ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Coldest Ooty: ಊಟಿಯಲ್ಲಿ 1ರಿಂದ 2 ಡಿಗ್ರಿಗೆ ಕುಸಿದ ಉಷ್ಣಾಂಶ, ಚಳಿಗೆ ನಡುಗುತ್ತಿದೆ ಪ್ರವಾಸಿ ನಗರಿ

Coldest Ooty: ಊಟಿಯಲ್ಲಿ 1ರಿಂದ 2 ಡಿಗ್ರಿಗೆ ಕುಸಿದ ಉಷ್ಣಾಂಶ, ಚಳಿಗೆ ನಡುಗುತ್ತಿದೆ ಪ್ರವಾಸಿ ನಗರಿ

Ooty weather ಪ್ರವಾಸಿಗರ ಸ್ವರ್ಗ ಎನ್ನಿಸಿಕೊಳ್ಳುವ ಊಟಿನಲ್ಲಿ ಗುರುವಾರ ಭಾರೀ ಚಳಿ. ಅದೂ 1 ರಿಂದ 2 ಡಿಗ್ರಿ ಸೆಲ್ಸಿಯಸ್‌ಗೆ ಕನಿಷ್ಠ ಉಷ್ಣಾಂಶ ಕುಸಿದಿದೆ.

ಅತಿ ಹೆಚ್ಚಿನ ಹಿಮ ಹೊದ್ದ ಊಟಿಯ ನೋಟ  ಸಾಮಾನ್ಯ.
ಅತಿ ಹೆಚ್ಚಿನ ಹಿಮ ಹೊದ್ದ ಊಟಿಯ ನೋಟ ಸಾಮಾನ್ಯ.

ಊಟಿ: ಕರ್ನಾಟಕದ ಬಂಡೀಪುರದಿಂದ ಬರೀ 75 ಕಿ.ಮಿ. ದೂರದಲ್ಲಿರುವ ಪ್ರವಾಸಿಗರ ಸ್ವರ್ಗ ಊಟಿಯಲ್ಲೀಗ ವಿಪರೀತ ಚಳಿ. ಕರ್ನಾಟಕದ ಗಡಿಗೂ ತಮಿಳುನಾಡಿ ಆ ಭಾಗಕ್ಕೂ ಉಷ್ಣಾಂಶದಲ್ಲಿ ಅಜಗಜಾಂತರ ವ್ಯತ್ಯಾಸ. ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಗಡಿಯಲ್ಲಿ 17 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ಉಷ್ಣಾಂಶ ದಾಖಲಾದರೆ, ಅತ್ತಕಡೆ ಊಟಿನಲ್ಲಿ 1ರಿಂದ 2 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ. ಮೊದಲೇ ಬೇಸಿಗೆ ವಾತಾವರಣ ಇರುವ ಊಟಿಯಲ್ಲಿ ಗುರುವಾರವಂತೂ ಜನ ನಡುಗಿದರು. ಊಟಿ ಮಾತ್ರವಲ್ಲದೇ ಇಡೀ ನೀಲಗಿರಿ ಜಿಲ್ಲೆಯಲ್ಲಿಯೇ ಉಷ್ಣಾಂಶದಲ್ಲಿ ಭಾರೀ ಕುಸಿತ ಕಂಡಿದ್ದು ಇಂತಹ ವಾತಾವರಣ ಎಲ್ಲೆಡೆ ಕಂಡು ಬರುತ್ತಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಟ್ರೆಂಡಿಂಗ್​ ಸುದ್ದಿ

ಭಾರತೀಯ ಹವಾಮಾನ ಇಲಾಖೆಯು ಗುರುವಾರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಊಟಿ ಸಮೀಪದ ಕಾಂತಾಲ್‌ನಲ್ಲಿ ಹಾಗೂ ಊಟಿ ನಗರದ ತಲೈಕುಂತಾದಲ್ಲಿ ಕನಿಷ್ಠ ಉಷ್ಣಾಂಶ 1 ಡಿಗ್ರಿ. ಊಟಿಯ ಪ್ರಸಿದ್ದ ಪ್ರವಾಸಿ ಸ್ಥಳ ಬೊಟಾನಿಕಲ್‌ ಗಾರ್ಡನ್‌ನಲ್ಲಿ 2ಡಿಗ್ರಿ ಸೆಲ್ಸಿಯಸ್‌ ಹಾಗೂ ಸಂದಿನಲ್ಲಾ ಎಂಬಲ್ಲಿ 3 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ಊಟಿಯ ಹಸಿರು ಕಣಿವೆಯಲ್ಲಿ ಎಲ್ಲೆಡೆ ಕಂಡಿದ್ದು ಬರೀ ಮಂಜು. ಅದರಲ್ಲೀ ಚಹಾ ತೋಟಗಳು, ಹಸಿರು ಪ್ರದೇಶದಲ್ಲಿ ಮಂಜಿನಲ್ಲಿ ಮರೆಯಾಗಿ ಹೋಗಿದ್ದವು. ಬೆಳಿಗ್ಗೆಯಿಂದಲೇ ವಾಹನ ಚಲಾಯಿಸಲು ಆಗದಷ್ಟು ದಟ್ಟವಾದ ಮಂಜು ರಸ್ತೆಯಲ್ಲಿ ಬಿದ್ದಿತ್ತು. ಬೆಳಿಗ್ಗೆಯೇ ದೀಪ ಹಾಕಿಕೊಂಡು ವಾಹನ ಓಡಿಸುವ ಸ್ಥಿತಿ ನಿರ್ಮಾಣವಾಗಿತ್ತು ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಚಳಿ ಊಟಿಗೆ ಸಾಮಾನ್ಯ. ಬೇಸಿಗೆಯಲ್ಲೂ ಇಲ್ಲಿ ಚಳಿ ಇರುತ್ತದೆ. ಆದರೆ ಇಷ್ಟೊಂದು ಚಳಿಯನ್ನು ನಾನು ನೋಡಿಯೇ ಇಲ್ಲ. ಇದು ಯಮ ಚಳಿ ಎಂದು ಸ್ಥಳೀಯರು ಕಾಫಿ ಹೀರುತ್ತಲೇ ಚಳಿಯ ಅನುಭವವನ್ನು ಬಿಡಿಸಿಟ್ಟರು.

ನೀಲಗಿರಿ ಜಿಲ್ಲೆಯ ಹಲವು ಕಡೆಗಳಲ್ಲಿ ಈ ರೀತಿಯ ಚಳಿ ಜನರನ್ನು ಅನಾರೋಗ್ಯರನ್ನಾಗಿಸಿದೆ. ಜನ ಚಳಿಗೆ ನಡುಗಿ ಜ್ವರ ಪೀಡಿತರಾಗುವುದು ಕಂಡು ಬಂದಿದೆ. ಮಕ್ಕಳು,. ಹಿರಿಯರನ್ನು ಬೆಚ್ಚಗೆ ಹೊದ್ದಿಸಿ ಕೂರಿಸಿರುವುದು ಕಾಣಸಿಗುತ್ತದೆ. ಮನೆ, ಅಂಗಡಿ, ರಸ್ತೆಗಳಲ್ಲಿ ಬೆಂಕಿ ಹಾಕಿ ಕಾಯಿಸಿಕೊಳ್ಳುವವರೂ ಅಧಿಕವಾಗಿಯೇ ಇದ್ದರು.

ನೀಲಗಿರಿ ಪರಿಸರ ಸಮಾಜ ಸೇವಾ ಟ್ರಸ್ಟ್(‌NEST) ನ ಮುಖ್ಯಸ್ಥ ವಿ.ಸಿವದಾಸ್‌ ವರು ಜಾಗತಿಕ ಹವಾಮಾನ ವೈಪರಿತ್ಯ. ಇತ್ತೀಚಿನ ಎಲ್‌ ನಿನೋ ಪರಿಣಾಮವಾಗಿ ಊಟಿ ಹಾಗೂ ಸುತಮುತ್ತಲಿನ ಪ್ರದೇಶದಲ್ಲಿ ಇಷ್ಟೊಂದು ಚಳಿ ನೋಡುತ್ತಿದ್ದೇವೆ. ಇಂತಹ ಚಳಿ ನೀಲಗರಿ ಜಿಲ್ಲೆಗೆ ನಿಜಕ್ಕೂ ಆತಂಕಕಾರಿಯೇ. ಈ ಕುರಿತು ಹೆಚ್ಚಿನ ಅಧ್ಯಯನಗಳನ್ನು ಕೈಗೊಳ್ಳಬೇಕು ಎನ್ನುವುದು ಅವರ ಸಲಹೆ.

ಊಟಿ ಭಾಗದಲ್ಲಿ ಚಹಾ ಪ್ರಮುಖ ಉದ್ಯಮ. ಬಹುತೇಕ ಕಡೆ ಟೀ ಎಸ್ಟೇಟ್‌ಗಳಿವೆ. ಚಹಾ ಉತ್ಪಾದನೆಯನ್ನೂ ಚಳಿಯನ್ನೇ ಅವಲಂಬಿಸಿದೆ. ಹದವಾದ ಚಳಿ ಇದ್ದರೆ ಚಹಾ ಬೆಳೆಕೂಡ ಚೆನ್ನಾಗಿಯೇ ಬರುತ್ತದೆ. ಈ ರೀತಿಯ ಚಳಿ ನಿಜಕ್ಕೂ ಚಹಾ ಗಿಡಗಳನ್ನೂ ಸರ್ವನಾಶ ಮಾಡಿಬಿಡುತ್ತದೆ. ಡಿಸೆಂಬರ್‌ನಲ್ಲಿ ಅಕಾಲಿಕ ಮಳೆ ಸುರಿದಾಗ ಚಹಾ ಬೆಳೆಗೆ ಹೊಡೆತ ಬಿದ್ದಿತ್ತು. ಈಗ ಚಳಿಯಿಂದ ಇನ್ನಷ್ಟು ತೊಂದರೆ ಖಂಡಿತ ಆಗಲಿದೆ. ಚಹಾ ಇಳುವರಿ ಕಡಿಮೆಯಾಗಬಹುದು ಎನ್ನುವುದು ಚಹಾ ಪ್ಲಾನೆಂಷನ್‌ ಮಾಲೀಕರ ಸಂಘದ ಕಾರ್ಯದರ್ಶಿ ಆರ್‌.ಸುಕುಮಾರನ್‌ ಬೇಸರದ ನುಡಿ.

ಇದಲ್ಲದೇ ಊಟಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕ್ಯಾರೇಟ್‌ ಸಹಿತ ಪ್ರಮುಖ ತರಕಾರಿ ಬೆಳೆಗಳನ್ನು ಬೆಳೆಯಾಗುತ್ತಿದೆ. ಅದರಲ್ಲೂ ಹೂಕೋಸು ಬೆಳೆ ಸಂಪೂರ್ಣ ಕೈ ಕೊಡುವ ಆತಂಕವೂ ಎದುರಾಗಿದೆ.

ಟಿ20 ವರ್ಲ್ಡ್‌ಕಪ್ 2024

ವಿಭಾಗ