ಕನ್ನಡ ಸುದ್ದಿ  /  Nation And-world  /  Opening Bell For 27th February 2024 Indian Share Market Set To Mute Start Business News In Kannada Rsm

Opening Bell: ಮಾಸಾಂತ್ಯದಲ್ಲಿ ಮತ್ತೆ ಕುಗ್ಗಿದ ಉತ್ಸಾಹ, ಭಾರತದ ಷೇರುಪೇಟೆ ನೀರಸ ವಹಿವಾಟಿಗೆ ಸಿದ್ಧತೆ; ಇಂದು ಗಮನಿಸಬಹುದಾದ ಷೇರುಗಳಿವು

Opening Bell: ಭಾರತದ ಷೇರುಪೇಟೆ ಇಂದು ಕೂಡಾ ನೀರಸ ಆರಂಭದ ಮುನ್ಸೂಚನೆ ತೋರಿದೆ. ಫೆಬ್ರವರಿ 27, ಮಂಗಳವಾರ ಐಟಿ ಷೇರಿನ ಬೆಂಬಲದಿಂದ ಲಾಭ ಗಳಿಸಿದ ಸೆನ್ಸೆಕ್ಸ್‌, ನಿಫ್ಟಿ ಇಂದು ಮತ್ತೆ ನೀರಸ ಆರಂಭ ಕಾಣುತ್ತಿದೆ.

ಭಾರತದ ಷೇರುಪೇಟೆ ಫೆ 27 ಓಪನಿಂಗ್‌ ಬೆಲ್‌
ಭಾರತದ ಷೇರುಪೇಟೆ ಫೆ 27 ಓಪನಿಂಗ್‌ ಬೆಲ್‌

ಬೆಂಗಳೂರು: ಭಾರತದ ಷೇರು ಮಾರುಕಟ್ಟೆ ಫೆಬ್ರವರಿಯಲ್ಲಿ ಲಾಭಕ್ಕಿಂತ ಹೆಚ್ಚು ನಷ್ಟ ಕಂಡಿದೆ. ಮಂಗಳವಾರ ಐಟಿ ಷೇರಿನ ಬೆಂಬಲದಿಂದ ಲಾಭ ಗಳಿಸಿದ ಸೆನ್ಸೆಕ್ಸ್‌, ನಿಫ್ಟಿ ಬುಧವಾರ ಮತ್ತೆ ನೀರಸ ಆರಂಭ ಕಾಣುತ್ತಿದೆ. ಭಾರತದ ಗಿಫ್ಟ್‌ ನಿಫ್ಟಿಯು ಬೆಳಗ್ಗೆ 7:40 ವರೆಗೆ 22,229 ನಲ್ಲಿ ವಹಿವಾಟು ನಡೆಸುತ್ತಿದೆ.

ಮಂಗಳವಾರ ಭಾರತದ ಷೇರು ಷೇಟೆಯ ಸಂವೇದಿ ಸೂಚ್ಯಂಕಗಳಲ್ಲಿ ಒಂದಾದ ನಿಫ್ಟಿಯು ಗಳಿಕೆ ಕಾಣುವ ಮೂಲಕ ವಹಿವಾಟು ಮುಗಿಸಿತ್ತು ಸೆನ್ಸೆಕ್ಸ್‌ ಕೂಡಾ ಏರಿಕೆಯಾಗಿತ್ತು. ಮಂಗಳವಾರ ಮುಕ್ತಾಯದ ವೇಳೆಗೆ ಸೆನ್ಸೆಕ್ಸ್‌ 305.09 ಅಂಕ ಅಥವಾ ಶೇ 0.42ರಷ್ಟು ಏರಿಕೆಯಾಗಿ, 73,095.22 ಕ್ಕೆ ತಲುಪಿತ್ತು. ನಿಫ್ಟಿ 76.30 ಅಂಕ ಅಥವಾ ಶೇ 0.34ರಷ್ಟು ಏರಿಕೆಯಾಗಿ 22,198.30ಕ್ಕೆ ತಲುಪಿತ್ತು. ನಿನ್ನೆ (ಫೆ 27) ಸುಮಾರು 1340 ಷೇರುಗಳು ಲಾಭ ಗಳಿಸಿದರೆ, 1968 ಷೇರುಗಳು ನಷ್ಟ ಕಂಡಿದ್ದವು.

ಟಾಟಾ ಮೋಟಾರ್ಸ್‌, ಟಿಸಿಎಸ್‌, ಇಂಡಸ್‌ಇಂಡ್ ಬ್ಯಾಂಕ್, ಪವರ್ ಗ್ರಿಡ್ ಕಾರ್ಪ್ ಮತ್ತು ಸನ್ ಫಾರ್ಮಾ ನಿಫ್ಟಿಯಲ್ಲಿ ಅತ್ಯಧಿಕ ಲಾಭ ಗಳಿಸಿದ ಷೇರುಗಳಾದರೆ, ಹೀರೋ ಮೋಟೊಕಾರ್ಪ್‌, ಬಜಾಜ್ ಫೈನಾನ್ಸ್, ಎಸ್‌ಬಿಐ, ಡಿವಿಸ್ ಲ್ಯಾಬ್ಸ್ ಮತ್ತು ಯುಪಿಎಲ್ ನಷ್ಟ ಅನುಭವಿಸಿದ್ದವು. ವಲಯಗಳ ಪೈಕಿ, ಆಟೊ, ಕ್ಯಾಪಿಟಲ್ ಗೂಡ್ಸ್, ಮಾಹಿತಿ ತಂತ್ರಜ್ಞಾನ, ಫಾರ್ಮಾ, ರಿಯಾಲ್ಟಿ ತಲಾ 0.5-1 ಪ್ರತಿಶತದಷ್ಟು ಏರಿಕೆ ಕಂಡರೆ, ತೈಲ ಮತ್ತು ಅನಿಲ ಸೂಚ್ಯಂಕವು ತಲಾ 1 ಪ್ರತಿಶತದಷ್ಟು ನಷ್ಟ ಕಂಡಿತ್ತು.

ಬೆಂಚ್‌ಮಾರ್ಕ್ ನಿಫ್ಟಿ 50 ಕಳೆದ ವಾರ ಪ್ರತಿ ಸೆಷನ್‌ನಲ್ಲಿ ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದರೆ, ಇದು ಸತತ ಮೂರು ಸೆಷನ್‌ಗಳಿಗೆ 150-ಪಾಯಿಂಟ್ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿದೆ. ವಿದೇಶಿ ಹೂಡಿಕೆದಾರರು ಮಂಗಳವಾರ 15.09 ಶತಕೋಟಿ ರೂಪಾಯಿ ($182 ಮಿಲಿಯನ್) ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರು 28.62 ಶತಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದರು.

ಇಂದು ಗಮನಿಸಬಹುದಾದ ಷೇರುಗಳಿವು

*ವೊಡಾಫೋನ್ ಐಡಿಯಾ:

* ಓಎನ್‌ಜಿಸಿ

*GE T&D ಇಂಡಿಯಾ