Odisha Train Accident: ಒಡಿಶಾ ರೈಲು ದುರಂತ; ಮೃತರ ಕುಟುಂಬಗಳಿಗೆ ಮಾಸಾಶನ ನೀಡುವಂತೆ ನಟ ಸೋನು ಸೂದ್‌ ಒತ್ತಾಯ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Odisha Train Accident: ಒಡಿಶಾ ರೈಲು ದುರಂತ; ಮೃತರ ಕುಟುಂಬಗಳಿಗೆ ಮಾಸಾಶನ ನೀಡುವಂತೆ ನಟ ಸೋನು ಸೂದ್‌ ಒತ್ತಾಯ

Odisha Train Accident: ಒಡಿಶಾ ರೈಲು ದುರಂತ; ಮೃತರ ಕುಟುಂಬಗಳಿಗೆ ಮಾಸಾಶನ ನೀಡುವಂತೆ ನಟ ಸೋನು ಸೂದ್‌ ಒತ್ತಾಯ

ಬಾಲಿವುಡ್‌ ನಟ ಸೋನು ಸೂದ್‌ ಸದಾ ಬಡವರ, ನೊಂದವರ ಕಷ್ಟಗಳಿಗೆ ಮಿಡಿಯುವ ಮೂಲಕ ಸುದ್ದಿಯಾಗುತ್ತಾರೆ. ಇಂತಿಪ್ಪ ಸೋನು ಈಗ ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮಾಸಾಶನ ನೀಡುವಂತೆ ಒಡಿಶಾ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮಾಸಾಶನ ನೀಡುವಂತೆ ನಟ ಸೋನು ಸೂದ್‌ ಒತ್ತಾಯ
ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮಾಸಾಶನ ನೀಡುವಂತೆ ನಟ ಸೋನು ಸೂದ್‌ ಒತ್ತಾಯ

ಮುಂಬೈ: 'ಒಡಿಶಾದ ಬಾಲಸೋರ್‌ ಜಿಲ್ಲೆಯಲ್ಲಿ ಸಂಭವಿಸಿದ ತ್ರಿವಳಿ ರೈಲು ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪ್ರತಿ ತಿಂಗಳು ಮಾಸಾಶನ ನೀಡಬೇಕುʼ ಎಂದು ಒಡಿಶಾ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ನಟ ಸೋನು ಸೂದ್ ಒತ್ತಾಯಿಸಿದ್ದಾರೆ.

ಈ ಕುರಿತು ಟ್ವಿಟರ್‌ನಲ್ಲಿ ವಿಡಿಯೊ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, 'ಇಂತಹ ದುರ್ಘಟನೆಗಳು ನಡೆದಾಗ ನಾವೆಲ್ಲ ಸಂತಾಪ ಸೂಚಿಸಿ, ಅಯ್ಯೋ ಎಂದು ಸುಮ್ಮನಾಗುತ್ತೇವೆ. ಆದರೆ, ತಮ್ಮ ಹೊಟ್ಟೆಪಾಡಿಗೆ ಊರಿಂದ ಊರಿಗೆ ಹೋಗುವಾಗ ಹೀಗೆ ಹೆಣವಾದ ಕಾರ್ಮಿಕರು, ದಿನಗೂಲಿಯವರು, ಕಡಿಮೆ ಆದಾಯ ಹೊಂದಿರುವವರ ಸಂತ್ರಸ್ತರು ಏನು ಮಾಡಬೇಕು?ʼ ಎಂದು ಪ್ರಶ್ನಿಸಿದ್ದಾರೆ.

'ಈ ಮಹಾ ದುರಂತದಲ್ಲಿ ಅನೇಕ ಕುಟುಂಬಗಳು ನಾಶವಾಗಿವೆ. ಹಾಗಾಗಿ ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ತಿಂಗಳು ಸಂತ್ರಸ್ತರಿಗೆ ಮಾಸಾಶನ, ಮಾಸಿಕ ವೇತನ ಅಥವಾ ಮಾಸಿಕ ನಿಗದಿತ ಆದಾಯ ಸಿಗುವಂತೆ ನೋಡಿಕೊಳ್ಳಬೇಕು. ಶಕ್ತಿ ಇದ್ದವರು ಸಹಾಯ ಮಾಡಲು ಇದು ಸಮಯ' ಎಂದು ಮನವಿ ಮಾಡಿದ್ದಾರೆ.

ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ನೀಡುವುದಾಗಿ ಭಾನುವಾರ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ ಘೋಷಿಸಿದ್ದಾರೆ.

ಈಗಾಗಲೇ ಕೇಂದ್ರ ಸರ್ಕಾರ ಮತ್ತು ರೈಲ್ವೇ ಇಲಾಖೆ ಪರಿಹಾರ ಘೋಷಿಸಿವೆ.

ಒಡಿಶಾ ರೈಲು ದುರಂತಕ್ಕೆ ಸಂಬಂಧಿಸಿದ ಈ ಸುದ್ದಿಗಳನ್ನೂ ಓದಿ

Odisha Train Accident: ಒಡಿಶಾ ರೈಲು ಅಪಘಾತ; ಇಂದಿನಿಂದ ಬಹುತೇಕ ರೈಲು ಸಂಚಾರ ಪುನಾರಂಭ

ಒಡಿಶಾದ ಬಾಲಸೋರ್ ಮಾರ್ಗದಲ್ಲಿ ಭೀಕರ ಅಪಘಾತದ ಪರಿಣಾಮ ಎರಡು ದಿನಗಳಿಂದ ಸ್ಥಗಿತವಾಗಿದ್ದ ರೈಲು ಸಂಚಾರ ಇಂದಿನಿಂದ ಪುನಾರಂಭವಾಗಲಿದೆ.

ಬಾಲಸೋರ್ (ಒಡಿಶಾ): ಹಿಂದೆಂದು ಕಂಡು ಕೇಳರಿಯದ ಭೀಕರ ರೈಲು ದುರಂತಕ್ಕೆ (Odisha Train Accident) ಸಾಕ್ಷಿಯಾಗಿದ್ದ ಒಡಿಶಾದ ಬಾಲಸೋರ್‌ನಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿದೆ. ರೈಲು ಅಪಘಾತವಾದ 50 ಗಂಟೆಗಳ ಬಳಿಕ ರೈಲು ಹಳಿಗಳ ಮೇಲಿನ ಅವಶೇಷಗಳ ತೆರವು ಕಾರ್ಯಾಚರಣೆ ಮುಕ್ತಾಯವಾಗಿದ್ದು, ಹಳಿಗಳ ಪರಿಶೀಲನೆ ಕೂಡ ನಡೆದಿದೆ.

Odisha Train Tragedy: 270ಕ್ಕೂ ಹೆಚ್ಚು ಜನರ ಬಲಿ ಪಡೆದ ಒಡಿಶಾ ರೈಲು ಅಪಘಾತ; ಪ್ರಕರಣದ ತನಿಖೆ ಸಿಬಿಐ ಹೆಗಲಿಗೆ

CBI probe in Odisha Train Tragedy: ಒಡಿಶಾ ರೈಲು ದುರಂತ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಬಾಲಸೋರ್ (ಒಡಿಶಾ): ಶುಕ್ರವಾರ ( ಜೂನ್​ 2) ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಮೂರು ರೈಲುಗಳ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ 270ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, 1000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದುರಂತದ ಗಂಭೀರತೆಯನ್ನು ಅರಿತು ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸಲಾಗಿದೆ.

Odisha Train Accident: ಕೋರಮಂಡಲ್ ಎಕ್ಸ್‌ಪ್ರೆಸ್‌ ರೈಲಿನ ಲೋಕೋ ಪೈಲಟ್‌ಗೆ ಅಪಘಾತ ನಂತರ ಪ್ರಜ್ಞೆ ಇತ್ತು; ಗೂಡ್ಸ್ ಟ್ರೈನ್ ಚಾಲಕನೂ ಬಚಾವ್

ಕೋರಮಂಡಲ್ ಎಕ್ಸ್‌ಪ್ರೆಸ್‌ ರೈಲಿನ ಲೋಕೋ ಪೈಲಟ್‌ಗೆ ಅಪಘಾತದ ನಂತರವೂ ಪ್ರಜ್ಞೆ ಇತ್ತು. ಗ್ರೀನ್ ಸಿಗ್ನಲ್ ಸಿಕ್ಕಿರುವುದನ್ನು ಖಚಿತಪಡಿಸಿಕೊಂಡೇ ಅವರು ಮುಂದೆ ಸಾಗಿದ್ದರು ಎಂದು ರೈಲ್ವೆ ಮಂಡಳಿ ಖಚಿತಪಡಿಸಿದೆ.

ಬಾಲಸೋರ್ (ಒಡಿಶಾ): ಭೀಕರ ರೈಲು ದುರಂತ ನಡೆದಿದ್ದ ಒಡಿಶಾದ ಬಾಲಸೋರ್‌ನಲ್ಲಿ (Odisha Train Accident) ಎನ್‌ಡಿಆರ್‌ಎಫ್‌ನಿಂದ ಅವಶೇಷಗಳ ತೆರವು ಹಾಗೂ ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ತಲುಪಿದ್ದು, ರೈಲು ಸಂಚಾರ ಇಂದಿನಿಂದ ಪುನಾರಂಭ ಆಗಲಿದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.