ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Bonv Aero Drone: 50 ಕೆಜಿ ತೂಕ ಹೊರುವ ಡ್ರೋನ್‌ ಪರಿಚಯಿಸಿದ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌, ಕಾರ್ಗೊ ಸಾಗಣೆಗೆ ವರದಾನ

BonV Aero Drone: 50 ಕೆಜಿ ತೂಕ ಹೊರುವ ಡ್ರೋನ್‌ ಪರಿಚಯಿಸಿದ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌, ಕಾರ್ಗೊ ಸಾಗಣೆಗೆ ವರದಾನ

ಒಡಿಸ್ಸಾ ಸ್ಕಿಲ್‌ ಕಾಂಕ್ಲೆವ್‌ 2023 (Odisha Skill Conclave 2023)ನಲ್ಲಿ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರು ಭಾರೀ ತೂಕ ಹೊರುವ ಡ್ರೋನ್‌ ಪರಿಚಯಿಸಿದ್ದಾರೆ.

BonV Aero Drone: 50 ಕೆಜಿ ತೂಕ ಹೊರುವ ಡ್ರೋನ್‌ ಪರಿಚಯಿಸಿದ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌, ಕಾರ್ಗೊ ಸಾಗಾಣೆಗೆ ವರದಾನ
BonV Aero Drone: 50 ಕೆಜಿ ತೂಕ ಹೊರುವ ಡ್ರೋನ್‌ ಪರಿಚಯಿಸಿದ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌, ಕಾರ್ಗೊ ಸಾಗಾಣೆಗೆ ವರದಾನ

ಭುವನೇಶ್ವರ: ಒಡಿಸ್ಸಾ ಸ್ಕಿಲ್‌ ಕಾಂಕ್ಲೆವ್‌ 2023 (Odisha Skill Conclave 2023)ನಲ್ಲಿ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರು ಭಾರೀ ತೂಕ ಹೊರುವ ಡ್ರೋನ್‌ ಪರಿಚಯಿಸಿದ್ದಾರೆ. ಸುಮಾರು 10 ಕಿ.ಮೀ.ವರೆಗೆ 50 ಕೆ.ಜಿ. ತೂಕ ಹೊರುವ ಸಾಮರ್ಥ್ಯವಿರುವಂತಹ ಡ್ರೋನ್‌ ಇದಾಗಿದೆ. ಇಷ್ಟೊಂದು ತೂಕ ಹೊರುವ ಭಾರತದ ಮೊದಲ ಲಾಜಿಸ್ಟಿಕ್‌ ಡ್ರೋನ್‌ ಎಂಬ ಹಿರಿಮಗೆ ಬಾನ್‌ವಿ ಏರೋ ಡ್ರೋನ್‌ ಪಾತ್ರವಾಗಲಿದೆ. ಈ ಡ್ರೋನ್‌ನ ಟ್ರಯಲ್‌ ಹಾರಾಟವನ್ನೂ ಮುಖ್ಯಮಂತ್ರಿ ನಡೆಸಿಕೊಟ್ಟರು.

ಐಐಟಿ ಮಾಂಡಿ, ಎಐಸಿ ಸಿವಿ ರಾಮನ್‌ ಗ್ಲೋಬಲ್‌ ಯೂನಿವರ್ಸಿಟಿ (ಒಡಿಸ್ಸಾ) ಮತ್ತು ನೀತಿ ಆಯೋಗ ಬೆಂಬಲದ ಸಂಸ್ಥೆ ಬಿಲ್ಡಿಂಗ್‌ ಎಲೆಕ್ಟ್ರಿಕಲ್‌ ಏರಿಯಲ್‌ ವೆಹಿಕಲ್ಸ್‌ ಜಂಟಿಯಾಗಿ ಬಾನ್‌ವಿ ಏರೋ ಡ್ರೋನ್‌ ಅಭಿವೃದ್ಧಿಪಡಿಸಿವೆ.

ಟ್ರೆಂಡಿಂಗ್​ ಸುದ್ದಿ

ಅರುಣಾಚಲ ಪ್ರದೇಶದ ಭಾರತೀಯ ಸೇನೆಯ ಪೂರ್ವ ಕಮಾಂಡ್‌ನ ತವಾಂಗ್‌ನಲ್ಲಿ 8000 ರಿಂದ 10,000 ಅಡಿ ಎತ್ತರದಲ್ಲಿ 50 ಕಿಲೋಗ್ರಾಂಗಳಷ್ಟು ಸರಕುಗಳನ್ನು ಸಾಗಿಸುವ ಈ 'RM001' ಎಲೆಕ್ಟ್ರಿಕ್ ವೈಮಾನಿಕ ವಾಹನದ ಪ್ರಯೋಗವನ್ನು ಯಶಸ್ವಿಯಾಗಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ 14,000 ರಿಂದ 16,000 ಅಡಿ ಎತ್ತರದಲ್ಲಿ ಇದರ ಪ್ರಯೋಗಾರ್ಥ ಹಾರಾಟ ನಡೆಸಲಾಗುವುದು ಎಂದು ಬಾನ್ವಿ ಏರೋದ ಸಹ-ಸಂಸ್ಥಾಪಕ ಮತ್ತು ಸಿಇಒ ಸತ್ಯಬ್ರತ ಶತಪತಿ ತಿಳಿಸಿದ್ದಾರೆ.

"ತನ್ನ ಮುಂದಿನ ಹಂತದಲ್ಲಿ, ನಮ್ಮ ಸ್ಟಾರ್ಟ್ಅಪ್ 'RM002' ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ಅದು 200 ಕಿಲೋಗ್ರಾಂಗಳಷ್ಟು ಸರಕುಗಳನ್ನು 40 ಕಿಲೋಮೀಟರ್‌ಗಳಷ್ಟು ದೂರದವರೆಗೆ ಸಾಗಿಸಬಲ್ಲದು" ಎಂದು ಅವರು ಹೇಳಿದ್ದಾರೆ.

"ಈ ಬಹುಬಳಕೆಯ ಏರ್‌ ವೆಹಿಕಲ್‌ಗಳಿಂದ ಹಲವು ಪ್ರಯೋಜನಗಳಿವೆ. ಸರಕು ಸಾಗಾಣಿಕೆ ಮಾತ್ರವಲ್ಲದೆ ವಿಪತ್ತು ನಿರ್ವಹಣೆಯಲ್ಲಿಯೂ ಪ್ರಮುಖ ಪಾತ್ರ ವಹಿಸಲಿದೆ. ಒಡಿಸ್ಸಾವನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಇಲ್ಲಿ ನೈಸರ್ಗಿಕ ವಿಪತ್ತುಗಳು ಹೆಚ್ಚಾಗಿ ಸಂಭವಿಸುತ್ತ ಇರುತ್ತವೆ. ಚಂಡಮಾರುತ, ಪ್ರವಾಹ ಇತ್ಯಾದಿ ತೊಂದರೆಗಳು ಇಲ್ಲಿ ಸಾಮಾನ್ಯ. ಇಂತಹ ಪರಿಸ್ಥಿತಿಗಳಲ್ಲಿ ತುರ್ತು ನೆರವಿಗೆ ಈ ಡ್ರೋನ್‌ ನೆರವಾಗಬಲ್ಲದು. ಜತೆಗೆ, ದೂರದ ಗುಡ್ಡಗಾಡಿನ ಪ್ರದೇಶಗಳಿಗೆ ಸರಕು ಸಾಗಾಣಿಕೆಗೂ ನೆರವಾಗಲಿದೆ" ಎಂದು ಅವರು ಹೇಳಿದ್ದಾರೆ.

ಇಂದಿನ ಪ್ರಮುಖ ಸುದ್ದಿಗಳು

ಕರ್ನಾಟಕ ಚುನಾವಣೆಗೆ 3,632 ಅಭ್ಯರ್ಥಿಗಳಿಂದ 5,102 ನಾಮಪತ್ರ ಸಲ್ಲಿಕೆ

ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Elections) ಕಳೆದ ಕೆಲವು ದಿನಗಳಿಂದ ಅಭ್ಯರ್ಥಿಗಳು ನಾಮಪತ್ರ (Nominations) ಸಲ್ಲಿಸುತ್ತಿದ್ದಾರೆ. ಪ್ರಬಲ ರಾಜಕಾರಣಿಗಳು ತಮ್ಮ ಕಾರ್ಯಕರ್ತರ ಪಡೆಯ ನಡುವೆ ಶಕ್ತಿಪ್ರದರ್ಶನ ಮಾಡುತ್ತ ನಾಮಪತ್ರ ಸಲ್ಲಿಸಿದರೆ, ಸಾಮಾನ್ಯ ಅಭ್ಯರ್ಥಿಗಳು ಸೈಲೆಂಟ್‌ ಆಗಿ ಹೋಗಿ ನಾಮಪತ್ರ ಸಲ್ಲಿಸುತ್ತಿದ್ದಾರೆ. ಗುರುವಾರದವರೆಗೆ ಕರ್ನಾಟಕದಲ್ಲಿ 3,600 ಅಭ್ಯರ್ಥಿಗಳು 5,102 ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಏಪ್ರಿಲ್‌ 13ರಿಂದ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು.

ತರೀಕೆರೆ ಕ್ಷೇತ್ರದಲ್ಲಿ 40 ಕೆಜಿ ಚಿನ್ನಾಭರಣ ಜಪ್ತಿ

ರಾಜ್ಯದಲ್ಲಿ ವಿಧಾನಸಭಾ ಚುನಾವಣಾ (Karnataka Assembly Elections) ಕಣ ರಂಗೇರಿದೆ. ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಚುನಾವಣಾ ಆಯೋಗ (Election Commission) ಹದ್ದಿನ ಕಣ್ಣಿಟ್ಟಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ (Tarikere constituency) 23.51 ಕೋಟಿ ರೂಪಾಯಿ ಮೌಲ್ಯದ 40 ಕಿಲೋ ಗ್ರಾಂಗಳಷ್ಟು ಚಿನ್ನ ಮತ್ತು 20 ಕೆಜಿಗಿಂತ ಹೆಚ್ಚು ಬೆಳ್ಳಿಯನ್ನು ವಶಪಡಿಸಿಕೊಂಡಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.