Grain ATM: ದುಡ್ಡಲ್ಲ, ಬಂತು ನೋಡಿ ಧಾನ್ಯಗಳನ್ನು ವಿತ್​ಡ್ರಾ ಮಾಡೋ ಎಟಿಎಂ; ಇದು ಕೆಲಸ ಮಾಡೋದಾದರೂ ಹೇಗೆ?-odisha government launches indias first grain atm know how it works anupriti project odisha launches first rice atm prs ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Grain Atm: ದುಡ್ಡಲ್ಲ, ಬಂತು ನೋಡಿ ಧಾನ್ಯಗಳನ್ನು ವಿತ್​ಡ್ರಾ ಮಾಡೋ ಎಟಿಎಂ; ಇದು ಕೆಲಸ ಮಾಡೋದಾದರೂ ಹೇಗೆ?

Grain ATM: ದುಡ್ಡಲ್ಲ, ಬಂತು ನೋಡಿ ಧಾನ್ಯಗಳನ್ನು ವಿತ್​ಡ್ರಾ ಮಾಡೋ ಎಟಿಎಂ; ಇದು ಕೆಲಸ ಮಾಡೋದಾದರೂ ಹೇಗೆ?

Indias First Grain ATM: ಭಾರತದಲ್ಲಿ ಮೊದಲ ಧಾನ್ಯ ಎಟಿಎಂ ಅನ್ನು ಒಡಿಶಾ ಸರ್ಕಾರ ಪ್ರಾರಂಭಿಸಿದೆ. ಹಾಗಾದರೆ ಈ ಎಟಿಎಂ ಹೇಗೆ ಕೆಲಸ ಮಾಡುತ್ತದೆ? ಇಲ್ಲಿದೆ ನೋಡಿ ವಿವರ.

ದುಡ್ಡಲ್ಲ, ಬಂತು ನೋಡಿ ಧಾನ್ಯಗಳನ್ನು ವಿತ್​ಡ್ರಾ ಮಾಡೋ ಎಟಿಎಂ
ದುಡ್ಡಲ್ಲ, ಬಂತು ನೋಡಿ ಧಾನ್ಯಗಳನ್ನು ವಿತ್​ಡ್ರಾ ಮಾಡೋ ಎಟಿಎಂ

Indias First Grain ATM: ಇತ್ತೀಚೆಗೆ ಬೀದಿಗೊಂದು, ಶಾಪಿಂಗ್ ಮಾಲ್, ಬ್ಯಾಂಕ್, ಪ್ರಮುಖ ಸ್ಥಳಗಳಲ್ಲಿ ಎಂಟಿಎಂ ಮಿಷನ್​​ಗಳು ಕಾಣ ಸಿಗುತ್ತವೆ. ನೇರವಾಗಿ ಬ್ಯಾಂಕ್​​ಗೆ ಹೋಗುವುದರ ಬದಲಿಗೆ ಈ ಮಿಷನ್​​ನಲ್ಲೇ ಎಟಿಎಂ ಕಾರ್ಡ್ ಬಳಸಿ ಹಣವನ್ನು ತೆಗೆದುಕೊಳ್ಳುತ್ತೇವೆ. ದುಡ್ಡು ವಿತ್​ಡ್ರಾ ಮಾಡುವುದಕ್ಕಾಗಿಯೇ ಎಟಿಎಂ ಬಳಸುತ್ತೇವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೀಗ ಈ ಯಂತ್ರಗಳಲ್ಲಿ ಧಾನ್ಯಗಳನ್ನೂ ತೆಗೆದುಕೊಳ್ಳಬಹುದು ಎಂದರೆ ನೀವು ನಂಬುತ್ತೀರಾ? ಹೌದು, ನಂಬಿದರೂ ನಂಬದಿದ್ದರೂ ಇದೇ ಸತ್ಯ.

ಹೌದು, ಇದು ಸಾಧ್ಯವಾಗಿರೋದು ಒಡಿಶಾದಲ್ಲಿ. ಎಟಿಎಂನಲ್ಲಿ ದುಡ್ಡು ತೆಗೆದಂತೆ ಧಾನ್ಯಗಳನ್ನೂ ತೆಗೆದುಕೊಳ್ಳಬಹುದು. ಆಹಾರ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುವ ಸಲುವಾಗಿ ಈ ನಿರ್ಧಾರ ತೆಗೆದುಕೊಂಡಿದೆ. ಈ ಯೋಜನೆಯ ಹೆಸರು ಅನುಪ್ರೀತಿ. ದಿನದ 24-ಗಂಟೆಗಳ ಕಾಲ ಜನರಿಗೆ ಧಾನ್ಯ ಒದಗಿಸುವುದು ಇದರ ಉದ್ದೇಶವಾಗಿದೆ. ಧಾನ್ಯ ವಿತರಣಾ ಯಂತ್ರಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರವು ಯುನೈಟೆಡ್ ನೇಷನ್ಸ್ ವರ್ಲ್ಡ್ ಫುಡ್ ಪ್ರೋಗ್ರಾಂ (WFP) ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಪ್ರಾಯೋಗಿಕವಾಗಿ ಒಂದು ಧಾನ್ಯ ಎಟಿಎಂ ಅನ್ನು ಭುವನೇಶ್ವರದಲ್ಲಿ ಆಗಸ್ಟ್​​ 9ರಂದು ಅನುಷ್ಠಾನ ಮಾಡಲಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (ಎನ್‌ಎಫ್‌ಎಸ್‌ಎ) ಅಡಿಯಲ್ಲಿ ರಾಜ್ಯದಾದ್ಯಂತ ಎಟಿಎಂ ನೆಟ್‌ವರ್ಕ್ ವಿಸ್ತರಿಸುವ ಯೋಜನೆ ಹೊಂದಿದ್ದು, ದಿನದ 24 ಗಂಟೆ ಫಲಾನುಭವಿಗಳಿಗೆ ಅಗತ್ಯ ಆಹಾರ ಧಾನ್ಯಗಳು ದೊರೆಯುವಂತೆ ಮಾಡುವುದೇ ಇದರ ಉದ್ದೇಶವಾಗಿದೆ. ಈ ಉಪಕ್ರಮವು ಪೌಷ್ಟಿಕಾಂಶದ ಭದ್ರತೆಯನ್ನು ಹೆಚ್ಚಿಸುವ ಗುರಿಯನ್ನೂ ಹೊಂದಿದೆ.

ಒಡಿಶಾದ ಸಚಿವ ಕೃಷ್ಣ ಚಂದ್ರ ಪಾತ್ರ ಮತ್ತು ಡಬ್ಲ್ಯುಎಫ್‌ಪಿ ಉಪ ನಿರ್ದೇಶಕರು ನೊಜೊಮಿ ಹಶಿಮೊಟೊ ಈ ಯಂತ್ರ ಉದ್ಘಾಟಿಸಿದ್ದರು. ಕೇಂದ್ರ ಸರ್ಕಾರವು ಎನ್​​ಎಫ್​ಎಸ್​ಎ ಅಡಿಯಲ್ಲಿ 813.5 ಮಿಲಿಯನ್ ಫಲಾನುಭವಿಗಳಿಗೆ ನೆರವಾಗಲು ಷರತ್ತು ಹಾಕಿದೆ. ಶೇ 67ರಷ್ಟು ಉಚಿತ ಆಹಾರ ಧಾನ್ಯಗಳ ಫಲಾನುಭವಿಗಳಿದ್ದಾರೆ. ಒಡಿಶಾ ಸರ್ಕಾರದೊಂದಿಗೆ ಡಬ್ಲ್ಯುಎಫ್​​​ಪಿಯ ಸಹಯೋಗವು ರಾಜ್ಯದಲ್ಲಿ ಪೌಷ್ಟಿಕಾಂಶದ ಭದ್ರತೆ ಸಾಧಿಸುವ ಗುರಿಯನ್ನು ಹೊಂದಿದೆ. ಇದು ಯಶಸ್ವಿಯಾದರೆ ಹಂತ ಹಂತದಲ್ಲಿ ರಾಜ್ಯದಲ್ಲಿ ಅನುಷ್ಠಾನ ಮಾಡುವ ಉದ್ದೇಶ ಹೊಂದಿದೆ.

ಧಾನ್ಯ ಎಟಿಎಂಗಳು ಹೇಗೆ ಕಾರ್ಯನಿರ್ವಹಿಸುತ್ತವೆ?

ಧಾನ್ಯ ಎಟಿಎಂಗಳನ್ನು ಫಲಾನುಭವಿಗಳು ಹೇಗೆ ಬಳಸುತ್ತಾರೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಅನಕ್ಷಸ್ಥರು ತಂತ್ರಜ್ಞಾನದ ಅರಿವಿಲ್ಲದವರು ಹೇಗೆ ಉಪಯೋಗಿಸುತ್ತಾರೆ? ಈ ಯಂತ್ರಗಳನ್ನು ತಮ್ಮ ರೇಷನ್ ಕಾರ್ಡ್​​ ಮೂಲಕ ಸುಲಭವಾಗಿ ಬಳಸಿಕೊಂಡು ಧಾನ್ಯ ಪಡೆಯಬಹುದು. ಒಮ್ಮೆ ಇದು ಯಶಸ್ವಿಯಾದರೆ, ದೇಶದಾದ್ಯಂತ ಯಂತ್ರಗಳನ್ನು ಸ್ಥಾಪಿಸಿದ ನಂತರ ಒಂದು ರಾಷ್ಟ್ರ ಒಂದು ಪಡಿತರ ಅನ್ವಯವಾಗುತ್ತದೆ. ಇದರಿಂದ ಫಲಾನುಭವಿಗಳು ಅವರು ಎಲ್ಲೇ ಇದ್ದರೂ ಉಚಿತ ಧಾನ್ಯಗಳನ್ನು ಪಡೆಯಬಹುದು.

ವರದಿಗಳ ಪ್ರಕಾರ, ಅನುಪ್ರಿತಿ ಯೋಜನೆ (ಎಟಿಎಂ) ಕೇವಲ ಐದು ನಿಮಿಷಗಳಲ್ಲಿ 50 ಕೆಜಿ ಧಾನ್ಯಗಳನ್ನು ವಿತರಿಸಲಿದೆ. ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲುವ, ಸರದಿಗಾಗಿ ಕಾಯುವ ಸಮಯ ಉಳಿಸುತ್ತದೆ. ಯಂತ್ರವು ಬಯೋಮೆಟ್ರಿಕ್ ವ್ಯವಸ್ಥೆ ಹೊಂದಿರುತ್ತದೆ. ಹಾಗಾಗಿ ಇದರಲ್ಲಿ ಮೋಸ ಮತ್ತು ಕಳ್ಳತನ ನಡೆಯುವ ಸಾಧ್ಯತೆಗಳು ತೀರಾ ಕಡಿಮೆ. ಎಟಿಎಂ ಕಾರ್ಡ್​​ನಲ್ಲಿ ಪಿನ್ ಹಾಕಿ ಹೇಗೆ ಹಣವನ್ನು ತೆಗೆಯುತ್ತೇವೆಯೋ, ಅದೇ ರೀತಿ ಬಯೋಮೆಟ್ರಿಕ್ ಮೂಲಕ ಇಲ್ಲಿ ಧಾನ್ಯ ಪಡೆಯಬಹುದು. ಆಯಾ ರೇಷನ್ ಕಾರ್ಡ್​ಗೆ ಎಷ್ಟು ಸೌಲಭ್ಯ ಇದೆಯೋ ಅಷ್ಟು ಧಾನ್ಯ ಸಿಗಲಿದೆ. ಇದು ಆಟೋಮ್ಯಾಟಿಕ್ ಆಗಿ ಕೆಲಸ ಮಾಡಲಿದೆ. ನಮಗೆ ದುಡ್ಡು ಬರುವಂತೆ, ಧಾನ್ಯ ಬರುವ ಜಾಗದಲ್ಲಿ ಚೀಲವನ್ನು ಹಿಡಿದುಕೊಳ್ಳಬೇಕು.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.