ಕನ್ನಡ ಸುದ್ದಿ  /  Nation And-world  /  Old Man Marries Young Woman 78 Year Old Men Marries 18 Year Old Women

Old man marries young woman: 78 ವರ್ಷದ ಅಜ್ಜನಿಗೂ 18 ವರ್ಷದ ಯುವತಿಗೂ ಮದುವೆ, 60 ವರ್ಷ ಅಂತರವಿದ್ದರೂ ಇವರ ಪ್ರೀತಿ ನಿರಂತರ!

-ಇವರಿಬ್ಬರ ನಡುವೆ 60 ವರ್ಷಗಳ ಅಂತರವಿದ್ದರೂ, ಎರಡೂ ಕುಟುಂಬವೂ ಮದುವೆಗೆ ಸಮ್ಮತಿ ನೀಡಿದೆ. ರಶೀದ್‌ ಬಹುಪತ್ನಿ ವಲ್ಲಭನಲ್ಲ. ಈಗನಿಗೂ ಇದು ಮೊದಲ ಮದುವೆ. ಈತನಿಗೆ ಬೇರೆ ಪ್ರೇಯಸಿಯರೂ ಇಲ್ಲ. ಹೀಗಾಗಿ, ಹಲೀಮಾನೇ ಇವನ ಫಸ್ಟ್‌ ಲವ್‌ ಮತ್ತು ಫಸ್ಟ್‌ ಹೆಂಡತಿ.

Old man marries young woman: 78 ವರ್ಷದ ಅಜ್ಜನಿಗೂ 18 ವರ್ಷದ ಯುವತಿಗೂ ಮದುವೆ
Old man marries young woman: 78 ವರ್ಷದ ಅಜ್ಜನಿಗೂ 18 ವರ್ಷದ ಯುವತಿಗೂ ಮದುವೆ

ಪ್ರೀತಿ ಕುರುಡು. ಅದಕ್ಕೆ ಆಸ್ತಿ, ಅಂತಸ್ತು, ವಯಸ್ಸು ಯಾವುದೂ ಲೆಕ್ಕಕ್ಕಿಲ್ಲ. ಹೃದಯದಿಂದ ಪ್ರೀತಿ ಟಿಸಿಲೊಡೆದು "ಇವನು ಅಥವಾ ಇವಳು ಬೇಕುʼʼ ಎಂದು ನಿರ್ಧರಿಸಿದರೆ ಅದನ್ನು ಬದಲಾಯಿಸುವುದು ಕಷ್ಟ. ದೂರದ ಪಿಲಿಫೈನ್ಸ್‌ ದೇಶದಲ್ಲೊಂದು ಇಂತಹದ್ದೇ ಒಂದು ಮದುವೆ ನಡೆದಿದೆ. ಈ ಮದುವೆಯಲ್ಲಿ ಮದುಗಮಗನ ವಯಸ್ಸು 78. ಮದುಮಗಳ ವಯಸ್ಸು 18. ಇವರಿಬ್ಬರು ಪರಸ್ಪರ ಪ್ರೀತಿಸಿ, ಒಪ್ಪಿ ಮದುವೆಯಾಗಿರುವುದು ವಿಶೇಷ.

ಮದುಮಗ ನಿವೃತ ಕೃಷಿಕ. ಇಷ್ಟು ವಯಸ್ಸಿಗೆ ಮನೆ ಹೋಗು, ಕಾಡು ಬಾ ಅನ್ನೋ ಸಮಯ. ಆತನು ಹದಿನೆಂಟರ ಹರೆಯದ ಯುವತಿಯನ್ನು ಮದುವೆಯಾಗಿದ್ದಾನೆ. ಆತನು ಮೊದಲ ಬಾರಿಗೆ ಆಕೆಗೆ ಹದಿನೈದು ವರ್ಷವಿದ್ದಾಗ ಭೇಟಿಯಾಗಿದ್ದನಂತೆ. ಅಂದಿನಿಂದ ಇವರಿಬ್ಬರದ್ದು ಲವ್‌ ಅಂತೆ. ಕೊನೆಗೂ ಇವರಿಬ್ಬರು ಪರಸ್ಪರ ಒಪ್ಪಿಗೆಯಿಂದ ಮದುವೆಯಾಗಿದ್ದಾರೆ. ಮದುವೆಗೆ ಬಂದವರು ಖಂಡಿತಾ "ಮೇಡ್‌ ಫಾರ್‌ ಈಚ್‌ ಅದರ್‌ʼʼ ಅನ್ನೋ ಡೈಲಾಗ್‌ ಹೇಳಿಲ್ಲವಂತೆ.

ಮದುಮಗನ ಹೆಸರು ರಶೀದ್‌. ಮದುಮಗಳ ಹಸರು ಹಲಿಮಾ ಅಬ್ದುಲ್ಲಾ. ಒಂದು ಡಿನ್ನರ್‌ ಪಾರ್ಟಿಯಲ್ಲಿ ಒಬ್ಬರನೊಬ್ಬರು ನೋಡಿದ್ದಾರೆ. ಪ್ರೀತಿ ಮೂಡಿದೆ. ಈಗ ಮದುವೆಯೂ ಆಗಿದೆ.

ಹೀಗಂತ, ರಶೀದ್‌ ಬಹುಪತ್ನಿ ವಲ್ಲಭನಲ್ಲ. ಈಗನಿಗೂ ಇದು ಮೊದಲ ಮದುವೆ. ಈತನಿಗೆ ಬೇರೆ ಪ್ರೇಯಸಿಯರೂ ಇಲ್ಲ. ಹೀಗಾಗಿ, ಹಲೀಮಾನೇ ಇವನ ಫಸ್ಟ್‌ ಲವ್‌ ಮತ್ತು ಫಸ್ಟ್‌ ಹೆಂಡತಿ.

ಮದುವೆಯಾಗುವ ಮೊದಲು ಇವರಿಬ್ಬರು ಲಿವಿಂಗ್‌ ಟುಗೆದರ್‌ನಲ್ಲಿಯೂ ಇದ್ದರಂತೆ. ಮದುವೆಯಾಗಬೇಕೆ ಬೇಡವೇ ಎಂದು ನಿರ್ಧರಿಸಲು ಇವರಿಬ್ಬರು ಮೂರು ವರ್ಷ "ಹ್ಯಾಪಿ ಇಯರ್ಸ್‌ʼʼನಲ್ಲಿ ಕಳೆದಿದ್ದರು. ಇತ್ತೀಚೆಗೆ ಇವರು ಇಸ್ಲಾಮಿಕ್‌ ಸಂಪ್ರದಾಯದಂತೆ ಒಬ್ಬರನೊಬ್ಬರು ವಿವಾಹವಾಗಿದ್ದಾರೆ.

"ಮದುಮಗ ನನ್ನ ತಂದೆಯ ಸಹೋದರ. ಮದುಮಗಳ ತಂದೆಯು ನನ್ನ ಮಾವನ ಜತೆ ಕೆಲಸ ಮಾಡುವುದರಿಂದ ಮದುಮಗಳನ್ನು ಆಗಾಗ ಭೇಟಿಯಾಗುತ್ತಿದ್ದರುʼʼ ಎಂದು ಬೆನ್‌ ಎನ್ನುವ ವ್ಯಕ್ತಿ ತಿಳಿಸಿದ್ದಾರೆ.

ಇವರಿಬ್ಬರ ನಡುವೆ 60 ವರ್ಷಗಳ ಅಂತರವಿದ್ದರೂ, ಎರಡೂ ಕುಟುಂಬವೂ ಮದುವೆಗೆ ಸಮ್ಮತಿ ನೀಡಿದೆ. "ಈ ಮದುಮಗಳು ಮೊದಲ ಬಾರಿಗೆ ಈತನ ಪ್ರೀತಿಗೆ ಬಿದ್ದಿದ್ದಾಳೆ. ನನ್ನ ಅಂಕಲ್‌ಗೆ ವಯಸ್ಸಾಗಿದೆ ನಿಜ, ಆದರೆ, ಇನ್ನೂ ಸಿಂಗಲ್‌. ಬ್ಯಾಚುಲರ್‌ ಆಗಿಯೇ ಇದ್ದಾರೆʼʼ ಎಂದು ಆಕೆಯ ಕುಟುಂಬದ ವ್ಯಕ್ತಿಯೊಬ್ಬರು ಹೇಳಿದ್ದಾರೆ.

ಒಟ್ಟಾರೆ ಅರುವತ್ತು ವರ್ಷ ಅಂತರವಿದ್ದರೂ ನೂರಾರು ವರ್ಷ ಚೆನ್ನಾಗಿ ಬದುಕಿ ಬಾಳಿ ಎಂದು ಎಲ್ಲರೂ ಹಾರೈಸಿದ್ದಾರೆ.

ಈ ರೀತಿ ವಯಸ್ಸಿನ ಅಂತರದವರು ಮದುವೆಯಾಗುವುದು ಇದೇ ಮೊದಲಲ್ಲ. ಕಳೆದ ಒಂದೆರಡು ತಿಂಗಳಲ್ಲಿಯೇ ಜಗತ್ತಿನಲ್ಲಿ ಇಂತಹ ಹಲವು ಮದುವೆಗಳು ಜರುಗಿವೆ. ಸೌದಿ ಅರೇಬಿಯಾದಲ್ಲಿ ಕಳೆದ ತಿಂಗಳು 63ವರ್ಷದ ವ್ಯಕ್ತಿಯೊಬ್ಬ ಇತ್ತೀಚೆಗೆ ಮದುವೆಯಾಗಿದ್ದ. ಅದು ಆತನ 53ನೇ ಮದುವೆ!

IPL_Entry_Point