳಿಕ ಫಿಸಿಕ್ಸ್‌, ಬಳಿಕ ಕೆಮಿಸ್ಟ್ರಿ ವಿಭಾಗದ ನೊಬೆಲ್‌ ಘೋಷಣೆಯಾಗುತ್ತದೆ. ಬಳಿಕ ಸಾಹಿತ್ಯಕ್ಕೆ ನೋಬೆಲ್‌ ಘೋಷಣೆಯಾಗುತ್ತದೆ. ಅಕ್ಟೋಬರ್‌ 10ರಂದು ಅರ್ಥಶಾಸ್ತ್ರದ ನೊಬೆಲ್‌ ಪ್ರಶಸ್ತಿ ಘೋಷಿಸಲಾಗುತ್ತದೆ.

IPL_Entry_Point

ವಿಭಾಗ